<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Health

ಬೆಳಗ್ಗೆ ಎದ್ದ ತಕ್ಷಣ ಏನು ಮಾಡಬೇಕು ? ಈ 7 ಹ್ಯಾಬಿಟ್ಸ್‌ ನಿಮ್ಮ ಜೀವನ ಬದಲಾಯಿಸಬಹುದು

ಬೆಳಗ್ಗೆ ಎದ್ದ ತಕ್ಷಣ ಏನು ಮಾಡಬೇಕು ? ಈ 7 ಹ್ಯಾಬಿಟ್ಸ್‌ ನಿಮ್ಮ ಜೀವನ ಬದಲಾಯಿಸಬಹುದು
Summary: Seven healthy habits to follow as soon as you wake up in the morning will help you start your day with energy and positivity. Here are simple tips for a healthy routine.

Belagavi News :

ಇಂದಿನ ವೇಗದ ಜೀವನಶೈಲಿಯಲ್ಲಿ ಹಲವರು ಬೆಳಗಿನ ಸಮಯವನ್ನು ನಿರ್ಲಕ್ಷಿಸುತ್ತಿದ್ದಾರೆ. ಆದರೆ ವೈದ್ಯರ ಪ್ರಕಾರ, ನಿದ್ರೆಯಿಂದ ಎದ್ದ ನಂತರದ ಮೊದಲ 60ರಿಂದ 90 ನಿಮಿಷಗಳು ದಿನದ ಉಳಿದ ಭಾಗದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಮಹತ್ತರ ಪರಿಣಾಮ ಬೀರುತ್ತದೆ.

ಬೆಳಗ್ಗೆ ಎದ್ದ ತಕ್ಷಣ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ನೀರು ಕುಡಿಯುವುದು ಹಾಗೂ ಲಘು ವ್ಯಾಯಾಮ ಮಾಡುವಂತಹ ಸರಳ ಅಭ್ಯಾಸಗಳು ದೇಹದ ಶಕ್ತಿ, ಮನಸ್ಥಿತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಸರಿಯಾದ ದಿನಚರಿಯನ್ನು ಅನುಸರಿಸಿದರೆ ದಿನಪೂರ್ತಿ ಉತ್ಪಾದಕತೆ, ಉತ್ತಮವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

ಹೈದರಾಬಾದ್ ನ ಅಪೋಲೋ ಆಸ್ಪತ್ರೆಯ ನ್ಯೂರಾಲಾಜಿಸ್ಟ್ ಡಾ. ಸುಧೀರ್ ಕುಮಾರ್ ಅವರ ಪ್ರಕಾರ, ಬೆಳಗಿನ ಈ ಸಮಯದಲ್ಲಿ ಆರೋಗ್ಯಕರ ಅಭ್ಯಾಸಗಳನ್ನು ರೂಡಿಸಿಕೊಳ್ಳುವುದರಿಂದ ದೇಹದ ಜೈವಿಕ ಗಡಿಯಾರ ಸಮತೋಲನದಲ್ಲಿರುತ್ತದೆ. ಇದರಿಂದ ಶಕ್ತಿ ಮಟ್ಟ ಸಚ್ಚುವುದರ ಜೊತೆಗೆ ಉತ್ತಮ ನಿದ್ರೆಗೂ ಸಹಾಯವಾಗುತ್ತದೆ.

Sponsored

ತಜ್ಞರು ಬೆಳಗಿನ ಆರಂಭದಲ್ಲಿ ಮೊಬೈಲ್ ಬಳಕೆಯನ್ನು ಕಡಿಮೆ ಮಾಡುವುದು , ಸೂರ್ಯನ ಬೆಳಕು ಪಡೆಯುವುದು, ದೇಹ ಹೈಡ್ರೇಟ್ ಆಗುವಂತೆ ನೀರು ಕುಡಿಯುವುದು ಮತ್ತು ಲಘು ವ್ಯಾಯಾಮ ಅಥವಾ ಸ್ಟ್ರೆಚ್ಚಿಂಗ್ ಮಾಡುವುದನ್ನು ಮಾಡುತ್ತಾರೆ.

ಸರಿಯಾದ ಬೆಳಗಿನ ದಿನಚರಿ ಕೇವಲ ದೈಹಿಕ ಆರೋಗ್ಯವನ್ನು ಅಷ್ಟೇ ಅಲ್ಲ, ಮಾನಸಿಕ ಸ್ಥಿರತೆ ಮತ್ತು ಒತ್ತಡ ನಿಯಂತ್ರಣಕ್ಕೂ ಸಹಾಯವಾಗುತ್ತದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ. ದಿನದ ಮೊದಲ ಕ್ಷಣಗಳನ್ನು ಸರಿಯಾಗಿ ಬಳಸಿಕೊಳ್ಳುವುದು ಆರೋಗ್ಯಕರ ಜೀವನ ಶೈಲಿಗೆ ಪ್ರಮುಖ ಕೀಲಿ ಎಂದು ಅವರು ತಿಳಿಸಿದ್ದಾರೆ.

ಬೆಳಗ್ಗೆ ಎದ್ದ ನಂತರ ಈ 7 ಆರೋಗ್ಯಕರ ಅಭ್ಯಾಸಗಳು ಪಾಲಿಸಿ - ದಿನವಿಡೀ ಶಕ್ತಿ ಮತ್ತು ಏಕಾಗ್ರತೆ ಹೆಚ್ಚಿಸಲು ವೈದ್ಯರ ಸಲಹೆ :

ಬೆಳಗ್ಗೆ ಎದ್ದ ನಂತರದ ಮೊದಲ ಒಂದು ಗಂಟೆಯ ದಿನದ ಉಳಿದ ಭಾಗದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ನಿರ್ಧರಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಈ ಸಮಯದಲ್ಲಿ ಸರಿಯಾದ ಅಭ್ಯಾಸಗಳನ್ನು ಅನುಸರಿಸಿದರೆ ಶಕ್ತಿ, ಏಕಾಗ್ರತೆ ಮತ್ತು ಮನಸ್ಥಿತಿ ಉತ್ತಮವಾಗುತ್ತದೆ.

Sponsored

ವೈದ್ಯರ ಸಲಹೆ ಪ್ರಕಾರ, ಎದ್ದ 30 - 60 ನಿಮಿಷಗಳೊಳಗೆ 10 - 20 ನಿಮಿಷ ನೈಸರ್ಗಿಕ ಸೂರ್ಯನ ಬೆಳಕಿನಲ್ಲಿ ಸಮಯ ಕಳೆಯುವುದು ಬಹಳ ಮುಖ್ಯ. ಇದರಿಂದ ದೇಹದಲ್ಲಿ ಕಾರ್ಟಿ ಸೋಲ್ ಹಾರ್ಮೋನ್ ನ ಸಮತೋಲಿತ ಬಿಡುಗಡೆ ಆಗಿ ದಿನವಿಡಿ ಚೈತನ್ಯ ಉಳಿಯುತ್ತದೆ.

ಬೆಳಗ್ಗೆ ಎದ್ದ ತಕ್ಷಣ ಕಾಫಿ ಅಥವಾ ಚಾ ಕುಡಿಯುವುದನ್ನು ತಪ್ಪಿಸುವುದು ಉತ್ತಮ. ಕನಿಷ್ಠ 60ರಿಂದ 90 ನಿಮಿಷಗಳ ನಂತರ ಕಾಫಿ ಸೇವಿಸಿದರೆ ದೇಹದ ಶಕ್ತಿ ಮಟ್ಟ ಸಮತೋಲನದಲ್ಲಿರುತ್ತದೆ ತಜ್ಞರು ಸಲಹೆ ನೀಡುತ್ತಾರೆ. ಅದರ ಬದಲು ಮೊದಲಿಗೆ ಸುಮಾರು 500 ಮಿ.ಲೀ ನೀರು ಕುಡಿಯುವುದರಿಂದ ದೇಹ ಹೈಡ್ರೇಟ್ ಆಗಿ ಚುರುಕಾಗುತ್ತದೆ.

ಸ್ವಲ್ಪ ಲಘು ವ್ಯಾಯಾಮ, ಸ್ಟ್ರೆಚ್ಚಿಂಗ್ ಅಥವಾ ಚಿಕ್ಕ ವಾಕಿಂಗ್ ಮಾಡುವುದರಿಂದ ಮೆದುಳಿಗೆ ದಿನ ಆರಂಭವಾಗಿದೆ ಎಂಬ ಸಂದೇಶ ಹೋಗುತ್ತದೆ. ಇದು ಏಕಾಗ್ರತೆ ಮತ್ತು ಚೈತನ್ಯವನ್ನು ಹೆಚ್ಚಿಸುತ್ತದೆ. ಜೊತೆಗೆ ಬೆಳಗ್ಗೆ ಎದ್ದ ತಕ್ಷಣ ಸಾಮಾಜಿಕ ಜಾಲತಾಣ ಅಥವಾ ಇ-ಮೇಲ್ ಗಳನ್ನು ನೋಡುವುದನ್ನು ತಪ್ಪಿಸುವುದು ಒತ್ತಡವನ್ನು ಕಡಿಮೆ ಮಾಡುತ್ತದೆ.

ಎದ್ದ ಕೂಡಲೇ ಅಲಾರಾಂ ಸ್ನೂಜ್ ಬಟನ್ ಅನ್ನು ಮತ್ತೆ ಮತ್ತೆ ಒತ್ತುವುದು ಕೂಡ ತಪ್ಪಿಸಬೇಕಾದ ಅಭ್ಯಾಸವಾಗಿದೆ. ಇದು ಮೆದುಳಿನಲ್ಲಿ ಗೊಂದಲ ಉಂಟುಮಾಡಿದ ನೀವು ಮತ್ತು ಮಂಕುತನ ಮತ್ತು ದಣಿವು ಹೆಚ್ಚಿಸಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.

Sponsored

ಆರೋಗ್ಯಕರ ಉಪಹಾರವನ್ನು ಆಯ್ಕೆ ಮಾಡುವುದು ಕೂಡ ದಿನದ ಶಕ್ತಿಗೆ ಪ್ರಮುಖವಾಗಿದೆ. ಸಕ್ಕರೆ ಹೆಚ್ಚಿರುವ ಆಹಾರಗಳ ಬದಲು ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬುಗಳಿರುವ ಉಪಹಾರ ಸೇವಿಸಿದರೆ ದಿನವಿಡೀ ಶಕ್ತಿ ಉಳಿಯುತ್ತದೆ.

ಈ ಸರಳ ಬೆಳಗಿನ ಅಭ್ಯಾಸಗಳನ್ನು ಪ್ರತಿದಿನ ಪಾಲಿಸುವುದರಿಂದ ಉತ್ತಮ ಆರೋಗ್ಯ, ಸ್ಥಿರ ಮನಸ್ಥಿತಿ ಮತ್ತು ಗುಣಮಟ್ಟದ ನಿದ್ರೆ ಪಡೆಯಲು ಸಹಾಯವಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online