H16 News
Logo

By Samreen | Published on November 8, 2025

Image Not Found
Health / November 8, 2025

ಚಳಿಗಾಲ ಅಂತಾ ಮಾಡಿಟ್ಟ ಅಡುಗೆಯನ್ನು ಮತ್ತೆ ಮತ್ತೆ ಬಿಸಿ ಮಾಡುವ ಅಭ್ಯಾಸ ನಿಮಗಿದ್ರೆ

ಅನೇಕರು ಒಮ್ಮೆಗೆ ಅಡುಗೆ ಮಾಡಿ ಉಳಿದ ಹೆಚ್ಚುವರಿ ಆಹಾರವನ್ನು ಮತ್ತೆ ಮತ್ತೆ ಬಿಸಿ ಮಾಡಿ ಸೇವನೆ ಮಾಡುತ್ತಾರೆ. ಇದು ಸಮಯ ಉಳಿತಾಯಕ್ಕೆ ಮಾಡುವುದಾದರೂ ಕೂಡ ಈ ರೀತಿ ನೀವು ಉಳಿದ ಆಹಾರವನ್ನು ಪದೇ ಪದೇ ತಿನ್ನುತ್ತಿದ್ದರೆ, ಅದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಹೌದು, ಸಮಯ ಉಳಿಸಲು ಅಥವಾ ಆಫೀಸ್ ಗೆ ಹೋಗುವ ಅನೇಕರು ರಾತ್ರಿ ತಯಾರಿಸಿಟ್ಟ ಊಟವನ್ನು ಮತ್ತೆ ಬಿಸಿ ಮಾಡುತ್ತಾರೆ. ಇದು ಆಹಾರದ ರುಚಿಯನ್ನು ಹಾಳುಮಾಡುವುದರ ಜೊತೆಗೆ, ಅದರ ಪೋಷಕಾಂಶಗಳನ್ನು ಸಹ ನಾಶ ಮಾಡುತ್ತದೆ. ಹಾಗಾದರೆ ಈ ರೀತಿ ಮಾಡುವುದರಿಂದ ಯಾವ ರೀತಿಯ ಆರೋಗ್ಯ ಸಮಸ್ಯೆಗಳಾಗುತ್ತದೆ, ಯಾಕೆ ಒಳ್ಳೆಯದಲ್ಲ ಎಂಬುದನ್ನು ತಿಳಿದುಕೊಳ್ಳಿ.

ಆಹಾರವನ್ನು ಆಗಾಗ ಬಿಸಿ ಮಾಡಬೇಡಿ: ಆಹಾರವನ್ನು ಪದೇ ಪದೇ ಬಿಸಿ ಮಾಡುವುದರಿಂದ ಎಣ್ಣೆ ಮತ್ತು ಮಸಾಲೆಗಳಲ್ಲಿರುವ ಕೊಬ್ಬನ್ನು ಆಕ್ಸಿಡೀಕರಿಸಬಹುದು, ವಿಷಕಾರಿ ಅಂಶಗಳನ್ನು ದೇಹಕ್ಕೆ ಬಿಡುಗಡೆ ಮಾಡಬಹುದು, ಇವೆಲ್ಲವೂ ಯಕೃತ್ತಿನ ಮೇಲೆ ಪರಿಣಾಮ ಬೀರುತ್ತದೆ ಮತ್ತು ಉರಿಯೂತಕ್ಕೆ ಕಾರಣವಾಗಬಹುದು. ಅದಕ್ಕಾಗಿಯೇ ಚಳಿಗಾಲದಲ್ಲಿ, ಒಂದು ಸಮಯದಲ್ಲಿ ತಿನ್ನಬಹುದಾದಷ್ಟು ಆಹಾರವನ್ನು ಮಾತ್ರ ಬೇಯಿಸಿಕೊಳ್ಳಿ. ಮತ್ತೆ ತಿನ್ನಬೇಕಾದ ಉಳಿದ ಆಹಾರವನ್ನು ತಕ್ಷಣ ರೆಫ್ರಿಜರೇಟರ್ನಲ್ಲಿ ಇಟ್ಟುಬಿಡಿ ಜೊತೆಗೆ ಎರಡು ಗಂಟೆಗಳಿಗಿಂತ ಹೆಚ್ಚು ಕಾಲ ಕೋಣೆಯ ಉಷ್ಣಾಂಶದಲ್ಲಿ ಆಹಾರಗಳನ್ನು ಇಡಬೇಡಿ. ಅದರಲ್ಲಿಯೂ ಮಕ್ಕಳಿಗೆ, ವೃದ್ಧರಿಗೆ ಮತ್ತು ಅನಾರೋಗ್ಯ ಪೀಡಿತರಿಗೆ ನೀಡುವಂತಹ ಆಹಾರವನ್ನು ಮತ್ತೆ ಮತ್ತೆ ಬಿಸಿ ಮಾಡುವುದನ್ನು ತಪ್ಪಿಸಬೇಕು. ಏಕೆಂದರೆ ಅವರ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ ಮತ್ತು ಸೋಂಕಿನ ಅಪಾಯವೂ ಹೆಚ್ಚಾಗಬಹುದು. ಆದ್ದರಿಂದ, ನಿಮ್ಮ ಮನೆಯ ಸದಸ್ಯರ ಸಂಖ್ಯೆ ಮತ್ತು ಅಗತ್ಯಗಳಿಗೆ ಅನುಗುಣವಾಗಿ ಆಹಾರವನ್ನು ಬೇಯಿಸಲು ಪ್ರಯತ್ನಿಸಿ. ಮತ್ತೆ ಮತ್ತೆ ಬಿಸಿ ಮಾಡುವುದನ್ನು ತಪ್ಪಿಸಿ. ಇದನ್ನು ಚಳಿಗಾಲದಲ್ಲಿ ಮಾತ್ರವಲ್ಲ ಎಲ್ಲಾ ಋತುಗಳಲ್ಲಿಯೂ ಅಭ್ಯಾಸ ಮಾಡಿಕೊಳ್ಳುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಚಳಿಗಾಲವಾದ್ದರಿಂದ ಬಿಸಿ ಬಿಸಿಯಾಗಿ ಊಟ ಮಾಡಲು ಜನರು ಮಾಡಿಟ್ಟ ಆಹಾರಗಳನ್ನು ಮತ್ತೆ ಮತ್ತೆ ಬಿಸಿ ಮಾಡುತ್ತಾರೆ. ಆದರೆ ಕೆಲವು ಆಹಾರಗಳನ್ನು ಮತ್ತೆ ಬಿಸಿ ಮಾಡಿದರೆ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಅದರಲ್ಲಿಯೂ ಚಳಿಗಾಲದಲ್ಲಿ ಸಾಮಾನ್ಯವಾಗಿ ನಾವು ಸೇವಿಸುವ ಕೆಲವು ಆಹಾರಗಳನ್ನು ಮತ್ತೆ ಬಿಸಿ ಮಾಡಬಾರದು ಎಂದು ಹೇಳಲಾಗುತ್ತದೆ. ಈಗ ವಾತಾವರಣವೂ ತಂಪಾಗಿರುವುದರಿಂದ ಚಳಿಗಾಲದಲ್ಲಿ ಆಹಾರವು ಬೇಗನೆ ತಣ್ಣಗಾಗುತ್ತದೆ. ಅಪೋಲೋ ಸ್ಪೆಕ್ಟ್ರಾ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ಸಲಹೆಗಾರರಾಗಿರುವ ಡಾ. ರೋಹಿತ್ ಶರ್ಮಾ ನೀಡಿರುವ ಮಾಹಿತಿ ಪ್ರಕಾರ, ಚಳಿಗಾಲದಲ್ಲಿ ಅನೇಕರು ತರಕಾರಿ ಸಾಂಬಾರ್, ಸೂಪ್, ಅನ್ನ ಹೀಗೆ ಬೇರೆ ಬೇರೆ ಪದಾರ್ಥಗಳನ್ನು ಪದೇ ಪದೇ ಬಿಸಿ ಮಾಡುತ್ತಾರೆ. ಆದರೆ ಈ ಅಭ್ಯಾಸ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ ಅದರಲ್ಲಿಯೂ ಚಳಿಗಾಲದಲ್ಲಿ ಆಹಾರವು ಬೇಗನೆ ತಣ್ಣಗಾಗುತ್ತದೆ, ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಬೆಳವಣಿಗೆಯ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ. ಸಾಮಾನ್ಯವಾಗಿ ಒಮ್ಮೆ ಮಾಡಿಟ್ಟ ಆಹಾರವನ್ನು ನಾವು ಮತ್ತೆ ಬಿಸಿ ಮಾಡಿದಾಗ, ಅದರಲ್ಲಿರುವ ಪ್ರೋಟೀನ್ಗಳು, ಜೀವಸತ್ವಗಳು ಮತ್ತು ಖನಿಜಗಳ ನೈಸರ್ಗಿಕ ಸಮತೋಲನವು ತೊಂದರೆಗೊಳಗಾಗುತ್ತದೆ. ವಿಶೇಷವಾಗಿ ಅಕ್ಕಿ, ಆಲೂಗಡ್ಡೆ, ಅಣಬೆಗಳು, ಕೋಳಿ ಮತ್ತು ಮೊಟ್ಟೆಗಳಂತಹ ಆಹಾರಗಳಲ್ಲಿ, ಬ್ಯಾಸಿಲಸ್ ಸೀರಿಯಸ್ ಎಂಬ ಬ್ಯಾಕ್ಟೀರಿಯಾಗಳು ಬೆಳೆಯಬಹುದು, ಇದು ಹೊಟ್ಟೆ ನೋವು, ವಾಂತಿ, ಆಹಾರ ವಿಷವಾಗುವುದು ಮತ್ತು ಅತಿಸಾರಕ್ಕೂ ಕಾರಣವಾಗಬಹುದು. ಪ್ರತಿದಿನ ಎಲ್ಲರ ಮನೆಯಲ್ಲಿಯೂ ವಿವಿಧ ರೀತಿಯ ಆಹಾರಗಳ ತಯಾರಿ ನಡೆಯುತ್ತದೆ. ಅನ್ನ, ರೊಟ್ಟಿ, ಸಾರು, ಸಾಂಬಾರ್ ಹೀಗೆ ಪ್ರತಿ ಮನೆಯಲ್ಲಿಯೂ ಬಗೆ ಬಗೆಯ ಅಡುಗೆ ರೆಡಿಯಾಗುತ್ತದೆ. ಇದು ಸಹಜ ಪ್ರಕ್ರಿಯೆ. ಆದರೆ ಬೆಳಿಗ್ಗೆ ಮಾಡಿದ ಆಹಾರ ಉಳಿದಿದ್ದರೆ, ಹೆಚ್ಚಿನವರು ಅದನ್ನು ಮತ್ತೆ ಬಿಸಿ ಮಾಡಿ ಮಧ್ಯಾಹ್ನ ಅಥವಾ ರಾತ್ರಿ ಊಟ ಮಾಡುವ ಸಮಯದಲ್ಲಿ ಸೇವನೆ ಮಾಡುತ್ತಾರೆ. ಇದರ ಹಿಂದೆ ಆಹಾರವನ್ನು ಬಿಸಾಡಬಾರದು ಎಂಬ ಒಳ್ಳೆಯ ಉದ್ದೇಶವಿರಲಿ ಅಥವಾ ಮತ್ತೊಮ್ಮೆ ಮಾಡಬೇಕು ಎಂಬ ಆಲಸ್ಯವಿರಲಿ, ಈ ಅಭ್ಯಾಸವನ್ನು ಆರೋಗ್ಯ ತಜ್ಞರು ಆರೋಗ್ಯಕ್ಕೆ ಹಾನಿಕಾರಕವೆಂದು ಪರಿಗಣಿಸುತ್ತಾರೆ. ಹೌದು, ಸಮಯ ಉಳಿಸಲು ಅಥವಾ ಆಫೀಸ್ ಗೆ ಹೋಗುವ ಅನೇಕರು ರಾತ್ರಿ ತಯಾರಿಸಿಟ್ಟ ಊಟವನ್ನು ಮತ್ತೆ ಬಿಸಿ ಮಾಡುತ್ತಾರೆ (Reheating Food). ಇದು ಆಹಾರದ ರುಚಿಯನ್ನು ಹಾಳುಮಾಡುವುದರ ಜೊತೆಗೆ, ಅದರ ಪೋಷಕಾಂಶಗಳನ್ನು ಸಹ ನಾಶ ಮಾಡುತ್ತದೆ ಇದಲ್ಲದೆ, ಈ ರೀತಿಯಲ್ಲಿ ಕೆಲವು ಆಹಾರಗಳನ್ನು ತಿನ್ನುವುದು ಕೂಡ ಆರೋಗ್ಯಕ್ಕೆ ಬಹಳ ಅಪಾಯಕಾರಿಯಾಗಿದೆ. ಹಾಗಾದರೆ ಈ ರೀತಿ ಮಾಡುವುದರಿಂದ ಯಾವ ರೀತಿಯ ಆರೋಗ್ಯ (Health) ಸಮಸ್ಯೆಗಳಾಗುತ್ತದೆ, ಯಾಕೆ ಒಳ್ಳೆಯದಲ್ಲ ಎಂಬುದನ್ನು ತಿಳಿದುಕೊಳ್ಳಿ. ಇನ್ನಷ್ಟು ಓದಿರಿ: LA 2028 Olympics: ಒಲಿಂಪಿಕ್ಸ್ನಿಂದ ಪಾಕಿಸ್ತಾನ್ ಔಟ್
Sponsored Ads
image computer academy
image computer academy
image computer academy
image computer academy
LANDSCAPING IN CAD
LANDSCAPING IN CAD
HSRNEWS
HSRNEWS

Related News

Advertisement

logo

HSRNEWS

ತ್ವರಿತ ಸುದ್ದಿ. ಅನಂತ ಒಳನೋಟಗಳು
ADS

© gokakica.in. All Rights Reserved. Designed by Image Computer Academy