Belagavi News:
ಮುಂಬೈ : 2026ರ ಬಹುನಿರೀಕ್ಷಿತ ಬಾಲಿವುಡ್ ಸಿನಿಮಾಗಳಲ್ಲಿ ಒಂದಾಗಿದ್ದ 'ಕಾಕ್ ಟೈಲ್2' (Cocktail 2) ಬಿಡುಗಡೆಯಾದ ಬಳಿಕ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದೆ. ಮ್ಯಾಡಾಕ್ ಫಿಲ್ಮ್ಸ್ ನಿರ್ಮಿಸಿರುವ ಈ ರೋಮ್ಯಾಂಟಿಕ್ ಕಾಮಿಡಿ ಸಿನಿಮಾ, ಮೂಲ 'ಕಾಕ್ ಟೈಲ್' ಚಿತ್ರದ ಒಟ್ಟು ಗಳಿಕೆಯನ್ನು ಹಿಂದಕ್ಕಿ ಹೊಸ ದಾಖಲೆ ನಿರ್ಮಿಸಿದೆ. ಜೊತೆಗೆ ದೇಶಿಯ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ರೂಪಾಯಿ ಕ್ಲಬ್ ಸೇರಿದ 2026 4ನೇ ಬಾಲಿವುಡ್ ಸಿನಿಮಾವಾಗಿದೆ.
ಚಿತ್ರದಲ್ಲಿ ಬಾಲಿವುಡ್ ಸ್ಟಾರ್ ಗಳಾದ ಶಾಹಿದ್ ಕಪೂರ್, ಕೃತಿ ಸನೋನ್ ಹಾಗೂ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದು. ಎರಡನೇ ವಾರಾಂತ್ಯದಲ್ಲಿ ಉತ್ತಮ ಕಲೆಕ್ಷನ್ ದಾಖಲಿಸಿದೆ. ಎರಡನೇ ಸೋಮವಾರವೇ ಸಿನಿಮಾ 100 ಕೋಟಿ ರೂಪಾಯಿ ಗಡಿ ದಾಟಿದ್ದು. ಮಂಗಳವಾರದ ಗಳಿಕೆಯೊಂದಿಗೆ ಚಿತ್ರದ ಒಟ್ಟು ದೇಶೀಯ ಕಲೆಕ್ಷನ್ 131.90 ಕೋಟಿ ರೂಪಾಯಿಗೆ ಏರಿಕೆಯಾಗಿದೆ.
ರಶ್ಮಿಕಾ ಮಂದಣ್ಣಗೆ ಮತ್ತೊಂದು 100 ಕೋಟಿ ಸಿನಿಮಾ:
2022ರಲ್ಲಿ ಅಮಿತಾಭ್ ಬಚ್ಚನ್ ಅಭಿನಯದ 'ಗುಡ್ ಬೈ ' ಚಿತ್ರದ ಮೂಲಕ ಬಾಲಿವುಡ್ ಗೆ ಪದಾರ್ಪಣೆ ಮಾಡಿದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ. ಹಿಂದಿ ಚಿತ್ರರಂಗದಲ್ಲಿ ಮತ್ತೊಂದು ಸೂಪರ್ ಹಿಟ್ ದಾಖಲಿಸಿದ್ದಾರೆ. ಈ ಹಿಂದೆ 'ಅನಿಮಲ್', 'ಛಾವಾ' ಮತ್ತು 'ಥಾಮಾ' ಸಿನಿಮಾಗಳ ಯಶಸ್ಸಿನ ಬಳಿಕ, ಇದೀಗ 'ಕಾಕ್ ಟೇಲ್2' ಮೂಲಕವೂ 100 ಕೋಟಿನಲ್ಲಿ ಕ್ಲಬ್ ಸೇರಿದ ಮತ್ತೊಂದು ಸಿನಿಮಾವನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ.
12ನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್:
ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ನಿರ್ದೇಶಕ ಹೋಮಿ ಅದಜಾನಿಯಾ ಅವರ 'ಕಾಕ್ ಟೇಲ್2' ಚಿತ್ರ 12ನೇ ದಿನ 2.13 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಇದರಲ್ಲಿ 1.85 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ದಾಖಲಾಗಿದೆ. ಉತ್ತಮ ವಾರ್ಡ್ ಆಫ್ ಮೌತ್ ಹಾಗೂ ಪ್ರೇಕ್ಷಕರ ಬೆಂಬಲದಿಂದ ಸಿನಿಮಾ ಎರಡನೆಯ ವಾರದಲ್ಲಿಯೂ ಸ್ಥಿರಗಳಿಕೆಯನ್ನು ಮುಂದುವರಿಸಿದೆ.
'ಕಾಕ್ ಟೈಲ್2' ಮುಂದಿನ ದಿನಗಳಲ್ಲಿಯೂ ಇದೇ ವೇಗದಲ್ಲಿ ಪ್ರದರ್ಶನ ಮುಂದುವರಿಸಿದರೆ, ಬಾಕ್ಸ್ ಆಫೀಸ್ ನಲ್ಲಿ ಇನ್ನಷ್ಟು ಹೊಸ ಮೈಲಿ ಗಲ್ಲುಗಳನ್ನು ಸಾಧಿಸುವ ನಿರೀಕ್ಷೆ ವ್ಯಕ್ತವಾಗಿದೆ.
12ದಿನಗಡ ಒಟ್ಟು ವ್ಯವಹಾರ:
•ಒಟ್ಟು ಗ್ಲೋಬಲ್ ಕಲೆಕ್ಷನ್: 131.90 ಕೋಟಿ ರೂಪಾಯಿ.
•ದೇಶಿಯ ಗ್ರಾಸ ಕಲೆಕ್ಷನ್: 103.45 ಕೋಟಿ ರೂಪಾಯಿ.
•ಇಂಡಿಯಾ ನೆಟ್ ಕಲೆಕ್ಷನ್: 28 .45ಕೋಟಿ ರೂಪಾಯಿ.
* 2025ರಲ್ಲಿ ದೇಶಿಯ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ರೂ.ದಾಟಿದ ಮತ್ತೊಂದು ಬಾಲಿವುಡ್ ಸಿನಿಮಾ
* ಧುರಂಧರ್ 2: 1375.40 ಕೋಟಿ ರೂಪಾಯಿ.
•ಬಾರ್ಡರ್ 2: 393.00 ಕೋಟಿ ರೂಪಾಯಿ.
•ಭೂತ್ ಬಾಂಗ್ಲಾ: 216.00 ಕೋಟಿ ರೂಪಾಯಿ.
ಕಾಕ್ ಟೇಲ್2: 103.45 ಕೋಟಿ ರೂಪಾಯಿ.
ಈ ವರ್ಷ ದೇಶಿಯಾವಾಗಿ 100 ಕೋಟಿ ಗಳಿಸಿದ 4ನೇ ಬಾಲಿವುಡ್ ಚಿತ್ರ ಮತ್ತು 11ನೇ ಭಾರತೀಯ ಚಿತ್ರವಾಗಿ ಕಾಕ್ ಟೈಲ್ 2 ಹೊರಹೊಮ್ಮಿದೆ. ವಿಶ್ವದಾದ್ಯಂತ, ಎರಡನೇ ಭಾಗ (ಸೀಕ್ವೆಲ್) 100 ಕೋಟಿ ಮೈಲಿಗಲ್ಲನ್ನು ದಾಟಿದ ವರ್ಷದ 6ನೇ ಹಿಂದಿ ಚಿತ್ರವಾಗಿ ದಾಖಲೆ ಬರೆದಿದೆ.
2012 ರಲ್ಲಿ ತೆರೆಕಂಡ ಕಾಕ್ ಟೈಲ್ ಕಲೆಕ್ಷನ್:
* ಒಟ್ಟು ಗ್ಲೋಬಲ್ ಕಲೆಕ್ಷನ್: 121.78 ಕೋಟಿ ರೂಪಾಯಿ.
•ದೇಶಿಯ ಗ್ರಾಸ್ ಕಲೆಕ್ಷನ್: 96.17 ಕೋಟಿ ರೂಪಾಯಿ.
•ಇಂಡಿಯಾ ನೆಟ್ ಕಲೆಕ್ಷನ್: 71.24 ಕೋಟಿ ರೂಪಾಯಿ.
•ಕೇವಲ ವಿದೇಶದ ಕಲೆಕ್ಷನ್: 25 . 61ಕೋಟಿ ರೂಪಾಯಿ.
ಕಾಕ್ ಟೈಲ್ 2 ಈಗಾಲೇ ವಿಶ್ವದಾದ್ಯಂತ 131.90 ಕೋಟಿ ರೂ. ಗಳಿಸಿದ್ದು, ಇದು ಮೂಲ ಕಾಕ್ ಟೈಲ್ ನ ಜೀವಮಾನದ ಜಾಗತಿಕ ಕಲೆಕ್ಷನ್ (121.78 ಕೋಟಿ ರೂ.) ಅನ್ನು ಮೀರಿಸಿದೆ.