<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ಇರಾನ್ ನ ಹಾರ್ಮೋಜ್ಗನ್ ಪ್ರಾಂತ್ಯದಲ್ಲಿ 5-6 ಸೇತುವೆಗಳು ಧ್ವಂಸ; ಭಾರೀ ಹಾನಿ

ಇರಾನ್ ನ ಹಾರ್ಮೋಜ್ಗನ್ ಪ್ರಾಂತ್ಯದಲ್ಲಿ 5-6 ಸೇತುವೆಗಳು ಧ್ವಂಸ; ಭಾರೀ ಹಾನಿ
Summary: Heavy damage has occurred in Iran's Hormozgan province, with a total of 5-6 bridges destroyed. The traffic system has been severely disrupted after the incident.

Belagavi News :

ಟೆಹ್ರಾನ್: ಅಮೆರಿಕ -ಇರಾನ್ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದ್ದು, ಇರಾನ್ ನಡೆಸಿದ ಪ್ರತಿದಾಳಿಯಲ್ಲಿ ಅಮೆರಿಕದ ಕೆಲವು ಸೇನಾ ನೆಲೆಗಳು ಗುರಿಯಾಗಿವೆ ಎಂದು ವರದಿಯಾಗಿದೆ. ಇರಾಕ್ ನ ಕುರ್ದಿಸ್ತಾನ ಹಾಗೂ ಕುವೈತ್ ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ದಾಳಿ ನಡೆಸಿದೆ ಎನ್ನಲಾಗಿದೆ.

ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್ ಹೈಪರ್ಸಾನಿಕ್ ಕ್ಷಿಪಣಿಗಳು ಹಾಗೂ ಡ್ರೋನ್ ಗಳನ್ನು ಬಳಸಿಕೊಂಡು ದಾಳಿಗಳನ್ನು ಮುಂದುವರಿಸಿದೆ ಎಂದು ವರದಿಗಳು ತಿಳಿಸಿವೆ. ಈ ದಾಳಿಗಳ ಪರಿಣಾಮವಾಗಿ ಅಮೆರಿಕದ ಸೇನಾ ಮೂಲ ಸೌಕರ್ಯಗಳಿಗೆ ಹಾನಿಯಾಗಿದ್ದು, ಸಂವಹನ ವ್ಯವಸ್ಥೆಗಳು, ಇಂಧನ ಸಂಗ್ರಹ ಘಟಕಗಳು, ಶಸ್ತ್ರಾಸ್ತ್ರಗಳ ಸಂಗ್ರಹಣಾ ಪ್ರದೇಶಗಳು ಹಾಗೂ ಯಂತ್ರೋಪಕರಣಗಳ ಘಟಕಗಳು ಹಾನಿಗೊಳಗಾಗಿವೆ ಎಂದು ಹೇಳಲಾಗಿದೆ.

ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದ ಭದ್ರತಾ ಪರಿಸ್ಥಿತಿ ಮತ್ತಷ್ಟು ಸೂಕ್ಷ್ಮವಾಗಿದೆ. ಎರಡು ರಾಷ್ಟ್ರಗಳ ನಡುವಿನ ಮುಂದಿನ ಬೆಳವಣಿಗೆಗಳ ಮೇಲೆ ಜಾಗತಿಕ ಮಟ್ಟದಲ್ಲಿ ತೀವ್ರ ನಿಗಾ ಇಡಲಾಗಿದೆ.

ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ಮತ್ತಷ್ಟು ಉಲ್ಬಣಗೊಂಡಿದ್ದು, ಇರಾಕ್ ನ ಕುರ್ದಿಸ್ತಾನ ಪ್ರದೇಶದ ಮೇಲೆ ಇರನ್ ಭಾರೀ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಇರಾಕ್ ನಲ್ಲಿರುವ ಅಮೆರಿಕಾದ ಸೇನಾ ಮೂಲಸೌಕರ್ಯಗಳು, ಶಸ್ತ್ರಾಸ್ತ್ರಗಳ ಸಂಗ್ರಹಣಾ ಗೋದಾಮುಗಳು ಹಾಗೂ ಸೇನಾ ಸಂಬಂಧಿತ ಗುರಿಗಳನ್ನು ಇರಾನ್ ಟಾರ್ಗೆಟ್ ಮಾಡಿದೆ ಎನ್ನಲಾಗಿದೆ. ಅಮೆರಿಕ ನಡೆಸಿದ ತೀವ್ರ ದಾಳಿಗಳಿಗೆ ಪ್ರತಿಯಾಗಿ ಈ ಪ್ರತಿ ದಾಳಿಗಳನ್ನು ನಡೆಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಈ ನಡುವೆ, ಇರಾನ್ ಕೂಡ ಅಮೆರಿಕದ ದಾಳಿಯಿಂದ ಭಾರಿ ಹಾನಿ ಅನುಭವಿಸಿದೆ ಎಂದು ಹೇಳಲಾಗಿದೆ. ಅಮೆರಿಕದ ದಾಳಿಯಲ್ಲಿ ಇರಾನ್ ನ ಕರ್ಮನ್ ಮತ್ತು ಹಾರ್ಮೋಜ್ಗನ್ ಪ್ರಾಂತ್ಯದಲ್ಲಿ ಸಂಪರ್ಕಿಸುವ ಪ್ರಮುಖ ಸೇತುವೆಗಳು ಧ್ವಂಸಗೊಂಡಿವೆ ಎನ್ನಲಾಗಿದೆ.

ವರದಿಗಳ ಪ್ರಕಾರ, ಹಾರ್ಮೋಜ್ಗನ್ ಪ್ರಾಂತ್ಯದ ಮೇಲೆ ನಡೆದ ಕ್ಷಿಪಣಿ ದಾಳಿಗಳ ಪರಿಣಾಮವಾಗಿ ಐದಾರು ಪ್ರಮುಖ ಸೇತುವೆಗಳು ಹಾನಿಗೊಳಗಾಗಿವೆ. ಬಂದರ್ ಅಬ್ಬಾಸ್ - ಖ್ಮೇರ್ - ಲಾರ್ ಮಾರ್ಗದ ಗ್ರೇವೆ ಸೇತುವೆ, ಬಂದರ್ ಅಬ್ಬಾಸ್- ಖ್ಮೇರ್ ಮಾರ್ಗದ ಲ್ಯಾಟಿಡಾನ್ ಸೇತುವೆ, ಕಹೂರ್ಸ್ತಾನ್ - ಲಾರ್ ಮಾರ್ಗದ ಎರಡು ಸೇತುವೆಗಳು ಹಾಗೂ ಬಂದರ್ ಖ್ಮೇರ್ ಮತ್ತು ಖ್ರೇಶರ್ ಪ್ರದೇಶಗಳನ್ನು ಸಂಪರ್ಕಿಸುವ ಬಂದರ್ ಅಬ್ಬಾಸ್ ಸೇತುವೆ ಸೇರಿದಂತೆ ಹಲವು ಪ್ರಮುಖ ಸಂಪರ್ಕ ಮಾರ್ಗಗಳು ಹಾನಿಗೊಳಗಾಗಿವೆ ಎಂದು ವರದಿಯಾಗಿದೆ.

ಇರಾನ್ ಮತ್ತು ಅಮೆರಿಕ ನಡುವಿನ ಈ ಸಂಘರ್ಷದಿಂದ ಸೇನಾ ನೆಲೆಗಳು ಮಾತ್ರವಲ್ಲದೆ, ಪ್ರಮುಖ ಮೂಲಸೌಕರ್ಯಗಳ ಮೇಲು ಪರಿಣಾಮ ಬೀರುತ್ತಿದ್ದು, ಮಧ್ಯಪ್ರಾಚ್ಯದ ಭದ್ರತಾ ಪರಿಸ್ಥಿತಿ ಮತ್ತಷ್ಟು ಆತಂಕಕಾರಿ ಹಂತ ತಲುಪಿದೆ. ಉಭಯ ರಾಷ್ಟ್ರಗಳ ಮುಂದಿನ ನಡೆಗಳ ಮೇಲೆ ಜಾಗತಿಕ ಮಟ್ಟದಲ್ಲಿ ತೀವ್ರ ನಿಗಾ ಇಡಲಾಗಿದೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online