<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ಅಪ್ಪನ ನೆನಪಿನಲ್ಲಿ ಹೊಸ ಆರಂಭ : ಪುನೀತ್ ಪುತ್ರಿ ಆರಂಭಿಸಿದ ಉದ್ಯಮಕ್ಕೆ ವಿಶೇಷ ಹೆಸರು

ಅಪ್ಪನ ನೆನಪಿನಲ್ಲಿ ಹೊಸ ಆರಂಭ : ಪುನೀತ್ ಪುತ್ರಿ ಆರಂಭಿಸಿದ ಉದ್ಯಮಕ್ಕೆ ವಿಶೇಷ ಹೆಸರು
Summary: Power star Puneeth Rajkumar's daughter has started a new business with a special name given by her father. The effort, which started in memory of her father, has caught the attention of fans.

Belagavi News:

ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕಿರಿಯ ಪುತ್ರಿ ವಂದಿತಾ ರಾಜ್ ಕುಮಾರ್ ಇದೀಗ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಹವ್ಯಾಸವಾಗಿದ್ದ ಬೇಕಿಂಗ್ ಕಲೆಯನ್ನೇ ಉದ್ಯಮವಾಗಿ ಪರಿವರ್ತಿಸಿಕೊಂಡಿರುವ ವಂದಿತಾ, ಹೊಸ ಸಣ್ಣ ಬ್ಯುಸಿನೆಸ್ ಆರಂಭಿಸಿದ್ದಾರೆ.

ಪುನೀತ್ ರಾಜಕುಮಾರ್ ಅವರಿಗೆ ಸಿನಿಮಾ ಮಾತ್ರವಲ್ಲದೆ ಉದ್ಯಮ ಕ್ಷೇತ್ರದಲ್ಲಿಯೂ ಹೆಚ್ಚಿನ ಆಸಕ್ತಿ ಇತ್ತು. ನಟನೆಯ ಜೊತೆಗೆ ನಿರ್ಮಾಣ ಸಂಸ್ಥೆ ಹಾಗೂ ಸಂಗೀತ ಕ್ಷೇತ್ರದಲ್ಲಿಯೂ ಅವರು ತಮ್ಮದೇ ಆದ ಪ್ರಯತ್ನಗಳನ್ನು ನಡೆಸಿದ್ದರು. ಹಲವು ಕ್ಷೇತ್ರಗಳಲ್ಲಿ ಹೂಡಿಕೆಯ ಬಗ್ಗೆಯೂ ಪುನೀತ್ ಆಸಕ್ತಿ ಹೊಂದಿದ್ದರು.

ಅದೇ ಹದಿಯಲ್ಲಿ ಸಾಗಿರುವ ವಂದಿತಾ, ತಮ್ಮ ತಂದೆ ಇಟ್ಟ ವಿಶೇಷ ಹೆಸರಲ್ಲಿ ತಮ್ಮ ಉದ್ಯಮದ ಬ್ರ್ಯಾಂಡ್ ಆಗಿ ಬಳಸಿಕೊಂಡಿದ್ದಾರೆ. ಬೇಕಿಂಗ್ ಮೇಲಿನ ಆಸಕ್ತಿಯನ್ನು ವೃತ್ತಿಯಾಗಿ ರೂಪಿಸಿಕೊಂಡಿರುವ ಅವರ ಹೊಸ ಪ್ರಯತ್ನ ಇದೀಗ ಅಪ್ಪು ಅಭಿಮಾನಿಗಳ ಗಮನ ಸೆಳೆದಿದೆ.

ಪುನೀತ್ ರಾಜಕುಮಾರ್ ಅವರ ಕುಟುಂಬದ ಹಲವು ಸದಸ್ಯರು ಉದ್ಯಮ ಮತ್ತು ಸೃಜನಾತ್ಮಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದು, ಇದೀಗ ಅವರ ಪುತ್ರಿಯ ಹೊಸ ಉದ್ಯಮ ಆರಂಭವು ಮತ್ತೊಂದು ವಿಶೇಷ ಬೆಳವಣಿಗೆಯಾಗಿದೆ.

ಅಪ್ಪು ಪುತ್ರಿ ವಂದಿತಾ ಬೇಕಿಂಗ್ ಉದ್ಯಮಕ್ಕೆ ಎಂಟ್ರಿ - ಅಪ್ಪ ಪ್ರೀತಿಯಿಂದ ಕರೆಯುತ್ತಿದ್ದ ಹೆಸರೇ 'ನುಕಾಸ್ ಕೆಫೆ' :

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಕಿರಿಯ ಪುತ್ರಿ ವಂದಿತಾ ರಾಜಕುಮಾರ್ ಇದೀಗ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಬೇಕಿಂಗ್ ಆಸಕ್ತಿಯನ್ನು ಉದ್ಯಮವಾಗಿಸಿಕೊಂಡಿರುವ ವಂದಿತಾ, " ನುಕಾಸ್ ಕೆಫೆ" ಎಂಬ ಹೆಸರಿನಲ್ಲಿ ಹೊಸ ಬ್ಯುಸಿನೆಸ್ ಆರಂಭಿಸಿದ್ದಾರೆ.

ವಂದಿತಾ ಅವರಿಗೆ ಬಾಲ್ಯದಿಂದಲೂ ಬೇಕಿಂಗ್ ಬಗ್ಗೆ ಆಸಕ್ತಿ ಇದ್ದು, ತಮ್ಮ ದೊಡ್ಡಮ್ಮ ಗೀತಾ ಶಿವರಾಜಕುಮಾರ್ ಅವರಂತೆ ಈ ಕ್ಷೇತ್ರದಲ್ಲಿ ವಿಶೇಷ ಒಲವು ಹೊಂದಿದ್ದಾರೆ. ಇದೀಗ ತಮ್ಮದೇ ಆದ ರೀತಿಯಲ್ಲಿ ಬೇಕಿಂಗ್ ಉದ್ಯಮವನ್ನು ಆರಂಭಿಸಿ, ಕೇಕ್, ಬಿಸ್ಕೆಟ್ ಹಾಗೂ ವಿವಿಧ ಬೇಕಿಂಗ್ ಐಟೆಮ್ಸಗಳನ್ನು ಗ್ರಾಹಕರಿಗೆ ಒದಗಿಸುತ್ತಿದ್ದಾರೆ.

"ನಾಕಾಸ್ ಕೆಫೆ" ಎಂಬ ಹೆಸರಿನ ಹಿಂದಿಯು ವಿಶೇಷ ಭಾವನೆ ಇದೆ. ವಂದಿತಾ ಅವರನ್ನು ತಂದೆ ಪುನೀತ್ ರಾಜ್ ಕುಮಾರ್ ಪ್ರೀತಿಯಿಂದ "ನುಕಾ" ಎಂದು ಕರೆಯುತ್ತಿದ್ದರು. ಅದೇ ಹೆಸರನ್ನು ತಮ್ಮ ಉದ್ಯಮಕ್ಕೆ ಇಟ್ಟುಕೊಂಡಿರುವ ಅಪ್ಪು ಅಭಿಮಾನಿಗಳ ಗಮನ ಸೆಳೆದಿದೆ.

ವಂದಿತಾ ತಮ್ಮ ಮನೆಯಲ್ಲಿಯೇ ಖುದ್ದಾಗಿ ಖಾದ್ಯಗಳನ್ನು ತಯಾರಿಸಿ ಆನ್ಲೈನ್ ಮೂಲಕ ಮಾರಾಟ ಮಾಡುತ್ತಿದ್ದಾರೆ. ಗ್ರಾಹಕರು ವೆಬ್ಸೈಟ್ ಮೂಲಕ ಆರ್ಡರ್ ಮಾಡಬಹುದಾಗಿದೆ. ಹೆಚ್ಚಿನ ಆರ್ಡರ್ಗಳು ಬಂದ ಸಂದರ್ಭದಲ್ಲಿ ತಯಾರಿ ಮತ್ತು ಡೆಲಿವರಿಗೆ ಸ್ವಲ್ಪ ಸಮಯ ಬೇಕಾಗಬಹುದು ಎಂದು ಅವರು ತಮ್ಮ ಗ್ರಾಹಕರಿಗೆ ಮುಂಚಿತವಾಗಿ ಮಾಹಿತಿ ನೀಡಿದ್ದಾರೆ.

ಪುನೀತ್ ರಾಜಕುಮಾರ್ ಅವರ ನೆನಪಿನೊಂದಿಗೆ ಆರಂಭವಾಗಿರುವ ವಂದಿತ ಅವರ ಈ ಹೊಸ ಉದ್ಯಮಕ್ಕೆ ಅಭಿಮಾನಿಗಳಿಂದ ಶುಭಾಶಯಗಳು ವ್ಯಕ್ತವಾಗುತ್ತಿವೆ.

ಹವ್ಯಾಸವನ್ನೇ ಉದ್ಯಮವಾಗಿಸಿದ ಅಪ್ಪು ಪುತ್ರಿ ವಂದಿತಾ - ಕೇಕ್, ಬ್ರೌನಿ, ತಿರಮಿಸು ಸೇರಿ ಹಲವು ಖಾದ್ಯಗಳ ಮಾರಾಟ :

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕಿರಿಯ ಪುತ್ರಿ ವಂದಿತಾ ರಾಜ್ ಕುಮಾರ್ ತಮ್ಮ ಹವ್ಯಾಸವನ್ನೇ ಹೊಸ ಉದ್ಯಮವಾಗಿ ಪರಿವರ್ತಿಸಿಕೊಂಡಿದ್ದಾರೆ. ಬಾಲ್ಯದಿಂದಲೂ ಬೇಕಿಂಗ್ ನಲ್ಲಿ ಆಸಕ್ತಿ ಹೊಂದಿದ್ದ ವಂದಿತಾ ಇದೀಗ ತಮ್ಮದೇ ಆದ ಬೇಕಿಂಗ್ ಬ್ಯುಸಿನೆಸ್ ಆರಂಭಿಸಿ ಗಮನ ಸೆಳೆದಿದ್ದಾರೆ.

ವಂದಿತಾ ತಮ್ಮ ಪ್ರೀತಿಯ ಪಾತ್ರರು ಹಾಗೂ ಆಪ್ತರಿಗಾಗಿ ಹಲವು ಬಾರಿ ಕೇಕ್ ಮತ್ತು ವಿಶೇಷ ಖಾದ್ಯಗಳನ್ನು ತಯಾರಿಸುತ್ತಿದ್ದರು. ಇತ್ತೀಚೆಗೆ ತಮ್ಮ ಸಹೋದರ ವಿನಯ್ ರಾಜ್ ಕುಮಾರ್ ಅವರ 'ಗ್ರಾಮಾಯಣ' ಸಿನಿಮಾದ ಬಿಡುಗಡೆ ಸಂದರ್ಭದಲ್ಲಿಯೂ ಅಣ್ಣನಿಗಾಗಿ ವಿಶೇಷಕ್ಕೆ ತಯಾರಿಸಿ, ಅದರ ಮೇಲೆ 'ಗ್ರಾಮಾಯಣ' ಎಂದು ಬರೆದು ಶುಭ ಹಾರೈಸಿದರು.

ಬೇಕಿಂಗ್ ಮೇಲಿನ ಇದೇ ಆಸಕ್ತಿಯನ್ನು ಇದೀಗ ವಂದಿತಾ ಉದ್ಯಮದ ರೂಪಕ್ಕೆ ತಂದಿದ್ದಾರೆ. ತಮ್ಮ 'ನುಕಾಸ್ ಕೆಫೆ' ಮೂಲಕ ತಿರಮಿಸು, ವಿವಿಧ ಬಗೆಯ ಕೇಕ್ ಗಳು, ಬಿಸ್ಕೆಟ್ ಗಳು, ಬ್ರೆಡ್, ಬ್ರೌನಿ, ಚೀಸ್ ಕೇಕ್, ಕಪ್ ಕೇಕ್, ಸೇರಿದಂತೆ ಹಲವು ಬೇಕ್ಡ್ ಐಟಮ್ಸ್ ಗಳನ್ನು ತಯಾರಿಸಿ ಗ್ರಾಹಕರಿಗೆ ತಲುಪಿಸುತ್ತಿದ್ದಾರೆ.

ವಂದಿತಾ ಖುದ್ದಾಗಿ ತಯಾರಿಸುವ ಈ ಖಾದ್ಯಗಳಿಗೆ ಆನ್ಲೈನ್ ಮೂಲಕ ಆರ್ಡರ್ ಸ್ವೀಕರಿಸಲಾಗುತ್ತಿದ್ದು, ಮನೆಯಲ್ಲೇ ತಯಾರಿಸಿ ವಿಶೇಷ ಬೇಕರಿ ಉತ್ಪನ್ನಗಳನ್ನು ಗ್ರಾಹಕರ ಮನೆಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.

ಅಪ್ಪು ಅವರ ಪ್ರೀತಿಯ 'ನುಕಾ' ಹೆಸರಿನಲ್ಲಿ ಆರಂಭವಾಗಿರುವ ಈ ಹೊಸ ಉದ್ಯಮಕ್ಕೆ ಅಭಿಮಾನಿಗಳು ಹಾಗೂ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online