ಆಕಾಶ್ಗೆ ತಿಳಿದೋಯ್ತು ತಂದೆಯ ರಹಸ್ಯ; ಗೌತಮ್ಗೆ ಬಿಗಿದಪ್ಪುಗೆ
Amruthadhaare Serial: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್-ಭೂಮಿಕಾ ಐದು ವರ್ಷಗಳ ನಂತರ ಮತ್ತೆ ಒಂದಾಗಿದ್ದಾರೆ. ಶಕುಂತಲಾ ಕಾರಣದಿಂದ ದೂರವಿದ್ದ ಇವರ ಮಗ ಆಕಾಶ್ಗೆ ಈಗ ತನ್ನ ನಿಜವಾದ ತಂದೆ ಗೌತಮ್ ಎಂದು ಗೊತ್ತಾಗಿದೆ. ಸೂಟ್ಕೇಸ್ನಲ್ಲಿ ಸಿಕ್ಕ ಮದುವೆ ಫೋಟೋದಿಂದ ಆಕಾಶ್ ಸತ್ಯ ಅರಿತಿದ್ದಾನೆ.
ಅಮೃತಧಾರೆ’ (Amruthadhaare) ಧಾರಾವಾಹಿಯಲ್ಲಿ ಇಷ್ಟು ದಿನ ಗೌತಮ್ ದೀವಾನ್ ಹಾಗೂ ಭೂಮಿಕಾ ದೀವಾನ್ ದೂರ ದೂರವೇ ಇದ್ದರು. ಐದು ವರ್ಷಗಳ ಹಿಂದೆ ಇವರು ಮನೆ ಬಿಟ್ಟು ಬಂದಿದ್ದರು. ಶಕುಂತಲಾ ಇದಕ್ಕೆಲ್ಲ ಕಾರಣ ಆಗಿದ್ದಳು. ಈಗ ಎಲ್ಲರೂ ಒಂದೇ ವಠಾರಕ್ಕೆ ತೆರಳಿದ್ದಾರೆ. ಭೂಮಿಕಾ ಮಗ ಆಕಾಶ್ಗೆ ತಂದೆ ಯಾರು ಎಂಬ ವಿಚಾರ ತಿಳಿದಿರಲೇ ಇಲ್ಲ. ಈಗ ಈ ರಹಸ್ಯ ಅಪ್ಪುಗೆ ತಿಳಿದೇ ಹೋಗಿದೆ.
ಗೌತಮ್ನಿಂದ ಐದು ವರ್ಷ ಭೂಮಿಕಾ ದೂರವೇ ಇದ್ದಳು. ಈಗ ಇಬ್ಬರು ಮತ್ತೆ ಒಂದಾಗಿದ್ದಾರೆ. ಒಂದೇ ವಠಾರದಲ್ಲಿ ಇವರಿದ್ದಾರೆ. ತಂದೆ ಯಾರು ಎಂಬ ವಿಚಾರವನ್ನು ಭೂಮಿಕಾ ಇಷ್ಟು ದಿನ ಅಪ್ಪುನಿಂದ ಮುಚ್ಚಿಟ್ಟಿದ್ದಳು. ಆದರೆ, ಈಗ ಆ ವಿಷಯ ಗೊತ್ತಾಗುವ ಸಮಯ. ಈ ವಿಷಯ ಅಚಾನಕ್ಕಾಗಿ ರಿವೀಲ್ ಆಗಿದೆ.
ಭೂಮಿಕಾಗೆ ಇಬ್ಬರು ಮಕ್ಕಳು ಜನಿಸಿದ್ದರು. ಈ ಪೈಕಿ ಒಂದು ಮಗುವನ್ನು ಜಯದೇವ್ ಕಳೆದು ಹಾಕಿದ್ದಾನೆ. ಈ ವಿಷಯ ಭೂಮಿಕಾಗೆ ಬೇಸರ ಮೂಡಿಸಿತ್ತು. ಇದೇ ಸಮಯದಲ್ಲಿ ಶಕುಂತಲಾ ಬೆದರಿಕೆ ಹಾಕಿದ್ದಳು. ಗೌತಮ್ನಿಂದ ದೂರ ಇರುವಂತೆ ಸೂಚಿಸಿದ್ದಳು. ಇಲ್ಲವಾದಲ್ಲಿ ಕುಟುಂಬ ನಾಶ ಮಾಡೋದಾಗಿ ಹೇಳಿದ್ದಳು. ಇದರಿಂದ ಬೆದರಿದ ಭೂಮಿಕಾ ಮನೆ ಬಿಟ್ಟು ಹೋಗಿದ್ದಳು.
‘ಗೌತಮ್ ಅವರು ನನ್ನ ತಂದೆನಾ’ ಎಂದು ಮನಸ್ಸಿಲ್ಲೇ ಅಂದುಕೊಂಡಿದ್ದಾನೆ ಆಕಾಶ್. ನಂತರ ಓಡೋಡಿ ಬಂದು ಗೌತಮ್ನ ಹಗ್ ಮಾಡಿಕೊಂಡಿದ್ದಾನೆ. ‘ನೀವು ನನ್ನ ತಂದೆನಾ’ ಎಂದು ಖುಷಿಪಟ್ಟಿದ್ದಾನೆ. ಇಷ್ಟು ದಿನ ತಂದೆ ಇಲ್ಲ ಎಂಬ ನೋವು ಆತನಿಗೆ ಬಹುವಾಗಿ ಕಾಡುತ್ತಾ ಇತ್ತು. ಈಗ ತಂದೆ ಸಿಕ್ಕಿರೋದು ಆತನಿಗೆ ಖುಷಿ ಕೊಟ್ಟಿದೆ. ಈಗ ಗೌತಮ್ ಹೆಣ್ಣು ಮಗುವೊಂದನ್ನು ದತ್ತು ಪಡೆದಿದ್ದಾನೆ. ಅದು ಗೌತಮ್-ಭೂಮಿಕಾ ಮಗಳೇ ಇರಬಹುದು ಎಂದು ವೀಕ್ಷಕರು ಊಹಿಸುತ್ತಿದ್ದಾರೆ.
ಭೂಮಿಕಾಳು ಕಪಾಟಿನ ಮೇಲ್ಭಾಗದ ಸ್ಯೂಟ್ಕೇಸ್ನಲ್ಲಿ ಗೌತಮ್ ಜೊತೆಗಿನ ಮದುವೆ ಫೋಟೋ ಇಟ್ಟಿದ್ದಳು. ಬ್ಯಾಗ್ ತೆಗೆಯುವಾಗ ಫೋಟೋ ಇಟ್ಟ ಸ್ಯೂಟ್ಕೇಸ್ ಬಿದ್ದು ಹೋಗಿದೆ. ಈ ವೇಳೆ ಫೋಟೋ ಕೂಡ ಬಿದ್ದಿದೆ. ಫೋಟೋ ನೋಡುತ್ತಿದ್ದಂತೆ ಆಕಾಶ್ಗೆ ಶಾಕ್ ಆಗಿದೆ. ಆತನಿಗೆ ತಂದೆ ಯಾರು ಎಂಬ ಸತ್ಯ ಗೊತ್ತಾಗಿದೆ.
ಇನ್ನಷ್ಟು ಓದಿರಿ:
IPL 2026: ಯಾವ ತಂಡದಿಂದ ಯಾರು ಔಟ್