belagavi news:
ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅದ್ಭುತ ಪ್ರದರ್ಶನ ನೀಡುತ್ತಿದ್ದು, ಪ್ಲೇ ಆಫ್ ಹಂತಕ್ಕೆ ಬಹಳ ಹತ್ತಿರವಾಗಿದೆ. ತಂಡ ಇದುವರೆಗೆ ಆಡಿರುವ 9 ಪಂದ್ಯಗಳಲ್ಲಿ 6 ಗೆಲುವು ಹಾಗೂ ಮೂರು ಸೋಲುಗಳನ್ನು ಕಂಡು 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಉಳಿದ 5 ಪಂದ್ಯಗಳಲ್ಲಿ ಕನಿಷ್ಠ ಮೂರು ಗೆಲವು ಸಾಧಿಸಿದರೆ ಆರ್ಸಿಬಿ ನೇರವಾಗಿ ಪ್ಲೇ ಆಫ್ ಗೆ ಅರ್ಹತೆ ಪಡೆಯುವ ಸಾಧ್ಯತೆ ಇದೆ. ಆದರೆ ಈ ಮಹತ್ವದ ಹಂತದಲ್ಲಿ ತಂಡಕ್ಕೆ ದೊಡ್ಡ ಆಘಾತ ಸಂಭವಿಸಿದೆ.
ತಂಡದ ಪ್ರಮುಖ ಸ್ಟಾರ್ ಬ್ಯಾಟರ್, ಕಳೆದ ಸೀಸನ್ ನ ಟ್ರೋಫಿ ಗೆಲುವಿನಲ್ಲೂ ಪ್ರಮುಖ ಪಾತ್ರ ವಹಿಸಿದ್ದ ಆಟಗಾರ, ಆರ್ದ ಟೂರ್ನಿಯಲ್ಲಿ ತಮ್ಮ ದೇಶಕ್ಕೆ ಮರಳಿರುವುದರಿಂದ ಮುಂದಿನ ಪಂದ್ಯಗಳಲ್ಲಿ ಅವರ ಭಾಗವಹಿಸುವಿಕೆಯ ಕುರಿತು ಅನುಮಾನಗಳು ಮೂಡಿವೆ. 2025 ಆವೃತ್ತಿಯಲ್ಲಿ ಅವರು 13 ಪಂದ್ಯಗಳಲ್ಲಿ 43 ರನ್ಗಳನ್ನು 175.98 ಸ್ಟ್ರೈಕ್ ರೇಟ್ ನೊಂದಿಗೆ ಸಿಡಿಸಿದರು. ಈ ಆಟಗಾರನ ನಿರ್ಗಮನ ಆರ್ಸಿಬಿ ತಂಡದ ಬ್ಯಾಟಿಂಗ್ ಸಮತೋಲನಕ್ಕೆ ದೊಡ್ಡ ಹೊಡೆತ ವಾಗಿದ್ದು, ಲೇಔಟ್ ಹೋರಾಟವನ್ನು ಇನ್ನಷ್ಟು ಕಠಿಣ ಗೊಳಿಸಿದೆ.
ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಕಳಪೆ ಫಾರ್ಮ್ ನಿಂದ ಬಳಲುತ್ತಿದ್ದ ಫಿಲ್ ಸಾಲ್ಟ್ ಐಪಿಎಲ್ ನಲ್ಲಿ ಮತ್ತೆ ಲಯಕೆ ಮರಳಿ ಗಮನ ಸೆಳೆದಿದ್ದರು. ಆದರೆ ಇದೀಗ ಅವರಿಗೆ ಹಿನ್ನಡೆಯಾಗಿದೆ. ಈ ಋತುವಿನಲ್ಲಿ ಆರು ಇನ್ನಿಂಗ್ಸ್ ಗಳಲ್ಲಿ ಅವರು 168.33ರ ಸ್ಟ್ರೈಕ್ ರೇಟ್ ನಲ್ಲಿ 202 ರನ್ಗಳನ್ನು ಗಳಿಸಿ, ವಿರಾಟ್ ಕೊಹ್ಲಿ ಜೊತೆಗೆ ತಂಡಕ್ಕೆ ಬಲವಾದ ಆರಂಭ ಒದಗಿಸಿದ್ದರು. ಸಾಲ್ಟ್ ಅನು ಉಪಸ್ಥಿತಿಯಲ್ಲಿ ಮತ್ತೊಬ್ಬ ಇಂಗ್ಲಿಷ್ ಬ್ಯಾಟ್ಸಮನ್ ಜಾಕೋಬ್ ಬೆಥೆಲ್ ಅವರಿಗೆ ಅವಕಾಶ ನೀಡಲಾಗಿದ್ದು, ಅವರು ಮೂರು ಇನ್ನಿಂಗ್ಸ್ ಕೇವಲ 39 ರನ್ಗಳನ್ನು ಮಾತ್ರ ಗಳಿಸಿ ಇನ್ನೂ ಪರಿಣಾಮಕಾರಿ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ.
ಐಪಿಎಲ್ ನಿಯಮಗಳ ಪ್ರಕಾರ, ಫಿಲ್ ಸಾಲ್ಟ್ ಅವರ ಗಾಯ ಗಂಭೀರವಾಗಿ ಸೀಸನ್ ನಿಂದ ಹೊರಗೂಳಿಯುವಂತಾದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬದಲಿ ಆಟಗಾರರನ್ನು ಸೇರಿಸಿಕೊಳ್ಳುವ ಅವಕಾಶ ಇದೆ. ಆದರೆ ಪ್ರಸ್ತುತ ತಂಡದ ಮುಖ್ಯ ಗಮನ ಸಾಲ್ಟ್ ಅವರ ಚೇತರಿಕೆಗೆ ಇದೆ. ಆರ್ ಸಿ ಬಿ ತನ್ನ ಮುಂದಿನ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ ವಿರುದ್ಧ ಮೇ 7ರಂದು ಕಣಕ್ಕಿಳಿಯಲಿದೆ.
ಅತ್ಯುತ್ತಮ ಫಾರ್ಮ್ ಅಲ್ಲಿದ್ದ ಸಾಲ್ಟ್ ಈಗಾಗಲೇ ರಾಯಲ್ ಚಾಲೆಂಜ್ ಬೆಂಗಳೂರು ತಂಡದ ಕಳೆದ ಮೂರು ಪಂದ್ಯಗಳಲ್ಲಿ ತಪ್ಪಿಸಿಕೊಂಡಿದ್ದಾರೆ. ಏಪ್ರಿಲ್ 18ರಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ ವಿರುದ್ಧ ಪಂದ್ಯದಲ್ಲಿ, ತಂಡನ್ನು ತಡೆಯಲು ಡೀಪ್ ಬ್ಯಾಕ್ ವರ್ಡ್ ಸ್ಕ್ವೇರ್ ಲೆಗ್ ನಲ್ಲಿ ಡೈವ್ ಮಾಡುವಾಗ ಅವರು ಎಡಗೈಗೆ ಗಾಯ ಮಾಡಿಕೊಂಡಿದ್ದಾರೆ. ವರದಿಗಳ ಪ್ರಕಾರ ಅವರ ಎಡಗೈ ಬೆರಳಿಗೆ ಗಾಯವಾಗಿದ್ದು, ಸ್ಕ್ಯಾನಿಂಗ್ ಆಗಿ ಇಂಗ್ಲೆಂಡ್ ಕ್ರಿಕೆಟ್ ತಂಡದ ಸೂಚನೆಯಂತೆ ಯುನೈಟೆಡ್ ಕಿಂಗ್ಡಮ್ಗೆ ವಾಪಸ್ ಆಗಿದ್ದಾರೆ. ತಂಡದ ನಿರೀಕ್ಷೆಯಂತೆ, ಸಾಲ್ಟ್ ಈ ತಿಂಗಳ ಅಂತ್ಯದೊಳಗೆ ಚೇತರಿಸಿಕೊಂಡು ಮತ್ತೆ ಆರ್ಸಿಬಿ ತಂಡಕ್ಕೆ ಮರಳುವ ಸಾಧ್ಯತೆ ಇದೆ.
Also Read:
ಧೋನಿ ನಿವೃತ್ತಿಯ ಸುಳಿವು? ಆಡೋದು ಅನುಮಾನ ಎನ್ನುವ ವರದಿ