ಅಣ್ಣ ಪದಕ್ಕೆ ; ಈ ಸಂಬಂಧವನ್ನು ಬೇಕಾಬಿಟ್ಟಿ ಬಳಸಿದ ಬಿಗ್ ಬಾಸ್ ಸ್ಪರ್ಧಿಗಳು
ಬಿಗ್ ಬಾಸ್ ಮನೆಯಲ್ಲಿ 'ಅಣ್ಣ' ಪದದ ದುರುಪಯೋಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ರಾಶಿಕಾ ಸೂರಜ್ ಅವರನ್ನು 'ಅಣ್ಣ' ಎನ್ನುವುದು ಮತ್ತು ಕಾವ್ಯಾ ಗಿಲ್ಲಿಯನ್ನು ಅಣಕಿಸಲು ಈ ಪದ ಬಳಸುತ್ತಿರುವುದು ಈ ಪವಿತ್ರ ಸಂಬಂಧದ ಮಹತ್ವವನ್ನು ಕಡಿಮೆ ಮಾಡುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ವೀಕ್ಷಕರು ಸ್ಪರ್ಧಿಗಳ ಇಂತಹ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದು, ಪದದ ಬಳಕೆಯಲ್ಲಿ ಎಚ್ಚರಿಕೆ ಅಗತ್ಯ ಎಂದು ಒತ್ತಾಯಿಸಿದ್ದಾರೆ.
ಅಣ್ಣ’ ಎಂಬ ಪದ ತುಂಬಾನೇ ದೊಡ್ಡದು. ಈ ಪದ ಸಾಕಷ್ಟು ಭಾವನೆಗಳನ್ನು ಹೊತ್ತಿರುತ್ತದೆ. ಆದರೆ, ಬಿಗ್ ಬಾಸ್ ಮನೆಯಲ್ಲಿ ಈ ಪದವನ್ನು ಬೇಕಾಬಿಟ್ಟಿ ಬಳಕೆ ಆಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಇದನ್ನು ಖಂಡಿಸಿದ್ದಾರೆ. ರಾಶಿಕಾ ಅವರು ಸೂರಜ್ ಜೊತೆ ಇಷ್ಟು ದಿನ ಆಪ್ತವಾಗಿದ್ದರು. ಈಗ ಅವರು ಸೂರಜ್ನ ಅಣ್ಣ ಎಂದಿದ್ದಾರೆ. ಕಾವ್ಯಾ (Kavya) ಕೂಡ ಮನಸ್ಸಿಗೆ ಬಂದಾಗ ಗಿಲ್ಲಿಯನ್ನು ಅಣ್ಣ ಎನ್ನುತ್ತಿದ್ದಾರೆ. ಇದು ಚರ್ಚೆಗೆ ಕಾರಣ ಆಗಿದೆ.
ಗಿಲ್ಲಿ ಹಾಗೂ ಕಾವ್ಯಾ:
ಗಿಲ್ಲಿ ಹಾಗೂ ಕಾವ್ಯಾ ಮಧ್ಯೆ ಕೂಡ ಒಳ್ಳೆಯ ಬಾಂಧವ್ಯ ಇತ್ತು. ಆದರೆ, ಇತ್ತೀಚೆಗೆ ಅದು ಹಾಳಾಗುತ್ತಿದೆ. ಕಾವ್ಯಾ ಅವರು ಗಿಲ್ಲಿಗೆ ಉರಿಸಬೇಕು ಎಂಬ ನಿರ್ಧಾರಕ್ಕೆ ಬಂದಾಗಲೆಲ್ಲ ‘ಅಣ್ಣ’ ಪದ ಬಳಕೆ ಮಾಡುತ್ತಾರೆ. ಇದರಿಂದ ಗಿಲ್ಲಿ ಮತ್ತಷ್ಟು ಸಿಟ್ಟಿಗೆ ಒಳಗಾಗುತ್ತಾರೆ. ‘ಅಣ್ಣ’ ಪದವನ್ನು ಕಾವ್ಯಾ ಅವರು ಅಸ್ತ್ರವಾಗಿ ಬಳಕೆ ಮಾಡಿಕೊಂಡಂತೆ ಕಾಣಿಸುತ್ತಾ ಇದೆ. ನವೆಂಬರ್ 17ರ ಎಪಿಸೋಡ್ನಲ್ಲೂ ಮೊದಲೇ ಉರಿದುಕೊಂಡಿದ್ದ ಗಿಲ್ಲಿಯನ್ನು, ಕಾವ್ಯಾ ಅವರು ‘ಅಣ್ಣ’ ಪದ ಬಳಿಕೆ ಮಾಡಿ ಉರಿಯುವ ಬೆಂಕಿಗೆ ತುಪ್ಪ ಸುರಿದರು.
ರಾಶಿಕಾ ಹಾಗೂ ಸೂರಜ್ ಮಾತುಕತೆ:
‘ಆಗಲ್ಲ ಬ್ರೋ’ ಎಂದು ಸೂರಜ್ನ ಕರೆದರು. ‘ಸೂರಜ್ ಎಂದು ಕರೆಯುವುದಕ್ಕಿಂತ ಬ್ರೋನೇ ಚೆನ್ನಾಗಿ ಕಾಣುತ್ತದೆ. ಸೂರಜ್ ಅಣ್ಣ. ಇನ್ಮೇಲೆ ನಾನು ಹೀಗೆ ಕರೆಯೋದು’ ಎಂದು ಸೂರಜ್ ಅವರಿಗೆ ರಾಶಿಕಾ ಹೇಳಿದರು. ‘ನನ್ನ ಬಳಿ ಮಾತನಾಡಬೇಡ’ ಎಂದು ಸೂರಜ್ ಹೇಳಿದರು. ‘ನೀನ್ಯಾಕೆ ಅಷ್ಟೊಂದು ಉರಿದುಕೊಳ್ತೀಯಾ’ ಎಂದು ಸೂರಜ್ ಬಳಿ ರಾಶಿಕಾ ಕೇಳಿದ್ದಾರೆ.
ರಾಶಿಕಾ ಹಾಗೂ ಸೂರಜ್ ಮಧ್ಯೆ ಆಪ್ತತೆ ಬೆಳೆದಿದೆ. ‘ನಾವಿಬ್ಬರೂ ಲವರ್ಸ್ ಅಲ್ಲ’ ಎಂದು ಅವರು ಅನೇಕ ಬಾರಿ ಸ್ಪಷ್ಟನೆ ಕೊಟ್ಟಿದೆ. ಆದರೆ, ಒಂದು ಬಾಂಧವ್ಯ ಅಂತೂ ಇದ್ದೇ ಇದೆ. ಈಗ ರಾಶಿಕಾ ಅವರು ಸೂರಜ್ಗೆ ಅಣ್ಣ ಪದ ಬಳಕೆ ಮಾಡಿದ್ದಾರೆ.
ಇನ್ನಷ್ಟು ಓದಿರಿ:
ಹಿಂದೂ ಭಾವನೆಗೆ ಧಕ್ಕೆ; ರಾಜಮೌಳಿ ವಿರುದ್ಧ ದಾಖಲಾಯ್ತು ದೂರು