<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ಎಲ್ ಡಿಎಫ್ ಆಡಳಿತಕ್ಕೆ ಸವಾಲು: ಕೇರಳದಲ್ಲಿ ಯುಡಿಎಫ್ ಅಧಿಕಾರದತ್ತ?

ಎಲ್ ಡಿಎಫ್ ಆಡಳಿತಕ್ಕೆ ಸವಾಲು: ಕೇರಳದಲ್ಲಿ ಯುಡಿಎಫ್ ಅಧಿಕಾರದತ್ತ?
Summary: Are the political winds changing in Kerala? Are there signs of the LDF government collapsing? There are discussions that the UDF is rapidly moving towards power!

belagavi news:

ಕೇರಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ಜರುಗಲಿದೆ. ಚುನಾವಣಾ ಆಯೋಗದಿಂದ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಯಾರು ಅಧಿಕಾರದ ಗದ್ದುಗೆ ಇರುತ್ತಾರೆ ಎಂಬ ಕುತೂಹಲ ತಾರಕ್ಕೇರಿದೆ.

ತಿರುವನಂತಪುರಂ (ಕೇರಳ): ಎಲ್ ಡಿ ಎಫ್ ಮತ್ತು ಯುಡಿಎಫ್ ನಡುವಿನ ತೀವ್ರ ಪೈಪೋಟಿಯಲ್ಲಿ ಅಂತಿಮ ಗೆಲವು ಯಾರಿಗೆ ಸಿಗಲಿದೆ ಎಂಬುದು ಇನ್ನು ಕೆಲವೇ ಗಂಟೆಗಳಲ್ಲಿ ಸ್ಪಷ್ಟವಾಗಲಿದೆ. 140 ಸದಸ್ಯರ ಕೇರಳ ವಿಧಾನಸಭೆಗೆ ಏಪ್ರಿಲ್ 9 ರಂದು ನಡೆದ ಮತದಾನದ ಎಣಿಕೆ ಇಂದು (ಸೋಮವಾರ) ನಡೆಯುತ್ತಿದೆ.

ಆಡಳಿತಾರೂಢ ಎಡ ಪ್ರಜಾಸತ್ತಾತ್ಮಕ ರಂಗ (ಎಲ್ಡಿಎಫ್) ವಿರೋಧ ಪಕ್ಷದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ (ಯುಡಿಎಫ್) ಮತ್ತು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ )ಎನ್ ಡಿಎ) ನಡುವಿನ ತ್ರಿಕೋನ ಸ್ಪರ್ಧೆ ರಾಜ್ಯದ ರಾಜಕೀಯ ಭವಿಷ್ಯವನ್ನು ನಿರ್ದಿರಿಸಲಿದೆ.

ರಾಜ್ಯದ ಒಟ್ಟು 2,71,42,952 ಮತದಾರರಲ್ಲಿ ಶೇಕಡಾ 79.63ರಷ್ಟು ಮಂದಿ ಮತ ಚಲಾಯಿಸಿದ್ದು, 140 ಕ್ಷೇತ್ರಗಳಿಗೆ ಒಟ್ಟು 883 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಫಲಿತಾಂಶ ಗಳತ್ತ ಈಗ ಎಲ್ಲರ ಕಣ್ಣು ನೆಟ್ಟಿದೆ.

ಮತ ಎಣಿಕೆಗೆ ಸಂಬಂಧಿಸಿದ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ, ರಾಜ್ಯದ 43 ಸ್ಥಳಗಳಲ್ಲಿ ಒಟ್ಟು 140 ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಬೆಳಗ್ಗೆ 8 ಗಂಟೆಗೆ ಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ.

ಮತ ಎಣಿಕೆ ಕಾರ್ಯಕ್ಕಾಗಿ ರಿಟರ್ನಿಂಗ್ ಅಧಿಕಾರಿಗಳು 1,340 ಹೆಚ್ಚುವರಿ ರಿಟರ್ನಿಂಗ್ ಅಧಿಕಾರಿಗಳು, 4, 028 ಮೈಕ್ರೋ ವೀಕ್ಷಕರು, 4, 028 ಎಣಿಕೆ ಮೇಲ್ವಿಚಾರಕರು ಹಾಗೂ 5,563 ಏನಕ್ಕೆ ಸಹಾಯಕರು, ಸೇರಿ ಒಟ್ಟು 15,464 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಎಲೆಕ್ಟ್ರಾನಿಕ್ ಮತ ಯಂತ್ರಗಳು (ಇವಿಎಂ) ಮತ್ತು ವಿವಿಪ್ಯಾಟ್ ಘಟಕಗಳು ಸಂಗ್ರಹಿಸಿರುವ ಸ್ಟ್ರಾಂಗ್ ರೂಮ್ ಗಳನ್ನು ಚುನಾವಣಾ ಆಯೋಗದ ವೀಕ್ಷಕರು ಭದ್ರತಾ ಸಿಬ್ಬಂದಿ ಹಾಗೂ ಅಭ್ಯರ್ಥಿಗಳು ಏಜೆಂಟ್ ಗಳ ಸಮ್ಮುಖದಲ್ಲಿ ತೆರೆಯಲಾಗುತ್ತದೆ. ಪ್ರಾಥಮಿಕವಾಗಿ ಅಂಚೆ ಮತಗಳ ಏಣಿಕೆ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂಚೆ ಮತ ಪತ್ರಗಳ ಎಣಿಕೆಯಾಗಿ ವಿಶೇಷ ಕೋಷ್ಟಕಗಳನ್ನು ಬೆವರ್ಸಿ ಮಾಡಲಾಗಿದ್ದು, ಪ್ರತಿ ಟೇಬಲ್ ನಲ್ಲಿ ಸಹಾಯಕ ಚುನಾವಣೆ ಅಧಿಕಾರಿಯ ಮೇಲ್ವಿಚಾರಣೆಯಲ್ಲಿ 500 ಮತಗಳನ್ನು ಎಣಿಸಲಾಗುತ್ತದೆ. ಪ್ರತಿ ಸುತ್ತಿನಲ್ಲಿ ಗರಿಷ್ಠ 14 ಮತಗಟ್ಟೆ ಗಳ ಇವಿಎಂಗಳಲ್ಲಿ ಮತಗಳನ್ನು ಎಣಿಸಲಾಗುತ್ತದೆ. ಮಧ್ಯಾಹ್ನದ ವೇಳೆಗೆ ಚುನಾವಣಾ ಫಲಿತಾಂಶದ ಸ್ಪಷ್ಟ ಚಿತ್ರಣ ಸಿಗಲಿದೆ.

ಚುನಾವಣೋತ್ತರ ಹಿಂಸಾಚಾರವನ್ನು ತಡೆಗಟ್ಟುವ ಉದ್ದೇಶದಿಂದ ಪೊಲೀಸರು ರಾಜ್ಯಾದ್ಯಂತ ಕಟ್ಟುನಿಟ್ಟಿನ ಕಣ್ಗಾವಲು ನಡೆಸುತ್ತಿದ್ದಾರೆ. ವಿವಿಧ ಸಮೀಕ್ಷೆಗಳು ಈ ಬಾರಿ ಕೇರಳದಲ್ಲಿ ತೀವ್ರ ಪೈಪೋಟಿಯನ್ನು ಸೂಚಿಸಿದರು ಬಹುತೇಕವು ಯುಡಿಫ್ ಗೆ ಮುನ್ನಡೆ ನೀಡಿವೆ.

2016 ರಿಂದ ಅಧಿಕಾರದಿಂದ ದೂರವಿರುವ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಈ ಚುನಾವಣೆ 'ಮಾಡು ಇಲ್ಲವೇ ಮಡಿ' ಎಂಬಂತಾಗಿದೆ. 2021ರ ವಿಧಾನಸಭೆ ಚುನಾವಣೆಯಲ್ಲಿ 41 ಸ್ಥಾನಗಳಿಗೆ ಸೀಮಿತವಾಗಿದ್ದ ಯುಡಿಎಫ್ ಈ ಬಾರಿ ಬಹುಮತಕ್ಕೆ ಅಗತ್ಯವಿರುವ 71 ಸ್ಥಾನಗಳ ಗಡಿಯನ್ನು ದಾಟಲಿ ದೇ ಎಂದು ಸಮೀಕ್ಷೆಗಳು ಸೂಚಿಸಿವೆ. ಕೆಲವು ಸಮೀಕ್ಷೆಗಳು ಯುಡಿಎಫ್ ಗೆ 80 ರಿಂದ 90 ಸ್ಥಾನಗಳವರೆಗೆ ಲಭ್ಯವಾಗುವ ಸಾಧ್ಯತೆ ಇದೆ ಎಂದು ಅಂದಾಜು ಮಾಡಿವೆ. ಫಲಿತಾಂಶಗಳು ಈ ಅಂದಾಜುಗಳನ್ನು ಎಷ್ಟು ಮಟ್ಟಿಗೆ ಸಮರ್ಥಿಸುತ್ತವೆ ಎಂಬುದು ಕಾದು ನೋಡಬೇಕಾಗಿದೆ.

Also Read:

US vs Iran: ಶಾಂತಿ ಮಾತುಕತೆಗೆ ಬ್ರೇಕ್? ಟ್ರಂಪ್ ದೊಡ್ಡ ಹೇಳಿಕೆ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online