ಬೀದರ್: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಚಾಲಕ ಹುದ್ದೆಗಳಿಗೆ ನೇರ ನೇಮಕಾತಿ - ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಹಾಗೂ ಚಾಲನ ವೃತ್ತಿಯಲ್ಲಿ ಆಸಕ್ತಿ ಇರುವ ಯುವಕರಿಗೆ ಸಿಹಿ ಸುದ್ದಿ. ಬೀದರ್ ವಿಭಾಗದಲ್ಲಿ ಖಾಲಿ ಇರುವ ಚಾಲಕ ಹುದ್ದೆಗಳಿಗಾಗಿ ಕೆಕೆಆರ್ಟಿಸಿ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ವಿಶೇಷವಾಗಿ ಹುದ್ದೆಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇಲ್ಲ ಕೇವಲ ನೇರ ಸಂದರ್ಶನ ಮತ್ತು ಮೂಲ ದಾಖಲೆ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುವುದು.
ಕರ್ನಾಟಕದ ಸಾರಿಗೆ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಬಯಸುವವರು ಹಾಗೂ ವಿಶೇಷವಾಗಿ ಬೀದರ್ ಜಿಲ್ಲೆಯಲ್ಲಿ ವೃತ್ತಿ ಜೀವನವನ್ನು ರೂಪಿಸಿಕೊಳ್ಳಲು ಆಸಕ್ತರು ಗಮನಿಸಬೇಕಾದ ಅವಕಾಶ! ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ KKRTC ಚಾಲಕ ಹುದ್ದೆಗಳ ನೇರ ನೇಮಕಾತಿಗೆ ಅರ್ಹ ಅಭ್ಯರ್ಥಿಗಳು ಫೆಬ್ರುವರಿ ನಾಲ್ಕು 2016 ರಂದು ನಿಗದಿಪಡಿಸಲದ ಸ್ಥಳದಲ್ಲಿ ಅಗತ್ಯ ದಾಖಲೆಗಳೊಂದಿಗೆ ಹಾಜರಾಗಬೇಕು. ಇದು ವೃತ್ತಿ ಜೀವನ ಆರಂಭಿಸಲು ಮತ್ತು ಸರ್ಕಾರಿ ಉದ್ಯೋಗದಲ್ಲಿ ಕೈಪಿಡಿ ಪಡೆಯಲು ಅತ್ಯುತ್ತಮ ಅವಕಾಶವಾಗಿದೆ.
ಯಾರು ಅರ್ಜಿ ಸಲ್ಲಿಸಬಹುದು?
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ KKRTC ಹೊರಡಿಸುವ ಅಧಿಸೂಚನೆಯ ಪ್ರಕಾರ ಚಾಲಕ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೆಳಗಿನ ಅರ್ಹತೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು.
ವಿದ್ಯಾರ್ಹತೆ : ಅಭ್ಯರ್ಥಿಯ ಮಾನ್ಯತೆ ಪಡೆದ ಮಂಡಳಿಯಿಂದ ಎಸ್ ಎಸ್ ಎಲ್ ಸಿ 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಚಾಲನ ಪರವಾನಗಿ: ಬಾರಿ ಸರಕು ಸಾಗಣೆ ವಾಹನ HMV - Heavy Motor Vehivle ಚಾಲನಾ ಪರವಾನಗಿ ಹೊಂದಿರಬೇಕು.
ಕರ್ನಾಟಕ ಬ್ಯಾಡ್ಜ್ : ಭಾರಿ ಪ್ರಯಾಣಿಕ ವಾಹನವನ್ನು ಚಾಲನೆ ಮಾಡಲು ಅಗತ್ಯವಿರುವ ಮಾಯ ಕರ್ನಾಟಕ ಬ್ಯಾಡ್ಜ್ ಇರಬೇಕು.
ದೈಹಿಕ ಅರ್ಹತೆ: ಚಾಲಕ ಹುದ್ದೆಗೆ ಅಗತ್ಯವಿರುವ ದೈಹಿಕ ದಕ್ಷತೆ ಹೊಂದಿರಬೇಕು ಕಣ್ಣಿನ ದೃಷ್ಟಿ ದೋಷ ಇರಬಾರದು.
ಈ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ನೇರ ಸಂದರ್ಶನ ಮತ್ತು ಮೂಲ ದಾಖಲೆ ಪರಿಶೀಲನೆ ಮೂಲಕ ಅವಕಾಶವನ್ನು ಪಡೆಯಬಹುದು.
ವಯೋಮಿತಿ ಮತ್ತು ಸಡಿಲಿಗೆ ವಿವರಗಳು:
ದಿನಾಂಕ 4. 2.2026ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗಳು ವಯಸ್ಸನ್ನು ಲೆಕ್ಕ ಹಾಕಲಾಗುತ್ತದೆ.
ಕನಿಷ್ಠ ವಯಸ್ಸು 24 ವರ್ಷಗಳು.
ಗರಿಷ್ಠ ವಯಸ್ಸು 35 ವರ್ಷಗಳು.
ಸರ್ಕಾರಿ ನಿಯಮಾವಳಿಗಳ ಪ್ರಕಾರ ಮೀಸಲಾತಿ ವರ್ಗಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.
ಪ್ರವರ್ಗ 2A, 2B, 3A, ಮತ್ತು 3B ಅಭ್ಯರ್ಥಿಗಳಿಗೆ: 3 ವರ್ಷಗಳ ಸಡಿಲಿಕೆ ಗರಿಷ್ಠ 38 ವರ್ಷಗಳು
ಪರಿಶಿಷ್ಟ ಜಾತಿ SC ಮತ್ತು ಪರಿಶಿಷ್ಟ ಪಂಗಡ ST ಅಭ್ಯರ್ಥಿಗಳಿಗೆ 5 ವರ್ಷಗಳ ಸಡಿಲಿಕೆ ಗರಿಷ್ಠ 40 ವರ್ಷಗಳು
ಆಯ್ಕೆ ಪ್ರಕ್ರಿಯೆ ಮತ್ತು ಸಂದರ್ಶನ:
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ KKRTC ಚಾಲಕ ಹುದ್ದೆಗಳ ನೇಮಕಾತಿ ಸಂಪೂರ್ಣವಾಗಿ ಪಾರದರ್ಶಕವಾಗಿ ನಡೆಯಲಿದೆ ಅಭ್ಯರ್ಥಿಗಳ ಆಯ್ಕೆ ಅರ್ಹತೆ ಮತ್ತು ವೃತ್ತಿಪರ ಕೌಶಲದ ಆಧಾರದ ಮೇಲೆ ಮಾಡಲಾಗುತ್ತದೆ.
ಅಭ್ಯರ್ಥಿಗಳು ನಿಗದಿತ ದಿನದಂದು ಸಂದರ್ಶನ ಸ್ಥಳಕ್ಕೆ ಹಾಜರಾಗಬೇಕು.
ಸ್ಥಳದಲ್ಲಿ ಮೂಲ ದಾಖಲೆ ಪರಿಶೀಲನೆ ನಡೆಸಲಾಗುತ್ತದೆ.
ಅಗತ್ಯವಿದ್ದರೆ ಚಾಲನ ಸಾಮರ್ಥ್ಯ ಪರೀಕ್ಷೆ ಕೂಡ ನಡೆಸುವ ಅ ಲಾವಕಾಶವಿದೆ.
ಸಂದರ್ಶನದ ದಿನಾಂಕ ಮತ್ತು ಸ್ಥಳ::
ದಿನಾಂಕ: ಫೆಬ್ರುವರಿ ನಾಲ್ಕು 2026
ಸ್ಥಳ: ವಿಭಾಗೀಯ ಕಚೇರಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹಳೆಯ ಬಸ್ ನಿಲ್ದಾಣ ಬೀದರ್
ಈ ಸಂದರ್ಶನವೂ ಚಾಲಕ ಹುದ್ದೆಗೆ ಅರ್ಜಿ ಸಲ್ಲಿಸುವ ಅರಬ್ಯರ್ಥಿಗಳಿಗೆ ಶ್ರೇಯಸ್ಕರವಾದ ಅವಕಾಶ.
ಸಂದರ್ಶನಕ್ಕೆ ಹೋಗುವಾಗ ಮರೆಯದೆ ಒಯ್ಯ ಬೇಕಾದ ದಾಖಲೆಗಳು :
ನೇರ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಈ ಕೆಳಗಿನ ದಾಖಲೆಗಳ ಮೂಲ ಪ್ರತಿಗಳು ಒರಿಜಿನಲ್ ಹಾಗೂ ಎರಡು ಸೆಟ್ ಜೆರಾಕ್ಸ್ ಪ್ರತಿಗಳನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು.
* ಭರ್ತಿ ಮಾಡಿದ ಅರ್ಜಿ ನಮೂನೆ (ಲಭ್ಯವಿದ್ದಲ್ಲಿ) ಅಥವಾ ಬಯೋಡೇಟಾ.
* ಎಸ್ ಎಸ್ ಎಲ್ ಸಿ (10ನೇ ತರಗತಿ) ಅಂಕಪಟ್ಟಿ ಜನ್ಮ ದಿನಾಂಕ ದೃಢೀಕರಣವಾಗಿದೆ.
* ಚಾಲ್ತಿಯಲ್ಲಿರುವ ಬಾರಿ ವಾಹನ ಚಾಲನ ಪರವಾನಗಿ ( HMV License )
* ಚಾಲನ್ನ ಬ್ಯಾಡ್ಜ್ ( Conductor/ Driver Badge )
* ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ಮೀಸಲಾತಿ ಕೋರುವವರಿಗೆ )
* ಆಧಾರ್ ಕಾರ್ಡ್ ಅಥವಾ ಇತರೆ ಸರ್ಕಾರಿ ಗುರುತಿನ ಚೀಟಿ.
* ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳು (ಕನಿಷ್ಠ 4-5).
* ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರಗಳು (ಅನ್ವಯವಾದರೆ. )
* ಮಾಜಿ ಸೈನಿಕರಾಗಿದ್ದಲ್ಲಿ ಸಂಬಂಧಿತ ದಾಖಲೆಗಳು.
ಫೆಬ್ರವರಿ 4ರಂದು ನಡೆಯುವ ಸಂದರ್ಶನದಲ್ಲಿ ಭಾಗವಹಿಸಿ ನಿಮ್ಮ ಸರ್ಕಾರಿ ಉದ್ಯೋಗದ ಕನಸನ್ನು ನನಸಾಗಿಸಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಬೀದರ್ ವಿಭಾಗೀಯ ಕಚೇರಿಯನ್ನು ಸಂಪರ್ಕಿಸಬಹುದು.
ಇನ್ನಷ್ಟು ಓದಿರಿ:
ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಕಾವ್ಯಾ ಗೆ ಅಭಿಮಾನಿಗಳಿಂದ ಪತ್ರ