ಅಕ್ರಮ ಸಂಬಂಧದ ಕಥೆ ಹಾಟ್ಸ್ಟಾರ್ನಲ್ಲಿರೋ ಈ ಮಲಯಾಳಂ ಸಿನಿಮಾನ ಮಿಸ್ ಮಾಡಬೇಡಿ
ಮಲಯಾಳಂ ಸಿನಿಮಾ 'ಅವಿಹಿತಮ್' ಈಗ OTTಗೆ ಲಗ್ಗೆ ಇಟ್ಟಿದೆ. ಸೆನ್ನಾ ಹೆಗ್ಡೆ ನಿರ್ದೇಶನದ ಈ ಚಿತ್ರ ಹಳ್ಳಿಯೊಂದರಲ್ಲಿ ನಡೆಯುವ ಅಕ್ರಮ ಸಂಬಂಧದ ಕಥೆ ಹೇಳುತ್ತದೆ. ಅಕ್ಟೋಬರ್ 9ರಂದು ಥಿಯೇಟರ್ನಲ್ಲಿ ರಿಲೀಸ್ ಆಗಿದ್ದ ಸಿನಿಮಾ ಈಗ Jio Hotstar ನಲ್ಲಿ ಲಭ್ಯವಿದೆ. ಕಥೆಯೊಂದು ಶುರುವಾಗಿದೆ ಖ್ಯಾತಿಯ ಸೆನ್ನಾ ಹೆಗ್ಡೆ ನಿರ್ದೇಶನದಲ್ಲಿ ಮೂಡಿಬಂದಿರುವ ಸಿನಿಮಾದಲ್ಲಿ, ಹಾಸ್ಯ ಮತ್ತು ಸಂದೇಶ ಇದೆ.
ಪ್ರತಿ ವಾರ ಒಟಿಟಿಯಲ್ಲಿ (OTT) ಹೊಸ ಹೊಸ ಸಿನಿಮಾಗಳು ರಿಲೀಸ್ ಆಗುತ್ತಲೇ ಇರುತ್ತವೆ. ಕೆಲವು ಸಿನಿಮಾಗಳು ಸಾಕಷ್ಟು ಗಮನ ಸೆಳೆಯುತ್ತವೆ. ಪರಭಾಷೆಯ ಸಿನಿಮಾಗಳಾದರೂ ಡಬ್ಬಿಂಗ್ ಕಾರಣದಿಂದ ಕನ್ನಡ ಪ್ರೇಕ್ಷಕರನ್ನು ತಲುಪುತ್ತದೆ. ಈಗ ಮಲಯಾಳಂನ ಸಿನಿಮಾ ಒಂದು ಒಟಿಟಿಗೆ ಕಾಲಿಟ್ಟಿದೆ. ಈ ಚಿತ್ರದ ಕಥೆ ಇರೋದು ಅಕ್ರಮ ಸಂಬಂಧದ ಬಗ್ಗೆ. ಹಳ್ಳಿಯಲ್ಲಿ ಸಾಗುವ ಕಥೆ ಗಮನ ಸೆಳೆಯುವ ರೀತಿಯಲ್ಲಿ ಇದೆ.
ಒಂದು ಸಣ್ಣ ಹಳ್ಳಿ. ಆ ಹಳ್ಳಿಯಲ್ಲಿರೋ ಪ್ರಕಾಶನ್ (ರೆಂಜಿ ಕಾಂಕೋಲ್) ಫ್ರೆಂಡ್ಸ್ ಜೊತೆ ಕುಡಿದು ರಾತ್ರಿ ಮನೆಗೆ ಬರುತ್ತಿರುತ್ತಾನೆ. ಆಗ ತೋಟದಲ್ಲಿ ಏನೋ ಶಬ್ದವಾದಂತೆ ಕೇಳಿಸುತ್ತದೆ. ಮಹಿಳೆಯೊಬ್ಬಳು ಯುವಕನ ಜೊತೆ ಕಿಸ್ ಮಾಡೋ ದೃಶ್ಯ ಅದು. ಈ ವಿಷಯವನ್ನು ಪ್ರಕಾಶನ್ ವೇಣುಗೆ (ಉನ್ನಿ ರಾಜ್) ಹೇಳುತ್ತಾನೆ. ಮರುದಿನ ರಾತ್ರಿ ಬಂದು ನೋಡಿದರೆ ಮತ್ತದೇ ದೃಶ್ಯ. ನಂತರ ಇನ್ನೂ ಕೆಲವರಿಗೆ ಈ ವಿಷಯ ಗೊತ್ತಾಗುತ್ತದೆ. ಅಷ್ಟಕ್ಕೂ ಯಾರು ಆ ಇಬ್ಬರು? ನಂತರ ಅವರನ್ನು ಹೇಗೆ ಪತ್ತೆ ಹಚ್ಚಲಾಗುತ್ತದೆ? ಕ್ಲೈಮ್ಯಾಕ್ಸ್ನಲ್ಲಿ ಏನಾಗುತ್ತದೆ ಎಂಬುದೇ ಸಿನಿಮಾ.
ಇಲ್ಲಿ ಸಿನಿಮಾ ಮೇಕಿಂಗ್ ಅಷ್ಟು ಚೆನ್ನಾಗಿಲ್ಲ. ಆದರೆ, ಸಿನಿಮಾದ ಕಥೆ ಹೊಸದು ಎನಿಸುತ್ತದೆ. ಕೊನೆಯವರೆಗೂ ಸಸ್ಪೆನ್ಸ್ ಉಳಿಸಿಕೊಂಡು ಹೋಗುತ್ತದೆ. ಇದರ ಜೊತೆಗೆ ಒಂದಷ್ಟು ಹಾಸ್ಯವನ್ನು ಕೂಡ ನಿರ್ದೇಶಕರು ಬೆರೆಸಿದ್ದಾರೆ. ಕ್ಲೈಮ್ಯಾಕ್ಸ್ನಲ್ಲಿ ಒಂದೊಳ್ಳೆಯ ಸಂದೇಶ ಕೊಡುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಒಮ್ಮೆ ಟೈಮ್ ಪಾಸ್ಗೆ ಈ ಸಿನಿಮಾ ವೀಕ್ಷಿಸಬಹುದು.
ಕನ್ನಡದಲ್ಲಿ ‘ಕಥೆಯೊಂದು ಶುರುವಾಗಿದೆ’ ಹೆಸರಿನ ಸಿನಿಮಾ ಬಂದಿತ್ತು. ದಿಗಂತ್ ಈ ಚಿತ್ರಕ್ಕೆ ಹೀರೋ. ಇದನ್ನು ನಿರ್ದೇಶನ ಮಾಡಿದ್ದು, ಸೆನ್ನಾ ಹೆಗ್ಡೆ. ಈಗ ನಾವು ಹೇಳುತ್ತಿರುವ ಚಿತ್ರವನ್ನು ನಿರ್ದೇಶನ ಮಾಡಿದ್ದು ಇದೇ ಸೆನ್ನಾ ಹೆಗ್ಡೆ. ಈ ಚಿತ್ರದ ಹೆಸರು ‘ಅವಿಹಿತಮ್’ ಎಂದು. ಈ ಸಿನಿಮಾ ಅಕ್ಟೋಬರ್ 9ರಂದು ಥಿಯೇಟರ್ನಲ್ಲಿ ರಿಲೀಸ್ ಆಯಿತು. ಈಗ ಸಿನಿಮಾ ಒಟಿಟಿಗೆ ಬಂದಿದೆ. ಜಿಯೋ ಹಾಟ್ಸ್ಟಾರ್ನಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯ.
ಇನ್ನಷ್ಟು ಓದಿರಿ:
ಇಂದು ನಿತೀಶ್ ಕುಮಾರ್ ರಾಜೀನಾಮೆ ಸಾಧ್ಯತೆ, ಬಿಹಾರದಲ್ಲಿ ನ. 20ರಂದು ಹೊಸ ಸರ್ಕಾರ ರಚನೆ