<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ಗಾಜಾ ಸಂಕಷ್ಟಕ್ಕೆ ಸ್ಪಂದಿಸಿದ ಯುರೋಪಿಯನ್ ಯೂನಿಯನ್, 1 ಬಿಲಿಯನ್ ಡಾಲರ್ ನೆರವು ಘೋಷಣೆ

ಗಾಜಾ ಸಂಕಷ್ಟಕ್ಕೆ ಸ್ಪಂದಿಸಿದ ಯುರೋಪಿಯನ್ ಯೂನಿಯನ್, 1 ಬಿಲಿಯನ್ ಡಾಲರ್ ನೆರವು ಘೋಷಣೆ
Summary: The European Union has announced $1 billion in aid for reconstruction and humanitarian assistance in the Gaza Strip. The funds will be used to develop infrastructure damaged by the war and restore essential services.

Belagavi News:

ಬ್ರಸೆಲ್ಸ್, ಬೆಲ್ಜಿಯಂ: ಇಸ್ರೇಲ್ ನ ಬಾಂಬ್ ದಾಳಿಯಿಂದ ತೀವ್ರ ಹಾನಿಗೊಳಗಾದ ಗಾಜಾ ಪಟ್ಟಿಯ ಪುನರ್ ನಿರ್ಮಾಣಕ್ಕೆ 900 ಬಿಲಿಯನ್ ಯುರೋ ( ಸುಮಾರು 1 ಬಿಲಿಯನ್ ಅಮೆರಿಕನ್ ಡಾಲರ್) ನೆರವು ಸಂಗ್ರಹಿಸುವುದಾಗಿ ಯುರೋಪಿಯನ್ ಒಕ್ಕೂಟ (ಇಯು) ಘೋಷಿಸಿದೆ. ಈ ಮಾಹಿತಿಯನ್ನು ಇಯುನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದರೆ, ಈ ನೆರವು ಯಾವ ಹಂತದಲ್ಲಿ ಬಿಡುಗಡೆ ಮಾಡಲಾಗುತ್ತದೆ ಹಾಗೂ ಗಾಜಾ ಪುನರ್ ನಿರ್ಮಾಣ ಕಾರ್ಯವನ್ನು ಯಾವಾಗ ಆರಂಭಿಸಲಾಗುತ್ತದೆ ಎಂಬ ಕುರಿತು ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಕಳೆದ ಅಕ್ಟೋಬರ್ ನಿಂದ ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮ ಜಾರಿಯಲ್ಲಿದ್ದು, ಸಂಘರ್ಷ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ಬ್ರಸೆಲ್ಸ್ ನಲ್ಲಿ ಪ್ಯಾಲೆಸ್ತೀನ್ ದಾನಿಗಳ ಗುಂಪಿನ ಸಭೆಯ ಬಳಿಕ ಮೆಡಿಟರೇನಿಯನ್ ನ ಯುರೋಪಿಯನ್ ಕಮಿಷನರ್ ಡುಬ್ರವ್ಕಾ ಸ್ಯುಕಾ ಈ ನೆರವು ಘೋಷಿಸಿದರು. ಸಭೆಯಲ್ಲಿ ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರಗಳು, ಮಧ್ಯಪ್ರಾಚ್ಯದ ದೇಶಗಳು, ಅಂತಾರಾಷ್ಟ್ರೀಯ ಸಂಸ್ಥೆಗಳು ಹಾಗೂ ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಗಾಜಾ ಪುನರ್ ನಿರ್ಮಾಣಕ್ಕೆ 70 ಬಿಲಿಯನ್ ಡಾಲರ್ ಅಗತ್ಯ

ಗಾಜಾದಲ್ಲಿ ಕದನ ವಿರಾಮ ಜಾರಿಯಲ್ಲಿದ್ದರೂ ಪರಿಸ್ಥಿತಿಯನ್ನು ಸ್ಥಿರವಾಗಿಲ್ಲ. ಅಲ್ಲಿನ ಜನರ ಜೀವನ ಸಹಜ ಸ್ಥಿತಿಗೆ ಮರಳಿಲ್ಲ. ಪುನರ್ ನಿರ್ಮಾಣಕ್ಕಾಗಿ ಸಂಗ್ರಹವಾಗುವ ನೆರವು ಹಣವನ್ನು ವಿಶ್ವಾಸಾರ್ಹ ಪಾಲುದಾರರ ಮೂಲಕ ಹಂತ ಹಂತವಾಗಿ ವರ್ಗಾಯಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು 20 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಗಾಜಾ ಪಟ್ಟಿಯ ಪುನರ್ ನಿರ್ಮಾಣಕ್ಕೆ ಸುಮಾರು 70 ಬಿಲಿಯನ್ ಅಮೆರಿಕನ್ ಡಾಲರ್ ವೆಚ್ಚವಾಗಲಿದೆ ಎಂದು ವಿಶ್ವಸಂಸ್ಥೆ, ವಿಶ್ವಬ್ಯಾಂಕ್ ಹಾಗೂ ಯುರೋಪಿಯನ್ ಒಕ್ಕೂಟ (ಇಯು) ಅಂದಾಜಿಸಿವೆ.

ವಿಶ್ವಸಂಸ್ಥೆಯ ಪ್ರಕಾರ, ಗಾಜಾದಲ್ಲಿ 60 ಬಿಲಿಯನ್ ಟನ್ ಗಿಂತಲೂ ಹೆಚ್ಚು ಅವಶೇಷಗಳು ಸಂಗ್ರಹವಾಗಿದ್ದು, ಅವುಗಳನ್ನು ಸಾಗಿಸಲು ಸುಮಾರು 3,000 ಕಂಟೇನರ್ ಹಡಗುಗಳ ಅಗತ್ಯವಿದೆ. ಈ ಅವಶೇಷಗಳನ್ನು ಸಂಪೂರ್ಣ ತೆರವುಗೊಳಿಸಲು ಏಳು ವರ್ಷಗಳಿಗಿಂತ ಹೆಚ್ಚು ಸಮಯ ಬೇಕಾಗಬಹುದು. ಇದರ ಜೊತೆಗೆ ನೆಲಬಾಂಬ್ ಗಳನ್ನು ಪತ್ತೆ ಹಚ್ಚಿ ತೆರವುಗೊಳಿಸುವ ಕಾರ್ಯಕ್ರಮ ಹೆಚ್ಚುವರಿ ಸಮಯ ಬೇಕಾಗಲಿದೆ.

ಗಾಜಾ ಪುನರ್ ನಿರ್ಮಾಣ ಕಾರ್ಯಕ್ಕೆ ಮಾರ್ಗದರ್ಶನ ನೀಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಚಿಸಿರುವ ಶಾಂತಿ ಮಂಡಳಿಯಲ್ಲಿ ಮಾಜಿ ಯುಎನ್ ವಿಶೇಷ ಸಂಯೋಜಕ ನಿಯೊಲಾಯ್ ಮ್ಲಾಡೆನೋವ್, ಟ್ರಂಪ್ ಅವರ ಅಳಿಯ ಜೇರೆಡ್ ಕುಶ್ನರ್, ಹೊಸ ಪ್ಯಾಲೆಸ್ತೇನ್ ಸಮಿತಿಯ ಮುಖ್ಯಸ್ಥ ಅಲಿ ಶಾತ್ ಹಾಗೂ ಪ್ಯಾಲೆಸ್ತೇನ್ ಪ್ರಾಧಿಕಾರದ ಪ್ರಧಾನಿ ಮೊಹಮ್ಮದ್ ಮುಸ್ತಫಾ ಸದ್ಯಸ್ಯರಾಗಿದ್ದಾರೆ.

ಇದೆ ವೇಳೆ, ಗಾಜಾ ಪುನರ್ ನಿರ್ಮಾಣ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಲು ಪ್ಯಾಲೆಸ್ತೇನ್ ಪ್ರಾಧಿಕಾರದ ಆಸಕ್ತಿ ವ್ಯಕ್ತಪಡಿಸಿದೆ. ಆದರೆ, ಅಮೆರಿಕದ 20 ಅಂಶಗಳ ಯೋಜನೆಯಲ್ಲಿ ಭವಿಷ್ಯದ ಪ್ಯಾಲೆಸ್ತೇನಿಯರ್ ರಾಷ್ಟ್ರದ ಸಾಧನೆಯ ಕುರಿತು ಮಾತ್ರ ಉಲ್ಲೇಖಿಸಲಾಗಿದೆ.

ಮತ್ತೊಂದೆಡೆ, ಆಕ್ರಮಿತ ಪಶ್ಚಿಮದ ದಂಡೆಯಲ್ಲಿ ಹೆಚ್ಚುತ್ತಿರುವ ಇಸ್ರೇಲಿ ವಸಾಹತುಗಾರರ ಹಿಂಸಾಚಾರದ ಕುರಿತು 27 ರಾಷ್ಟ್ರಗಳ ಯುರೋಪಿಯನ್ ಒಕ್ಕೂಟದ ಉನ್ನತ ರಾಜತಾಂತ್ರಿಕರೊಂದಿಗೆ ಪ್ರತ್ಯೇಕ ಸಭೆ ನಡೆಸಲಾಗಿದೆ. ಈ ವೇಳೆ ಇಸ್ರೇಲಿ ವಸಾಹತು ಪ್ರದೇಶಗಳೊಂದಿಗೆ ವ್ಯಾಪಾರವನ್ನು ಕಡಿತಗೊಳಿಸುವುದು ಸೇರಿದಂತೆ ಹಲವು ಕ್ರಮಗಳ ಕುರಿತು ಚರ್ಚಿಸಲಾಗಿದೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online