<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ಭಾರತೀಯ ಸಂಗೀತದ ಕೋಗಿಲೆಗೆ ವಿದಾಯ: ಜಾನಕಿ ಅಗಲಿಕೆಗೆ ಗಣ್ಯರಿಂದ ಭಾವುಕ ನಮನ

ಭಾರತೀಯ ಸಂಗೀತದ ಕೋಗಿಲೆಗೆ ವಿದಾಯ: ಜಾನಕಿ ಅಗಲಿಕೆಗೆ ಗಣ್ಯರಿಂದ ಭಾವುಕ ನಮನ
Summary: The news of the death of legendary singer S. Janaki of the Indian music world has shocked fans and the film industry. Prime Minister Narendra Modi, Tamil Nadu Chief Minister Vijay, actors Rajinikanth, Kamal Haasan and many others have expressed their condolences on her demise.

Belagavi News:

ಖ್ಯಾತ ಗಾಯಕಿ ಎಸ್. ಜಾನಕಿ ಅವರ ನಿಧನದಿಂದ ಭಾರತೀಯ ಸಿನಿಮಾ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ದಕ್ಷಿಣ ಭಾರತದ ಗಾನಕೋಗಿಲೆ ಎಂದೇ ಖ್ಯಾತರಾಗಿದ್ದ 88 ವರ್ಷದ ಎಸ್. ಜಾನಕಿ ಅವರ ಅಗಲಿಕೆಗೆ ದೇಶಾದ್ಯಂತ ಗಣ್ಯರು ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ತಮಿಳುನಾಡು ಮುಖ್ಯಮಂತ್ರಿಗಳ ದಳಪತಿ ವಿಜಯ್, ಮೆಗಾಸ್ಟಾರ್ ಚಿರಂಜೀವಿ, ಸೂಪರ್ ಸ್ಟಾರ್ ರಜನಿಕಾಂತ್, ನಟ ಕಮಲ್ ಹಾಸನ್ ಸೇರಿದಂತೆ ಚಿತ್ರರಂಗದ ಹಲವು ಪ್ರಮುಖರು ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ಸೂಚಿಸಿ, ಎಸ್. ಜಾನಕಿ ಅವರ ಅಮೋಘ ಸಂಗೀತ ಸೇವೆಯನ್ನು ಸ್ಮರಿಸಿದ್ದಾರೆ.

ದಶಕಗಳ ಕಾಲ ತಮ್ಮ ಸುಮಧುರ ಕಂಠದಿಂದ ಕೋಟ್ಯಂತರ ಸಂಗೀತ ಪ್ರಿಯರ ಮನಗೆದ್ದಿದ್ದ ಎಸ್. ಜಾನಕಿ ಅವರ ನಿಧನವು ಭಾರತೀಯ ಸಂಗೀತ ಲೋಕಕ್ಕೆ ಅಪಾರ ನಷ್ಟ ತಂದಿದೆ ಎಂದು ಗಣ್ಯರು ಅಭಿಪ್ರಾಯಪಟ್ಟಿದ್ದಾರೆ.

ಮುಖ್ಯಾಂಶಗಳು:

• ಮೈಸೂರಿನಲ್ಲಿ ನಿಧನರಾದ ಹಿರಿಯ ಗಾಯಕಿ ಎಸ್. ಜಾನಕಿ ಅವರಿಗೆ ಗಣ್ಯರ ನಮನ

• ಸೋಶಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ ಪ್ರಧಾನಿ ಮಂತ್ರಿ ನರೇಂದ್ರ ಮೋದಿ.

• ದಳಪತಿ ವಿಜಯ್, ಕಮಲ್ ಹಾಸನ್, ಚಿರಂಜೀವಿ ಮುಂತಾದ ಸೆಲೆಬ್ರಿಟಿಗಳ ಸಂತಾಪ.

 ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ: ಪ್ರಧಾನಿ ನರೇಂದ್ರ ಮೋದಿ ಸಂತಾಪ

ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿನ ಜಾನಕಿ ಅಮ್ಮನವರನ್ನು ಸ್ಮರಿಸಿದ ಪ್ರಧಾನಿ, ಅವರ ಅಗಲಿಕೆ ಸಂಗೀತ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ಹೇಳಿದ್ದಾರೆ

ವಿವಿಧ ಭಾಷೆಗಳಲ್ಲಿ ಎಸ್. ಜಾನಕಿ ಅವರು ಹಾಡಿರುವ ಗೀತೆಗಳು ತಲೆಮಾರುಗಳವರೆಗೆ ಜನಪ್ರಿಯವಾಗಿವೆ. ಪ್ರತಿಯೊಂದು ಭಾವನೆಗೂ ತಮ್ಮ ವಿಶಿಷ್ಟ ಶೈಲಿ ಮತ್ತು ಅದ್ಭುತ ಗಾಯನದ ಮೂಲಕ ಜೀವ ತುಂಬಿದ ಅವರು ತಮ್ಮ ಸುಮಧುರ ಹಾಡುಗಳ ಮೂಲಕ ಸದಾ ನೆನಪಿನಲ್ಲಿ ಉಳಿಯಲಿದ್ದಾರೆ ಎಂದು ಪ್ರಧಾನಿ ತಿಳಿಸಿದ್ದಾರೆ.

ಈ ದುಃಖದ ಸಂದರ್ಭದಲ್ಲಿ ಎಸ್. ಜಾನಕಿ ಅವರ ಕುಟುಂಬ, ಅಭಿಮಾನಿಗಳು ಹಾಗೂ ಇಡೀ ಸಂಗೀತ ಕ್ಷೇತ್ರಕ್ಕೆ ತಮ್ಮ ಹೃತ್ಪೂರ್ವಕ ಸಂತಾಪಗಳನ್ನು ಪ್ರಧಾನಿ ವ್ಯಕ್ತಪಡಿಸಿದ್ದಾರೆ.

 ಭಾರತೀಯ ಸಂಗೀತ ಜಗತ್ತಿನ ಧ್ರುವತಾರೆ: ಸಿಎಂ ವಿಜಯ್ ಸಂತಾಪ

ಖ್ಯಾತ ಗಾಯಕಿಯ ಎಸ್. ಜಾನಕಿ ಅವರ ನಿಧನಕ್ಕೆ ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ದಳಪತಿ ವಿಜಯ ಅವರು ಸಂತಾಪ ಸೂಚಿಸಿದ್ದಾರೆ. ಭಾರತೀಯ ಚಲನಚಿತ್ರ ಸಂಗೀತ ಲೋಕದಲ್ಲಿ ತಮ್ಮ ವಿಶಿಷ್ಟ ಧ್ವನಿಯ ಮೂಲಕ ಕೋಟ್ಯಂತರ ಅಭಿಮಾನಿಗಳ ಮನಗೆದ್ದಿದ್ದ ಎಸ್. ಜಾನಕಿ ಅವರ ಅಗಲಿಕೆ ತೀವ್ರ ದುಃಖ ತಂದಿದೆ ಎಂದು ಅವರು ಹೇಳಿದ್ದಾರೆ.

ತಮಿಳು, ತೆಲುಗು, ಮಲಯಾಳಂ, ಕನ್ನಡ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡುವ ಮೂಲಕ ಎಸ್. ಜಾನಕಿ ಅವರು ಸಂಗೀತ ಕ್ಷೇತ್ರದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಅವರ ಮಧುರ ಕಂಠ ಭಾವನೆಗಳನ್ನು ವ್ಯಕ್ತಪಡಿಸುವ ಅಪೂರ್ವ ಸಾಮರ್ಥ್ಯ ಹಾಗೂ ಸಂಗೀತದ ಮೇಲಿನ ಭದ್ರತೆ ಅವರನ್ನು ಎಂದಿಗೂ ಅಭಿಮಾನಿಗಳ ಹೃದಯದಲ್ಲಿ ಜೀವಂತವಾಗಿರಿಸುತ್ತದೆ ಎಂದು ವಿಜಯ್ ತಿಳಿಸಿದ್ದಾರೆ.

ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿರುವ ಎಸ್ ಜಾನಕಿ ಅವರ ಕೊಡುಗೆ ಭಾರತೀಯ ಸಂಗೀತ ಲೋಕಕ್ಕೆ ಅಪಾರವಾಗಿದೆ. ಅವರ ಕುಟುಂಬದವರು ಹಾಗೂ ವಿಶ್ವದಾದ್ಯಂತ ಇರುವ ಅಭಿಮಾನಿಗಳಿಗೆ ವಿಜಯ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

 "ನನ್ನ ಸಿನಿ ಜರ್ನಿಯ ಹಿನ್ನೆಲೆ ಧ್ವನಿ ಅವರದ್ದಾಗಿತ್ತು: ಮೆಗಾಸ್ಟಾರ್ ಚಿರಂಜೀವಿ ಭಾವುಕ ನುಡಿ"

ಖ್ಯಾತಗಾಗಿ ಎಸ್. ಜಾನಕಿ ಅವರ ನಿಧನಕ್ಕೆ ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ ಅವರು ಭಾವುಕ ಸಂತಾಪ ಸುಚಿಸಿದ್ದಾರೆ. ತಮ್ಮ ಸಿನಿಮಾ ಪಯಣದಲ್ಲಿ ಮರೆಯಲಾಗದ ಅನೇಕ ಹಾಡುಗಳಿಗೆ ಜಾನಕಿ ಅಮ್ಮನವರ ಅದ್ಭುತ ಧ್ವನಿ ಜೀವ ತುಂಬಿತ್ತು ಎಂದು ಅವರು ಸ್ಮರಿಸಿದ್ದಾರೆ.

ನನ್ನ ವೃತ್ತಿಜೀವನದಲ್ಲಿ ಪ್ರೇಕ್ಷಕರು ನೆನಪಿಸಿಕೊಳ್ಳುವ ನೂರಾರು ಹಾಡುಗಳ ಹಿಂದೆ ಜಾನಕಮ್ಮ ಅವರ ಸುಮಧುರ ಧ್ವನಿಯಿದೆ. ಪರದೆಯ ಮೇಲಿನ ಭಾವನೆಗಳಿಗೆ ಜೀವ ತುಂಬಿದ ಆ ಧ್ವನಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇಂದು ಸಂಗೀತ ಲೋಕದ ಒಂದು ಮಹಾನ್ ಶಿಖರವನ್ನು ಕಳೆದುಕೊಂಡಿದ್ದೇವೆ. ಆದರೆ ಅವರ ಹಾಡುಗಳು ತಲೆಮಾರುಗಳವರೆಗೆ ಸ್ಪೂರ್ತಿಯಾಗಿ ಪ್ರತಿಧ್ವನಿಸುತ್ತವೇ" ಎಂದು ಚಿರಂಜೀವಿ ಹೇಳಿದ್ದಾರೆ.

ಸೂಪರ್ ಸ್ಟಾರ್ ರಜನಿಕಾಂತ್ ಅವರು ಕೂಡ ಎಸ್. ಜಾನಕಿ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದು, ತಮ್ಮ ಜೇನಿನಂತಹ ಮಧುರ ಧ್ವನಿಯಿಂದ ಹಲವು ತಲೆಮಾರುಗಳ ಜನರನ್ನು ರಂಜಿಸಿದ ಗಾಯಕಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

ನಟ ಕಮಲ್ ಹಾಸನ್ ಅವರು ಕಾವ್ಯಾತ್ಮಕವಾಗಿ ಶ್ರದ್ಧಾಂಜಲಿ ಸಲ್ಲಿಸಿ, ಎಸ್. ಜಾನಕಿ ಅವರ ಹಾಡುಗಳು ಎಂದೆಂದಿಗೂ ಪ್ರತಿಧ್ವನಿಸುತ್ತಲೆ ಇರುತ್ತವೆ ಎಂದು ಹೇಳಿದ್ದಾರೆ. ಅವರ ಅಗಲಿಕೆಯಿಂದ ದುಃಖದಲ್ಲಿರುವ ಕುಟುಂಬದವರು ಹಾಗೂ ಅಭಿಮಾನಿಗಳಿಗೆ ಅವರು ಸಂತಾಪ ಸೂಚಿಸಿದ್ದಾರೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online