<?= $pageTitle ?>
Logo
ಮುಖಪುಟ ಓದುವುದು ಕೇಳು
Sports

INDW vs SLW 5ನೇ T20: ಗಿಲ್ ದಾಖಲೆ ಮುರಿಯಲು ಸಜ್ಜಾದ ಮಂಧಾನ

INDW vs SLW 5ನೇ T20: ಗಿಲ್ ದಾಖಲೆ ಮುರಿಯಲು ಸಜ್ಜಾದ ಮಂಧಾನ
Summary: ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡಗಳ ನಡುವಿನ 5ಮೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ಮತ್ತೊಂದು ದಾಖಲೆ ಬರೆಯುವ ಸನಿಹದಲ್ಲಿದ್ದಾರೆ.
INDW vs SLW 5th T20I: ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡಗಳ ನಡುವಿನ 5ನೆ ಟಿ20ಐ ಪಂದ್ಯ ತಿರುವನಂತಪುರಂ ಮೈದಾನದಲ್ಲಿ ನಡೆಯಲಿದೆ.ಇದು ಈ ವರ್ಷದ ಕೊನೆಯ ಅಂತರಾಷ್ಟ್ರೀಯ ಪಂದ್ಯವಾಗಿರಲಿದೆ. ಇದರೊಂದಿಗೆ ಡಿ.21 ರಿಂದ ಪ್ರಾರಂಭಗೊಂಡ ಉಭಯ ತಂಡಗಳ ನಡುವಿನ ಟಿ20 ಸರಣಿ ಇಂದು ಕೊನೆಗೊಳ್ಳಲಿದೆ.
ಮತ್ತೊಂದೆಡೆ ಶ್ರೀಲಂಕಾ ತಂಡ ಕನಿಷ್ಠ ಒಂದು ಪಂದ್ಯವಾದರೂ ಗೆದ್ದು ತವರಿಗೆ ಮರಳಲು ಎದುರು ನೋಡುತ್ತಿದೆ.ಈಗಾಗಲೇ ಸರಣಿಯಲ್ಲಿ ಆಡಿರುವ 4 ಪಂದ್ಯಗಳನ್ನು ಗೆದ್ದುಕೊಂಡಿರುವ ಭಾರತ ಅಜೇಯ ಗೆಲುವಿನ ಓಟವನ್ನು ಮುಂದುವರಿಸಿದೆ. 5ನೇ ಪಂದ್ಯವನ್ನು ಸಹ ಗೆಲ್ಲುವ ಫೆವರಿಟ್ ತಂಡವಾಗಿ ಮೈದಾನಕ್ಕೆ ಪ್ರವೇಶ ಮಾಡುತ್ತಿದೆ.
ಅದರಲ್ಲೂ 4ನೇ ಪಂದ್ಯದಲ್ಲಿ ಫಾರ್ಮ್ಗೆ ಮರಳಿದ ಮಂಧಾನ ಬ್ಯಾಟ್ ಝಳಪಿಸಿ ದಾಖಲೆಗಳನ್ನು ನಿರ್ಮಿಸಿದ್ದಾರೆ. ಇದೀಗ ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿದ್ದಾರೆ.ಉಳಿದಂತೆ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಟೀಮ್ ಇಂಡಿಯಾ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ.
ಮುಖಾಮುಖಿ ದಾಖಲೆ: ಮತ್ತೊಂದೆಡೆ ಶ್ರೀಲಂಕಾ ಐದು ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ, ಒಂದು ಪಂದ್ಯ ಫಲಿತಾಂಶ ಕಾಣದೆ ರದ್ದಾಗಿದೆ. ಉಭಯ ತಂಡಗಳು ಇದುವರೆಗೆ ಒಟ್ಟು 29 ಬಾರಿ ಟಿ20ಐನಲ್ಲಿ ಮುಖಾಮುಖಿಯಾಗಿದ್ದು, ಭಾರತ 23 ಪಂದ್ಯಗಳನ್ನು ಗೆದ್ದುಕೊಂಡು ಪ್ರಾಬಲ್ಯ ಸಾಧಿಸಿದೆ.
ಈ ವರ್ಷ ಇಲ್ಲಿಯವರೆಗೆ, ಮಂಧಾನ ಆಡಿದ ಎಲ್ಲಾ ಮೂರು ಸ್ವರೂಪಗಳಲ್ಲಿ 1,703 ರನ್ ಗಳಿಸಿದ್ದಾರೆ, ಏತನ್ಮಧ್ಯೆ, ಗಿಲ್ 1,764 ರನ್ ಕಲೆಹಾಕಿ ಅಗ್ರಸ್ಥಾನದಲ್ಲಿದ್ದಾರೆ.ನಾಲ್ಕನೇ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ 10,000 ಅಂತರಾಷ್ಟ್ರೀಯ ರನ್ಗಳನ್ನು ಪೂರ್ಣಗೊಳಿಸಿದ್ದ ಮಂಧಾನ ಇದೀಗ ಮತ್ತೊಂದು ದಾಖಲೆಗೆ ಸನಿಗದಲ್ಲಿದ್ದಾರೆ. ಅವರು ಇನ್ನು 62 ರನ್ ಗಳಿಸಿದರೆ, 2025ರಲ್ಲಿ ಪುರುಷ ಮತ್ತು ಮಹಿಳಾ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎನಿಸಿಕೊಳ್ಳಲಿದ್ದಾರೆ.
ಆದಾಗ್ಯೂ, ತಿರುವನಂತಪುರದಲ್ಲಿ ಭಾನುವಾರ ನಡೆದ ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಟಿ20ಐನಲ್ಲಿ, ಅವರು ಕೇವಲ 48 ಎಸೆತಗಳಲ್ಲಿ 80 ರನ್ ಸಿಡಿಸಿದರು.ಆರಂಭಿಕ 3 ಪಂದ್ಯಗಳಲ್ಲಿ ಮಂಧಾನ ಹೆಚ್ಚಿನ ಪ್ರದರ್ಶನ ನೀಡಿರಲಿಲ್ಲ. ಅವರು ಅವುಗಳಲ್ಲಿ ಹೆಚ್ಚಿನ ರನ್ ಗಳಿಸಿದ್ದರೆ, ಈಗಾಗಲೇ ಶುಭಮನ್ ಗಿಲ್ ಅವರನ್ನು ಮೀರುತ್ತಿದ್ದರು. ಇಂದಿನ ಪಂದ್ಯದಲ್ಲೂ ಮಂಧಾನ ದೊಡ್ಡ ಇನ್ನಿಂಗ್ಸ್ ಆಡಿದರೆ, ದಾಖಲೆ ಸೃಷ್ಟಿಸುವ ಸಾಧ್ಯತೆಯಿದೆ.
ನೇರ ಪ್ರಸಾರ ಎಲ್ಲಿ: ಭಾರತ ಮತ್ತು ಶ್ರೀಲಂಕಾ ನಡುವಿನ 5ನೇ T20I ಪಂದ್ಯದ ನೇರ ಪ್ರಸಾರ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ನಲ್ಲಿರಲಿದ್ದು, ಜಿಯೋ ಹಾಟ್ಸ್ಟಾರ್ನಲ್ಲಿ ಲೈವ್ ಸ್ಟ್ರೀಮಿಂಗ್ ಇರಲಿದೆ.
ಈ ಹಿಂದೆ ಇಲ್ಲಿ ನಾಲ್ಕು ಪುರುಷರ ಟಿ20ಐ ಪಂದ್ಯಗಳು ನಡೆದಿವೆ. ಮೊದಲ ಇನ್ನಿಂಗ್ಸ್ನ ಸರಾಸರಿ ಸ್ಕೋರ್ 151 ಮತ್ತು ಎರಡನೇ ಇನ್ನಿಂಗ್ಸ್ ಸ್ಕೋರ್ 140 ಆಗಿರಲಿದೆ. ಈ ಮೈದಾನದಲ್ಲಿ 74% ವಿಕೆಟ್ಗಳು ವೇಗದ ಬೌಲರ್ಗಳಿಗೆ ಬಿದ್ದಿರುವುದು ಗಮನಾರ್ಹ.ತಿರುವನಂತಪುರಂನ ಗ್ರೀನ್ಫೀಲ್ಡ್ ಕ್ರೀಡಾಂಗಣ ವೇಗದ ಬೌಲರ್ಗಳಿಗೆ ಹೆಚ್ಚಿನ ಸಹಕಾರಿ ಆಗಿರಲಿದೆ. ಆರಂಭದಲ್ಲಿ ಸ್ವಿಂಗ್ ಸಿಗಲಿದ್ದು ಬೌಲರ್ಗಳು ವಿಕೆಟ್ ಪಡೆಯುವ ಅವಕಾಶ ಹೆಚ್ಚಿರಲಿದೆ. ಬಳಿಕ ಪಂದ್ಯ ಸಾಗುತ್ತಿದ್ದಂತೆ ರನ್ಗಳು ಹರಿದು ಬರಲಿದೆ. ಈ ಮೈದಾನದಲ್ಲಿ ಪ್ರಸ್ತುತು ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವಿನ 2 ಮಹಿಳಾ ಪಂದ್ಯಗಳು ನಡೆದಿವೆ.
ಶ್ರೀಲಂಕಾ: ಚಾಮರಿ ಅಟಪಟ್ಟು (ನಾಯಕಿ), ಹಾಸಿನಿ ಪೆರೆರಾ, ವಿಶ್ಮಿ ಗುಣರತ್ನೆ, ಹರ್ಷಿತಾ ಸಮರವಿಕ್ರಮ, ನೀಲಾಕ್ಷಿಕಾ ಡಿ ಸಿಲ್ವಾ, ಕವಿಶಾ ದಿಲ್ಹಾರಿ, ಇಮೇಶಾ ದುಲಾನಿ, ಕೌಶಿನಿ ನುತ್ಯಂಗನಾ, ಮಲ್ಶಾ ಶೆಹಾನಿ, ಇನೋಕಾ ರಣವೀರ, ಶಶಿನಿ ಗಿಮ್ಹಾನಿ, ನಿಮೇಶ್ ಮದುಶಾನಿ, ಕಾವ್ಯಾ ಕವಿಂದಿ, ರಶ್ಮಿಕಾ ಸೇವಂದಿ, ಮಾಲ್ಕಿ ಮಾದರ.
ಹರ್ಮನ್ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ದೀಪ್ತಿ ಶರ್ಮಾ, ಸ್ನೇಹ ರಾಣಾ, ಜೆಮಿಮಾ ರಾಡ್ರಿಗಸ್, ಶೆಫಾಲಿ ವರ್ಮಾ, ಹರ್ಲೀನ್ ಡಿಯೋಲ್, ಅಮಂಜೋತ್ ಕೌರ್, ಅರುಂಧತಿ ರೆಡ್ಡಿ, ಕ್ರಾಂತಿ ಗೌಡ್, ರೇಣುಕಾ ಸಿಂಗ್ ಠಾಕೂರ್, ರಿಚಾ ಘೋಷ್ (ವಿ.ಕೀ), ಜಿ ಕಮಲಿನಿ, ಶ್ರೀ ಚರಣಿ, ವೈಷ್ಣವಿ ಶರ್ಮ.
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online