<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Sports

IPL Today: ಡೆಲ್ಲಿ ಕೊಲ್ಕತ್ತಾ ಮುಖಾಮುಖಿ ಯಾರಿಗೆ ಮೇಲುಗೈ ?

IPL Today: ಡೆಲ್ಲಿ ಕೊಲ್ಕತ್ತಾ ಮುಖಾಮುಖಿ ಯಾರಿಗೆ ಮೇಲುಗೈ ?
Summary: An exciting clash is going to take place in the IPL today, as Delhi Capitals and Kolkata Knight Riders are facing each other. This match, which is important from the play-off point of view, has aroused curiosity among the fans.

belagavi news :

ಇಂಡಿಯನ್ ಪ್ರೀಮಿಯರ್ ಲೀಗ್ 2026ರ 51ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಇಂದು ಅರುಣ್ ಜಟ್ಲಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಪ್ಲೇ ಆಫ್ ಕನಸು ಜೀವಂತವಾಗಿರಿಸಿಕೊಳ್ಳಲು ಎರಡು ತಂಡಗಳಿಗೂ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಒಂದೆಡೆ ಆರಂಭಿಕ ಹಿನ್ನಡೆಯ ಬಳಿಕ ಕೆಕೆಆರ್ ಇಲಾಖೆ ಮರಳಿದರೆ, ಮತ್ತೊಂದೆಡೆ ಉತ್ತಮ ಆರಂಭ ಪಡೆದಿದ್ದ ಡೆಲ್ಲಿ ಕ್ಯಾಪಿಟಲ್ ಇದೀಗ ಫಾರ್ಮ್ಸ್ ಕಳೆದುಕೊಂಡಿದೆ.

ಈ ಕಾರಣದಿಂದ ಇಂದಿನ ಪಂದ್ಯದಲ್ಲಿ ಡೆಲ್ಲಿ ತಂಡದಲ್ಲಿ ಬದಲಾವಣೆಗಳ ಸಾಧ್ಯತೆ ಹೆಚ್ಚಾಗಿದೆ. ಡೆಲ್ಲಿ ಕ್ಯಾಪಿಟಲ್ ಈ ಸೀಸನ್ ನನ್ನು ಎರಡು ಗೆಲುವುಗಳೊಂದಿಗೆ ಆರಂಭಿಸಿತು. ಆದರೆ ನಂತರ ತಂಡದ ಪ್ರದರ್ಶನ ಕುಸಿತ ಕಂಡಿದ್ದು, ಕಳೆದ 8 ಪಂದ್ಯಗಳಲ್ಲಿ ಆರು ಸೋಲು ಅನುಭವಿಸಿದೆ. ಆಡಿರುವ 10 ಪಂದ್ಯಗಳಲ್ಲಿ ನಾಲ್ಕು ಗೆಲುವು ಮತ್ತು 6 ಸೋಲುಗಳೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ತಂಡದ ನೆಟ್ ರನ್ ರೇಟ್ -0.949ಆಗಿದೆ. ಇನ್ನೊಂದೆಡೆ, ಕೆಕೆಆರ್ ಗೆಲುವಿನ ಹಾದಿಗೆ ಮರಳಿದ್ದು ಆತ್ಮವಿಶ್ವಾಸದಿಂದ ಕಣಕ್ಕಿಳಿಯುತ್ತಿದೆ. ಹೀಗಾಗಿ ಇಂದಿನ ಪಂದ್ಯ ಅಭಿಮಾನಿಗಳಿಗೆ ರೋಚಕ ಪೈಪೋಟಿಯನ್ನು ನಿರೀಕ್ಷೆ ಮೂಡಿಸಿದೆ.

ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಈ ಸೀಸನ್ ಆರಂಭದಲ್ಲಿ ಭಾರಿ ಹಿನ್ನಡೆ ಅನುಭವಿಸಿತು. ಸತತ ಐದು ಪಂದ್ಯಗಳಲ್ಲಿ ಸೋಲು ಕಂಡಿದ್ದ ಕೆಕೆಆರ್ ಒಂದು ಪಂದ್ಯವನ್ನು ಮಳೆಯ ಕಾರಣದಿಂದ ಕಳೆದುಕೊಂಡಿತು. ಆ ವೇಳೆಗೆ ತಂಡದ ಆಟ ಸಮತೋಲನ ಹಾಗೂ ದುರ್ಬಲ ಪ್ರದರ್ಶನದಿಂದ ಟೀಕೆಗೆ ಗುರಿಯಾಯಿತು. ಆದರೆ ಇದೀಗ ಕೆಕೆಆರ್ ಭರ್ಜರಿ ಪುನರಾಗಮನ ಮಾಡಿದೆ. ಕಳೆದ ಮೂರು ಪಂದ್ಯಗಳಲ್ಲಿ ಸತತ ಜಯ ಸಾಧಿಸಿರುವ ತಂಡ, ರಾಜಸ್ಥಾನ್ ರಾಯಲ್ಸ್, ಲಕ್ನೋ ಸೂಪರ್ ಜೆಂಟ್ಸ್ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗೆಲುವು ದಾಖಲಿಸಿದೆ.

Sponsored

ಈಗ ಡೆಲ್ಲಿ ವಿರುದ್ಧವು ಸತತ ನಾಲ್ಕನೆಯ ಜಯ ಮೇಲೆ ಕಣ್ಣಿಟ್ಟಿದೆ. ಪ್ಲೇ ಆಫ್ ರೇಸಿನಲ್ಲಿ ಅಲ್ಲಿ ತಮ್ಮ ಸ್ಥಾನವನ್ನು ಬಲಪಡಿಸಿಕೊಳ್ಳಲು ಕೆಕೆಆರ್ ಗೆ ಈ ಪಂದ್ಯ ಮಹತ್ವದ್ದಾಗಿದೆ. ಇದುವರೆಗೆ 9 ಪಂದ್ಯಗಳಲ್ಲಿ ಮೂರು ಗೆಲುವು, ಐದು ಸೋಲು ಮತ್ತು ಒಂದು ಫಲಿತಾಂಶ ರದ್ದಾಗಿರುವ ಮೂಲಕ 7 ಅಂಕಗಳನ್ನು ಪಡೆದಿದೆ.-0.539 ನೆಟ್ ರನ್ ರೇಟ್ ನೊಂದಿಗೆ ಕೆಕೆಆರ್ ಪಾಯಿಂಟ್ಸ್ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ.

ಇಂದಿನ ಡೆಲ್ಲಿ ಕ್ಯಾಪಿಟಲ್ Vs ಕೊಲ್ಕತ್ತಾ ನೈಟ್ ರೈಡರ್ಸ್ ಪಂದಕ್ಕೆ ಆಥಿತ್ಯ ವಹಿಸುತ್ತಿರುವ ಅರುಣ್ ಜೇಟ್ಲಿ ಕ್ರೀಡಾಂಗಣದ ಪಿಚ್ ಸಾಮಾನ್ಯವಾಗಿ ಬ್ಯಾಟ್ಸ್ಮನ್ಗಳಿಗೆ ಹೆಚ್ಚು ಅನುಕೂಲಕರವಾಗಿದೆ. ಆದರೆ ಇತ್ತೀಚಿನ ಪಂದ್ಯಗಳಲ್ಲಿ ಬೌಲರಗಳಿಗೂ ಸಹಾಯ ದೊರೆಯುತ್ತಿರುವುದು ಗಮನಾರ್ಹವಾಗಿದೆ. ಹೀಗಾಗಿ ಈ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಕ್ಕೂ ಸಮತೋಲನದ ಸಹಕಾರ ನೀಡುವ ನಿರೀಕ್ಷೆ ಇದೆ.ಈ ಮೈದಾನದಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 170 ಕ್ಕಿಂತ ಹೆಚ್ಚಿದ್ದು, ಮತ್ತೊಮ್ಮೆ ಹೈ ಸ್ಕೋರಿಂಗ್ ಪಂದ್ಯ ಕಂಡುಬರುವ ಸಾಧ್ಯತೆ ಇದೆ.

ಹವಾಮಾನ ವರದಿ: ಡೆಲ್ಲಿಯಲ್ಲಿ ಇಂದು ಹವಾಮಾನ ಸಾಮಾನ್ಯವಾಗಿರಲಿದೆ. ಅ ಕ್ಯುವೇದರ್ ವರದಿ ಪ್ರಕಾರ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದೆ. ಪಂದ್ಯ ಸಂಜೆ 7:30ಕ್ಕೆ ಆರಂಭವಾಗಲಿದ್ದು, ಆ ಸಮಯದಲ್ಲಿ ಮರೆಯ ಯಾವುದೇ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ.

ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಈ ಪಂದ್ಯಕ್ಕೆ ಬಲಿಷ್ಠ ಹಾಗೂ ಅನುಭವ ಮತ್ತು ಯುವ ಪ್ರತಿಭೆಗಳ ಮಿಶ್ರಣದೊಂದಿಗೆ ಕಣಕ್ಕಿಳಿಯುತ್ತಿದೆ.ತಂಡದ ನಾಯಕತ್ವವನ್ನು ಅಜಿಂಕ್ಯ ಹಾನಿ ಮುನ್ನಡೆಸುತ್ತಿದ್ದಾರೆ.

Sponsored

ಕೆಕೆಆರ್ ತಂಡದ ಪ್ರಮುಖ ಆಟಗಾರರು:

ಅಜಿಂಕ್ಯ ರಹಾನೆ, ರಿಂಕು ಸಿಂಗ್, ಸುನಿಲ್ ನರೈನ, ವರುಣ್ ಚಕ್ರವರ್ತಿ, ಅನುಕೂಲ್ ರಾಯ್, ಆಂಗ್ಕ್ರಿಶ್ ರಘುವಂಶಿ, ಕ್ಯಾಮೆರಾನ್ ಗ್ರೀನ್ ರಮಣ್ ದೀಪ್ ಸಿಂಗ್, ಫಿನ್ ಅಲೆನ್, ವೈಭವ್ ಅರೋರಾ ಕಾರ್ತಿಕ್ ತ್ಯಾಗಿ, ಮನೀಶ್ ಪಾಂಡೆ, ರೋಮ್ ಮನ್ ಪೊವೆಲ್, ಉಮ್ರಾನ್ ಮಲಿಕ್, ಮಥೀಶ ಪತಿರಾನಾ, ರಾಹುಲ್ ತ್ರಿಪಾಠಿ, ಟಿಮ್ ಸಿಫರ್ಟ್, ತೇಜಸ್ವಿ ದಹಿಯಾ, ರಚಿನ್ ರವೀಂದ್ರ, ಬ್ಲೆಸಿಂಗ್ ಮುಜರಬಾನಿ, ನವದೀಪ್ ಸೈನಿ, ಪ್ರಶಾಂತ್ ಸೋಲಂಕಿ,ದಕ್ಷ ಕಮ್ರಾ, ಸಾರ್ಥಕ್ ರಂಜಾನ್,ಸೌರಭ್ ರಂಜನ್ .

ಈ ತಂಡದಲ್ಲಿ ಬ್ಯಾಟಿಂಗಿಗೆ ರಹಾನೆ, ರಿಂಕು ಸಿಂಗ್ ಮತ್ತು ರಚಿನ್ ರವೀಂದ್ರ ಪ್ರಮುಖ ಭರವಸೆಯಾಗಿದ್ದು, ಬೌಲಿಂಗ್ ವಿಭಾಗದಲ್ಲಿ ಸುನಿಲ್ ನಾರಾಯಣ ಹಾಗೂ ವರುಣ್ ಚಕ್ರವರ್ತಿ ಪ್ರಮುಖ ಪಾತ್ರ ವಹಿಸಲಿದ್ದಾರೆ.

ಡೆಲ್ಲಿ ಕ್ಯಾಪಿಟಲ್ ತಂಡವು ಈ ಪಂದ್ಯಕ್ಕೆ ಬಲಿಷ್ಠ ಆಟಗಾರರ ಪಡೆಯೊಂದಿಗೆ ಕಣಕ್ಕಿಳಿಯುತ್ತಿದೆ. ನಾಯಕತ್ವವನ್ನು ಅಕ್ಷರ ಪಟೇಲ್ ಮುನ್ನಡೆಸುತ್ತಿದ್ದಾರೆ.

Sponsored

ಇಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರ ಪಟ್ಟಿ:

ಅಕ್ಷರ್ ಪಟೇಲ್, ಕೆ ಎಲ್ ರಾಹುಲ್, ಕುಲದೀಪ್ ಯಾದವ್, ಕರುಣ್ ಲಾಯರ್, ಡೇವಿಡ್ ಮಿಲ್ಲರ್, ಪಾತುಮ್ ನಿಸ್ಸಾಂಕ , ಟ್ರಿಸ್ಟಾನ್ ಸ್ಟಬ್ಸ್ ,ಸಮೀರ್ ರಿಜ್ವಿ,ನಿತೀಶ್ ರಾಣಾ ,ಟಿ .ನಟರಾಜನ್, ಮುಕೇಶ್ ಕುಮಾರ್, ಅಶುತೋಷ್ ಶರ್ಮಾ, ದುಶ್ಮಂತ್ ಚಮೀರಾ , ಲುಂಗಿ ಎನ್ ಗಿಡಿ, ವಿಪ್ರಜ್ ನಿಗಮ್, ಸಾಯಿಲ್ ಪರ್ಖ, ಪೃಥ್ವಿ ಶಾ, ಅಭಿಷೇಕ್ ಪೊರಲ್, ಅಜಯ್ ಮಂಡಲ, ಮಾಧವ್ ತಿವಾರಿ, ಓಕಿನ್ ನಬಿ ದಾರ್, ಮಿಚೆಲ್ ಸ್ಟಾರ್ಕ್, ಕೈಲ್ ಜಮಿಸನ್, ರೆಹಾನ್ ಅಹಮದ್

ಡೆಲ್ಲಿ ತಂಡದಲ್ಲಿ ಬ್ಯಾಟಿಂಗ್ ಗೆ ಕೆ ಎಲ್ ರಾಹುಲ್, ಡೇವಿಡ್ ಮಿಲ್ಲರ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಪ್ರಮುಖವಾಗಿದ್ದು, ಬೌಲಿಂಗ್ ವಿಭಾಗದಲ್ಲಿ ಕುಲದೀಪ್ ಯಾದವ್, ಮಿಚೆಲ್ ಸ್ಟಾರ್ಕ್ ಮತ್ತು ನಟರಾಜನ್ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.

Also Read:

Sponsored

ಎಲುಬು ನೋವು ಸಮಸ್ಯೆಗೆ ಪರಿಹಾರ: ವಿಟಮಿನ್ ಕೊರತೆ ಮತ್ತು ಸರಳ ಟ್ರಿಕ್

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online