belagavi news:
ರಣವೀರ್ ಸಿಂಗ್ ಅಭಿನಯದ ' ಧುರಂಧರ್ ' ಸರಣಿ ಭರ್ಜರಿ ಯಶಸ್ಸು ಕಂಡಿದ್ದು, ಇದೀಗ ' ಧುರಂಧರ್ 3' ಕುರಿತು ಚರ್ಚೆಗಳು ಗರಿಗೆದರಿವೆ. ಜಿಯೋ ಸ್ಟುಡಿಯೋಸ್ ಸಹ - ನಿರ್ಮಾಪಕೀ ಜ್ಯೋತಿ ದೇಶಪಾಂಡೆ ಈ ಭಾಗದ ಬಗ್ಗೆ ಸುಳಿವು ನೀಡಿರುವುದು ಅಭಿಮಾನಿಗಳಲ್ಲಿ ಕುತೂಹಲವನ್ನು ಹೆಚ್ಚಿಸಿದೆ.
ಆದರೆ ನಟ ರಾಕೇಶ್ ಬೇಡಿ ಈ ಕಥೆ ಈಗಾಗಲೇ ಮುಗಿದಿದೆ ಎಂದು ಹೇಳಿಕೆ ನೀಡುವುದು ವಿಭಿನ್ನ ಚರ್ಚೆಗೆ ಕಾರಣವಾಗಿದೆ. ನಿರ್ದೇಶಕ ಆದಿತ್ಯ ಧರ್ ಅವರ ವಿನಮ್ರತೆಯನ್ನು ಅವರ ಪತ್ನಿ ಯಾಮಿ ಗೌತಮಿ ಶ್ಲಾಘಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ 'ಧುರಂಧರ್' ಸರಣಿಯ ಮುಂದಿನ ಭಾಗದ ಬಗ್ಗೆ ನಿರೀಕ್ಷೆ ಮತ್ತಷ್ಟು ಗರಿಗೆದರಿದೆ.
ರಣವೀರ್ ಸಿಂಗ್ ಅಭಿನಯದ 'ಧುರಂಧರ್' ಹಾಗೂ 'ಧುರಂಧರ್ 2: ದಿ ರಿವೇಂಜ್ ' ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಯಶಸ್ಸು ಸಾಧಿಸಿವೆ .ಧುರಂಧರ್ 2' ನ ಅಬ್ಬರ ಇನ್ನೂ ಮುಂದುವರೆದಿರುವ ನಡುವೆಯೇ ಈ ಫ್ರಾಂಚೈಸಿಗೆ ಸಂಬಂಧಿಸಿದ ಮತ್ತೊಂದು ದೊಡ್ಡ ಅಪ್ಡೇಟ್ ಹೊರ ಬಿದ್ದಿದೆ.
ಈ ಹಿಂದೆ 'ಧುರಂಧರ್ 2' ಬಿಡುಗಡೆಯಾದಾಗಲೇ ಈ ಕಥೆ ಇಲ್ಲಿಗೆ ಮುಗಿಯುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಈಗ ಚಿತ್ರತಂಡ ನೀಡಿರುವ ಹೊಸ ಸುಳಿವು ಅಭಿಮಾನಿಗಳಲ್ಲಿ ಮತ್ತೊಮ್ಮೆ ಕುತೂಹಲ ಹಾಗೂ ಸಂಚಲನ ಮೂಡಿಸಿದೆ.
ಜಿಯೋ ಸ್ಟುಡಿಯೋಸ ಸಹ ನಿರ್ಮಾಪಕ ಜ್ಯೋತಿ ದೇಶಪಾಂಡೆ ಇತ್ತೀಚಿಗೆ ನೀಡಿದ ಸಂದರ್ಶನದಲ್ಲಿ ' ಧುರಂಧರ್ 3' ಬಗ್ಗೆ ಮಹತ್ವದ ಸುಳಿವು ನೀಡಿದ್ದಾರೆ. "ಧುರಂಧರ್ ಸರಣಿ ಇಲ್ಲಿಗೆ ಮುಗಿದಿಲ್ಲ. ಈ ವರ್ಷದ ಅಂತ್ಯದ ವೇಳೆಗೆ ಪ್ರೇಕ್ಷಕರಿಗೆ ಒಂದು ದೊಡ್ಡ ಸರ್ಪ್ರೈಸ್ ನೀಡಲಿದ್ದೇವೆ. ಸದ್ಯಕ್ಕೆ ನಾವು ಏನನ್ನೋ ಸಿದ್ಧಪಡಿಸುತ್ತಿದ್ದೇವೆ" ಎಂದು ಅವರು ಹೇಳಿದ್ದು ಮೂರನೇ ಭಾಗದ ಸಾದ್ಯತೆಯನ್ನು ಸ್ಪಷ್ಟಪಡಿಸಿದೆ.
ಈ ಹೇಳಿಕೆಯ ನಂತರ ರಣವೀರ್ ಸಿಂಗ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ. 'ಧುರಂಧರ್ 3'ಶೀಘ್ರದಲ್ಲೇ ಸೆಟ್ಟೇರಬಹುದು ಎಂಬ ಚರ್ಚೆ ಗಟ್ಟಿಯಾಗಿದ್ದು, ಹೊಸ ಸ್ಪೈ ಕಥೆ ಮೂಲಕ ಚಿತ್ರತಂಡ ಮತ್ತೆ ಪ್ರೇಕ್ಷಕರನ್ನು ಸೆಳೆಯಲ್ಲಿದೆಯೇ ಎಂಬ ಕುತೂಹಲವು ಹೆಚ್ಚಾಗಿದೆ.
ಚಿತ್ರದ ಭವಿಷ್ಯದ ಕುರಿತು ಗೊಂದಲ ಮೂಡಿಸುವ ಹೇಳಿಕೆಗಳ ನಡುವೆ ಹಿರಿಯ ನಟ ರಾಕೇಶ್ ಬೇಡಿ ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಿರ್ಮಾಪಕರು 'ಧುರಂಧರ್ 3' ಬಗ್ಗೆ ಹೊಸ ಸುರ್ಪ್ರೈಸ್ ನೀಡುವ ಸುಳಿವು ನೀಡಿದ್ದರೆ, ಬೇಡಿ ಅವರು ಮೂರನೇ ಭಾಗ ಬರುವ ಸಾಧ್ಯತೆ ಕಡಿಮೆ ಎಂದು ಹೇಳಿದ್ದಾರೆ.
"ಮೂರನೇ ಭಾಗ ಬರಲಿದೆ ಎಂದು ನನಗೆ ಅನಿಸುವುದಿಲ್ಲ. 'ಧುರಂಧರ್ ' ಒಂದು ದೊಡ್ಡ ಫ್ರಾಂಚೈಸಿ, ಅದನ್ನು ಬೇರೆ ನಟರೊಂದಿಗೆ ಯಾವಾಗ ಬೇಕಾದರೂ ಮುಂದುವರೆಸಬಹುದು ಆದರೆ ಈ ಕಥೆ ಈಗ ಮುಗಿದಿದೆ " ಎಂದು ಅವರು ತಿಳಿಸಿದ್ದಾರೆ.
ಈ ಪರಸ್ಪರ ವಿರೋಧಿ ಹೇಳಿಕೆಗಳಿಂದ ' ಧುರಂಧರ್ 3' ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.
ಇದೇ ವೇಳೆ ಚಿತ್ರದ ನಿರ್ದೇಶಕ ಆದಿತ್ಯ ಧರ್ ಅವರ ಪತ್ನಿ ಹಾಗೂ ನಟಿ ಯಾಮಿ ಗೌತಮ್ ಅವರು ತಮ್ಮ ಪತಿಯ ಬಗ್ಗೆ ಮಾತನಾಡಿದ್ದಾರೆ. 'ಸಿನಿಮಾ ಇನ್ನಷ್ಟು ದೊಡ್ಡ ಯಶಸ್ಸು ಕಂಡರೂ ನಿರ್ದೇಶಕ ಆದಿತ್ಯ ಸ್ವಲ್ಪವೂ ಬದಲಾಗಿಲ್ಲ. ಸೋಲು - ಗೆಲವು ಎರಡನ್ನು ಅವರು ಸಾಮಾನವಾಗಿ ಸ್ವೀಕರಿಸುತ್ತಾರೆ. ಅವರು ಅತ್ಯಂತ ವಿನಮ್ರ ವ್ಯಕ್ತಿ. ಒಳ್ಳೆ ಕೆಲಸ ಮಾಡುವವರಿಗೆ ದೇವರರಿಂದ ಒಳ್ಳೆ ಪ್ರತಿಫಲ ಸಿಗುತ್ತದೆ ಎಂಬುದಕ್ಕೆ ಅವರ ಯಶಸ್ಸೇ ಸಾಕ್ಷಿ' ಎಂದು ಯಾಮಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
Also Read: