<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Business

ಭಾರತಕ್ಕೆ ಎಲ್ಪಿಜಿ ಸಾಗಾಟ: ಹಾರ್ಮುಜ್ ಜಲಸಂಧಿ ದಾಟಿದ ಮತ್ತೊಂದು ಹಡಗು

ಭಾರತಕ್ಕೆ ಎಲ್ಪಿಜಿ ಸಾಗಾಟ:  ಹಾರ್ಮುಜ್ ಜಲಸಂಧಿ ದಾಟಿದ ಮತ್ತೊಂದು ಹಡಗು
Summary: Another ship carrying LPG, which successfully passed through the Strait of Hormuz, has continued its journey to India. LPG is being supplied to India through this route, which is one of the important routes in the global energy supply chain. This shipment will ensure continuity in meeting the country's energy needs and will help in establishing a chain of LPG ports.

Belagavi news:

ಹೈದರಾಬಾದ್: ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ನಡುವೆಯೂ ಭಾರತದ ಮತ್ತೊಂದು ಎಲ್ ಪಿ ಜಿ ಟ್ಯಾಂಕರ್ ಹಾರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿ ಭಾರತದತ್ತ ಸಾಗುತ್ತಿದೆ. ಪರ್ಶಿಯನ್ ಕೊಲ್ಲಿಯಿಂದ ಸುರಕ್ಷಿತವಾಗಿ ಸ್ಥಳಾಂತರಿಸಲ್ಪಟ್ಟ ಬಳಿಕ ಎಂವಿ ಸನ್ ಶೈನ್ ಎಲ್ ಪಿ ಜಿ ಟ್ಯಾಂಕರ್ ಈಗ ಭಾರತದ ಕಡೆ ಪ್ರಯಾಣ ಮುಂದುವರಿಸಿದೆ.

ವರದಿಗಳ ಪ್ರಕಾರ, ಎಮ್ ವಿ ಸ್ಯಾಂಕ್ಷನ್ ಭಾರತಕ್ಕೆ ತೆರಳುತ್ತಿರುವ 15 ನೇ ಎಲ್ ಪಿ ಜಿ ಹಡಗು ಆಗಿದೆ. ಭಾರತೀಯ ನೌಕಾಪಡೆ ಸೇರಿದಂತೆ ಹಲವು ಸಂಸ್ಥೆಗಳು ಸಮನ್ವಯದಿಂದ ಟ್ಯಾಂಕರ್ ಸುರಕ್ಷಿತ ಸಾಗಣೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿವೆ ಎಂದು ತಿಳಿದು ಬಂದಿದೆ.

ಈ ನಡುವೆ, ಅಮೆರಿಕದೊಂದಿಗೆ ಸದನ ವಿರಾಮದ ಸಂದರ್ಭದಲ್ಲೂ ಸಶಸ್ತ್ರ, ಪಡೆಗಳು ಸಂಪೂರ್ಣ ಸಿದ್ಧವಾಗಿವೆ ಎಂದು ಇರಾನಿನ ಸೇನಾ ವಕ್ತಾರ್ ಬ್ರಿಗಿಡಿಯರ್ ಜನರಲ್ ಮೊಹಮ್ಮದ ಅಕ್ರಮಿ ನಿಯಾ ಹೇಳಿದ್ದಾರೆ. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನ ನೌಕಾಪಡೆ ಹಾರ್ಮುಜ್ ಜಲಸಂಧಿಯ ಪಶ್ಚಿಮ ಭಾಗವನ್ನು ನಿಯಂತ್ರಿಸುತ್ತಿದ್ದರೆ, ನಿಯಮಿತ ನೌಕಾಪಡೇ ಪೂರ್ವ ಭಾಗವನ್ನು ನಿಯಂತ್ರಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

Sponsored

ದೇಶದ ಹಿತಾಸಕ್ತಿಗೆ ವಿರೋಧವಾಗಿ ಯಾವುದೇ ಶತ್ರು ಚಟುವಟಿಕೆ ನಡೆದರೆ ಅದನ್ನು ತಡೆಯಲಾಗುವುದು ಎಂದು ಇರಾನ್ ಸೇನಾ ವಕ್ತಾರರು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಾಗತಿಕ ಇಂಧನ ಸರಬರಾಜು ಮತ್ತು ಸಾಗಾಟದ ಮೇಲೆ ಈ ಪರಿಸ್ಥಿತಿಯ ಪರಿಣಾಮಗಳ ಬಗ್ಗೆ ಚರ್ಚೆ ಮುಂದುವರೆದಿದೆ.

ಪಶ್ಚಿಮ ಏಷ್ಯಾ ಸಂಘರ್ಷದಿಂದ ಉಂಟಾದ ತೈಲ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜಾಗತಿಕ ತೈಲ ಪೂರೈಕೆಯಲ್ಲಿ ಗಂಭೀರ ವ್ಯತ್ಯಯ ಉಂಟಾಗಿದೆ ಎಂದು ಅಂತಾರಾಷ್ಟ್ರೀಯ ಇಂಧನ ಸಂಸ್ಥೆ (IEA) ಅಂದಾಜಿಸಿದೆ. ಪ್ರತಿ ದಿನ ಸುಮಾರು 39 ಲಕ್ಷ ಬ್ಯಾರೆಲ್ ತೈಲ ಕೊರತೆ ಉಂಟಾಗುತ್ತಿದೆ ಎಂದು ತನ್ನ ಇತ್ತೀಚಿನ ತೈಲ ಮಾರುಕಟ್ಟೆ ವರದಿಯಲ್ಲಿ IEA ತಿಳಿಸಿದೆ.

ಪಶ್ಚಿಮ ಏಷ್ಯಾದಲ್ಲಿ ಯುದ್ಧ ಆರಂಭವಾಗಿ 10 ವಾರಗಳಿಗೂ ಹೆಚ್ಚು ಸಮಯವಾಗಿದ್ದು, ಇದರ ಪರಿಣಾಮವಾಗಿ ಪ್ರಮುಖ ಸಾಗಣೆ ಮಾರ್ಗವಾದ ಹಾರ್ಮುಜ್ ಜಲಸಂಧಿಯ ಮೂಲಕ ತೈಲ ಸಾಗಣೆಗೆ ಅಡ್ಡಿಯಾಗುತ್ತಿದೆ. ಇದರಿಂದ ಜಾಗತಿಕ ತೈಲ ಪೂರೈಕೆ ಸರಪಳಿ ತೀವ್ರ ಒತ್ತಡಕ್ಕೆ ಒಳಗಾಗಿದೆ.

IEA ವರದಿಯ ಪ್ರಕಾರ, ಈ ಅಡಚಣೆಯಿಂದಾಗಿ ಜಾಗತಿಕ ತೈಲ ದಾಸ್ತಾನುಗಳು ದಾಖಲೆಯ ವೇಗದಲ್ಲಿ ಕಡಿಮೆಯಾಗುತ್ತಿದ್ದು, ಇಂಧನ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಹೆಚ್ಚುತ್ತಿದೆ. ಪರಿಸ್ಥಿತಿ ಮುಂದುವರಿದರೆ ಬೆಲೆ ಏರಿಕೆ ಹಾಗೂ ಪೂರೈಕೆ ಕೊರತೆ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

Sponsored

ಪಶ್ಚಿಮ ಏಷ್ಯಾದಲ್ಲಿ ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ಯುದ್ಧದಿಂದ ಉಂಟಾದ ಸಂಘರ್ಷವು ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ತೈಲ ಹಾಗೂ ಎಲ್ ಪಿ ಜಿ ಸಾಗಣೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಇಂಧನ ಪೂರೈಕೆ ಸರಪಳಿಯಲ್ಲಿ ಅನಿಶ್ಚಿತತೆ ಹೆಚ್ಚಾಗಿದೆ.

ಈ ಹಿನ್ನೆಲೆಯಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರ ದೇಶದ ಜಗತೆಗೆ ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಮಿತವಾಗಿ ಮಾಡಲು ಮನವಿ ಮಾಡಿದ್ದಾರೆ. ಜಾಗತಿಕ ಆರ್ಥಿಕ ಒತ್ತಡಗಳನ್ನು ಎದುರಿಸಲು ಹಾಗೂ ಇಂಧನ ಸಂಪತ್ಮೂಲಗಳನ್ನು ಸಂರಕ್ಷಿಸಲು ಈ ಕ್ರಮ ಅಗತ್ಯ ಎಂದು ಅವರು ತಿಳಿಸಿದ್ದಾರೆ.

ಅದೇ ವೇಳೆ, ಇಂಧನ ಬಳಿಕೆಯನ್ನು ಕಡಿಮೆ ಮಾಡುವುದರ ಜೊತೆಗೆ ಒಂದು ವರ್ಷದವರೆಗೆ ಅನಗತ್ಯ ಚಿನ್ನ ಖರೀದಿಸದಂತೆ ಪ್ರಧಾನಿ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಯುದ್ಧ ಹಾಗೂ ಪುರಕ್ಕೆ ಅಡಚಣೆಯಿಂದ ಉಂಟಾಗುವ ಆರ್ಥಿಕ ಪರಿಣಾಮಗಳನ್ನು ನಿಭಾಯಿಸಲು ದೇಶದ ಜನರ ಸಹಾಯಕ ಮುಖ್ಯ ಎಂದು ಅವರು ಹೇಳಿದ್ದಾರೆ.

ಈ ಬೆಳವಣಿಗೆಗಳು ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು ಮುಂದಿನ ದಿನಗಳಲ್ಲಿ ತೈಲ ಬೆಲೆಗಳ ಮೇಲೆ ಪರಿಣಾಮ ಬೀರುವ ಸಾದ್ಯತೆ ಇದೆ

Sponsored

Also Read:

ಪೋಕ್ಸೋ ಆರೋಪ: ವಚನಾನಂದ ಸ್ವಾಮೀಜಿ ವಿಚಾರಣೆ - ಮಠದ ಭಕ್ತರ ಆಕ್ರೋಶ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online