<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Sports

ಆರ್ಸಿಬಿ ಕನಸು ಭಂಗ! ಲಕ್ನೋ ಗೆ ಥ್ರಿಲ್ಲಿಂಗ್ 9 ರನ್ ಗೆಲುವು

ಆರ್ಸಿಬಿ ಕನಸು ಭಂಗ! ಲಕ್ನೋ ಗೆ ಥ್ರಿಲ್ಲಿಂಗ್ 9 ರನ್  ಗೆಲುವು
Summary: Royal Challengers Bangalore suffered a 9-run defeat in the match against Lucknow Super Giants.

belagavi news :

ಲಕ್ನೋ ಸೂಪರ್ ಜೆಂಟ್ಸ್ ತಂಡವೂ ಅದ್ಬುತ ಪ್ರದರ್ಶನದೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 9 ರನ್ಗಳ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮಿಚೆಲ್ ಮಾರ್ಷ್ ಅವರ ಸ್ಫೋಟಕ ಶತಕ ಮತ್ತು ಪ್ರಿನ್ಸ್ ಯಾದವ್ ಅವರ ಪರಿಣಾಮಕಾರಿ ಬೌಲಿಂಗ್ ತಂಡದ ಗೆಲುವಿಗೆ ಪ್ರಮುಖ ಕಾರಣವಾಯಿತು. ಮಾರ್ಷ್ ಅವರ ಅದ್ಭುತ ಶತಕಾಗಿ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯು ಲಭಿಸಿತು.

ಐಪಿಎಲ್ 2026 50ನೇ ಪಂದ್ಯವು ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆಯಿತು. ಮಳೆಯಿಂದಾಗಿ ಪಂದ್ಯವನ್ನು ತಲಾ ಕಡಿತಗೊಳಿಸಲಾಯಿತು. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ಆರ್ಸಿಬಿ ಎದುರಾಳಿ ಲಕ್ನೋ ಮೂರು ವಿಕೆಟ್ ಗೆ 29 ರನ್ ಗಳಿಸಿತು. ಡಕ್ ವರ್ಥ್ -ಲೂಯಿಸ್ ನಿಯಮದ ಪ್ರಕಾರ ಆರ್ಸಿಬಿಗೆ ನೀಡಲಾಯಿತು. ಪ್ರತಿಕ್ರಿಯೆಯಾಗಿ ಆರ್ಸಿಬಿ 19 ಓವರ್ ಗಳಲ್ಲಿ 6 ವಿಕೆಟ್ ಗೆ 203 ರನ್ ಮಾತ್ರ ಗಳಿಸಿ ಸೋಲನ್ನು ಅನುಭವಿಸಿತು. ಈ ಜಯದೊಂದಿಗೆ ಲಕ್ನೋ ತಂಡವು ಸತತ ಸೋಲಿನ ಸರಣಿಗೆ ಅಂತ್ಯವಿಟ್ಟು ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಲಕ್ನೋ ಸೂಪರ್ ಜೆಂಟ್ಸ್ ಪರ ಆರಂಭಿಕ ಬ್ಯಾಟ್ಸ್ಮನ್ ಮಿಚೆಲ್ ಮಾರ್ಷ್ ಶತಕ ದಾಟದಲ್ಲಿ ಅಬ್ಬರಿಸಿದರು. ಅವರು ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿ, 49 ಎಸೆತಗಳಲ್ಲಿ ಶತಕ ಮುಟ್ಟಿದರು. ಒಟ್ಟು 55 ಎಸೆತಗಳಲ್ಲಿ 111 ರನ್ ಗಳಿಸಿ ಅವರು ಔಟಾದರು. ಇನ್ನೊಂದು ತುದಿಯಲ್ಲಿ ಅರ್ಶಿನ್ ಕುಲಕರ್ಣಿ 17 ರನ್ ಗಳಿಗೆ ವಿಕೆಟ್ ಪಡೆದುಕೊಂಡರೆ, ನಿಕೋಲಸ್ ಪೂರನ್ 38 ರನ್ ಗಳ ಕೊಡುಗೆ ನೀಡಿದರು. ನಾಯಕ ರಿಷಬ್ ಪಂತ್ 10 ಎಸೆತಗಳಲ್ಲಿ 32 ರನ್ ಗಳಿಸಿ ಅಜಯರಾಗಿ ಉಳಿದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಜೋಶ್ ಹ್ಯಾಜ್ಲೆವುಡ್, ಕೃನಾಲ್ ಪಾಂಡ್ಯ ಹಾಗೂ ರಸಿಕ್ ದಾರ್ ಒಂದೊಂದು ವಿಕೆಟ್ ಪಡೆದರು

Sponsored

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಇನ್ನಿಂಗ್ಸ್ ಆರಂಭಿಸಿದ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟ್ ಆಗಿ ನಿರಾಸೆ ತಂದರು.ಜಾಕೋಬ್ ಬೆಥೆಲ್ ಕೇವಲ 4 ರನ್ಗಳಿಗೆ ವಿಕೆಟ್ ಕಳೆದುಕೊಂಡರು. ರಜತ್ ಪಾಟಿದಾರ್ 24 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿ, 61 ರನ್ ಗಳಿಸಿ ಔಟಾದರು. ದೇವದತ ಪಡಿಕಲ್ 34 ರನ್ ಗಳ ಕೊಡುಗೆ ನೀಡಿದರು. ಜಿತೇಶ್ ಶರ್ಮಾ ಒಂದು 1 ರನ್ ಗೆ ನಿರ್ಗಮಿಸಿದರು. ಟಿಮ್ ಡೆವಿಡ್ 17 ಎಸೆತಗಳಲ್ಲಿ 40 ರನ್ ಗಳಿಸಿ ತಂಡಕ್ಕೆ ವೇಗ ನೀಡಿದರೆ,ಕರ್ನಲ್ ಪಾಂಡ್ಯ 28ರನ್ ಗಳಿಸಿದರು. ರೊಮಾರಿಯೋ ಶೆಫರ್ಡ್ 23 ರನ್ ಗಳಿಸಿ ಅಜಯರಾಗಿ ಉಳಿದರು. ಲಕ್ನೋ ಸೂಪರ್ ಚೇಂಜ್ ಪರ ಪ್ರಿನ್ಸ್ ಯಾದವ್ ಮೂರು ವಿಕೆಟ್ ಪಡೆದು ಮಿಂಚಿದರೆ, ಶಹಬಾಜ್ ಅಹ್ಮದ್ 2 ವಿಕೆಟ್ ಕಿತ್ತು ಲಕ್ನೋ ಗೆಲುವಿಗೆ ಮಹತ್ವದ ಪಾತ್ರವಹಿಸಿದರು.

Also Read:

TCS Nashik Case: ಮತಾಂತರ ಮತ್ತು ಕಿರುಕುಳ ಆರೋಪದಲ್ಲಿ ನಿದಾ ಖಾನ್ ಸೆರೆ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online