ಜೈಲಿನ ಪ್ರಕರಣ: ವಿಜಯಲಕ್ಷ್ಮೀ ಹೆಸರು ಹೇಳಿದ ಧನ್ವೀರ್
ಜೈಲಿನಲ್ಲಿ ಕೈದಿಗಳ ಮದ್ಯದ ಪಾರ್ಟಿ ವಿಡಿಯೋ ವೈರಲ್ ಪ್ರಕರಣದಲ್ಲಿ ನಟ ಧನ್ವೀರ್ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹೆಸರನ್ನು ಬಾಯ್ಬಿಟ್ಟಿದ್ದಾರೆ. ಈ ವಿಡಿಯೋವನ್ನು ವಕೀಲರಿಂದ ಪಡೆದು ವಿಜಯಲಕ್ಷ್ಮೀಗೆ ಕಳುಹಿಸಿದ್ದಾಗಿ ಧನ್ವೀರ್ ವಿಚಾರಣೆ ವೇಳೆ ತಿಳಿಸಿದ್ದಾರೆ. ಇದರಿಂದ ವಿಜಯಲಕ್ಷ್ಮೀ ಸಹ ತನಿಖೆ ಎದುರಿಸುವ ಸಾಧ್ಯತೆ ಇದೆ.
ಮೆಟಾಗೆ ಪತ್ರ
ವೀಡಿಯೋ ಅಪ್ಲೋಡ್ ಮಾಡಿದ್ದು ಯಾರು ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಸಂಬಂಧ METAಗೆ ಈಗಾಗಲೇ ಪರಪ್ಪನ ಅಗ್ರಹಾರ ಪೊಲೀಸರು ಇಮೇಲ್ ಮೂಲಕ ಮಾಹಿತಿ ಕೇಳಿದ್ದಾರೆ. ವಿಚಾರಣೆ ವೇಳೆ ಕೈದಿಗಳು ಹೇಳಿದ್ದೇ ಬೇರೆ. ‘2023ರಲ್ಲಿ ಮಾಡಿದ ವಿಡಿಯೋ ಇದು. ಈ ವಿಡಿಯೋ ಮಾಡಿದ ಮೊಬೈಲ್ ಸೀಜ್ ಆಗಿದೆ’ ಎಂದು ವಿಚಾರಣೆ ವೇಳೆ ಕೈದಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಜೈಲಿನಲ್ಲಿ ಕೈದಿಗಳು ಮದ್ಯದ ಪಾರ್ಟಿ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಕೈದಿಗಳಿಗೆ ಜೈಲಿನ ರಾಜಾತಿಥ್ಯ ಮುಂದುವರಿದಿದೆ ಎಂಬುದಕ್ಕೆ ಸಾಕ್ಷಿ ಒದಗಿಸುವ ರೀತಿಯಲ್ಲಿ ಇತ್ತು. ಈ ವಿಡಿಯೋನ ಲೀಕ್ ಮಾಡಿದ ಆರೋಪವನ್ನು ನಟ ಹಾಗೂ ದರ್ಶನ್ ಆಪ್ತ ಧನ್ವೀರ್ ಮೇಲೆ ಹೊರಿಸಲಾಗಿದೆ. ಈ ಪ್ರಕರಣದ ವಿಚಾರಣೆ ಮಾಡುವಾಗ ಧನ್ವೀರ್ ಅವರು ದರ್ಶನ್ ಪತ್ನಿ ವಿಜಯಲಕ್ಷ್ಮೀ ಹೆಸರನ್ನು ಹೇಳಿದ್ದಾರೆ. ಈಗ ಈ ಪ್ರಕರಣದಲ್ಲಿ ವಿಜಯಲಕ್ಷ್ಮೀ ಅವರು ತನಿಖೆ ಎದುರಿಸೋ ಸಾಧ್ಯತೆ ಇದೆ.
ಧನ್ವೀರ್ಗೆ ಈ ವಿಡಿಯೋ ಸಿಕ್ಕಿದ್ದು ವಕೀಲರಿಂದ. ನಂತರ ಈ ವಿಡಿಯೋನ ಅವರು ದರ್ಶನ್ ಪತ್ನಿ ವಿಜಯಲಕ್ಷ್ಮೀಗೆ ಕಳುಹಿಸಿದ್ದಾರೆ. ಇದನ್ನು ವಿಚಾರಣೆ ವೇಳೆ ಹೇಳಿದ್ದಾರೆ. ‘ನಾನು ವೀಡಿಯೋ ವೈರಲ್ ಮಾಡಿಲ್ಲ. ಈ ವಿಡಿಯೋ ಹೇಗೆ ವೈರಲ್ ಆಗಿದೆ ಅನ್ನೋದು ಗೊತ್ತಿಲ್ಲ. ನಾನು ವಿಜಯಲಕ್ಷ್ಮೀ ಅವರಿಗೆ ವಿಡಿಯೋನ ಫಾರ್ವರ್ಡ್ ಮಾಡಿದ್ದೆ’ ಎಂದು ಧನ್ವೀರ್ ಮಾಹಿತಿ ನೀಡಿದ್ದಾರೆ.
ಈ ಮೊದಲು ಧನ್ವೀರ್ ಅವರು ವಿಚಾರಣೆ ಎದುರಿಸಿದ್ದರು. ಈ ವೇಳೆ ಅವರು ಯಾವುದೇ ವಿಷಯ ಬಾಯ್ಬಿಟ್ಟಿರಲಿಲ್ಲ. ಇದಾದ ಬಳಿಕ ಮತ್ತೆ ಅವರಿಗೆ ನೋಟಿಸ್ ನೀಡಲಾಯಿತು. ಎರಡನೇ ಬಾರಿಗೆ ಧನ್ವೀರ್ ಅವರು ಪೊಲೀಸರ ಎದುರು ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ಈ ವೇಳೆ ಹಲವು ವಿಷಯಗಳನ್ನು ರಿವೀಲ್ ಮಾಡಿದ್ದಾರೆ ಎನ್ನಲಾಗಿದೆ. ವಿಡಿಯೋ ಕಳುಹಿಸಿದ್ದು ಯಾರು ಎಂಬುದನ್ನು ಕೂಡ ಅವರು ತಿಳಿಸಿದ್ದಾರೆ.
ವಿಜಯಲಕ್ಷ್ಮೀ ಹೆಸರು ಹೇಳುತ್ತಿದ್ದಂತೆ ಈ ವಿಷಯವನ್ನು ತನಿಖಾಧಿಕಾರಿಗಳು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ವಿಜಯಲಕ್ಷೀ ಅವರನ್ನು ವಿಚಾರಣೆಗೆ ಕರೆಸೋ ಬಗ್ಗೆ ಚರ್ಚೆ ನಡೆದಿದೆ. ಒಂದೊಮ್ಮೆ ಧನ್ವೀರ್ ಅವರು ವಿಚಾರಣೆಗೆ ಸರಿಯಾಗಿ ಸ್ಪಂದಿಸದೇ ಇದ್ದರೆ ವಿಜಯಲಕ್ಷ್ಮೀ ಅವರನ್ನು ವಿಚಾರಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದರಿಂದ ಅವರಿಗೆ ಸಂಕಷ್ಟ ಹೆಚ್ಚುವ ಸಾಧ್ಯತೆ ಇದೆ.
ಇನ್ನಷ್ಟು ಓದಿರಿ:
IND vs SA: ಯಾರಾಗ್ತಾರೆ ಟೀಮ್ ಇಂಡಿಯಾ ನಾಯಕ?