Belagavi news:
ದೇಶದ ಇತಿಹಾಸದಲ್ಲೇ ಹೊಸ ಚರ್ಚೆಗೆ ಕಾರಣವಾಗುವಂತಹ ಬೆಳವಣಿಗೆ ಎದುರಾಗಿದೆ. ಹಲವು ದಶಕಗಳಿಂದ ಹಿಂದೂ - ಮುಸ್ಲಿಂ ಸಮುದಾಯಗಳ ನಡುವೆ ಸೂಕ್ಷ್ಮ ಹಾಗೂ ಭಾವನಾತ್ಮಕ ವಿಷಯವಾಗಿದ್ದ ಗೋಹತ್ಯೆ ವಿಚಾರದಲ್ಲಿ ಅಚ್ಚರಿಯ ತಿರುವು ಕಂಡು ಬಂದಿದೆ.
" ಇನ್ಮುಂದೆ ಗೋಹತ್ಯೆ ಮಾಡುವುದಿಲ್ಲ, ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು" ಎಂದು ಮುಸ್ಲಿಂ ಸಮುದಾಯದ ಕೆಲ ಪ್ರಮುಖ ಧರ್ಮಗುರುಗಳು ಹಾಗೂ ಸಂಘಟನೆಗಳು ಒಟ್ಟಾಗಿ ಆಗ್ರಹಿಸಿರುವುದು ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
ಗೋ ಹತ್ಯೆ ವಿಚಾರವು ಈ ಹಿಂದೆ ಹಲವಾರು ಪ್ರದೇಶಗಳಲ್ಲಿ ಉದ್ವಿಗ್ನತೆ, ಪ್ರತಿಭಟನೆಗಳು ಮತ್ತು ಗಲಭೆಗಳಿಗೆ ಕಾರಣವಾಗಿದೆ ಹಿನ್ನೆಲೆ, ಇದೀಗ ಬಂದಿರುವ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಕೆಲವರು ಇನ್ಮುಂದೆ ಸಾಮಾಜಿಕ ಸೌಹಾರ್ದದತ್ತದ ಹೆಜ್ಜೆಯಂದು ವಿಶ್ಲೇಷಿಸುತ್ತಿದ್ದರೆ, ಮತ್ತೊಂದು ವಲಯ ಇದರ ಹಿಂದೆ ರಾಜಕೀಯ ಅಥವಾ ತಂತ್ರಾತ್ಮಕ ಅಜೆಂಡಾ ಇದೆಯೇ ಎಂಬ ಪ್ರಶ್ನೆ ಎತ್ತುತ್ತಿದೆ.
ಈ ಬೆಳವಣಿಗೆ ಸಾಮಾಜಿಕ ಮತ್ತು ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಇದರ ಪರಿಣಾಮ ಏನಾಗಬಹುದು ಎಂಬುದರ ಮೇಲೆ ಗಮನ ಕೇಂದ್ರೀಕೃತವಾಗಿದೆ.
ಈ ಸುದ್ದಿ ಕೇಳಿದರೆ ನಂಬಲು ಕಷ್ಟವಾಗುವಂತಿದ್ದರೂ, ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಇದೇ ವಿಚಾರದ ಬಗ್ಗೆ ಚರ್ಚೆಗಳು ನಡೆಯುತ್ತಿರುವುದು ಗಮನ ಸೆಳೆಯುತ್ತಿದೆ.
ಮುಸ್ಲಿಂ ಧರ್ಮಗುರುಗಳೇ ಮುಂದೆ ಬಂದು, ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಹಸುಗಳನ್ನು ಬಲಿ ನೀಡಬೇಡಿ ಎಂದು ಸಾರ್ವಜನಿಕವಾಗಿ ಮನವಿ ಮಾಡುತ್ತಿರುವುದು ಈ ಬೆಳವಣಿಗೆಗೆ ಮತ್ತಷ್ಟು ಮಹತ್ವ ನೀಡಿದೆ. ಈ ಹೇಳಿಕೆಗಳು ಸಾಮಾಜಿಕ ವಲಯದಲ್ಲಿ ವಿಭಿನ್ನ ಪ್ರತಿಕ್ರಿಯೆಗಳನ್ನು ಹುಟ್ಟು ಹಾಕಿದ್ದು, ದೇಶದಾದ್ಯಂತ ಚರ್ಚೆಗೆ ಕಾರಣವಾಗಿವೆ.
ಇದೀಗ ಮುನ್ನೆಲೆಗೆ ಬಂದಿರುವ ಹೇಳಿಕೆಗಳು ಏಕೆ ಹೊರ ಬರುತ್ತಿವೆ, ಅದರ ಹಿಂದೆ ಇರುವ ಸಾಮಾಜಿಕ- ರಾಜಕೀಯ ಹಿನ್ನೆಲೆ ಏನು ಎಂಬ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದೆ. ಗೋ ಸಂರಕ್ಷಣೆ, ಹಬ್ಬದ ಆಚರಣೆಗಳು ಹಾಗೂ ಧಾರ್ಮಿಕ ಭಾವನೆಗಳು ಒಂದೇ ಸಮಯದಲ್ಲಿ ಎದುರಾಗುತ್ತಿರುವುದರಿಂದ ಈ ವಿಷಯ ಹೆಚ್ಚು ಸೂಕ್ಷ್ಮವಾಗಿ ಕಾಣುತ್ತಿದೆ.
ಭಾರತದಲ್ಲಿಗೋ ಸಂರಕ್ಷಣೆಗೆ ಸಂಬಂಧಿಸಿದಂತೆ ರಾಜ್ಯವಾರು ಕಾನೂನುಗಳು ಜಾರಿಯಲ್ಲಿವೆ. ಕೆಲವು ರಾಜ್ಯಗಳಲ್ಲಿ ಗೋ ಹತ್ಯೆಗೆ ನಿರ್ಭಂಧಗಳಿದ್ದು, ಕೆಲವು ಕಡೆ ನಿಯಂತ್ರಿತ ಅನುಮತಿಗಳು ಇವೆ. ಸಂವಿಧಾನದಲ್ಲಿ ರಾಜ್ಯ ನೀತಿ ನಿರ್ದೇಶನ ತತ್ವಗಳ ಅಡಿಯಲ್ಲಿ ಗೋ ಸಂರಕ್ಷಣೆಗೆ ಒತ್ತು ನೀಡುವ ವಿಧಿಗಳು ಉಲ್ಲೇಖಗೊಂಡಿವೆ. ಇದೇ ವೇಳೆ ಧಾರ್ಮಿಕ ಸ್ವಾತಂತ್ರ್ಯಕ್ಕೂ ಸಂವಿಧಾನದಲ್ಲಿ ಭದ್ರತೆ ನೀಡಲಾಗಿದೆ.
ಇಸ್ಲಾಮಿಕ ಧಾರ್ಮಿಕ ನಂಬಿಕೆಗಳ ಪ್ರಕಾರ, ಕೆಲ ಹಬ್ಬಗಳಲ್ಲಿ ಪ್ರಾಣಿಬಲಿ ಆಚರಣೆ ಇದ್ದರೂ, ಅದನ್ನು ಕಾಲ, ಪರಿಸ್ಥಿತಿ ಹಾಗು ಸ್ಥಳೀಯ ಕಾನೂನುಗಳಿಗೆ ಅನುಗುಣವಾಗಿ ಪಾಲಿಸುವ ಕುರಿತು ವಿಭಿನ್ನ ವ್ಯಾಖ್ಯಾನಗಳಿವೆ ಎಂದು ಧಾರ್ಮಿಕ ತಜ್ಞರು ಹೇಳುತ್ತಾರೆ.
ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಗಳು ಹಲವು ಸಂದರ್ಭಗಳಲ್ಲಿ ಸಾರ್ವಜನಿಕ ಶಾಂತಿ, ಧಾರ್ಮಿಕ ಸ್ವಾತಂತ್ರ್ಯ ಹಾಗೂ ಕಾನೂನುಗಳ ನಡುವಿನ ಸಮತೋಲನವನ್ನು ಮುಖ್ಯವಾಗಿ ಪರಿಗಣಿಸಿವೆ.
ಈ ಹಿನ್ನೆಲೆಯಲ್ಲಿ ಇತ್ತೀಚಿನ ಹೇಳಿಕೆಗಳು ಮತ್ತು ಮನವಿಗಳು ಸಾಮಾಜಿಕ ಸೌಹಾರ್ದ, ಕಾನೂನು ಪಾಲನೆ ಹಾಗೂ ರಾಜಕೀಯ ಚರ್ಚೆಗಳ ನಡುವಿನ ಸಮಿಕರಣವಾಗಿ ಕಾಣುತ್ತಿವೆ. ಇದರ ನಿಖರ ಪರಿಣಾಮ ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.
Also Read:
ಶಿವರಾಜ್ ಕುಮಾರ್ ಕಣ್ಣುಗಳ ಸೀಕ್ರೆಟ್ ಬಿಚ್ಚಿಟ್ಟ ಜಾಹ್ನವಿ ಕಪೂರ್! ನಟಿ ಹೇಳಿದ್ದೇನು?