<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Sports

ಕೊನೆಯ ಎಸೆತದಲ್ಲಿ ಆರ್ ಸಿಬಿಗೆ ಥ್ರಿಲ್ಲಿಂಗ್ ಜಯ! ಮುಂಬೈ ಇಂಡಿಯನ್ಸ್ ಟೂರ್ನಿಗೆ ಗುಡ್ ಬೈ!

ಕೊನೆಯ ಎಸೆತದಲ್ಲಿ ಆರ್ ಸಿಬಿಗೆ ಥ್ರಿಲ್ಲಿಂಗ್ ಜಯ! ಮುಂಬೈ ಇಂಡಿಯನ್ಸ್ ಟೂರ್ನಿಗೆ ಗುಡ್ ಬೈ!
Summary: In a thrilling match between Royal Challengers Bangalore and Mumbai Indians, the Bengaluru team put in a brilliant performance and registered a comfortable victory over Mumbai Indians. RCB, playing a balanced game in both batting and bowling, made its dominance clear in the match.

belagavi news :

ರಾಯಪುರದಲ್ಲಿ ನಡೆದ ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಂತಿಮ ಕ್ಷಣದವರೆಗೂ ಸಾಗಿದ ಹೋರಾಟದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಎರಡು ವಿಕೆಟ್ ಗಳಿಂದ ಭರ್ಜರಿ ಜಯ ಸಾಧಿಸಿದೆ. 167 ರನ್ ಗಳ ಗುರಿಯನ್ನು ಬೆನ್ನಟ್ಟಿದ ಹಾಲಿ ಚಾಂಪಿಯನ್ ಬೆಂಗಳೂರು ತಂಡವು ಕೊನೆಯ ಎಸೆತದಲ್ಲಿ ಗುರಿ ತಲುಪಿ ಪಂದ್ಯವನ್ನು ತನ್ನದಾಗಿಸಿಕೊಂಡಿತು. ಈ ಗೆಲುವಿನೊಂದಿಗೆ ಆರ್ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದ್ದು, ಮುಂಬೈ ಇಂಡಿಯನ್ಸ್ ಐಪಿಎಲ್ 2026 ಪ್ಲೇ ಆಫ್ ಹೋರಾಟದಿಂದ ಹೊರ ಬಿದ್ದಿದೆ.

ತಂಡದ ಗೆಲುವಿನಲ್ಲಿ ಭುವನೇಶ್ವರ್ ಕುಮಾರ್ ಮತ್ತು ಕ್ರುನಾಲ್ ಪಾಂಡ್ಯ ಪ್ರಮುಖ ಪಾತ್ರ ವಹಿಸಿದರು. ಮೊದಲ ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಆರಂಭದಲ್ಲಿ ತಂಡಕ್ಕೆ ಒಳಗಾಗಿ ಕೇವಲ ಮೂರು ಓವರ್ ಗಳಲ್ಲಿ ತಮ್ಮ ಆರಂಭಿಕ ಮೂರು ಬ್ಯಾಟ್ಸ್ ಮನ್ ಗಳನ್ನು ಕಳೆದುಕೊಂಡಿತು. ಭುವನೇಶ್ವರ್ ಕುಮಾರ್ ಮಾರಕಧಾಳಿಯಿಂದ ರೋಹಿತ್ ಶರ್ಮ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ಸತತ ಎರಡು ಎಸೆತಗಳಲ್ಲಿ ಔಟ್ ಮಾಡಿ ಮುಂಬೈ ತಂಡವನ್ನು ಸಂಕಷ್ಟಕ್ಕೆ ತಳ್ಳಿದರು. ರೋಹಿತ್ ಶರ್ಮ 10 ಎಸೆತಗಳಲ್ಲಿ 22 ರನ್ ಗಳಿಸಿದರೆ, ಸೂರ್ಯ ಕುಮಾರ್ ಯಾದವ್ ಖಾತೆ ತೆರೆಯದೆ ನಿರ್ಗಮಿಸಿದರು.

ರಿಕಲ್ಟನ್ ಕೇವಲ ಎರಡು ರನ್ ಗಳಿಸಿ ಬೇಗನೆ ಔಟ್ ಆಗಿದ್ದು, ಮುಂಬೈ ಇನ್ನಿಂಗ್ಸ್ ಆರಂಭದಲ್ಲೇ ಕುಸಿತ ಕಂಡಿತು. ಈ ರೋಚಕ ಹೋರಾಟದಲ್ಲಿ ಆರ್ಸಿಬಿ ತಂಡ ಸಮತೋಲನದ ಆಟ ಪ್ರದರ್ಶಿಸಿ ಕೊನೆಯ ಕ್ಷಣದವರೆಗೂ ಉತ್ಸಾಹವನ್ನು ಉಳಿಸಿಕೊಂಡು ಜಯವನ್ನು ತನ್ನದಾಗಿಸಿಕೊಂಡಿತು.

Sponsored

ರಾಯಪುರದಲ್ಲಿ ನಡೆದ ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವೆ ಸಮಬಲದ ಹೋರಾಟ ಕಂಡುಬಂದಿತು. ಮೊದಲ ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಪರ ನಮನ್ ಧೀರ್ 47 ರನ್ಗಳಿಗೆ ಅರ್ಧ ಶತಕವನ್ನು ತಪ್ಪಿಸಿಕೊಂಡರೆ, ತಿಲಕ್ ವರ್ಮ 57 ರನ್ಗಳೊಂದಿಗೆ ಅರ್ಧಶತಕ ಪೂರೈಸಿದರು. ಅವರು ಕ್ರಿಸ್ ನಲ್ಲಿ ಇದ್ದಾಗ ಮುಂಬೈ ದೊಡ್ಡ ಮೊತ್ತಕ್ಕೆ ಸಾಗುವ ಸೂಚನೆ ನೀಡಿತು. ಆದರೆ 18ನಲ್ಲಿ ಭುವನೇಶ್ವರ್ ಕುಮಾರ್- ತಿಲಕ್ ವರ್ಮ ಅವರನ್ನು ಔಟ್ ಮಾಡುವ ಮೂಲಕ ಮುಂಬೈಗೆ ಬ್ರೇಕ್ ಹಾಕಿದರು.

ಅಂತಿಮವಾಗಿ ಮುಂಬೈ ಇಂಡಿಯನ್ಸ್ 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 166 ರನ್ಗಳಿಗೆ ಸೀಮಿತವಾಯಿತು. ಭುವನೇಶ್ವರ್ ಕುಮಾರ್ 4 ವಿಕೆಟ್ ಗಳನ್ನು ಪಡೆದು ಮಾರಕ ಪ್ರದರ್ಶನ ನೀಡಿದರು. ಆರ್ಸಿಬಿ ಇವಿನಿಂಗ್ಸ್ ಆರಂಭವು ಕಷ್ಟಕರವಾಗಿತ್ತು. ದೀಪಕ್ ಚಾಹರ್ ಅವರ ಭರ್ಜರಿ ಬೋಲಿಂಗ್ನಲ್ಲಿ ಪವರ್ ಪ್ಲೇ ಒಳಗೆ ಮೂರು ವಿಕೆಟ್ಗಳು ಉರುಳಿದವು. ಚಾಹರ್ ಮೊದಲ ಓವರ್ ನಲ್ಲಿ ವಿರಾಟ್ ಕೊಹ್ಲಿ ಅವರನ್ನು ಔಟ್ ಮಾಡಿದರು. ಕೊಹ್ಲಿ ಸತತ ಎರಡನೇ ಪಂದ್ಯದಲ್ಲೂ ಖಾತೆ ತೆರೆಯಲು ವಿಫಲರಾದರು. ನಂತರ ಅವರು ದೇವದತ್ ಪಡಿಕಲ್ ಅವರನ್ನು ಹಾಗೂ ಹಾರ್ಬಿನ್ ಬಾಷ್ ರಜಪಟ್ಟಿದಾರ್ ಅವರನ್ನು ಫೆವಿಲಿಯನ್ ಗೆ ಕಳುಹಿಸಿದರು. 39 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಬೆಂಗಳೂರು ತಂಡಕ್ಕೆ ಕ್ರುನಾಲ್ ಪಾಂಡ್ಯ ಆಸರೆಯಾದರು.

ಕ್ರುನಾರ್ ಪಾಂಡೆ ಮತ್ತು ಜಾಕೋ ಬೆಥೆಲ್ 55 ರನ್ ಗಳ ಮಹತ್ವದ ಜೊತೆಯಾಟ ನಡೆಸಿ ತಂಡವನ್ನು ಮತ್ತೆ ಪಂದ್ಯಕ್ಕೆ ತರುವಲ್ಲಿ ಯಶಸ್ವಿಯಾದರು. ಈ ರೋಚಕ ಹೋರಾಟ ಅಂತಿಮ ಓವರ್ ವರೆಗೂ ಸಾಗಿದ್ದು, ಎರಡು ತಂಡಗಳ ಮಧ್ಯೆ ತೀವ್ರ ಸ್ಪರ್ಧೆಯನ್ನು ತೋರಿಸಿತು.

ರಾಯ್ ಪುರದಲ್ಲಿ ನಡೆದ ರೋಚಕ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜ್ ಬೆಂಗಳೂರು ತಂಡವು ಅಂತಿಮ ಕ್ಷಣದವರೆಗೂ ಸಾಗಿದ ಹೋರಾಟದಲ್ಲಿ ಮುಂಬೈ ಇಂಡಿಯನ್ ವಿರುದ್ಧ ಸ್ಮರಣೆಯ ಗೆಲುವು ಸಾಧಿಸಿತು.ಜಾಕೋಬ್ ಬೆಥೆಲ್ ಔಟಾದ ನಂತರ ಅದ್ಭುತ ಪ್ರದರ್ಶನ ನೀಡಿದರು. ಕೇವಲ 32 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದ ಅವರು ಅಂತಿಮವಾಗಿ 77 ರನ್ಗಳ ಭರ್ಜರಿ ಆಡಿದರು ಮತ್ತು ತಂಡದ ಗೆಲುವಿನ ಕೇಂದ್ರಬಿಂದು ಆಗಿದ್ದರು. ಕಾಲಿನ ಗಾಯದ ಹೊರತಾಗಿಯೂ ಅವರು 18ನೇ ಓವರ್ ನಲ್ಲಿ ಎರಡು ಸಿಕ್ಸರ್ ಗಳನ್ನು ಬಾರಿಸಿ ಪಂದ್ಯವನ್ನು ಬೆಂಗಳೂರು ಪರಕ್ಕೆ ತಿರುಗಿಸಿದರು.

Sponsored

ಜಿತೇಶ್ ಶರ್ಮಾ ಕೂಡ ವೇಗ ದ 18 ರನ್ಗಳ ಕೊಡುಗೆ ನೀಡಿ ಮೂರು ಬೋಂಡರಿಗಳೊಂದಿಗೆ ಸ್ಕೋರ್ ವೇಗ ಗೊಳಿಸಿದರು. ಅವರ ಸಣ್ಣ ಆದರೆ ಮಹತ್ವದ ಇವಿನಿಂಗ್ ಒತ್ತಡದ ಕ್ಷಣದಲ್ಲಿ ತಂಡಕ್ಕೆ ನೆರವಾಯಿತು. ಅಂತಿಮ ಅವರಿಗೆ 15 ರನ್ನ ಅಗತ್ಯವಿದ್ದಾಗ ಪಂದ್ಯ ಅತ್ಯಂತ ರೋಚಕ ಸ್ಥಿತಿಗೆ ತಲುಪಿತು. ರಾಜ್ ಅಂಗದ್ ಬಾವಾ ಅವರ ಓವರ್ನಲ್ಲಿ ರೋಮಾರಿಯೋ ಶೆಫರ್ಡ್ ಔಟಾದರು, ನಂತರ ಬಂದ ಭುವನೇಶ್ವರ್ ಕುಮಾರ್ ತಕ್ಷಣವೇ ಸಿಕ್ಸರ್ ಬಾರಿಸಿ ತಂಡವನ್ನು ಒತ್ತಡವನ್ನು ಕಡಿಮೆ ಮಾಡಿದರು. ಕೊನೆಯ ಎಸೆತದಲ್ಲಿ ಎರಡು ರನ್ ಅಗತ್ಯವಿದ್ದಾಗ ರಸಿಕ್ ಸಲಾಂ ಯಶಸ್ವಿಯಾಗಿ ರನ್ ತೆಗೆದುಕೊಂಡು ಬೆಂಗಳೂರು ತಂಡಕ್ಕೆ ನಖಕಚ್ಚುವ ಜಯ ತಂದು ಕೊಟ್ಟರು. ಈ ಗೆಲುವಿನೊಂದಿಗೆ ಪಂದ್ಯವು ಐಪಿಎಲ್ 2026 ರ ಅತ್ಯಂತ ರೋಚಕ ಪಂದ್ಯಗಳಲ್ಲಿ ಒಂದಾಗಿ ದಾಖಲಾಗಿದ್ದು, ಕೊನೆಯ ಚಿತ್ರದ ಥ್ರಿಲ್ಲಿಂಗ್ ಆಗಿ ಅಭಿಮಾನಿಗಳನ್ನು ಕಟ್ಟಿ ಹಾಕಿತು.

Also Read:

2028 ರ ಸೆಮಿ ಫೈನಲ್ ಆಗ್ತಾ ಜಿ ಬಿ ಚುನಾವಣೆ? ಸಿದ್ದು ಡಿಕೆಸಿಗೆ ದೊಡ್ಡ ಅಗ್ನಿಪರೀಕ್ಷೆ!

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online