<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Politics

2028 ರ ಸೆಮಿ ಫೈನಲ್ ಆಗ್ತಾ ಜಿ ಬಿ ಚುನಾವಣೆ? ಸಿದ್ದು ಡಿಕೆಸಿಗೆ ದೊಡ್ಡ ಅಗ್ನಿಪರೀಕ್ಷೆ!

2028 ರ ಸೆಮಿ ಫೈನಲ್ ಆಗ್ತಾ ಜಿ ಬಿ ಚುನಾವಣೆ? ಸಿದ್ದು ಡಿಕೆಸಿಗೆ ದೊಡ್ಡ ಅಗ್ನಿಪರೀಕ್ಷೆ!
Summary: The GBA elections have now become a big prestige contest for the Kai Pade. This political test, which is taking place in the lead up to 2028, is seen as a major test for Chief Minister Siddaramaiah and Deputy Chief Minister DK Shivakumar.

belagavi news :

ಗ್ರೇಡರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಘೋಷಣೆಗೆ ಚುನಾವಣಾ ಆಯೋಗ ಸಿದ್ಧತೆ ಆರಂಭಿಸಿದ್ದು, ದಿನಾಂಕ ನಿಗದಿ ಮಾಡುವಂತೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ರಾಜ ರಾಜಕೀಯದಲ್ಲಿ ಚಟುವಟಿಕೆ ಗರಿಷ್ಠಗೊಂಡಿದೆ. ಈ ಬೆಳವಣಿಗೆ ಹಿನ್ನಲೆ ಆಡಳಿತ ಪಕ್ಷ ಕಾಂಗ್ರೆಸ್ ಸಂಪೂರ್ಣ ಅಲರ್ಟ್ ಆಗಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಮಾತ್ರದ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಚುನಾವಣಾ ಸಿದ್ಧತೆ, ಸಂಘಟನೆ ಬಲಪಡಿಸುವ ತಂತ್ರಗಳು ಹಾಗೂ ರಾಜಕೀಯ ಸಮೀಕರಣಗಳ ಕುರಿತು ಗಂಭೀರ ಚರ್ಚೆ ನಡೆದಿದೆ.

ಚುನಾವಣೆ ಘೋಷಣೆಯಾದರೆ ಅದು ಆಡಳಿತ ಪಕ್ಷಕ್ಕೆ ದೊಡ್ಡ ಅಗ್ನಿ ಪರೀಕ್ಷೆಯಾಗಲಿದ್ದು, ಬೆಂಗಳೂರಿನ ರಾಜಕೀಯ ಸಮರ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ನಗರ ಆಡಳಿತದ ಹಿಡಿತ ಹಾಗೂ ಜನಬೆಂಬಲದ ಅಳತೆಗೋಲಾಗಿ ಚುನಾವಣೆ ಪ್ರಮುಖ ಪಾತ್ರ ವಹಿಸಲಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಣೆ ನಡೆಯುತ್ತಿದೆ.

ಬೆಂಗಳೂರು: ಪಂಚ ರಾಜ್ಯಗಳ ಚುನಾವಣೆಯ ಬಳಿಕ ಈಗ ಕರ್ನಾಟಕ ರಾಜಕೀಯದಲ್ಲೂ ಮುಂದಿನ ಸಮರದ ಚರ್ಚೆ ತೀವ್ರಗೊಂಡಿದೆ. 2028ರ ವಿಧಾನಸಭಾ ಚುನಾವಣೆಗೆ ಇನ್ನು ಎರಡು ವರ್ಷ ಬಾಕಿ ಇದ್ದರೂ, ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಈಗಾಗಲೇ ರಾಜ್ಯದ ಅಧಿಕಾರ ಹಿಡಿಯಲು ತಂತ್ರ ರೂಪಿಸುತ್ತಿವೆ. ಈ ನಡುವೆಯೇ, ಚುನಾವಣೆಗೆ ಮುನ್ನವೇ ಆಡಳಿತ ಪಕ್ಷ ಕಾಂಗ್ರೆಸ್ ಗೆ ದೊಡ್ಡ ಅಗ್ನಿ ಪರೀಕ್ಷೆಯಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಎದುರಾಗಿದೆ. ಜೂನ್ 10 ರಿಂದ 24ರ ವರೆಗೆ 5 ಪಾಲಿಕೆಗಳ ಚುನಾವಣೆಗೆ ದಿನಾಂಕ ನಿಗದಿಪಡಲು ಚುನಾವಣಾ ಆಯೋಗ ಈಗಾಗಲೇ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದ್ದು,

Sponsored

ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಬೆಳವಣಿಗೆ ಬೆನ್ನಲ್ಲೇ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಆರಂಭಿಕ ಹಂತದ ಚುನಾವಣಾ ಸಿದ್ಧತೆ ಆರಂಭಿಸಿವೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಈ ಚುನಾವಣೆ ರಾಜಕೀಯವಾಗಿ ಮಹತ್ವದ ಪರೀಕ್ಷೆ ಆಗಲಿ ಇದ್ದು, ಬೆಂಗಳೂರಿನ ಮತದಾರರ ಮನಸ್ಥಿತಿ ಮುಂದಿನ ರಾಜ್ಯ ರಾಜಕೀಯದ ದಿಕ್ಕನ್ನೇ ನಿರ್ಧರಿಸಬಹುದು ಎಂದು ವಿಶ್ಲೇಷಿಸಲಾಗುತ್ತಿದೆ

ನಾಯಕರ ದಿಢೀರ್ ಸಭೆ, ತಂತ್ರಗಾರಿಕೆ. ಬ್ರೆಡರ ಬೆಂಗಳೂರು ಪ್ರಾಧಿಕಾರ ಚುನಾವಣೆಗೆ ದಿನಾಂಕ ನಿಗದಿ ಮಾಡುವಂತೆ ಚುನಾವಣಾ ಆಯೋಗ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಪಕ್ಷ ತಕ್ಷಣವೇ ಅಲರ್ಟ್ ಆಗಿದೆ. ಈ ಬೆಳವಣಿಗೆಯ ಹಿನ್ನೆಲೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ್ ನೇತೃತ್ವದಲ್ಲಿ ಭಾನುವಾರ ಮಹತ್ವದ ತುರ್ತು ಸಭೆ ನಡೆದಿದೆ. ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಭಾಗವಹಿಸಿದ್ದರು. ಸಭೆಯಲ್ಲಿ ಜಿಬಿಎ ಚುನಾವಣೆಯನ್ನು ಎದುರಿಸಲು ಕೈಗೊಳ್ಳಬೇಕಾದ ರಾಜಕೀಯ ತಂತ್ರಗಾರಿಕೆ, ಸಂಘಟನೆ ಬಲಪಡಿಸುವ ಕ್ರಮಗಳು ಹಾಗೂ ನಗರ ಮತದಾರರ ಮನಸ್ಥಿತಿಯನ್ನು ಗುರಿಯಾಗಿಟ್ಟುಕೊಂಡು ಮುಂದಿನ ಯೋಜನೆಗಳ ಕುರಿತು ಗಂಭೀರ ಚರ್ಚೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸವಾಲು ಸ್ಪಷ್ಟವಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಆಗಿ ಚುನಾವಣೆಗೆ ಇಳಿಯುವ ಸಾಧ್ಯತೆ ಹೆಚ್ಚಿದ್ದು. ಲೋಕಸಭೆ ಚುನಾವಣೆಯ ನಂತರ ಇಂದು ಎರಡನೆಯ ದೊಡ್ಡ ಮೈತ್ರಿ ಯಾಗಿ ಚುನಾವಣೆಗೆ ಇಳಿಯುವ ಸಾಧ್ಯತೆ ಹೆಚ್ಚಿದ್ದು, ಲೋಕಸಭೆ ಚುನಾವಣೆಯ ನಂತರ ಇದು ಎರಡನೆಯ ದೊಡ್ಡ ಮೈತ್ರಿ ಸಭೆಯಾಗಬಹುದು. ಈ ಮೈತ್ರಿ ಯಶಸ್ವಿಯಾದರೆ 2028ರ ವಿಧಾನಸಭೆ ಚುನಾವಣೆಗೂ ರಾಜಕೀಯವಾಗಿ ಬಲವಾದ ನೆಲೆ ಸಿಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಡಳಿತ ಪಕ್ಷ ಹಾಗೂ ಕಾಂಗ್ರೆಸ್ ಜೆ ಬಿಎ ಚುನಾವಣೆ ಕೇವಲ ಸ್ಥಳೀಯ ಸಮರವಾಗಿರದೆ, ಮುಂದಿನ ದೊಡ್ಡ ರಾಜಕೀಯ ಸಮೀಕರಣದ ಮೊದಲ ಪರೀಕ್ಷೆಯಾಗಿ ಪರಿಣಮಿಸಿದೆ.

5 ಪಾಲಿಗೆಗಳಲ್ಲಿ ಗೆಲುವಿನ ಲೆಕ್ಕಾಚಾರ ಚರ್ಚೆ ಬಿಬಿಎಂಪಿಯನ್ನು ವಿಭಜಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಡಿಯಲ್ಲಿ 5 ಪಾಲಿಕೆಯಾಗಿ ರೂಪಿಸಿರುವ ನಿರ್ಧಾರ ರಾಜಕೀಯವಾಗಿ ಬಾರಿ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಈ ಕ್ರಮವನ್ನು ತೀವ್ರವಾಗಿ ವಿರೋಧಿಸಿದ್ದು, ಬೆಂಗಳೂರನ್ನು ಐದು ಭಾಗಗಳನ್ನಾಗಿ ವಿಭಜಿಸುವ ಮೂಲಕ ಮೂಲ ನಗರದ ಹಿತಾಸಕ್ತಿಗೆ ಧಕ್ಕೆ ಉಂಟಾಗಿದೆ ಎಂಬ ಆರೋಪವನ್ನು ಮುಂದಿಟ್ಟಿವೆ. ಜೊತೆಗೆ, ಇದು ಚುನಾವಣಾ ಲಾಭಕ್ಕಾಗಿ ಕೈಗೊಂಡ ರಾಜಕೀಯ ತಂತ್ರ ಎಂದು ಕೂಡ ಟೀಕೆಗಳು ವ್ಯಕ್ತವಾಗಿವೆ. ಆದರೆ ಆಡಳಿತರೂಢ ಕಾಂಗ್ರೆಸ್ ಗೆ ಇದು 5 ಪಾಲಿಕೆಗಳ ಚುನಾವಣೆ ಎಷ್ಟು ಸುಲಭದ ಹಾದಿಯಲ್ಲ.

Sponsored

ಬೆಂಗಳೂರಿನಲ್ಲಿ ದೀರ್ಘಕಾಲದಿಂದ ಬಾಕಿ ಇರುವ ಟ್ರಾಫಿಕ್ ಸಮಸ್ಯೆ, ಮೆಟ್ರೋ ದರ ಏರಿಕೆ, ನಗರಾಭಿವೃದ್ಧಿಯ ನಿದಾನಗತಿ, ಗಣ ತ್ಯಾಜ್ಯ ನಿರ್ವಹಣೆ ಸಮಸ್ಯೆ ಹಾಗೂ ರಸ್ತೆ ಗುಂಡಿಗಳು-ಇವೆಲ್ಲವೂ ಚುನಾವಣೆಯ ಪ್ರಮುಖ ಅಸ್ತ್ರಗಳಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ 5 ಪಾಲಿಕೆಗಳ ಫಲಿತಾಂಶ ಕೇವಲ ನಗರ ಆಡಳಿತದ ಚಿತ್ರಣವನ್ನೇ ಅಲ್ಲ, ಮುಂದಿನ ರಾಜ ರಾಜಕೀಯದ ದಿಕ್ಕನ್ನು ನಿರ್ಧರಿಸಬಹುದಾದ ಪ್ರಮುಖ ಸಮರವಾಗಿ ಪರಿಣಮಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ರಸ್ತೆ ಗುಂಡಿ ವಿವಾದ, ರಾಜಕೀಯ ವಾಗ್ದಾಳಿ ನಡುವೆ ಜಿಬಿಎ ಚುನಾವಣೆ ತೀವ್ರ ತಯಾರಿ. ಬೆಂಗಳೂರು ರಸ್ತೆ ಗುಂಡಿಗಳ ವಿಚಾರವಾಗಿ ಉದ್ಯಮಿಗಳು ಮಾಡಿದ ಟ್ವಿಟ್ ಗಳು ದೊಡ್ಡಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಬಿಜೆಪಿ ಈ ವಿಚಾರವನ್ನು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ತೀವ್ರ ಟಿಕಾಸ್ತ್ರವಾಗಿ ಬಳಸಿಕೊಂಡಿದೆ. ಜೊತೆಗೆ ವಿಧಾನಸಭೆಯಲ್ಲಿ ಬೆಂಗಳೂರು ರಸ್ತೆ ಗುಂಡಿಗಳು ಹಾಗೂ ಅಪಘಾತಗಳ ಕುರಿತು ಡಿಕೆ ಶಿವಕುಮಾರ್ ನೀಡಿದ ಲಿಖಿತವು ಉತ್ತರ ಅಂಕಿ ಅಂಶಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರೆಸಿದೆ.

ಈ ರಾಜಕೀಯ ವಾತಾವರಣದ ನಡುವೆ ಗ್ರೇಡಾರ್ ಬೆಂಗಳೂರು ಪ್ರಾಧಿಕಾರ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ಸಿದ್ದತೆ ಆರಂಭಿಸಿದ್ದು, ಆಡಳಿತ ಪಕ್ಷ ಕಾಂಗ್ರೆಸ್ ಪಕ್ಷನವೇ ತಂತ್ರಗಾರಿಕೆಗೆ ಮುಂದಾಗಿದೆ. ಖಾಸಗಿ ಹೋಟೆಲ್ ನಲ್ಲಿ ನಡೆದ ಮಹತ್ವದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ರಾಜ ಕಾಂಗ್ರೆಸ್ ಸುಸ್ತುವಾರಿ ರನದೀಪ್ ಸಿಂಗ್ ಸುರ್ಜಿ ವಾಲ್ ಭಾಗವಹಿಸಿದ್ದರು. ಸಭೆಯಲ್ಲಿ ಸಿಎಂ ಹಾಗೂ ಸಲಹೆಗಾರ ಪೊನ್ನನ್ನ ಕೂಡ ಉಪಸ್ಥಿತರಿದ್ದರು. ಸಭೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಎದುರಿಸಲು ಚುನಾವಣಾ ತಂತ್ರ,

ನಗರ ಮತದಾರರ ಮನಸ್ಥಿತಿ ಹಾಗೂ ಕಾನೂನಾತ್ಮಕ ಅಂಶಗಳ ಬಗ್ಗೆ ಗಂಭೀರ ಚರ್ಚೆ ನಡೆದಿದೆ ಎಂದು ಮಾಹಿತಿ ಲಭ್ಯವಾಗಿದೆ. ಒಟ್ಟಿನಲ್ಲಿ, ರಸ್ತೆ ಸಮಸ್ಯೆಗಳಿಂದ ಆರಂಭವಾದ ಚರ್ಚೆ ಈಗ ನೇರವಾಗಿ ಜಿಬಿಎ ಚುನಾವಣೆಯ ರಾಜಕೀಯ ಸಮರಕ್ಕೆ ತಿರುಗಿದ್ದು, ಬೆಂಗಳೂರು ರಾಜಕೀಯ ಮತ್ತಷ್ಟು ತೀವ್ರಗೊಳ್ಳುವ ಸೂಚನೆ ನೀಡಿದೆ.

Sponsored

Also Read:

ಇಂದು CUET UG 2026 ಪರೀಕ್ಷೆ ಆರಂಭ: ಪರೀಕ್ಷಾರ್ಥಿಗಳಿಗೆ NTA ಮಹತ್ವದ ಗೈಡ್ ಲೈನ್ಸ್

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online