belagavi news:
ನೀಟ್ ಯುಜಿ 2026 ಪರೀಕ್ಷೆ ಮುಕ್ತಾಯಗೊಂಡಿದ್ದು, ಕರ್ನಾಟಕದ ಸುಮಾರು 1.45 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಈ ಬಾರಿ ಸುದೀರ್ಘ ಹೇಳಿಕೆ ಆಧಾರಿತ ಪ್ರಶ್ನೆಗಳು ಹೆಚ್ಚಾಗಿ ಕೇಳಲಾಗಿದ್ದರಿಂದ ಸಮಯ ನಿರ್ವಹಣೆ ವಿದ್ಯಾರ್ಥಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಎನ್ ಸಿಇಆರ್ ಟಿ ಪಠ್ಯಕ್ರಮದ ಆಧಾರದ ಮೇಲೆ ಪ್ರಶ್ನೆಗಳು ಬಂದಿದ್ದರು, ಅವುಗಳ ಸ್ವರೂಪ ಮತ್ತು ಉದ್ದ ವಿದ್ಯಾರ್ಥಿಗಳನ್ನು ಗೊಂದಲಕ್ಕೆ ತಳ್ಳಿತು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಕೆಲ ವಿದ್ಯಾರ್ಥಿಗಳಿಗೆ ವಿವಿಧ ಕಾರಣಗಳಿಂದ ಪರೀಕ್ಷಾ ಕೇಂದ್ರಗಳಲ್ಲಿ ಪ್ರವೇಶ ನಿರಾಕರಣೆಯಾಗಿರುವುದು ಗಮನಾರ್ಹವಾಗಿದೆ. ಒಟ್ಟಿನಲ್ಲಿ ಪ್ರಶ್ನೆಗಳ ಕಠಿಣತೆ ಮತ್ತು ಸ್ಪರ್ಧಾತ್ಮಕತೆ ಹಿನ್ನೆಲೆಯಲ್ಲಿ ಈ ವರ್ಷ ಕಟ್ ಆಫ್ ಅಂಕಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ.
ಬೆಂಗಳೂರಿನ ದೇಶಾದ್ಯಂತ ಶಿಕ್ಷಣ ಪ್ರವೇಶಕ್ಕಾಗಿ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET - UG 2026) ಭಾನುವಾರ ಮುಕ್ತಾಯಗೊಂಡಿದೆ. ಈ ಬಾರಿ ಕರ್ನಾಟಕದ ಸುಮಾರು 1.45 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದು ಪ್ರಶ್ನೆ ಪತ್ರಿಕೆಯಲ್ಲಿದ್ದ ಸುದೀರ್ಘವಾದ 'ಹೇಳಿಕೆ ಆಧಾರಿತ' ಪ್ರಶ್ನೆಗಳು ಅಭ್ಯರ್ಥಿಗಳ ಬೆವರಿಸುವಂತೆ ಮಾಡಿದೆ.
ರಾಷ್ಟ್ರೀಯಾ ಪರೀಕ್ಷಾ ಸಂಸ್ಥೆ (NTA ) ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆ ಒಟ್ಟು 720 ಅಂಕಗಳಿಗೆ ನಡೆದಿದ್ದು, ಬಹುತೇಕ ಪ್ರಶ್ನೆಗಳು ಎನ್ ಸಿಇಆರ್ ಟಿ (NCERT) ಪಠ್ಯ ಕ್ರಮಕ್ಕೆ ಅನುಗುಣವಾಗಿಯೇ ಇದ್ದವು. ಆದರೆ ಪ್ರಶ್ನೆಗಳ ವಿನ್ಯಾಸ ಹಾಗೂ ಉದ್ದದಿಂದ ಸಮಯ ನಿರ್ವಹಣೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
ಸಮಯ ಕಿತ್ತುಕೊಂಡ 'ಸ್ಟೇಟ್ಮೆಂಟ್' ಪ್ರಶ್ನೆಗಳು:
ಈ ವರ್ಷದ ಪರೀಕ್ಷೆಯಲ್ಲಿ ನೇರ ಪ್ರಶ್ನೆಗಳಿಗಿಂತ ' ಹೇಳಿಕೆ ಆಧಾರಿತ' (Statement -based),'ಸರಿ -ತಪ್ಪು ಪತ್ತೆ ಹಚ್ಚುವಿಕೆ' ಹಾಗೂ ' ಹೊಂದಿಸಿ ಬರೆಯಿರಿ' ಮಾದರಿಯ ಪ್ರಶ್ನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಕೇಳಲಾಗಿದ್ದವು. ವಿಶೇಷವಾಗಿ ಜೀವಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಭಾಗಗಳಲ್ಲಿ ಪ್ರತಿಯೊಂದು ಆಯ್ಕೆಯನ್ನು ಆಳವಾಗಿ ಓದಿ ಅರ್ಥೈಸಿಕೊಳ್ಳಬೇಕಾದ ಕಾರಣ ಹೆಚ್ಚಿನ ಸಮಯ ವ್ಯಯವಾಯಿತು. ಇದರ ಪರಿಣಾಮವಾಗಿ ಭೌತಶಾಸ್ತ್ರದ ಲೆಕ್ಕಾಚಾರಗಳನ್ನು ಪೂರ್ಣಗೊಳಿಸಲು ಅನೇಕ ವಿದ್ಯಾರ್ಥಿಗಳು ಪರದಾಟ ಬೇಕಾಗಿತ್ತು.
ತಡವಾಗಿ ಬಂದವರಿಗೆ ನಿರಾಕರಣಿ: ಬೆಂಗಳೂರಿನ ಶೇಷಾದ್ರಿ ರಸ್ತೆಯ ಆರ್ ಸಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಇಬ್ಬರು ವಿದ್ಯಾರ್ಥಿಗಳು ನಿಗದಿತ ಸಮಯಕ್ಕಿಂತ ಕೇವಲ 5- 10 ನಿಮಿಷ ತಡವಾಗಿ ಬಂದ ಕಾರಣ ಪರೀಕ್ಷಾ ಕೊಠಡಿಗೆ ಪ್ರವೇಶ ನಿರಾಕರಿಸಲಾಯಿತು. ಸಂಚಾರದಟ್ಟಣೆ ಹಾಗೂ ಅಗತ್ಯ ದಾಖಲೆಗಳನ್ನು ಮರೆತು ಬಂದಿದ್ದರಿಂದ ವಿಳಂಬ ಉಂಟಾಗಿದ್ದು, ಪರೀಕ್ಷೆ ಬರೆಯಲು ಸಾಧ್ಯವಾಗದೆ ವಿದ್ಯಾರ್ಥಿಗಳು ಕಣ್ಣೀರಿನಿಂದ ಹಿಂದಿರುಗಿದ ದೃಶ್ಯ ಕಂಡುಬಂದಿತು. ಒಟ್ಟಾರೆ ಈ ಬಾರಿಯ ನೀಟ್ ಯುಜಿ 2026 ಪರೀಕ್ಷೆಯ ಕಠಿಣತೆ ಮತ್ತು ಸ್ಪರ್ಧಾತ್ಮಕತೆಯನ್ನು ಗಮನಿಸಿದರೆ ಕಟ್ ಆಫ್ ಅಂಕಗಳು ಕಳೆದ ವರ್ಷಕ್ಕಿಂತ ಹೆಚ್ಚಾಗಿರುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಪರೀಕ್ಷೆ ಬರೆದ ಬಹುತೇಕ ವಿದ್ಯಾರ್ಥಿಗಳು ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ.
Also Read: