<?= $pageTitle ?>
Logo
ಮುಖಪುಟ ಓದುವುದು ಕೇಳು
Business

ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆ ಮಂಡನೆ : ಜಿಡಿಪಿ ಬೆಳವಣಿಗೆ

ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆ ಮಂಡನೆ :  ಜಿಡಿಪಿ ಬೆಳವಣಿಗೆ
Summary: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ ನಲ್ಲಿ ದೇಶದ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು. ಈ ಸಮೀಕ್ಷೆಯಲ್ಲಿ ಭಾರತದ ಆರ್ಥಿಕ ಬೆಳವಣಿಗೆ, ಹಣಕಾಸು ಸ್ಥಿತಿ, ಉದ್ಯೋಗ ಹಾಗೂ ಭವಿಷ್ಯದ ಆರ್ಥಿಕ ದಿಕ್ಕಿನ ಬಗ್ಗೆ ಪ್ರಮುಖ ಮಾಹಿತಿಯನ್ನು ಪ್ರಸ್ತುತಪಡಿಸಲಾಗಿದೆ.
belagavi news :
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು 2026-27ರ ಆರ್ಥಿಕ ಸಮೀಕ್ಷೆಯನ್ನು ಲೋಕಸಭೆಯಲ್ಲಿ ಮಂಡಿಸಿದರು. ಬಜೆಟ್ ಗೆ ಮುನ್ನ ಸಲ್ಲಿಸಲಾದ ಈ ಸಮೀಕ್ಷೆಯಲ್ಲಿ ಪ್ರಸ್ತುತ ಹಣಕಾಸು ವರ್ಷದ ಭಾರತದ ಜಿಡಿಪಿ ಬೆಳವಣಿಗೆಗೆ ದರ ಶೇ. 6.8 ರಿಂದ 7.2ರ ನಡುವೆ ಇರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಈ ಅಂದಾಜು ಪ್ರಸ್ತುತ ಹಣಕಾಸು ವರ್ಷಕ್ಕೆ ನಿರೀಕ್ಷಿಸಲಾಗಿದ್ದ ಶೇ. 7.4ರ ಬೆಳವಣಿಗೆ ಗಿಂತ ಸ್ವಲ್ಪ ಕಡಿಮೆಯಾಗಿದೆ. ಜಾಗತಿಕ, ಆರ್ಥಿಕ ಪರಿಸ್ಥಿತಿಗಳ ಅನುಷ್ಠತೆ ಇದಕ್ಕೆ ಪ್ರಮುಖ ಕಾರಣ ಎಂದು ಸಮೀಕ್ಷೆ ತಿಳಿಸಿದೆ.

ಆರ್ಥಿಕ ಸಮೀಕ್ಷೆ ಮಂಡಿಸುವ ವೇಳೆ ಮಾತನಾಡಿದ ಸಚಿವೆ ನಿರ್ಮಲಾ ಸೀತಾರಾಮನ್ "ಭಾರತದ ಆರ್ಥಿಕತೆ ಸ್ಥಿರವಾಗಿದೆ ಆದರೆ ಜಾಗತಿಕ ನಿಶ್ಚಿತತೆಗಳು ಮುಂದುವರೆದಿರುವುದರಿಂದ ಎಚ್ಚರಿಕೆಯಿಂದ ನಡೆದುಕೊಳ್ಳುವ ಅಗತ್ಯವಿದೆ" ಎಂದು ಹೇಳಿದರು.ವಿಶ್ವದ ಆರ್ಥಿಕ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ರಾಜಕೀಯ ಸಂಘರ್ಷಗಳು, ಬಡ್ಡಿದರ ಏರಿಕೆ, ಇಂಧನ ಬೆಲೆಗಳ ಅಸ್ಥಿರತೆ ಹಾಗೂ ಜಾಗತಿಕ ಮಾರುಕಟ್ಟೆಗಳ ಒತ್ತಡ ಭಾರತದ ಆರ್ಥಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಎಚ್ಚರಿಸಿದೆ. ಆರ್ಥಿಕ ಸಮೀಕ್ಷೆ ಪ್ರಮುಖ ಅಂಶಗಳು 2026-27ರ ಜಿಡಿಪಿ ಬೆಳವಣಿಗೆ 6.8 - 7.2%, ಹಿಂದಿನ ವರ್ಷ ಅಂದಾಜು 7.4% ಇತ್ತು, ಜಾಗತಿಕ ಆರ್ಥಿಕ ಪ್ರಭಾವ ಮತ್ತು ದೇಶಿಯ ಬೇಡಿಕೆ ಮತ್ತು ಹೂಡಿಕೆಗಳು ಆರ್ಥಿಕತೆಗೆ ಬಲ, ಸ್ಥಿರ ಬೆಳವಣಿಗೆಯ ಜೊತೆ ಎಚ್ಚರಿಕೆಯ ನೀತಿ ಅಗತ್ಯ.

ಬಜೆಟ್ ಮಂಡನೆ ಮುನ್ನ ಮಹತ್ವದ ಸಂದೇಶ ಬಜೆಟ್ ಗೂ ಮುನ್ನ ಮಂಡಿಸಲಾದೆ. ಈ ಆರ್ಥಿಕ ಸಮೀಕ್ಷೆ ಮುಂದಿನ ಹಣಕಾಸು ನೀತಿಗಳು ಯಾವ ದಿಕ್ಕಿನಲ್ಲಿ ಸಾಗಬಹುದು ಎಂಬುದಕ್ಕೆ ಪ್ರಮುಖ ಸೂಚನೆ ನೀಡಿದೆ. ಸ್ಥಿರ ಬೆಳವಣಿಗೆಯ ಜೊತೆ ಹಣಕಾಸು ಶಿಸ್ತು ಮತ್ತು ಜಾಗತಿಕ ಪರಿಸ್ಥಿತಿಗಳ ಮೇಲೆ ನಿಗಾ ಇಡುವುದು ಅಗತ್ಯ ಎಂದು ಸಮೀಕ್ಷೆ ಒತ್ತಿ ಹೇಳಿದೆ.

ಇತ್ತೀಚಿನ ನೀತಿ ಸುಧಾರಣೆಗಳ ಪರಿಣಾಮವಾಗಿ ಭಾರತದ ಆರ್ಥಿಕ ಬೆಳವಣಿಗೆಗೆ ಸ್ಪಷ್ಟವಾಗಿ ಗೋಚರವಾಗಿದೆ ಈ ಸುಧಾರಣೆಗಳು ಆರ್ಥಿಕತೆಯ ಮಧ್ಯಮಾವಧಿಯ ಬೆಳವಣಿಗೆ ಸಾಮರ್ಥ್ಯವನ್ನು ಹತ್ತಿರಕ್ಕೆ ಕೊಂಡೊಯ್ಯಲು ಸಹಾಯಕಾರಿಯಾಗಿದೆ ಮತ್ತು ಬಳಕೆಯು ಆರ್ಥಿಕ ಬೆಳವಣಿಗೆಯ ಪ್ರಮುಖ ಚಾಲಕರಾಗಿ ಹೊರಹೊಮ್ಮಿವೆ.ಇವೆ ಭಾರತದ ಆರ್ಥಿಕತೆಯಲ್ಲಿ ದೇಶಿಯ ಚಾಲಕರು ಪ್ರಬಲ ಪಾತ್ರ ವಹಿಸುತ್ತಿದ್ದಾರೆ.

ಬಲಿಷ್ಠ ಬಳಕೆ ಮೂಲಸೌಕರ್ಯ ಅಭಿವೃದ್ಧಿ ಮತ್ತು ಖಾಸಗಿ ಹೋಡಿಕರಣಗಳು ಬೆಳವಣಿಗೆಯನ್ನು ಬೆಂಬಲಿಸುತ್ತಿವೆ ಜೊತೆಗೆ ತೂಲ ಆರ್ಥಿಕ ಸ್ಥಿರತೆ ಉತ್ತಮವಾಗಿ ನೆಲೆಗೊಂಡಿರುವುದರಿಂದ ಆರ್ಥಿಕತೆಯ ಮೇಲೆ ವಿಶ್ವಾಸ ಹೆಚ್ಚಿದೆ. ಪ್ರಸ್ತುತ ಜಾಗತಿಕ ಆರ್ಥಿಕ ಪರಿಸ್ಥಿತಿಯನ್ನು ಅನಿಶ್ಚಿತ ಮತ್ತು ದುರ್ಬಲವಾಗಿದೆ. ಇಂತಹ ಸಂದರ್ಭದಲ್ಲಿ ಭಾರತವು ದೇಶಿಯ ಬೆಳವಣಿಗೆ ಆದರೆ ನೀಡುವುದು ಅತ್ಯಂತ ಅಗತ್ಯವಾಗಿದೆ. ಆಂತರಿಕ ಬೇಡಿಕೆಯನ್ನು ಬಲಪಡಿಸುವುದು ಮತ್ತು ದೀರ್ಘಕಾಲಿನ ಸುಧಾರಣೆಯನ್ನು ಮುಂದುವರಿಸುವುದು ಭಾರತದ ಆರ್ಥಿಕ ಭವಿಷ್ಯವನ್ನು ಸುರಕ್ಷಿತಗೊಳಿಸುತ್ತದೆ.

ಆರ್ಥಿಕ ಸಂಸ್ಥೆಯ ಪ್ರಕಾರ ಭಾರತದ ಬಾಹ್ಯ ಸ್ಥಿರತೆ ಮುಂದುವರೆದಿದೆ. ಇದು ದೇಶದ ಆರ್ಥಿಕತೆಯ ಪ್ರಮುಖ ಬಲವಾಗಿದೆ ಜಾಗತಿಕ ಆರ್ಥಿಕ ಚಂಚಲತೆಯ ನಡುವೆಯೂ ಭಾರತವು ತುಲನಾತ್ಮಕವಾಗಿ ಸುರಕ್ಷಿತ ಸ್ಥಿತಿಯಲ್ಲಿ ಇರುವಂತೆ ಈ ಸ್ಥಿರತೆ ಸಹಾಯ ಮಾಡಿದೆ. ವಿದೇಶಿ ವಿನಿಮಯ ಸಂಗ್ರಹ, ನಿಯಂತ್ರಿತ ದ್ರವ್ಯೋತ್ಥಾನ ಮತ್ತು ಸಮತೋಲನಿತ ವ್ಯಾಪಾರ ನೀತಿಗಳು ಇದಕ್ಕೆ ಪ್ರಮುಖ ಕಾರಣವಾಗಿದೆ.

ಜಾಗತಿಕ ಅಪಘಾತಗಳ ಪರಿಣಾಮವು ತಕ್ಷಣ ಕಾಣಿಸಿಕೊಳ್ಳದೆ ತಡವಾಗಿ ಹೊರಬರುವ ಸಾಧ್ಯತೆ ಇರುವುದರಿಂದ ನೀತಿ ನಿರೂಪಕರು ಹೆಚ್ಚಿನ ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕಾಗಿದೆ. ಜಾಗತಿಕ ಮಾರುಕಟ್ಟೆಯ ಅನಿಷ್ಟತೆಗಳು ಮುಂದಿನ ದಿನಗಳಲ್ಲಿ ದೇಶದ ಆರ್ಥಿಕತೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಮುಂಚಿತ ಕ್ರಮಗಳು ಅಗತ್ಯವಾಗಿವೆ. ಭಾರತದ ಆರ್ಥಿಕ ಬೆಳವಣಿಗೆ ಪ್ರಾಥಮಿಕ ಚಾಲಕ ದೇಶಿಯ ಬೇಡಿಕೆಯಾಗಿದೆ. ಬಲವಾದ ದೇಶಿಯ ಬಳಕೆ, ವಿಶೇಷವಾಗಿ ನಗರ ಪ್ರದೇಶಗಳಲ್ಲಿನ ಬಳಕೆಯ ಬೇಡಿಕೆ ಒಟ್ಟಾರೆಯ ಆರ್ಥಿಕ ಚಟುವಟಿಕೆಗೆ ಮಹತ್ವದ ಬೆಂಬಲ ನೀಡುತ್ತಿದೆ.

ಉದ್ಯೋಗ ಸೃಷ್ಟಿ ಮತ್ತು ಆದಾಯದ ಹೆಚ್ಚಳದಿಂದ ಬಳಕೆಯ ಬೇಡಿಕೆ ಮತ್ತಷ್ಟು ಬಲವಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ತೆರಿಗೆಯಲ್ಲಿ ಕ್ರಾಂತಿಕಾರಿ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ. ಇದರ ಪರಿಣಾಮವಾಗಿ ನಗರ ಬಳಕೆಯಲ್ಲಿ ಸ್ಪಷ್ಟ ಸುಧಾರಣೆ ಕಂಡುಬಂದಿದೆ. ಸರಳಿಕೃತ ತೆರಿಗೆ ವ್ಯವಸ್ಥೆ ಮತ್ತು ಪಾರದರ್ಶಕ ನೀತಿಗಳು ಬಳಕೆದಾರರ ವಿಶ್ವಾಸವನ್ನು ಹೆಚ್ಚಿಸಿದ್ದು, ಇದು ಆರ್ಥಿಕ ಬೆಳವಣಿಗೆ ಇನ್ನಷ್ಟು ವೇಗವನ್ನು ನೀಡಿದೆ.

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದ ಕುರಿತು ಮಾತನಾಡಿದ ಅವರು, 2025ರಲ್ಲಿ ಭಾರತೀಯ ಕರೆನ್ಸಿ ಗಮನಾರ್ಹ ಕುಸಿತವನ್ನು ಕಂಡಿದೆ ಎಂದು ತಿಳಿಸಿದರು. ಜಾಗತಿಕ ಆರ್ಥಿಕತೆ ಮತ್ತು ಹಣಕಾಸು ಮಾರುಕಟ್ಟೆ ಚಂಚಲತೆ ಇದರ ಮೇಲೆ ಪ್ರಭಾವ ಬೀರಿದೆ. ವಿದೇಶಿ ಬಂಡವಾಳದ ಹರಿವು ಕುಸಿದಿರುವುದರಿಂದ ರೂಪಾಯಿ ಮೌಲ್ಯ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ವಿದೇಶಿ ಹೂಡಿಕೆದಾರರು ಜಾಗತಿಕ ಅಪಾಯಗಳ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ನಡೆಯುವುದುಕೊಳ್ಳುತ್ತಿರುವುದು ಭಾರತೀಯ ಕರೆನ್ಸಿಯ ಮೇಲೆ ಒತ್ತಡ ತಂದಿದೆ. ಇದರ ಪರಿಣಾಮವಾಗಿ ಡಾಲರ್ ದುರ್ಬಲಗೊಂಡಿದೆ ಆರ್ಥಿಕ ಸಮೀಕ್ಷೆ ಎಂಬುದು ದೇಶದ ಆರ್ಥಿಕ ಸ್ಥಿತಿಯನ್ನು ಸಮಗ್ರವಾಗಿ ಪರಿಶೀಲಿಸುವ ವಾರ್ಷಿಕ ದಾಖಲೆಯಾಗಿದ್ದು,

ಇದನ್ನು ಕೇಂದ್ರ ಬಜೆಟ್ಗೆ ಮುಂಚಿತವಾಗಿ ಕೇಂದ್ರ ಸರ್ಕಾರ ಮಂಡಿಸುತ್ತದೆ. ಈ ಸಮೀಕ್ಷೆಯಲ್ಲಿ ಆರ್ಥಿಕ ಬೆಳವಣಿಗೆ , ದ್ರವ್ಯೋತ್ಥಾನ, ಹಣಕಾಸು ಸ್ಥಿತಿ, ವಿದೇಶಿ ವ್ಯಾಪಾರ ಮತ್ತು ಕರೆನ್ಸಿ ಸ್ಥಿತಿಯ ಕುರಿತು ವಿಶ್ಲೇಷಣೆ ನೀಡಲಾಗುತ್ತದೆ. ಬಜೆಟ್ ರೂಪಿಸುವ ಮತ್ತು ಭವಿಷ್ಯದ ಆರ್ಥಿಕ ನೀತಿ ನಿರ್ಧಾರಗಳಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ರೂಪಾಯಿ ಮೌಲ್ಯ ವಿದೇಶಿ ಬಂಡವಾಳ ಹರಿವು ಮತ್ತು ಜಾಗತಿಕ ಆರ್ಥಿಕ ಪರಿಸ್ಥಿತಿಗಳ ಕುರಿತು ಸ್ಪಷ್ಟ ಚಿತ್ರ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ.

ಇನ್ನಷ್ಟು ಓದಿರಿ:

ರಾಜ್ಯಾದ್ಯಂತ ‘ಕನಕೋತ್ಸವ’ ಮುಂದಿನ ದಿನಗಳಲ್ಲಿ ವಿಸ್ತರಣೆ: ಡಿಸಿಎಂ ಡಿಕೆಶಿ ಘೋಷಣೆ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online