Belagavi news:
ಓಸ್ಲೋ, ನಾರ್ವೆ: ಪ್ರಧಾನಿ ನರೇಂದ್ರ ಮೋದಿ ಅವರ ನಾರ್ವೆ ಭೇಟಿ ಇದೀಗ ಜಾಗತಿಕ ಸಮುದ್ರ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಇಡೋ-ಪೆಸಿಫಿಕ್ ಓಷನ್ಸ್ ಇನಿಷಿಯೇಟಿವ್ (IPOI)ಗೆ ನಾರ್ವೆ ಪಾಲುದಾರ ರಾಷ್ಟ್ರವಾಗಿ ಸೇರ್ಪಡೆಯಾಗಲು ತೀರ್ಮಾನಿಸಿರುವುದು ಇಂಡೋ-ಪೆಸಿಫಿಕ್ ಪ್ರದೇಶದ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ.
ಈ ಬೆಳವಣಿಗೆ ಕೇವಲ ಪ್ರಾದೇಶಿಕ ಸಹಕಾರವಲ್ಲ. ಜಾಗತಿಕ ವ್ಯಾಪಾರ, ಸಮುದ್ರ ಭದ್ರತೆ, ಪರಿಸರ ಸಂರಕ್ಷಣೆ ಮತ್ತು ನಿಯಮಾಧಾರಿತ ಅಂತರರಾಷ್ಟ್ರೀಯ ವ್ಯವಸ್ಥೆಯ ಭವಿಷ್ಯ ಇಂಡೋ-ಪೆಸಿಫಿಕ್ ಪ್ರದೇಶದಲ್ಲೇ ನಿರ್ಧಾರವಾಗಲಿದೆ ಎಂಬುದನ್ನು ಸ್ಪಷ್ಟಪಡಿಸುತ್ತಿದೆ.
ಪ್ರಪಂಚದ ಪ್ರಮುಖ ಕಡಲ ತೀರದ ರಾಷ್ಟ್ರಗಳಲ್ಲಿ ಒಂದಾದ ನಾರ್ವೆ, ಸಮುದ್ರ ಸ್ವಾಮ್ಯ ಮತ್ತು ಕಡಲ ತಂತ್ರಜ್ಞಾನದಲ್ಲಿ ಆಳವಾದ ಪರಿಣತಿ ಹೊಂದಿದೆ. IPOI ಗೆ ಅದರ ಸೇರ್ಪಡೆ ಭಾರತ ಮತ್ತು ನಾರ್ವೆಯ ನಡುವಿನ ಸಮುದ್ರ ಸಹಕಾರಕ್ಕೆ ಹೊಸ ಬಲ ನೀಡುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಿ ಮೋದಿ ಅವರ ಈ ಭೇಟಿಯು ಭಾರತ -ನಾರ್ವೆ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೂಳಿಸುವುದರ ಜೊತೆಗೆ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಭಾರತದ ಪ್ರಭಾವವನ್ನೂ ವಿಸ್ತರಿಸುವ ಹೆಜ್ಜೆಯಾಗಿ ಕಾಣಲಾಗುತ್ತಿದೆ.
ಓಸ್ಲೋ: ಭಾರತ ಮತ್ತು ನಾರ್ವೆ ನಡುವಿನ ಸಮುದ್ರ ಸಹಕಾರಕ್ಕೆ ಮತ್ತಷ್ಟು ಬಲ ಸಿಕ್ಕಿದ್ದು. 2019ರಲ್ಲಿ ಸಹಿ ಹಾಕಿದ್ದ ಸಾಗರ ಸಂವಾದ ಒಪ್ಪಂದದ ಅನ್ವಯ ನೀಲಿ ಆರ್ಥಿಕತೆ(blue economy) ಕ್ಷೇತ್ರದಲ್ಲಿ ಸಹಕಾರವನ್ನು ಇನ್ನಷ್ಟು ವಿಸ್ತರಿಸಲು ಉಭಯ ರಾಷ್ಟ್ರಗಳು ಒಪ್ಪಿಕೊಂಡಿವೆ. ಭಾರತ-ನಾರ್ವೆ ಜಂಟಿ ಹೇಳಿಕೆಯಲ್ಲಿ ಈ ಮಹತ್ವದ ಮಾಹಿತಿ ಬಹಿರಂಗವಾಗಿದೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸಮುದ್ರ ಭದ್ರತೆ, ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡುವ ದಿಸೆಯಲ್ಲಿ ಈ ಒಪ್ಪಂದ ಹೊಸ ಅಧ್ಯಯ ಆರಂಭಿಸಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಐಸ್ಲ್ಯಾಂಡ್, ಫಿನ್ಲ್ಯಾಂಡ್ ಮತ್ತು ಡೆನ್ಮಾರ್ಕ್ ಪ್ರಧಾನಿಗಳೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದರು. ಶುದ್ಧ ಇಂಧನ, ವ್ಯಾಪಾರ, ಡಿಜಿಟಲೀಕರಣ, ಹಸಿರು ತಂತ್ರಜ್ಞಾನ ಮತ್ತು ಸುಸ್ಥಿರ ಅಭಿವೃದ್ಧಿ ಕ್ಷೇತ್ರಗಳಲ್ಲಿ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೋಳಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ.
ಭಾರತ - ನಾರ್ಡಿಕ್ 3ನೇ ಶೃಂಗಸಭೆಗೆ ಮುನ್ನ ನಡೆದ ಈ ಮಹತ್ವದ ಸಭೆಗಳಲ್ಲಿ ಐಸ್ಲ್ಯಾಂಡ್ ಪ್ರಧಾನಿ ಕ್ರಿಸ್ಟ್ರುನ್ ಪ್ರಸ್ತಾಡೊಟ್ಟಿರ್, ಫಿನ್ಲ್ಯಾಂಡ್ ಪ್ರಧಾನಿ ಪಟ್ಟೇರಿ ವರ್ಫೋ ಹಾಗೂ ಡೆನ್ಮಾರ್ಕ್ ಪ್ರಧಾನಿ ಮೆಟ್ಟಿ ಫ್ರೆಡೆರಿಕ್ಸೆನ್ ಭಾಗವಹಿಸಿದ್ದರು. ಪ್ರಧಾನಿ ಮೋದಿ, ಭಾರತ ಮತ್ತು ನಾರ್ಡಿಕ್ ರಾಷ್ಟ್ರಗಳ ನಡುವಿನ ಭಾಂದವ್ಯವನ್ನು ಮತ್ತಷ್ಟು ವಿಸ್ತರಿಸುವ ಬಗ್ಗೆ ಸಮಾಲೋಚನೆ ನಡೆಸಿದರು.
ಈ ಬೇಟಿಯು ಭಾರತ ಮತ್ತು ನಾರ್ಡಿಕ್ ರಾಷ್ಟ್ರಗಳ ನಡುವಿನ ಆರ್ಥಿಕ, ತಂತ್ರಜ್ಞಾನ ಹಾಗೂ ಸಮುದ್ರ ಸಹಕಾರಕ್ಕೆ ಹೊಸ ವೇಗೆ ನೀಡುವ ನಿರೀಕ್ಷೆ ಮೂಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಐಸ್ಲ್ಯಾಂಡ್ ಪ್ರಧಾನಿ ಕ್ರಿಸ್ಟ್ರೋನ್ ಪ್ರಾಸ್ಟಾಡೊಟ್ಟಿರ್ ಅವರೊಂದಿಗೆ ಮಹತ್ವದ ಸಭೆ ನಡೆಸಿದ್ದು. ಭಾರತ-ಐಸ್ಲ್ಯಾಂಡ್ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೂಳಿಸುವ ಬಗ್ಗೆ ಚರ್ಚಿಸಿದರು. ಭಾರತವು ಐಸ್ಲ್ಯಾಂಡ್ ನೊಂದಿಗಿನ ಸ್ನೇಹವನ್ನು ಅತ್ಯಂತ ಮೌಲ್ಯಯುತವಾಗಿ ಪರಿಗಣಿಸುತ್ತದೆ ಎಂದು ಪ್ರಧಾನಿ ಮೋದಿ ಎಕ್ಸ್ ಸಂದೇಶದಲ್ಲಿ ತಿಳಿಸಿದ್ದಾರೆ.
ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈ ಸೋಲ್ ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿದ್ದು. ಓಸ್ಲೋದಲ್ಲಿ ನಡೆದ ಈ ಸಭೆಯಲ್ಲಿ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆದಿದೆ ಎಂದು ಹೇಳಿದ್ದಾರೆ. ಇಂಧನ ಸಹಕಾರ, ನಾವಿನ್ಯತೆ, ಡಿಜಿಟಲ್ ತಂತ್ರಜ್ಞಾನಗಳು, ಸೃಜನಶೀಲ ಆರ್ಥಿಕತೆ ಹಾಗೂ ಆರ್ಕ್ಟಿಕ್ ಪ್ರದೇಶದ ಸಹಕಾರ ಪ್ರಮುಖ ಚರ್ಚಾ ವಿಷಯಗಳಾಗಿದ್ದವು ಎಂದು ತಿಳಿಸಿದ್ದಾರೆ.
ಭಾರತ-ನಾರ್ಡಿಕ 3ನೇ ಶೃಂಗಸಭೆಯ ಅಂಗವಾಗಿ ನಡೆದ ಈ ಸಭೆ, ಉತ್ತರ ಯುರೋಪ್ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧಗಳಿಗೆ ಹೊಸ ವೇಗ ನೀಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಹಸಿರು ಇಂಧನ, ಡಿಜಿಟಲ್ ಅಭಿವೃದ್ಧಿ ಮತ್ತು ಪರಿಸರ ಸ್ನೇಹಿ ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ ಉಭಯ ರಾಷ್ಟ್ರಗಳು ಕೈಜೋಡಿಸುವ ನಿರೀಕ್ಷೆ ಹೆಚ್ಚಾಗಿದೆ. ಪ್ರಧಾನಿ ಮೋದಿ ಅವರ ನಾರ್ವೆ ಭೇಟಿ ಮತ್ತು ನಾರ್ಡಿಕ್ ರಾಷ್ಟ್ರಗಳೊಂದಿಗೆ ನಡೆದ ಈ ಮಾತುಕತೆಗಳು ಜಾಗತಿಕ ರಾಜಕೀಯ ಹಾಗೂ ಆರ್ಥಿಕ ಸಹಕಾರದಲ್ಲಿ ಭಾರತ ಪಾತ್ರವನ್ನು ಮತ್ತಷ್ಟು ಬಲಪಡಿಸುತ್ತಿವೆ.
Also Read:
ಐತಿಹಾಸಿಕ ಮೋದಿ - ಟ್ರಂಪ್ ಭೇಟಿ: ಭಾರತವಲ್ಲ, ಅಮೆರಿಕವಲ್ಲ.... ಆತಿಥ್ಯ ಯಾವ ರಾಷ್ಟ್ರಕ್ಕೆ?