ಆಸ್ಟ್ರೇಲಿಯಾ ಮೂಲದ ಸ್ಟಾರ್ ಆಲ್ರೌಂಡರ್ಗಳಾದ ಎಲೈಸಿ ಪೆರ್ರಿ ಹಾಗೂ ಅನಾಬೆಲ್ಲಾ ಸದರ್ಲೆಂಡ್ ಅವರ ಅನುಪಸ್ಥಿತಿ ಮುಂಬರುವ WPL ಟೂರ್ನಿಯಲ್ಲಿ ಆರ್ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸುವ ಸಾಧ್ಯತೆಯಿದೆ.
ನಾಲ್ಕನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಆರ್ಸಿಬಿಯ ಸ್ಟಾರ್ ಆಟಗಾರ್ತಿ ಎಲೈಸಿ ಪೆರ್ರಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅನಾಬೆಲ್ಲಾ ಸದರ್ಲೆಂಡ್ ಈ ಇಬ್ಬರು ಟೂರ್ನಿಯಿಂದ ಸಂಪೂರ್ಣವಾಗಿ ಹೊರಗುಳಿದಿದ್ದಾರೆ.
ಸದರ್ಲೆಂಡ್ ಕಳೆದ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ 9 ವಿಕೆಟ್ ಹಾಗೂ 95 ರನ್ ಸಿಡಿಸಿದ್ದರು.
ಅಂದಹಾಗೆ ಈ ಇಬ್ಬರು ಆಟಗಾರ್ತಿಯರು ವೈಯುಕ್ತಿಕ ಕಾರಣಗಳಿಂದಾಗಿ ಮುಂಬರುವ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಾಲ್ಗೊಳ್ಳದಿರಲು ತೀರ್ಮಾನಿಸಿದ್ದಾರೆ.
ಇದೀಗ ಆರ್ಸಿಬಿ ಫ್ರಾಂಚೈಸಿಯು ಪೆರ್ರಿ ಬದಲಿಗೆ ಸಯಾಲಿ ಸತ್ಗೆರೆ ಹಾಗೂ ಡೆಲ್ಲಿ ಫ್ರಾಂಚೈಸಿಯು ಸದರ್ಲೆಂಡ್ ಬದಲಿಗೆ ಆಸೀಸ್ ಮೂಲದ ಲೆಗ್ ಸ್ಪಿನ್ನರ್ ಅಲಾನಾ ಕಿಂಗ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿವೆ.
ಎರಡನೇ ಆವೃತ್ತಿಯ WPL ಟೂರ್ನಿಯಲ್ಲಿ ಪೆರ್ರಿ ಗರಿಷ್ಠ ರನ್ ಬಾರಿಸಿದ ಆಟಗಾರ್ತಿ ಎನಿಸಿಕೊಂಡಿದ್ದರು.
WPL ಮೆಗಾ ಹರಾಜಿಗೂ ಮುನ್ನ ಆರ್ಸಿಬಿ ಫ್ರಾಂಚೈಸಿಯು ಎಲೈಸಿ ಪೆರ್ರಿ ಸೇರಿದಂತೆ ಸ್ಮೃತಿ ಮಂಧನಾ, ರಿಚಾ ಘೋಷ್ ಹಾಗೂ ಶ್ರೇಯಾಂಕ ಪಾಟೀಲ್ ಅವರನ್ನು ರೀಟೈನ್ ಮಾಡಿಕೊಂಡಿತ್ತು.