<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Politics

ರಾಜಕೀಯ ಗಲಾಟೆ : ಮಾಧು ಸ್ವಾಮಿ ಬಹಿರಂಗ ಅಸಮಾಧಾನ

ರಾಜಕೀಯ ಗಲಾಟೆ : ಮಾಧು ಸ್ವಾಮಿ ಬಹಿರಂಗ ಅಸಮಾಧಾನ
Summary: The incident of Madhu Swamy openly expressing displeasure against the party leaders has now attracted attention. So let's see what is the reason for this...

Belagavi news:

ರಾಜಕೀಯ ವಲಯದಲ್ಲಿ ಮಾಧುಸ್ವಾಮಿ ಅವರ ದಿಡೀರ್ ಪ್ರತ್ಯಕ್ಷತೆ ಇದೀಗ ಗಮನ ಸೆಳೆದಿದೆ. ಪಕ್ಷದ ನಾಯಕರ ನಡೆಗೆ ಸಂಬಂಧಿಸಿ ದಂತೆ ಅವರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿರುವುದು ಪಕ್ಷದೊಳಗಿನ ಚರ್ಚೆಗೆ ಕಾರಣವಾಗಿದೆ.

ಮಾಧುಸ್ವಾಮಿ ನಮ್ಮ ಹೇಳಿಕೆಯಲ್ಲಿ, ಪಕ್ಷದ ಕೆಲವು ನಿರ್ಧಾರಗಳು ಹಾಗೂ ನಾಯಕರ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಿಸಿದೆ. ದಿಡೀರ್ ಆಗಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಅವರು ನೀಡಿದ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗಿದೆ.

ತಪಕ್ಷದೊಳಗಿನ ನಿರ್ಧಾರ ಪ್ರಕ್ರಿಯೆ ಹಾಗೂ ನಾಯಕತ್ವದ ಕಾರ್ಯವೈಖರಿ ಕುರಿತು ಎದ್ದಿರುವ ಈ ಅಸಮಾಧಾನ, ಮುಂದಿನ ದಿನಗಳಲ್ಲಿ ಪಕ್ಷದೊಳಗಿನ ಸಮೀಕರಣಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

Sponsored

ಮಾಧುಸ್ವಾಮಿ ಅವರ ಈ ನಡೆ ಪಕ್ಷದ ಒಳಗಣ ಅಸಮಾಧಾನವನ್ನು ಮತ್ತೊಮ್ಮೆ ಹೊರ ಹಾಕಿದಂತಾಗಿದ್ದು, ಈ ಕುರಿತು ಮುಂದಿನ ಸ್ಪಷ್ಟನೆ ಏನು ಬರುತ್ತದೆ ಎಂಬುದರ ಮೇಲೆ ಎಲ್ಲರ ಗಮನ ನೆಟ್ಟಿದೆ.

ವಿಧಾನಸಭೆ ಚುನಾವಣೆಯ ಸೋಲು ಹಾಗೂ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ನಡೆದ ಬೆಳವಣಿಗೆಗಳ ಬಳಿಕ ಬಿಜೆಪಿ ಪಕ್ಷದಿಂದ ದೂರ ಉಳಿದಿದ್ದ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಇದೀಗ ದಿಢೀರ್ ರಾಜಕೀಯ ಮುನ್ನೆಲೆಗೆ ಬಂದಿದ್ದಾರೆ.

2023ರ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಸೋತ ಬಳಿಕ ಅವರು ಪಕ್ಷದ ಕಾರ್ಯ ಚಟುವಟಿಕೆಗಳಿಂದ ಬಹುತೇಕ ಅಂತರ ಕಾಯ್ದುಕೊಂಡಿದ್ದರು. ಆದರೆ ಇದೀಗ ಏಕಾಏಕಿ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ಮಾಧುಸ್ವಾಮಿ, ಸ್ವಪಕ್ಷದ ನಾಯಕರ ನಡೆಯ ಕುರಿತು ಬಹಿರಂಗ ಅಸಮಾಧಾನ ವ್ಯಕ್ತಪಡಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಪಕ್ಷದ ಒಳಗಿನ ಬೆಳವಣಿಗೆಗಳು ಹಾಗೂ ನಾಯಕತ್ವದ ಕಾರ್ಯವೈಕರಿಯ ಬಗ್ಗೆ ಅವರು ನೀಡಿರುವ ಪ್ರತಿಕ್ರಿಯೆ ಇದೀಗ ಬಿಜೆಪಿ ವಲಯದಲ್ಲೇ ಕುತೂಹಲ ಮೂಡಿಸಿದೆ. ದೀರ್ಘಕಾಲದ ಮೌನದ ಬಳಿಕ ಮಾಧುಸ್ವಾಮಿ ಅವರ ದಿಡೀರ್ ಎಂಟ್ರಿ ಮತ್ತು ಹೇಳಿಕೆಗಳು ರಾಜಕೀಯ ಸಮೀಕರಣಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತದೆ.

Sponsored

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಅವರು ಮುಂದಿನ ದಿನಗಳಲ್ಲಿ ಪಕ್ಷದೊಳಗಿನ ಚಟುವಟಿಕೆಗಳಲ್ಲಿ ಸಕ್ರಿಯರಾಗಲಿದ್ದಾರೆಯೇ ಅಥವಾ ಮತ್ತಷ್ಟು ಅಂತರ ಕಾಯ್ದುಕೊಳ್ಳಲಿದ್ದಾರೆ ಎಂಬುವುದರ ಬಗ್ಗೆ ಕುತೂಹಲ ಹೆಚ್ಚಾಗಿದೆ.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಜೆ.ಸಿ ಮಾಧು ಸ್ವಾಮಿ ಬಿಜೆಪಿ ಪಕ್ಷದಿಂದ ದೂರವಾಗಿದ್ದಾರಾ ಎಂಬ ಪ್ರಶ್ನೆಗೆ ಸ್ಪಷ್ಟನೆ ನೀಡಿದ್ದಾರೆ. ಜನ ತಮ್ಮನ್ನು ಸಾರ್ವಜನಿಕವಾಗಿ ಇರಲು ಇಷ್ಟಪಡಲಿಲ್ಲ ಎಂದು ಹೇಳಿದ ಅವರು, ಅದೇ ಕಾರಣದಿಂದ ಚುನಾವಣೆಯಲ್ಲಿ ಸೋಲು ಕಂಡಿರುವುದಾಗಿ ತಿಳಿಸಿದ್ದಾರೆ.

"ಜನ ನನ್ನನ್ನು ಪಬ್ಲಿಕ್ ನಲ್ಲಿ ಇರಲು ಇಷ್ಟಪಡಲಿಲ್ಲ. ಅದಕ್ಕೆ ನನ್ನನ್ನು ಸೋಲಿಸಿದ್ದಾರೆ. ಅದಕ್ಕೆ ನಾನು ಸ್ವಲ್ಪ ದೂರ ಇದ್ದೇನೆ. ಆದರೆ ಕಾರ್ಯಕರ್ತರ ಜೊತೆ ಸದಾ ನಾನು ಇದ್ದೇನೆ". ಎಂದು ಮಾಧುಸ್ವಾಮಿ ಹೇಳಿದ್ದಾರೆ. ಜೊತೆಗೆ, ಈ ಜಿಲ್ಲೆಯಲ್ಲಿ ಸಂಘ ಸಂಸ್ಥೆಗಳ ಚುನಾವಣೆ ಹಾಗೂ ಕಾರ್ಯಕರ್ತರ ಚುನಾವಣೆಯಲ್ಲಿ ತಾವು ಸಕ್ರಿಯವಾಗಿ ಭಾಗವಹಿಸುತ್ತಿರುವ ಏಕೈಕ ರಾಜ್ಯದ ಅಭ್ಯರ್ಥಿ ಎಂದು ಅವರು ಹೇಳಿದ್ದಾರೆ.

ತಾವು ಚುನಾವಣೆಯಲ್ಲಿ ಸೋತಿದ್ದರು, ಕಾರ್ಯಕರ್ತರ ಜೊತೆ ಉತ್ತಮ ಸಂಬಂಧ ಹೊಂದಿರುವುದಾಗಿ ಸ್ಪಷ್ಟಪಡಿತ್ತಿರುವ ಮಾಧುಸ್ವಾಮಿ, ಪಕ್ಷದ ಚಟುವಟಿಕೆಗಳಿಂದ ಸಂಪೂರ್ಣವಾಗಿ ದೂರವಾಗಿಲ್ಲ ಎಂದು ತಿಳಿಸಿದ್ದಾರೆ.

Sponsored

ಇದೇ ವೇಳೆ ಯಡಿಯೂರಪ್ಪ ಅಭಿಮಾನೋತ್ಸವ ಕಾರ್ಯಕ್ರಮಕ್ಕೆ ಗೈರು ಹಾಜರಾಗಿರುವ ಬಗ್ಗೆ ಪ್ರತಿಕ್ರಿಯಿಸಿದವರು,"ಕರೆಯದೆ ಇರುವ ಕಾರ್ಯಕ್ರಮಗಳಿಗೆ ನಾನು ಹೇಗೆ ಬರಲಿ?" ಎಂದು ಪ್ರಶ್ನಿಸಿ ಸ್ವಪಕ್ಷ ನಾಯಕರ ನಡೆಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಹೇಳಿಕೆಗಳು ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಮಾಧುಸ್ವಾಮಿ ಅವರ ನಿಲುವು ಕುರಿತು ಪಕ್ಷದೊಳಗಿನ ಮುಂದಿನ ಬೆಳವಣಿಗೆಗಳತ್ತ ಎಲ್ಲರ ಗಮನ ನೆಟ್ಟಿದೆ.

Also Read:

ಭಾರತಕ್ಕೆ ಎಲ್ಪಿಜಿ ಸಾಗಾಟ: ಹಾರ್ಮುಜ್ ಜಲಸಂಧಿ ದಾಟಿದ ಮತ್ತೊಂದು ಹಡಗು

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online