BELAGAVI NEWS :
ಎಡ್ಜ್ ಬಾಸ್ಟ್ ನಲ್ಲಿ ಕನ್ನಡಿಗನ ಕಮಲ್ : ಪ್ರಸಿದ್ ಕೃಷ್ಣ ಒಂದೇ ಓವರ್ ನಲ್ಲಿ ಎರಡು ವಿಕೆಟ್ ಪಡೆದು ಮಿಂಚು
ಎಡ್ಜ್ ಬಾಸ್ಟನ್ ನಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭಿಕ ಆಘಾತದ ಬಳಿಕ ಭರ್ಜರಿ ಕಮ್ ಬ್ಯಾಕ್ ಮಾಡಿದೆ. ಟಾಸ್ ಸೋತು ಬೌಲಿಂಗ್ ಗೆ ಇಳಿದ ಭಾರತ ತಂಡ, ಎದುರಾಳಿ ತಂಡದ ಪ್ರಮುಖ ಬ್ಯಾಟರಗಳನ್ನು ಅಲ್ಪ ಮಟ್ಟಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದೆ.
ಮೊದಲ ವಿಕೆಟ್ ಗೆ 61 ಬಿಟ್ಟು ಕೊಟ್ಟಿದ್ದ ಟೀಮ್ ಇಂಡಿಯಾ, ಬಳಿಕ ಕೇವಲ 19 ರನ್ ಗಳ ಅಂತರದಲ್ಲಿ ಪ್ರಮುಖ ಐದು ವಿಕೆಟ್ಗಳನ್ನು ಕಬಳಿಸಿ ಬೌಲಿಂಗ್ ಪ್ರಾಬಲ್ಯ ಮೆರೆದಿದೆ.
ಈ ಅದ್ಭುತ ಪ್ರದರ್ಶನದಲ್ಲಿ ಕನ್ನಡಿಗ ವೇಗಿ ಪ್ರಸಿದ್ಧ್ ಕೃಷ್ಣ ಪ್ರಮುಖ ಪಾತ್ರ ವಹಿಸಿದ್ದಾರೆ. ಒಂದೇ ಓವರ್ ನಲ್ಲಿ ಎರಡು ಮಹತ್ವದ ವಿಕೆಟ್ಗಳನ್ನು ಪಡೆದ ಪ್ರಸಿದ್ಧ, ಮೊದಲು ಅನುಭವಿ ಬ್ಯಾಟರ್ ಜೋಸ್ ಬಟ್ಲರ್ ಅವರನ್ನು ಪೆವಿಲಿಯನ್ ಗೆ ಕಳುಹಿಸಿದರು. ಬಳಿಕ ಆಲ್ ರೌಂಡರ್ ಸ್ಯಾಮ್ ಕರನ್ ಅವರನ್ನು ಖಾತೆ ತೆರೆಯುವ ಮುನ್ನವೇ ಔಟ್ ಮಾಡುವ ಮೂಲಕ ಎದುರಾಳಿ ತಂಡಕ್ಕೆ ಮತ್ತೊಂದು ಆಘಾತ ನೀಡಿದರು.
ಪ್ರಸಿದ್ಧ್ ಕೃಷ್ಣ ಅವರ ವೇಗ ಮತ್ತು ನಿಖರ ಬೌಲಿಂಗ್ ನೆರವಿನಿಂದ ಟೀಮ್ ಇಂಡಿಯಾ ಪಂದ್ಯದಲ್ಲಿ ಮತ್ತೆ ಹಿಡಿತ ಸಾಧಿಸಿದ್ದು, ಭಾರತೀಯ ಬೌಲರ್ಗಳ ಸಂಘಟಿತ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
T-20 ಯಲ್ಲಿ ದುಬಾರಿಯಾಗಿದ್ದ ಪ್ರಸಿದ್ಧ ಕೃಷ್ಣ : ಏಕದಿನದಲ್ಲಿ ಭರ್ಜರಿ ಕಮ್ ಬ್ಯಾಕ್
ಇತ್ತೀಚಿಗೆ ನಡೆದ ಟಿ -20 ಸರಣಿಯಲ್ಲಿ ಪ್ರಸಿದ್ಧ ಕೃಷ್ಣ ಅವರ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ದುಬಾರಿ ಬೌಲಿಂಗ್ ನಿಂದಾಗಿ ಸಾಕಷ್ಟು ರನ್ ಬಿಟ್ಟು ಕೊಟ್ಟಿದ್ದ ಅವರು, ತಂಡದ ಹಿನ್ನಡೆಯ ಕಾರಣರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಟಿ -20 ತಂಡದಿಂದ ಕೈ ಬಿಡಲಾಗಿತ್ತು.
ಆದರೆ ಏಕದಿನ ಸರಣಿಯಲ್ಲಿ ಹೊಸ ಉತ್ಸಾಹದೊಂದಿಗೆ ಕಣಕ್ಕಿಳಿದಿರುವ ಪ್ರಸಿದ್ಧ ಕೃಷ್ಣ ತಮ್ಮ ಹಿಂದಿನ ತಪ್ಪುಗಳನ್ನು ಸರಿಪಡಿಸಿಕೊಂಡಿದ್ದಾರೆ. ಎಡ್ಜ್ ಬಾಸ್ಟನ ಏಕದಿನ ಪಂದ್ಯದಲ್ಲಿ ನಿಖರ ಬೌಲಿಂಗ್ ಮೂಲಕ ಇಂಗ್ಲೆಂಡ್ ಬ್ಯಾಟರ್ ಗಳ ಮೇಲೆ ಒತ್ತಡ ಹೇರಿದ ಅವರು, ರನ್ ನಿಯಂತ್ರಿಸುವುದರ ಜೊತೆಗೆ ಪ್ರಮುಖ ವಿಕೆಟ್ಗಳನ್ನು ಕಬಳಿಸಿ ಮಿಂಚಿದ್ದಾರೆ
ಆರು ಓವರ್ ಗಳಲ್ಲಿ ಕೇವಲ 20 ರನ್ : ಪ್ರಸಿದ್ಧ ಕೃಷ್ಣನ ಕಟ್ಟುನಿಟ್ಟಾದ ಬೌಲಿಂಗ್
ಎಡ್ಜ ಬಾಸ್ಟನಲ್ಲಿ ಏಕದಿನ ಪಂದ್ಯದಲ್ಲಿ ಕನ್ನಡಿಗ ವೇಗಿ ಪ್ರಸಿದ್ಧ ತಮ್ಮ ಇತರ ಬೌಲಿಂಗ್ ಮೂಲಕ ಇಂಗ್ಲೆಂಡ್ ಬ್ಯಾಟರ್ ಗಳಿಗೆ ಕಡಿವಾಣ ಹಾಕಿದರು. ತಮ್ಮ ಕೋಟಾದ ಮೊದಲ ಆರು ಓವರ್ ಗಳಲ್ಲಿ ಅವರು ಕೇವಲ 20 ರನ್ ಮಾತ್ರ ಬಿಟ್ಟುಕೊಟ್ಟರು.
ಪ್ರಸಿದ್ದ್ ನೀಡಿದ 20 ಓವರ್ ಗಳಲ್ಲಿ ಎಂಟು ರನ್ ಗಳು ಬೈಸ್ ಮೂಲಕ ಬಂದವು.ಅಂದರೆ, 36 ಎಸೆತಗಳಲ್ಲಿ ಅವರು ಕೇವಲ 12 ರನ್ಗಳನ್ನಷ್ಟೇ ಎದುರಾಳಿ ಬ್ಯಾಟರ್ ಗಳಿಗೆ ನೀಡಿದ್ದಾರೆ. ಇದರ ಜೊತೆಗೆ ಎರಡು ಮೇಡನ್ ಓವರ್ಗಳನ್ನು ಬೌಲ್ ಮಾಡುವ ಮೂಲಕ ತಮ್ಮ ನಿಯಂತ್ರಣವನ್ನು ತೋರಿಸಿದರು.
ಪ್ರಸಿದ್ದ್ ಕೃಷ್ಣ ಅವರ ಈ ಕಟ್ಟುನಿಟ್ಟಾದ ಬೌಲಿಂಗ್ ನಿಂದ ಇಂಗ್ಲೆಂಡ್ ತಂಡದ ಆರಂಭಿಕ ಬ್ಯಾಟರ್ ಗಳಿಗೆ ಮುಕ್ತವಾಗಿ ರನ್ ಗಳಿಸಲು ಸಾಧ್ಯವಾಗಲಿಲ್ಲ. ಆರಂಭಿಕ ವಿಕೆಟ್ಗಳ ಪತನದ ಬಳಿಕ ಇಂಗ್ಲೆಂಡ್ ಬ್ಯಾಟಿಂಗ್ ಕ್ರಮಾಂಕ ಒತ್ತಡಕ್ಕೆ ಸಿಲುಕಿತು .
ಒಂದೇ ಓವರ್ ನಲ್ಲಿ ಎರಡು ವಿಕೆಟ್ : ಪ್ರಸಿದ್ಧ ಕೃಷ್ಣನ ಮಾರಕ ದಾಳಿ
17 ಓವರ್ ಗಳಲ್ಲಿ ದಾಳಿಗಿಳಿದ ಪ್ರಸಿದ್ಧ, ಒಂದೇ ಓವರ್ ನಲ್ಲಿ ಇಂಗ್ಲೆಂಡ್ ತಂಡದ ಇಬ್ಬರು ಪ್ರಮುಖ ಬ್ಯಾಟರಗಳನ್ನು ಫೆಬಿಲಿಯನ್ ಗೆ ಕಳಿಸಿದರು.
ಬಟ್ಲರ್ ವಿಕೆಟ್ ಬಳಿಕ ಕ್ರಿಸ್ ಗೆ ಬಂದ ಸ್ಯಾಮ್ ಕರನ್ ಕೂಡ ಪ್ರಸಿದ್ಧ ಅವರ ಸ್ಮಾರಕ ಬೌಲಿಂಗ್ ಎದುರು ಹೆಚ್ಚು ಹೊತ್ತು ನಿಲ್ಲಲಿಲ್ಲ. 3 ಎಸೆತಗಳನ್ನು ಎದುರಿಸಿದ ಕರನ್ ಯಾವುದೇ ರನ್ ಗಳಿಸದೆ ವಿಕೆಟ್ ಕಿಪ್ಪರ್ ಕೆ.ಎಲ್.ರಾಹುಲ್ ಅವರಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಈ ಮೂಲಕ ಒಂದೇ ಓವರ್ ನಲ್ಲಿ ಎರಡು ಪ್ರಮುಖ ವಿಕೆಟ್ಗಳನ್ನು ಕಂಬಳಿಸಿದ ಪ್ರಸಿದ್ಧ ಕೃಷ್ಣ, ಇಂಗ್ಲೆಂಡ್ ಬ್ಯಾಟರ್ ಕ್ರಮಾಂಕಕ್ಕೆ ದೊಡ್ಡ ಹೊಡೆತ ನೀಡಿದರು.