<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ಇಂಧನ ಉಳಿಸಲು ಪ್ರಧಾನಿ ಮೋದಿ ವಿಶೇಷ ಕ್ರಮ

ಇಂಧನ ಉಳಿಸಲು ಪ್ರಧಾನಿ ಮೋದಿ ವಿಶೇಷ ಕ್ರಮ
Summary: A special incident in which Prime Minister Narendra Modi travelled with a reduced convoy to save fuel has attracted attention. This move once again showed the importance he attaches to energy conservation and a simple lifestyle. This decision has been widely discussed and appreciated across the country.

Belagavi News:

ನವದೆಹಲಿ, ಮೇ 13: ದೇಶದಲ್ಲಿ ಉಂಟಾಗಿರುವ ಇಂಧನ ಬಿಕ್ಕಟ್ಟನ್ನು ನಿಯಂತ್ರಿಸುವ ಹಾಗೂ ಇಂಧನ ಸುರಕ್ಷತೆಗೆ ಉತ್ತೇಜಿನ ನೀಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಹೆಜ್ಜೆಗಳನ್ನು ಕೈಗೊಂಡಿದ್ದಾರೆ.

ಇಂಧನ ಬಳಿಕೆಯನ್ನು ಕಡಿಮೆ ಮಾಡುವ ಸಲುವಾಗಿ ಪ್ರಧಾನಿ ಮೋದಿ ಈ ಹಿಂದೆ ದೇಶದ ಜನರಿಗೆ ಸಾಧ್ಯವಾದಷ್ಟು ಅನಗತ್ಯ ಪ್ರಯಾಣಗಳನ್ನು ತಪ್ಪಿಸಲು, ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು ಹಾಗೂ ಸ್ವಂತ ವಾಹನಗಳ ಬದಲು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಹೆಚ್ಚು ಬಳಸಲು ಕರೆ ನೀಡಿದ್ದರು.

ಅದೇ ರೀತಿ, ಸಾಧ್ಯವಾದಷ್ಟು ಜನರು ಮನೆಯಿಂದಲೇ ಕೆಲಸ ಮಾಡುವ (Work From Home) ವಿಧಾನವನ್ನು ಅನುಸರಿಸಲು ಹಾಗು ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಕಚೇರಿ ಅಥವಾ ಹೊರಗಿನ ಪ್ರಯಾಣ ಕೈಗೊಳ್ಳಲು ಅವರು ಸಲಹೆ ನೀಡಿದ್ದಾರೆ.

ಈ ಸೂಚನೆಗಳು ದೇಶದಲ್ಲಿ ಇಂಧನ ಉಳಿಸುವ ಅಭಿಯಾನಕ್ಕೆ ಹೊಸ ದಿಕ್ಕು ನೀಡಿದ್ದು, ಪರಿಸರ ಸಂರಕ್ಷಣೆ ಮತ್ತು ಇಂಧನದ ಪರಿಣಾಮಕಾರಿ ಬಳಕೆಗೆ ಮಹತ್ವದ ಸಂದೇಶವಾಗಿ ಪರಿಣಮಿಸಿದೆ.

ದೇಶದಲ್ಲಿ ಉಂಟಾಗಿರುವ ಇಂಧನ ಬಿಕ್ಕಟ್ಟನ್ನು ನಿಯಂತ್ರಿಸುವ ಮತ್ತು ಇಂಧನ ಸಂರಕ್ಷಣೆಗೆ ಉತ್ತೇಜನ ನೀಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಕ್ರಮ ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಬೆಂಗಾವಲು ಪಡೆಯ ಗಾತ್ರವನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಎಸ್ ಪಿಜಿ (SPG) ಶಿಷ್ಟಾಚಾರದ ಪ್ರಕಾರ ಅಗತ್ಯ ಭದ್ರತಾ ವ್ಯವಸ್ಥೆಯನ್ನು ಕಾಪಾಡಿಕೊಂಡಿದ್ದರು, ಅನಗತ್ಯ ವಾಹನಗಳ ಬಳಕೆಯನ್ನು ಕಡಿತಗೊಳಿಸಲಾಗಿದೆ. ಇದರಿಂದ ಇಂಧನ ಉಳಿತಾಯಕ್ಕೆ ಸಹಕಾರಿಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಪ್ರಧಾನಿ ಮೋದಿ ಅವರ ಈ ಕ್ರಮವು ದೇಶದಲ್ಲಿ ಇಂಧನ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಮಹತ್ವದ ಸಂದೇಶವಾಗಿ ಪರಿಗಣಿಸಲಾಗುತ್ತಿದೆ.

ಸರ್ಕಾರದೊಳಗೆ ಕಠಿಣ ಕ್ರಮಗಳ ಅನುಷ್ಠಾನಕ್ಕೆ ಮಾದರಿಯಾಗಿ ಪ್ರಧಾನಿ ನರೇಂದ್ರ ಮೋದಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಇಂಧನ ಉಳಿತಾಯ ಮತ್ತು ಅನಗತ್ಯ ವೆಚ್ಚ ಕಡಿತಕ್ಕೆ ಒತ್ತು ನೀಡುವ ಉದ್ದೇಶದಿಂದ ಅವರು ಬೆಂಗಾವಲು ಪಡೆಯ ಗಾತ್ರವನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ.

ಲಭ್ಯವಿರುವ ಮಾಹಿತಿಯ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರ ವಾಹನದ ಹಿಂದೆ ಈಗ ಕೇವಲ ಎರಡು ಬೆಂಗಾವಲು ವಾಹನಗಳು ಮಾತ್ರ ಸಾಗುತ್ತಿರುವ ದೃಶ್ಯಗಳು ಕಂಡು ಬಂದಿದೆ. ಈ ಕ್ರಮವು ಸರ್ಕಾರದ ಮಟ್ಟದಲ್ಲಿಯೇ ಇಂಧನ ವ್ಯರ್ಥ ವನ್ನು ತಡೆಯಲು ಸ್ಪಷ್ಟ ಸಂದೇಶವನ್ನು ನೀಡಿದೆ.

ಇದರಿಂದ ಆಡಳಿತದೊಳಗೆ ಸರಳತೆ, ಶಿಸ್ತು ಮತ್ತು ಇಂಧನ ಸಂರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ ಎಂಬ ಸಂದೇಶ ಮತ್ತೊಮ್ಮೆ ದೃಢಪಟ್ಟಿದೆ.

Also Read:

ಕರ್ನಾಟಕದ ಕಲಬುರಗಿ ರೊಟ್ಟಿ ಈಗ ಅಂತರರಾಷ್ಟ್ರೀಯ ಬ್ರಾಂಡ್

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online