belagavi news :
ಕಿರುತೆರೆಯಲ್ಲಿ ಕಿರುತೆರೆಗೆ ಬಂದ ಕನ್ನಡದ ಸಿನಿರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ನಟಿ ರಚಿತಾ ರಾಮ್ ಇಂದು ಸ್ಯಾಂಡಲ್ವುಡ್ ನ ಬಹುಬೇಡಿಕೆ ನಟಿಯರಲ್ಲೊಬರು. 'ಬುಲ್ ಬುಲ್' ಚಿತ್ರದ ಮೂಲಕ ಸಿಹಿ ಪಯಣ ಆರಂಭಿಸಿದ ಡಿಂಪಲ್ ಕ್ವೀನ್ ರಚಿತಾ ರಾಮ್, ಕಳೆದ 13 ವರ್ಷಗಳ ಲ್ಲಿ ಹಲವು ಹಿಟ್ ಸಿನಿಮಾಗಳ ಮೂಲಕ ಅಪಾರ ಅಭಿಮಾನಿ ಬಳಗವನ್ನು ಗಳಿಸಿಕೊಂಡಿದ್ದಾರೆ. ಯಶಸ್ಸು, ಸ್ಟಾರ್ಟಮ್ ಮತ್ತು ನಿರಂತರ ಬೇಡಿಕೆಯೊಂದಿಗೆ ರಚಿತಾ ರಾಮ್ ಕನ್ನಡ ಚಿತ್ರರಂಗದಲ್ಲಿ ಭದ್ರ ಸ್ಥಾನ ಉಳಿಸಿಕೊಂಡಿದ್ದಾರೆ.
‘ಬುಲ್ ಬುಲ್’ ಚಿತ್ರದ ಮೂಲಕ ಕನ್ನಡ ಸಿನಿರಂಗಕ್ಕೆ ಭರ್ಜರಿಯಾಗಿ ಎಂಟ್ರಿ ಕೊಟ್ಟ ರಚಿತಾ ರಾಮ್, ಮೊದಲ ಸಿನಿಮಾದಲ್ಲೇ ಅದ್ಬುತ ಅಭಿನಯದಿಂದ ಪ್ರೇಕ್ಷಕರ ಮನಸ್ಸು ಗೆದ್ದರು. ಬುಲ್ ಬುಲ್ ಚಿತ್ರದಲ್ಲಿ ಕಾವೇರಿ ಎಂಬ ಪಾತ್ರದಲ್ಲಿ ಮಿಂಚಿದ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಅಭಿನಯಕ್ಕೆ ಸಿನಿಪ್ರಿಯರು ಫಿದಾ ಆಗಿದ್ದರು. ಫಿಲಂ ಫೇರ್ ಬೆಸ್ಟ್ ಆಕ್ಟ್ರೆಸ್ ಅವಾರ್ಡ್ ಅವರಿಗೆ ಒಲಿದಿತ್ತು. ವಿಶೇಷವೇನೆಂದರೆ, ಈ ಚಿತ್ರದ ನಾಯಕ ನಟಿ ಪಾತ್ರಕ್ಕಾಗಿ 2012ರಲ್ಲಿ ನಡೆದ ಆಡಿಶನ್ ನಲ್ಲಿ 200 ಮಂದಿ ಸ್ಪರ್ಧಿಸಿದ್ದರು. ಆ ಪೈಕಿಯಾದ ಚಿತ್ರರಂಗದ ಟಾಪ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ಕಿರುತೆರೆಯಲ್ಲಿ ಅರಸೀ ಧಾರಾವಾಹಿ ಮೂಲಕ ಮನೆ ಮಾತಾಗಿದ್ದ ಬಿಂದ್ಯಾ ರಾಮ್,'ಬುಲ್ ಬುಲ್' ಸಿನಿಮಾದ ಬಳಿಕ ರಚಿತಾ ರಾಮ್ ಆಗಿ ಕನ್ನಡ ಸಿನಿ ರಂಗದಲ್ಲಿ ಹೊಸ ಅಧ್ಯಾಯ ಶುರು ಮಾಡಿದರು. ಮೊದಲ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಅಭಿನಯಿಸುವ ಅವಕಾಶ ಪಡೆದಿದ್ದ ಈ ನಟಿ, ಅಂದಿನ ಗಾಂಧಿನಗರದ ಹಾಟ್ ಟಾಪಿಕ್ ಆಗಿದ್ದರು. ನಂತರ ತಮ್ಮ ಪ್ರತಿಭೆ ಮೂಲಕ ಮತ್ತು ಗ್ಲಾಮರ್, ಅದ್ಭುತ ಅಭಿನಯದ ಮೂಲಕ ಸ್ಯಾಂಡಲ್ ವುಡ್ ನ ಬಹುತೇಕ ಎಲ್ಲಾ ಸೂಪರ್ ಸ್ಟಾರ್ಸ್ ಜೊತೆ ಸ್ಕ್ರೀನ್ ಶೇರ್ ಮಾಡಿ ಇಂದು ಬಹು ದೊಡ್ಡ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ಸೂಪರ್ ಸ್ಟಾರ್ ಜೊತೆ ರಚಿತಾ ರಾಮ್ ಸ್ಕ್ರೀನ್ ಶೇರ್ : ತಮ್ಮ ಮೊದಲ ಸಿನಿಮಾವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಅಭಿನಯಿಸಿ ಎಲ್ಲರ ಮನಸ್ಸು ಗೆದ್ದ ರಚಿತಾ ರಾಮ್ ನಂತರ ಎಲ್ಲಾ ಸೂಪರ್ ಸ್ಟಾರ್ ಜೊತೆ ಅಭಿನಯಿಸಿದರು. ಕಿಚ್ಚ ಸುದೀಪ್, ಪುನೀತ್ ರಾಜಕುಮಾರ್, ಶಿವರಾಜಕುಮಾರ್, ರಮೇಶ್ ಅರವಿಂದ್ ಇನ್ನು ಹಲವು ಸ್ಟಾರ್ ನಟರ ಜೊತೆ ನಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ರಚಿತಾ ರಾಮ್ ಇತ್ತೀಚಿಗೆ ತಲೈವ ರಜನಿಕಾಂತ್ ಜೊತೆ ಕೂಲಿ ಸಿನಿಮಾದಲ್ಲಿ ಕೂಡ ವಿಶೇಷ ಪಾತ್ರದಲ್ಲಿ ಅಭಿನಯಿಸಿ ತಮಿಳು ಸಿನಿ ಪ್ರೇಕ್ಷಕರ ಹೃದಯವನ್ನು ಗೆದ್ದಿದ್ದಾರೆ .
ರಚಿತಾ ರಾಮ್ ಅವರು ಬುಲ್ ಬುಲ್ ಚಿತ್ರದ ನಂತರ ಅಂಬರೀಶ್, ದಿಲ್ ರಂಗೀಲಾ, ರತ್ನಾವರ, ಚಕ್ರವ್ಯೂಹ, ಜಗ್ಗುದಾದ, ಭರ್ಜರಿ, ಅಯೋಗ್ಯ, ಸೀತಾರಾಮ ಕಲ್ಯಾಣ, ಭರಾಟೆ, ರುಸ್ತುಂ, ಮಾನ್ಸೂನ್ ರಾಗ, ಕ್ರಾಂತಿ, ಮ್ಯಾಟ್ನಿ, ಸಂಜು ವೆಡ್ಸ್ ಗೀತಾ 2 ಇನ್ನು ಹಲವು ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಲ್ಯಾಂಡ್ ಲಾರ್ಡ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಸೂಪರ್ ಸ್ಟಾರ್ ದುನಿಯಾ ವಿಜಯ್ ಅವರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಜನವರಿ 23ರಂದು ರಾಜ್ಯಾದ್ಯಂತ 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಮೂಡಿಬಂದ ಉತ್ತಮ ಪ್ರದರ್ಶನ ನೀಡಿತು. ಈ ವರ್ಷದಲ್ಲಿ ತೆರೆಕಂಡ ಕನ್ನಡದ ಮೊದಲ ಸ್ಟಾರ್ ಸಿನಿಮಾ ಎಂದು ಲ್ಯಾಂಡ್ ಲಾರ್ಡ್ ಸಿನಿಮಾ ಯಶಸ್ಸು ಕಂಡಿತು. ಮಾರ್ಚ್ 19ರಿಂದ 05 ಕನ್ನಡ ಓಟಿಪಿ ವೇದಿಕೆಯಲ್ಲಿ ಈ ಚಿತ್ರ ಕಾಣಿಸಿಕೊಂಡಿದ್ದು, ಇನ್ನೂ ಒಂದು ಸಿನಿಮಾ ಕಲ್ಟ್ ಸಿನಿಮಾದಲ್ಲಿಯೂ ಪ್ರಮುಖ ಪಾತ್ರವನ್ನು ರಚಿತಾ ರಾಮ್ ವಹಿಸಿಕೊಂಡಿದ್ದಾರೆ. ಆ ಸಿನಿಮಾದಲ್ಲಿ ಸಚಿವ ಜಮೀರ್ ಪುತ್ರ ಝೈದ್ ಖಾನ್ ಮತ್ತು ಮಲೈಕಾ ವಸುಪಾಲ್ ಅವರ ಜೊತೆ ಅಭಿನಯಿಸಿದ್ದಾರೆ.
ರಚಿತಾ ರಾಮ್ ಅವರ ಮುಂಬರುವ ಸಿನಿಮಾಗಳ ಬಗ್ಗೆ ಹೇಳುವುದಾದರೆ,ಸತೀಶ್ ನೀನಾಸಂ ಅವರ ಜೊತೆ ಅಯೋಗ್ಯ 2'ದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮತ್ತು ಧ್ರುವ ಸರ್ಜಾ ಜೊತೆ ಕ್ರಿಮಿನಲ್ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ಮತ್ತು ತಮಿಳಿನ ಸಿನಿಮಾಗಳಲ್ಲಿಯೂ ಸಹ ಅಭಿನಯಿಸಲಿದ್ದಾರೆ. ಅವರ ಹೊಸ ಸಿನಿಮಾಗಳನ್ನು ನೋಡಲು ಅಭಿಮಾನಿಗಳು ಉಸ್ತುಕರಾಗಿದ್ದಾರೆ. ರಚಿತಾ ರಾಮ್ ಚಿತ್ರ ರಂಗದಲ್ಲಿ 13 ವರ್ಷಗಳ ಪೂರೈಸಿರುವ ಈ ಸಮಯದಲ್ಲಿ ಅಭಿಮಾನಿಗಳು ಸಂತಸವನ್ನು ವ್ಯಕ್ತಪಡಿಸಿ ಶುಭಾಶಯವನ್ನು ಕೋರಿದ್ದಾರೆ. ಕನ್ನಡ ನಟಿ ಮತ್ತಷ್ಟು ಬಹು ಭಾಷೆಯ ಸಿನಿಮಾಗಳಲ್ಲಿ ಮಿಂಚಲಿ ಎಂದು ಹಾರೈಸಿದ್ದಾರೆ.
Also Read:
PM ಮೋದಿ 8 ಸಂದೇಶದ ಹಿಂದಿನ ಕಾರಣವೇನು? ರುದ್ರ ಮೂರ್ತಿ ವಿಶ್ಲೇಷಣೆ ಹೊರ ಬಂದಿದೆ