ಭಾರತೀಯ ಚಿತ್ರರಂಗದ ಖ್ಯಾತ ಸಾಹಸ ನಿರ್ದೇಶಕ ಕೆ.ರವಿವರ್ಮ ಇದೇ ಮೊದಲ ಬಾರಿಗೆ ನಿರ್ಮಾಣ ಮಾಡಿರುವ ಬಹು ನಿರೀಕ್ಷಿತ ಕನ್ನಡ ಸಿನಿಮಾ "ರಕ್ಕಸಪುರದೋಳ್" ಫೆಬ್ರುವರಿ 6 ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೇರಿದಂತೆ ಚಂದನವನದ ಹಲವಾರು ಖ್ಯಾತ ನಿರ್ದೇಶಕರು ಬೆಂಬಲ ವ್ಯಕ್ತಪಡಿಸಿದ್ದು, ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಕನ್ನಡ ಚಿತ್ರರಂಗದ ಬಹುಬೇಡಿಕೆ ನಟ ರಾಜ್ ಬಿ. ಶೆಟ್ಟಿ ಈ ಚಿತ್ರದಲ್ಲಿ ಸಂಪೂರ್ಣ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರ ಅಭಿನಯವೇ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.ಖ್ಯಾತ ನಿರ್ದೇಶಕ ಜೋಗಿ ಪ್ರೇಮ್ ಅವರ ಶಿಷ್ಯ ರವಿ ಸಾರಂಗ ಈ ಚಿತ್ರಕ್ಕೆ ನಿರ್ದೇಶನ ನೀಡಿದ್ದು, ತಮ್ಮ ವಿಭಿನ್ನ ಶೈಲಿಯ ಮೂಲಕ ಗಮನ ಸೆಳೆದಿದ್ದಾರೆ.ಗುರುವಾರ ಸಂಜೆ "ರಕ್ಕಸಪುರದೋಳ್" ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಭರ್ಜರಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ಕಿಚ್ಚ ಸುದೀಪ್ ನಿನಿರ್ದೇಶಕರಾದ ಪ್ರೇಮ್, ಎ.ಪಿ. ಅರ್ಜುನ್ ಸೇರಿದಂತೆ ಹಲವು ಗಣ್ಯರು ಟ್ರೇಲರ್ ಅನ್ನು ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಟ್ರೇಲರ್ ಗೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯ ವ್ಯಕ್ತವಾಗಿದ್ದು ಸಿನಿಮಾ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ.
ಬಹುನಿರೀಕ್ಷಿತ ಕನ್ನಡ ಸಿನಿಮಾ "ರಕ್ಕಸಪುರದೋಳ್" ನಟ ರಾಜ್ ಬಿ. ಶೆಟ್ಟಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಇದು ಸಾಮಾನ್ಯ ಸಿನಿಮಾಗಳಲ್ಲಿ ಕಾಣುವ ರೂಡಿಬದ್ಧ ಪೊಲೀಸ್ ಪಾತ್ರವಲ್ಲ, ವಿಭಿನ್ನ ಶೈಲಿ, ಗಂಭೀರತೆ ಮತ್ತು ಆಂತರಿಕ ಸಂಘರ್ಷಗಳೊಂದಿಗೆ ರೂಪುಗೊಂಡ ಪಾತ್ರವೇ ಈ ಚಿತ್ರದ ವಿಶೇಷ ಆಕರ್ಷಣೆಯಾಗಿದೆ. ಟೈಲರ್ ಅನಾವರಣದ ನಂತರ ಮಾತನಾಡಿದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರಾಜ್ ಬಿ. ಶೆಟ್ಟಿ ಅವರ ಸಿನಿಮಾಗಳ ಆಯ್ಕೆಯನ್ನು ವಿಶೇಷವಾಗಿ ಮೆಚ್ಚಿಕೊಂಡರು ."ನಟ ರಾಜ್ ಬಿ. ಶೆಟ್ಟಿ ಹೆಸರೇಳಲಾಗದ ಶೀರ್ಷಿಕೆ ಇಟ್ಟು ಸಿನಿಮಾ ಮಾಡ್ತಾರೆ ಅಂತಹ ಸಿನಿಮಾಗಳು ಗೆಲ್ಲುತ್ತವೆ.ಸಿನಿಮಾ ಟೈಟಲ್ ಯಾವಾಗ ಬಾಯಿಗೆ ಬರಲ್ವೋ ಆಗ ಹಿಟ್ ಆಗುತ್ತೆ "ರಕ್ಕಸಪುರದೋಳ್"ಚಿತ್ರದ ಟ್ರೈಲರ್ ಉತ್ತಮವಾಗಿ ಮೂಡಿಬಂದಿದೆ" ಎಂದು ಹೇಳಿದರು. ಇದೇ ವೇಳೆ ನಿರ್ಮಾಪಕ ಕೆ ರವಿ ವರ್ಮ ಕುರಿತು ಮಾತನಾಡಿದ ಸುದೀಪ್ "ರವಿವರ್ಮ ಜೊತೆಗೆ ಸಿನಿಮಾ ಉದ್ಯಮಕ್ಕೆ ಕಾಲಿಟ್ಟಿದ್ದು ಅವರ ಬೆಳವಣಿಗೆಯನ್ನು ಹತ್ತಿರದಿಂದ ಕಂಡಿದ್ದೇನೆ. ಅವರ ನಿರ್ಮಾಣದ ಚೊಚ್ಚಲ ಚಿತ್ರಕ್ಕೆ ಒಳಿತಾಗಲಿ,” ಎಂದು ಶುಭ ಹಾರೈಸಿದರು. ಸಾಹಸ ನಿರ್ದೇಶಕರಾಗಿ ಹೆಸರು ಮಾಡಿರುವ ಕೆ. ರವಿವರ್ಮ ಅವರ ಮೊದಲ ನಿರ್ಮಾಣ, ಮತ್ತು ರವಿ ಸಾರಂಗ್ ನಿರ್ದೇಶನದ ಈ ಚಿತ್ರ ಈಗಾಗಲೇ ಟ್ರೈಲರ್ ಮೂಲಕ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು ಫೆಬ್ರವರಿ ೬ರಂದು ತೆರೆಗೆ ಬರುವ ರಕ್ಕಸಪುರದೋಳ್ ಮೇಲೆ ಪ್ರೇಕ್ಷಕರ ನಿರೀಕ್ಷೆ ಗಗನಕ್ಕೇರಿದೆ.
ಬಹುನಿರೀಕ್ಷಿತ ಕನ್ನಡ ಸಿನಿಮಾ “ರಕ್ಕಸಪುರದೋಳ್”ಅನ್ನು ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ನಿರ್ಮಿಸಲಾಗಿದೆ ಎಂದು ಚಿತ್ರತಂಡ ತಿಳಿಸಿದೆ. ಚಿತ್ರದ ಪ್ರಕ್ರಿಯೆ ಉತ್ತಮವಾಗಿ ಬಂದಲ್ಲಿ ಇತರೆ ಭಾಷೆಗಳಲ್ಲೂ ಡಬ್ಬಿಂಗ್ ಮಾಡುವ ಉದ್ದೇಶವಿದೆ ಎಂದು ನಿರ್ಮಾಪಕರು ಸ್ಪಷ್ಟಪಡಿಸಿದ್ದಾರೆ. ಚಿತ್ರದ ನಿರ್ಮಾಣದ ಕುರಿತು ಮಾತನಾಡಿದ ತಂಡ, ನಿರ್ದೇಶಕ ಪ್ರೇಮ್ ಹಾಗೂ ಕೆವಿಎನ್ ಸಂಸ್ಥೆ ನೀಡಿದ ಬೆಂಬಲದ ಕಾರಣದಿಂದಲೇ “ರಕ್ಕಸಪುರದೋಳ್” ಸಿನಿಮಾ ಮೂಡಿ ಬಂದಿದೆ. ಈ ಪ್ರೋತ್ಸಾಹವನ್ನು ಯಾವುದೇ ಕಾರಣಕ್ಕೂ ಎಂದಿಗೂ ಮರೆಯುವುದಿಲ್ಲ ಎಂದು ಕೃತಜ್ಞತೆ ವ್ಯಕ್ತಪಡಿಸಿದರು. ಚಿತ್ರದ ಕಥಾವಸ್ತುವಿನ ಬಗ್ಗೆ ಮಾತನಾಡಿ, ಇದು ಒಂದು ಸೈಕಲಾಜಿಕಲ್ ಆಕ್ಷನ್ ಥ್ರಿಲ್ಲರ್ ಸಿನಿಮಾ, ನಟ ರಾಜ್ ಬಿ ಶೆಟ್ಟಿ ಅವರು ಆಫ್ ಮೈಂಡ್ ಪೊಲೀಸ್ ಇನ್ಸ್ಪೆಕ್ಟರ್ ಎಂಬ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಚಿತ್ರ ಅತ್ಯಂತ ಚೆನ್ನಾಗಿ ಮೂಡಿ ಬಂದಿದೆ. ಎಲ್ಲರ ಸಹಕಾರ ಇರಲಿ ಎಂದು ಮನವಿ ಮಾಡಿದರು. ವಿಭಿನ್ನ ಕಥಾವಸ್ತು, ಮನೋವೈಜ್ಞಾನಿಕ ತ್ರಿಲ್ಲರ್ ಶೈಲಿ ಮತ್ತು ಬಹುಭಾಷಾ
ಯೋಜನೆಯೊಂದಿಗೆ “ರಕ್ಕಸಪುರದೋಳ್ ಬಿಡುಗಡೆ ಈಗಾಗಲೇ ಕನ್ನಡ ಸಿನಿಮಾ ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಹುಟ್ಟು ಹಾಕಿದೆ.
ಬಹುನಿರೀಕ್ಷಿತ ಕನ್ನಡ ಸಿನಿಮಾ “ರಕ್ಕಸಪುರದೋಳ್" ಕುರಿತು ನಾಯಕ ನಟ ರಾಜ್ ಬಿ ಶೆಟ್ಟಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಸಿನಿಮಾ ಒಪ್ಪಿಕೊಳ್ಳಲು ನಿರ್ದೇಶಕರೇ ಮುಖ್ಯ ಕಾರಣ. ಕನ್ನಡದಲ್ಲಿ ನಿರ್ದೇಶಕರ ಕೊರತೆ ಇದೆ ಎಂದು ನಾನು ಪದೇ ಪದೇ ಹೇಳುತ್ತೇನೆ. ಆದರೆ ಇಲ್ಲಿ ನಿರ್ದೇಶಕರು ಕಥೆ ಕೇಳಿದ ರೀತಿ ನನಗೆ ತುಂಬಾ ಇಷ್ಟವಾಯಿತು ಎಂದು ಹೇಳಿದರು.ಇದೇ ವೇಳೆ ಸಿನಿಮಾ ಉದ್ಯಮದ ಬಗ್ಗೆ ಮಾತನಾಡಿದ ಅವರು "ತಂತ್ರಜ್ಞರು ಶ್ರೀಮಂತರಾಗಿರುವ ಸಿನಿಮಾ ಇದು. ಕಡಿಮೆ ಬಜೆಟ್ ಸಿನಿಮಾಗಳು ಯಶಸ್ಸು ಕಂಡಾಗ ಅದು ಇಡೀ ಚಿತ್ರರಂಗಕ್ಕೆ ಒಳ್ಳೆಯದಾಗುತ್ತದೆ.ಈ ಸಿನಿಮಾ ಯಶಸ್ವಿಯಾದರೆ ಇಡೀ ತಂಡಕ್ಕೂ, ಚಿತ್ರರಂಗಕ್ಕೂ ಲಾಭವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಿರ್ಮಾಪಕ ಕೆ ರವಿಕುಮಾರ್ ಮಾತನಾಡಿ “ರಕ್ಕಸಪುರದೋಳ್" ಸಿನಿಮಾ ಕಥೆ ಹುಟ್ಟಿಕೊಂಡ ಹಿನ್ನೆಲೆಯನ್ನು ಹಂಚಿಕೊಂಡರು.ರಸ್ತುಂ ಸಿನಿಮಾ ಮಾಡುವಾಗ ನಿರ್ದೇಶಕ ರವಿ ಸಾರಂಗ ಕಥೆ ಹೇಳಿದ್ದರೂ. ಕಥೆ ಹೇಳುತ್ತಿದ್ದಂತೆ ಥ್ರಿಲ್ ಆಯ್ತು ನಂತರ ರಾಜ್ ಬಿ ಶೆಟ್ಟಿ ಕಥೆ ಒಪ್ಪಿಕೊಂಡರು. ಅವರು ಸ್ವತಃ ಕರೆ ಮಾಡಿ ಕಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಎಂದರು. ಪ್ರೊಡಕ್ಷನ್ ಅನುಭವ ಕುರಿತು ಮಾತನಾಡಿದ ರವಿಕುಮಾರ್ ಚಿತ್ರ ನಿರ್ಮಾಣದ ವೇಳೆ ಏನಾದರೂ ತೊಂದರೆ ಆಗಿದ್ದರೆ ಕ್ಷಮೆ ಇರಲಿ. ಪ್ರತಿಯೊಬ್ಬರ ಸಹಕಾರ ಈ ಸಿನೆಮಾ ಗೆ ದೊಡ್ಡ ಶಕ್ತಿ ಎಲ್ಲರೂ ಪ್ರೀತಿ ಮತ್ತು ವಿಶ್ವಾಸದಿಂದ ಕೆಲಸ ಮಾಡಿದ್ದಾರೆ. ಸಿನಿಮಾಗೆ ದುಡಿದುದ್ದನ್ನೇ ಸಿನಿಮಾಗೆ ಹಾಕಿದ್ದೇವೆ. ಮುಂದೆಯೂ ಇನ್ನಷ್ಟು ಸಿನಿಮಾಗಳನ್ನು ಮಾಡುವ ಉದ್ದೇಶವಿದೆ. ಈ ಮಟ್ಟಿಗೆ ಬರಲು ಕುಟುಂಬ ಮತ್ತು ಸ್ನೇಹಿತರು ಕಾರಣ ಎಂದು ಭಾವನಾತ್ಮಕವಾಗಿ ಹೇಳಿದರು. ವಿಭಿನ್ನ ಕಥೆ ಬಲಿಷ್ಠ ತಂತಜ್ಞರ ಬಳಗ ಮತ್ತು ನಿಜವಾದ ಸಿನಿಮಾ ಪ್ರೀತಿಯಿಂದ ಮೂಡಿಬಂದ “ರಕ್ಕಸಪುರದೋಳ್" ಈಗಾಗಲೇ ಕನ್ನಡ ಸಿನಿ ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷಿಸುತ್ತಿದೆ.
ಬಹು ನಿರೀಕ್ಷಿತ ಕನ್ನಡ ಸಿನಿಮಾ “ರಕ್ಕಸಪುರದೋಳ್" ಮೂಲಕ ಮತ್ತೆ ತೆರಿಗೆ ಬರುತ್ತಿರುವ ನಾಯಕಿ ಸ್ವಾದಿಷ್ಟ ಕೃಷ್ಣ ತಮ್ಮ ಸಿನಿ ಪ್ರಯಾಣ ಮತ್ತು ಅನುಭವವನ್ನು ಹಂಚಿಕೊಂಡಿದ್ದಾರೆ."ಒಂದು ಸರಳ ಪ್ರೇಮ್ ಕತೆ ನಂತರ ಇದು ನನ್ನ ಎರಡನೆಯ ಚಿತ್ರ.ರಾಜ್ ಬಿ ಶೆಟ್ಟಿ ಕೆಲಸ ಮಾಡುವ ಆಸೆ ಬಹುಕಾಲದಿಂದ ಇತ್ತು. ಈಗ ಆ ಕನಸು ನನಸಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. ಚಿತ್ರದ ಅನುಭವ ಕುರಿತು ಮಾತನಾಡಿದ ಅವರು ಈ ಸಿನಿಮಾದಲ್ಲಿ ವಿಲಿಯಂ ಡೇವಿಡ್ ಜೊತೆಗೆ ಕೆಲಸ ಮಾಡಿದ್ದು ನನಗೆ ತುಂಬಾ ಖುಷಿ ಕೊಟ್ಟಿದೆ. ಪ್ರತಿಯೊಬ್ಬ ಕಲಾವಿದನಿಂದಲೂ ಕಲಿಯುವ ಅವಕಾಶ ಸಿಕ್ಕಿದೆ ಎಂದರು. ನಾಯಕಿಯರ ಸ್ನೇಹದ ಕುರಿತು ಮಾತನಾಡಿದ ಸ್ವಾದಿಷ್ಟ ಕೃಷ್ಣ, ನಾಯಕಿಯರು ಸ್ನೇಹಿತೆಯಾಗುವುದಿಲ್ಲ ಎಂದು ಹಲವರು ಹೇಳುತ್ತಾರೆ. ಆದರೆ ಚಿತ್ರದಲ್ಲಿ ನಾನು ಅರ್ಚನಾ ಕೊಟ್ಟಿಗೆ ಜೊತೆ ನಟಿಸಿದ್ದೇನೆ ಅವರೊಂದಿಗೆ ಕೆಲಸ ಮಾಡಿದ್ದು ಉತ್ತಮ ಅನುಭವವಾಗಿದೆ ಎಂದು ಸ್ಪಷ್ಟಪಡಿಸಿದರು. ಇನ್ನು ತಮ್ಮ ಕನಸುಗಳ ಬಗ್ಗೆ ಮಾತನಾಡಿದ ಅವರು, ಒಂದು ದಿನ ಕಿಚ್ಚ ಸುದೀಪ್ ಸರ್ ಜೊತೆ ಕೆಲಸ ಮಾಡುವ ಆಸೆ ಇದೆ ಎಂದು ಹೇಳಿದರು. ವಿಭಿನ್ನ ಕಥಾವಸ್ತು, ಬಲಿಷ್ಠ ಕಲಾವಿದರ ಬಳಗ ಮತ್ತು ಹೊಸ ತಲೆಮಾರಿನ ಪ್ರತಿಭೆಯೊಂದಿಗೆ “ರಕ್ಕಸಪುರದೋಳ್" ಸಿನಿಮಾ ಈಗಾಗಲೇ ಕನ್ನಡ ಸಿನಿ ಪ್ರೇಕ್ಷಕರ ಮನ ಸೆಳೆಯುತ್ತಿದೆ.
ಇನ್ನಷ್ಟು ಓದಿರಿ:
WPL 2026 ಫೈನಲ್: ಆರ್ಸಿಬಿ ಗೆಲ್ಲಲು ಫ್ಯಾನ್ಸ್ ಉತ್ಸಾಹ, 'ಈ ಸಲವೂ ಕಪ್ ನಮ್ದೇ'!