<?= $pageTitle ?>
Logo
ಮುಖಪುಟ ಓದುವುದು ಕೇಳು
Entertainment

ರಾಜ್ ಬಿ ಶೆಟ್ಟಿ ನಿರ್ದೇಶನದ 'ಕರಾವಳಿ 'ಸೆನ್ಸಾರ್ ಪಾಸ್;ಪ್ರಜ್ವಲ್ ದೇವರಾಜ್ ಅಭಿಮಾನಿಗಳಿಗೆ ಗುಡ್ ನ್ಯೂಸ್

ರಾಜ್ ಬಿ ಶೆಟ್ಟಿ ನಿರ್ದೇಶನದ 'ಕರಾವಳಿ 'ಸೆನ್ಸಾರ್ ಪಾಸ್;ಪ್ರಜ್ವಲ್ ದೇವರಾಜ್ ಅಭಿಮಾನಿಗಳಿಗೆ ಗುಡ್ ನ್ಯೂಸ್
Summary: The much-awaited Kannada film 'Karavali' has been given a U/A certificate by the censor board. The release of this film starring Prajwal Devaraj and directed by Raja B. Shetty has increased curiosity among fans.

BELAGAVI NEWS :

ಕರಾವಳಿ ಸೆನ್ಸಾರ್ ಗ್ರೀನ್ ಸಿಗ್ನಲ್ :ಜುಲೈ 24ರಂದು ತೆರಿಗೆ ಬರಲು ಸಜ್ಜಾಗ ಸಿನಿಮಾ

ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸಿನಿಮಾ 'ಕರಾವಳಿ' ಸೆನ್ಸಾರ್ ಪರೀಕ್ಷೆಯಲ್ಲಿ ಪಾಸ್ ಆಗಿದೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು / ಎ ಪ್ರಮಾಣ ಪತ್ರ ನೀಡಿದ್ದು, ಜುಲೈ 24ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ.

ಬಿಡುಗಡೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇರುವಾಗ ಚಿತ್ರತಂಡ ಈ ಸಿಹಿ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದೆ. ಚಿತ್ರದ ಪ್ರಮುಖ ಪಾತ್ರದಲ್ಲಿರುವ ರಾಜ್ ಬಿ ಶೆಟ್ಟಿ ಸೇರಿದಂತೆ ಚಿತ್ರತಂಡದ ಸದಸ್ಯರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳ ಮೂಲಕ ಸೆನ್ಸಾರ್ ಪ್ರಮಾಣ ಪತ್ರದ ಮಾಹಿತಿಯನ್ನು ನೀಡಿದ್ದಾರೆ.

ಕೋಣದ ಮೇಲೆ ನಾಯಕ ನಟ ಪ್ರಜ್ವಲ್ ದೇವರಾಜ್ ಇರುವ ಪೋಸ್ಟರ್ ಹಂಚಿಕೊಂಡಿರುವ ಚಿತ್ರತಂಡ, "ಕ್ಲಿಯರ್ಡ್ .ಸರ್ಟಿಫೈಡ್.ರೆಡಿ.ಕರಾವಳಿ ಈಗ ಪ್ರಮಾಣೀಕರಿಸಲ್ಪಟ್ಟಿದೆ. ಯು/ಎ ಜುಲೈ 24ರಂದು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ" ಎಂದು ಬರೆದುಕೊಂಡಿದೆ.

ಚಿತ್ರದ ವಿಭಿನ್ನ ಕಥಾಹಂದರ, ಪ್ಯಾರಗನ ಮತ್ತು ಪ್ರಚಾರದಿಂದ ಈಗಾಗಲೇ ಗಮನ ಸೆಳೆದಿರುವ 'ಕರಾವಳಿ' ಬಿಡುಗಡೆಗು ಮುನ್ನವೇ ಸಿನಿಪ್ರಿಯರಲ್ಲಿ ನಿರೀಕ್ಷೆ ಹೆಚ್ಚಿಸಿದೆ.

'ಕರಾವಳಿ' ಸಿನಿಮಾದಲ್ಲಿ ಕಂಬಳದ ವೈಭವ : 700 ವರ್ಷಗಳ ಇತಿಹಾಸದ ಸಂಸ್ಕೃತಿ ತೆರೆಗೆ

ಬಹುನಿರೀಕ್ಷಿತ 'ಕರಾವಳಿ' ಸಿನಿಮಾ ಈಗಾಗಲೇ ತನ್ನ ವಿಭಿನ್ನ ಪ್ರಮೋಶನಲ್ ಕಂಟೆಂಟ್ಗಳ ಮೂಲಕ ಗಮನ ಸೆಳೆದಿದೆ. ಚಿತ್ರವು ಕರಾವಳಿ ಭಾಗದ ಸಂಸ್ಕೃತಿ, ಪರಂಪರೆ ಮತ್ತು ಅಲ್ಲಿನ ಜನಜೀವನವನ್ನು ಪ್ರತಿಬಿಂಬಿಸುವ ಕತೆಯನ್ನು ಹೊಂದಿದೆ ಎಂಬುದು ಚಿತ್ರತಂಡದ ಪ್ರಚಾರದಿಂದ ಸ್ಪಷ್ಟವಾಗಿದೆ..

ನಿರ್ದೇಶಕ ಗುರುಗಾಣಿಗ ಅವರು ಕರಾವಳಿಯ ಹೆಮ್ಮೆಯ ಕ್ರೀಡೆಯಾದ ಕಂಬಳವನ್ನು ಸಿನಿಮಾದ ಪ್ರಮುಖ ಭಾಗವನ್ನಾಗಿ ಮಾಡಿದ್ದು, ಅದರ ವೈಭವವನ್ನು ಪ್ರೇಕ್ಷಕರಿಗೆ ತಲುಪಿಸಲು ಸಿದ್ಧರಾಗಿದ್ದಾರೆ. ಚಿತ್ರದ ಚಿತ್ರೀಕರಣದ ಮೇಲೆ ಸುಮಾರು 380 ಕೋಣಗಳನ್ನು ಬಳಸಲಾಗಿದೆ ಎಂದು ನಿರ್ದೇಶಕರು ತಿಳಿಸಿದ್ದು, ಸಿನಿಮಾ ಮೇಲಿನ ಕುತೂಹಲ ಮತ್ತಷ್ಟು ಹೆಚ್ಚಿಸಿದೆ.

ವಿಶೇಷವೆಂದರೆ, ಕಟಪಾಡಿಯಲ್ಲಿ ನಡೆಯುವ ಕಂಬಳಕ್ಕೆ ಸುಮಾರು 700 ವರ್ಷಗಳ ಇತಿಹಾಸವಿದೆ. ಹಲವು ತಲೆಮಾರುಗಳಿಂದ ಒಂದೇ ಕುಟುಂಬದವರು ಈ ಸಾಂಪ್ರದಾಯಿಕ ಕಂಬಳವನ್ನು ನಡೆಸಿಕೊಂಡು ಬರುತಿದ್ದಾರೆ.

ಇಂತಹ ಐತಿಹಾಸಿಕ ಕಟಪಾಡಿ ಕಂಬಳದಲ್ಲಿ ಮೊದಲ ಬಾರಿಗೆ ಚಿತ್ರಿಕರಣಕ್ಕೆ ಅವಕಾಶ ದೊರೆತಿರುವುದು 'ಕರಾವಳಿ' ಸಿನಿಮಾದ ವಿಶೇಷತೆಗಳಲ್ಲಿ ಒಂದಾಗಿದೆ. ಕರಾವಳಿ ಸಂಸ್ಕೃತಿಯ ಸೊಗಡನ್ನು ಬೆಳ್ಳಿ ಪರದೆ ಮೇಲೆ ಕಟ್ಟಿಕೊಡಲು ಚಿತ್ರತಂಡ ಸಜ್ಜಾಗಿದೆ.

ಕರಾವಳಿ ಸಿನಿಮಾದಲ್ಲಿ ಜಯಶ್ರೀ ಕಂಠಸಿರಿ : ಮನುಷ್ಯ - ಪ್ರಾಣಿ ಸಂಘರ್ಷದ ವಿಭಿನ್ನ ಕಥೆ

ಬಹುನಿರೀಕ್ಷಿತ ಕರಾವಳಿ ಸಿನಿಮಾದ ಮತ್ತೊಂದು ವಿಶೇಷತೆ ಹೊರಬಿದ್ದಿದೆ. ಕನ್ನಡದ ಖ್ಯಾತ ಗಾಯಕಿ, ನಟಿ, ನಿರ್ಮಾಪಕಿ ಹಾಗೂ ರಂಗಕರ್ಮಿ ಜಯಶ್ರೀ ಅವರು ಈ ಚಿತ್ರಕ್ಕೆ ಕಂಠದಾನ ಮಾಡಿದ್ದು, ಅವರ ಧ್ವನಿಯಲ್ಲಿ ಮೂಡಿ ಬರುವ ಹಾಡಿನ ಬಿಡುಗಡೆಗೆ ಪ್ರೇಕ್ಷಕರು ಕಾತುರರಾಗಿದ್ದಾರೆ.

ಮನುಷ್ಯ ಮತ್ತು ಪ್ರಾಣಿ ನಡುವಿನ ಸಂಘರ್ಷದ ಕಥೆಯನ್ನು ಹೊಂದಿರುವ 'ಕರಾವಳಿ' ಸಿನಿಮಾ ಪಕ್ಕಾ ಗ್ರಾಮೀಣ ಹಿನ್ನೆಲೆಯಲ್ಲಿ ಮೂಡಿ ಬರುತ್ತಿದೆ. ಕರಾವಳಿ ಸಂಸ್ಕೃತಿ, ಅಲ್ಲಿನ ಜನಜೀವನ ಮತ್ತು ಪರಂಪರೆಯನ್ನು ಚಿತ್ರದಲ್ಲಿ ವಿಭಿನ್ನವಾಗಿ ಕಟ್ಟಿಕೊಡಲಾಗಿದೆ.

ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ನಾಯಕನಾಗಿ ಕಾಣಿಸಿಕೊಂಡಿದ್ದು, ಅವರಿಗೆ ನಾಯಕಿಯಾಗಿ ಸ್ಪಂದನ ಅಭಿನಯಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ಕಾಣಿಸಿಕೊಂಡಿದ್ದು, ಅವರೊಂದಿಗೆ ಸುಶ್ಮಿತಾ ಭಟ್ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಮಿತ್ರ,ರಮೇಶ್,ಇಂದಿರಾ,ಶ್ರೀಧರ್ ಸೇರಿದಂತೆ ಹಲವು ಕಲಾವಿದರು, ತಾರಾ ಬಳಗದಲ್ಲಿದ್ದಾರೆ.

ಅಭಿಮನ್ಯು ಸದಾನಂದನ್ ಅವರ ಛಾಯಾಗ್ರಹಣ ಚಿತ್ರಕ್ಕಿದ್ದು, ಗುರುದತ್ ಗಾಣಿಗ ಅವರು ನಿರ್ದೇಶನದ ಜೊತೆಗೆ ಗಾಣಿಗ ಫಿಲ್ಮ ಬ್ಯಾನರ್ ನಡಿ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ವಿಕೆ ಫಿಲ್ಮ್ಸ್ ಸಹಕಾರ ನೀಡಿದೆ.

ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ತೆಗಳಲ್ಲಿ ಒಂದಾಗಿರುವ ಕೆವಿಎನ್ ಪ್ರೊಡಕ್ಷನ್ ಸಿನಿಮಾ ಅರ್ಪಿಸುವುದರ ಜೊತೆಗೆ ವಿತರಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿರುವುದು ಚಿತ್ರದ ಮತ್ತೊಂದು ವಿಶೇಷತೆಯಾಗಿದೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online