ರಾಜಮೌಳಿ -ಮಹೇಶ್ ಬಾಬು ಬಹುನಿರೀಕ್ಷಿತ ಚಿತ್ರದ ಟೈಟಲ್ ಅನಾವರಣ
ಮಹೇಶ್ ಬಾಬು ಅವರ ಮುಂದಿನ ಸಿನಿಮಾದ ಟೈಟಲ್ ʻವಾರಣಾಸಿʼ ಎಂದು ಹೈದರಾಬಾದ್ನ ʻಗ್ಲೋಬ್ ಟ್ರೋಟರ್ʼ ಈವೆಂಟ್ನಲ್ಲಿ ಘೋಷಣೆಯಾಗಿದೆ. ರಾಜಮೌಳಿ ನಿರ್ದೇಶನದ ಈ ಚಿತ್ರಕ್ಕೆ ಮಹೇಶ್ ಬಾಬು ನಾಯಕ, ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿದ್ದಾರೆ.
ಹೈದರಾಬಾದ್:
ಈ ಹಿಂದೆ ಎಸ್ಎಸ್ಎಂಬಿ 29 ಎಂದು ಕರೆಯಲಾಗುತ್ತಿದ್ದ ಈ ಚಿತ್ರಕ್ಕೆ ಈಗ ಅಧಿಕೃತವಾಗಿ ವಾರಣಾಸಿ ಎಂದು ಹೆಸರಿಸಲಾಗಿದೆ. ಇದು ಅಭಿಮಾನಿಗಳಲ್ಲಿ ಇಷ್ಟು ದಿನ ಇದ್ದ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದೆ.
ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆದ ಬಹುನಿರೀಕ್ಷಿತ ಗ್ಲೋಬ್ ಟ್ರೋಟರ್ ಈವೆಂಟ್ ಬೃಹತ್ ಆಚರಣೆಯಾಗಿ ಮಾರ್ಪಟ್ಟಿದೆ. ಎಸ್.ಎಸ್. ರಾಜಮೌಳಿ ಅಂತಿಮವಾಗಿ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ನಟಿಸಿರುವ ಅವರ ಮುಂಬರುವ ಮಹತ್ವಾಕಾಂಕ್ಷಿಯ ಹಾಗೂ ಜಾಗತಿಕ ಆಕ್ಷನ್ ಸಾಹಸ ಚಿತ್ರದ ಶೀರ್ಷಿಕೆಯನ್ನು ಪ್ರಕಟಿಸಿದ್ದಾರೆ. ಟೈಟಲ್ ಜತೆಗೆ ಮೊದಲ ನೋಟವನ್ನು ಅನಾವರಣಗೊಳಿಸಿ ಪ್ರೇಕ್ಷಕರ ಕಿಚ್ಚನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಇವೆಂಟ್ ನಲ್ಲಿ ಭಾಗಿಯಾದ ಜನರಿಗೆ ಹೆಚ್ಚಿನ ದೃಶ್ಯಗಳನ್ನು ಪ್ರದರ್ಶಿಸಲಾಯಿತು. ಈ ದೃಶ್ಯದಲ್ಲಿ ಮಹೇಶ್ ಬಾಬು ಬೆನ್ನಿನ ಮೇಲೆ ತ್ರಿಶೂಲ ಹಿಡಿದು ನಿಂತಿರುವುದು ಕಂಡು ಬರುತ್ತಿದೆ. ಈ ನಡುವೆ ತುಣುಕು ವಿಡಿಯೋವನ್ನು ಮಾತ್ರ ಅನಾವರಣ ಮಾಡಲಾಗಿದ್ದು, ಚಿತ್ರದ ಗುಟ್ಟನ್ನು ಬಿಟ್ಟುಕೊಡದೇ ಪ್ರೇಕ್ಷಕರ ಕುತೂಹಲವನ್ನು ಹಿಡಿದು ಇಡಲಾಗಿದೆ.
ಈವೆಂಟ್ನ ವಿಡಿಯೋ ಸಂಜೆಯ ಮೊದಲ ಪ್ರಮುಖ ಕ್ಷಣವನ್ನು ಬಹಿರಂಗಪಡಿಸಿತು. ಈ ದೃಶ್ಯದಲ್ಲಿ ಮಹೇಶ್ ಬಾಬು ಬುಲ್ ಸವಾರಿ ಮಾಡುತ್ತ ಬರುವ ದೃಶ್ಯ ರೋಚಕವಾಗಿದೆ. ಈ ದೃಶ್ಯದ ನಂತರ 130 ಅಡಿ x 100 ಅಡಿ ಪರದೆಯ ಮೇಲೆ ಮಿನುಗುವ ಶೀರ್ಷಿಕೆ ವಾರಣಾಸಿ ಅನಾವರಣಗೊಂಡಿತು. ಮಹೇಶ್ ಬಾಬು ಶಿವ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂಬುದನ್ನು ಈ ಟೀಸರ್ ದೃಢಪಡಿಸಿದೆ. ಇದು ಅವರ ವೃತ್ತಿಜೀವನದ ಅತ್ಯಂತ ಮಹತ್ವದ ಮತ್ತು ಪೌರಾಣಿಕ ಪಾತ್ರಗಳಲ್ಲಿ ಒಂದಾಗಿದೆ.
ಮಂದಾಕಿನಿ ಪಾತ್ರದಲ್ಲಿರುವ ಪ್ರಿಯಾಂಕಾ ಚೋಪ್ರಾ, ಟೈಟಲ್ ಅನಾವರಣದ ಸ್ಥಳಕ್ಕೆ ಹೋಗುವ ತೆರೆಮರೆಯ ದೃಶ್ಯಗಳನ್ನು ಅವರು ಹಂಚಿಕೊಂಡಿದ್ದರು. ಕುಂಭ ಪಾತ್ರದಲ್ಲಿರುವ ಪೃಥ್ವಿರಾಜ್ ಸುಕುಮಾರನ್ ಕೂಡ ಬಿಡುಗಡೆ ಶೀರ್ಷಿಕೆ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು. ರಾಜಮೌಳಿ ಅವರ ಕುಟುಂಬ ಮತ್ತು ಪ್ರಮುಖ ಸಿಬ್ಬಂದಿ ಎಲ್ಲರಿಗಿಂತ ಮೊದಲೇ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಬಂದು ಕುಳಿತುಕೊಂಡಿದ್ದರು.
ಈ ಕಾರ್ಯಕ್ರಮ ಅಭಿಮಾನಿಗಳ ಭಾವನಾತ್ಮಕ ಕ್ಷಣಗಳಿಗೂ ಕಾರಣವಾಯಿತು. ಈ ಚಿತ್ರ ಬಿಡುಗಡೆ ಸಮಾರಂಭವನ್ನು ವೀಕ್ಷಿಸಲು ಒಬ್ಬ ಅಭಿಮಾನಿ ಪರ್ತ್ನಿಂದ ಹೈದರಾಬಾದ್ಗೆ 6,817 ಕಿ.ಮೀ ಪ್ರಯಾಣ ಮಾಡಿಕೊಂಡು ಬಂದು ಗಮನ ಸೆಳೆದರು.
ರಾಜಮೌಳಿ ಅವರು ಈ ಹಿಂದೆ ಚಿತ್ರದ ಬಗ್ಗೆ ಮಾತನಾಡಿ, ಶೀರ್ಷಿಕೆಯನ್ನು ಮೊದಲು ದೊಡ್ಡ ಪರದೆಯ ಮೇಲೆ ಬಹಿರಂಗಪಡಿಸಲಾಗುವುದು ಆನಂತರ ಅದನ್ನು ಆನ್ಲೈನ್ನಲ್ಲಿ ನೇರಪ್ರಸಾರ ಮಾಡಲಾಗುವುದು ಎಂದು ಹೇಳಿದ್ದರು.
ತಂದೆಗೆ ಹೃದಯಸ್ಪರ್ಶಿ ಗೌರವ ಸಲ್ಲಿಕೆ ಮಾಡಿ ಮಹೇಶ್ ಬಾಬು:
ಯೂಟ್ಯೂಬರ್ ಆಶಿಶ್ ಚಂಚಲಾನಿ ಮತ್ತು ತೆಲುಗು ನಿರೂಪಕಿ ಸುಮಾ ಕನಕಲಾ ಆಯೋಜಿಸಿರುವ ಗ್ಲೋಬ್ಟ್ರಾಟರ್ ಪ್ರದರ್ಶನವು RRR ನಂತರ ರಾಜಮೌಳಿ ಅವರ ಅತಿ ದೊಡ್ಡ ಕಾರ್ಯಕ್ರಮವಾಗಿದೆ. ಚಿತ್ರದ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿಲ್ಲವಾದರೂ, ಕಾರ್ಯಕ್ರಮದ ಪ್ರಮಾಣ, ತಾರಾಬಳಗ ಮತ್ತು ಬೆರಗುಗೊಳಿಸುವ ದೃಶ್ಯಗಳು ವಾರಣಾಸಿಯನ್ನು ಭಾರತದ ಅತಿದೊಡ್ಡ ಮುಂಬರುವ ಚಿತ್ರಗಳಲ್ಲಿ ಒಂದೆಂದು ದೃಢಪಡಿಸುತ್ತವೆ. ಎಂಎಂ ಕೀರವಾಣಿ ಸಂಗೀತ ಸಂಯೋಜಿಸುತ್ತಿದ್ದಾರೆ ಮತ್ತು ಕೆಎಲ್ ನಾರಾಯಣ ಬೃಹತ್ ಬಜೆಟ್ನಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ವಾರಣಾಸಿ ಈಗ ಅಧಿಕೃತವಾಗಿ ತನ್ನ ಪ್ರಯಾಣವನ್ನು ಪ್ರಾರಂಭಿಸಿದೆ ಮತ್ತು ಉತ್ಸಾಹ ಇನ್ನಷ್ಟು ಜೋರಾಗುತ್ತಿದೆ.
ಮಹೇಶ್ ಬಾಬು ತಮ್ಮ ದಿವಂಗತ ತಂದೆ ಕೃಷ್ಣ ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ ಹೃದಯಸ್ಪರ್ಶಿ ಗೌರವ ಸಲ್ಲಿಕೆ ಮಾಡಿ ಅದನ್ನು ಹಂಚಿಕೊಂಡಿದ್ದರು. ಇಂದು ನಿನ್ನ ಬಗ್ಗೆ ಸ್ವಲ್ಪ ಹೆಚ್ಚು ಯೋಚಿಸುತ್ತಿದ್ದೇನೆ ಮತ್ತು ನೀನು ಹೆಮ್ಮೆಪಡುತ್ತೀಯ ಎಂದು ತಿಳಿದಿದ್ದೇನೆ ಅದರಲ್ಲಿ ಹೇಳಿಕೊಂಡಿದ್ದಾರೆ.
ಇನ್ನಷ್ಟು ಓದಿರಿ :
SIR ಬಗ್ಗೆ ಮತದಾರರು ಜಾಗರೂಕರಾಗಿರಬೇಕು; ನಟ ವಿಜಯ್ ಕರೆ