<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Entertainment

ರಣವೀರ್ ಸಿಂಗ್ ಬೆಂಬಲಕ್ಕೆ ನಿಂತ ರಾಮ್ ಗೋಪಾಲ್ ವರ್ಮಾ : ಬ್ಯಾನ್ ನಿರ್ಧಾರಕ್ಕೆ ವಿರೋಧ

ರಣವೀರ್ ಸಿಂಗ್ ಬೆಂಬಲಕ್ಕೆ ನಿಂತ ರಾಮ್ ಗೋಪಾಲ್ ವರ್ಮಾ : ಬ್ಯಾನ್ ನಿರ್ಧಾರಕ್ಕೆ ವಿರೋಧ
Summary: Director Ram Gopal Varma has expressed strong objection to the ban action taken against actor Ranveer Singh. His statement on the issue has led to a huge discussion on social media and has started a new debate among fans.

Belagavi news:

ನಟ ರಣವೀರ್ ಸಿಂಗ್ ಅವರನ್ನು ಬ್ಯಾನ್ ಮಾಡಿರುವ ವಿಚಾರ ಬಾಲಿವುಡ್ ನಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. "ಡಾನ್ 3" ಚಿತ್ರದ ಬೆಳವಣಿಗೆಗಳ ಬೆನ್ನಲ್ಲೇ ಸಿನಿಮಾ ನೌಕರರ ಒಕ್ಕೂಟವಾದ FWICE ರಣವೀರ್ ಸಿಂಗ್ ವಿರುದ್ಧ ಅಸಹಕಾರ ತೋರಲು ನಿರ್ಧರಿಸಿದ್ದು, ಈ ಕ್ರಮಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಬೆಳವಣಿಗೆಯ ಬಗ್ಗೆ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತೀವ್ರ ಆಕ್ರೋಶ ಹೊರ ಹಾಕಿದ್ದು, ರಣವೀರ್ ಸಿಂಗ್ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಅವರು, ಒಬ್ಬ ಸ್ಟಾರ್ ನಟನ ವೃತ್ತಿ ಜೀವನದಲ್ಲಿ ಫೆಡರೇಶನ್ ಹತ್ತಕ್ಷೇಪ ಮಾಡುವುದನ್ನು ಪ್ರಶ್ನಿಸಿದ್ದಾರೆ.

"ರಣವೀರ್ ಸಿಂಗ್ ಅವರನ್ನು ಬ್ಯಾನ್ ಮಾಡಿದರು ಅವರ ಜನಪ್ರಿಯತೆ ಅಥವಾ ಬೇಡಿಕೆ ಕಡಿಮೆಯಾಗುವುದಿಲ್ಲ. ಪ್ರೇಕ್ಷಕರೇ ನಟರ ಭವಿಷ್ಯ ನಿರ್ಧರಿಸುತ್ತಾರೆ, ಯಾವುದೇ ಒಕ್ಕೂಟ ಅಲ್ಲ" ಎಂದು ರಾಮ್ ಗೋಪಾಲ್ ವರ್ಮಾ ಅಭಿಪ್ರಾಯಪಟ್ಟಿದ್ದಾರೆ.

Sponsored

ಅಷ್ಟೇ ಅಲ್ಲದೆ,"ರಣವೀರ್ ಸಿಂಗ್ ಬದಲಿಗೆ FWICE ಒಕ್ಕೂಟವನ್ನೇ ಬ್ಯಾಂಕ್ ಮಾಡಬೇಕು" ಎಂದು ಕಿಡಿ ಕಾರಿರುವ ಅವರು, ಈ ನಿರ್ಧಾರವನ್ನು ಅನ್ಯಾಯಕರ ಮತ್ತು ಅತಿರೇಕದ ಕ್ರಮ ಎಂದು ಟೀಕಿಸಿದ್ದಾರೆ. ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಹಾಗೂ ಚಿನಿರಂಗದ ವಲಯಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಇದೀಗ ಕರಣವೀರ್ ಸಿಂಗ್ ವಿರುದ್ಧದ ಕ್ರಮ ಮತ್ತು ಅದಕ್ಕೆ ರಾಮ ಗೋಪಾಲ್ ವರ್ಮಾ ವ್ಯಕ್ತಪಡಿಸಿರುವ ಆಕ್ರೋಶ ಬಾಲಿವುಡ್ ನಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಈ ವಿಷಯ ಯಾವತ್ತಿರುವು ಪಡೆಯಲಿದೆ ಎಂಬುದರ ಬಗ್ಗೆ ಕುತೂಹಲ ಮೂಡಿಸಿದೆ.

ಬಾಲಿವುಡ್ ನ ಬಹುನಿರೀಕ್ಷಿತ ಡಾನ್ 3 ಚಿತ್ರದ ವಿವಾದ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದೆ. ಚಿತ್ರದಿಂದ ನಟ ರಣವೀರ್ ಸಿಂಗ್ ಕೊನೆಯ ಕ್ಷಣದಲ್ಲಿ ಹೊರ ನಡೆದಿದ್ದಾರೆ ಎಂಬ ಆರೋಪದ ಬೆನ್ನಲ್ಲೇ ಸಿನಿಮಾ ನೌಕರರ ಬಕ್ಕೂಟ FWICE ಅವರ ವಿರುದ್ಧ ಅಸಹಕಾರ ತೋರಲು ನಿರ್ಧರಿಸಿದೆ.

Farhan Akhtar ಹಾಗೂ Ritesh Sidhwani ಅವರ ನಿರ್ಮಾಣ ಸಂಸ್ಥೆ Excel Entertainment ರಣವೀರ್ ಸಿಂಗ್ ಅವರ ಹಠಾತ್ ನಿರ್ಧಾರದಿಂದಾಗಿ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸ ಲೊಕೇಶನ್ ಹುಡುಕಾಟ ಮತ್ತು ಇತರೆ ಸಿದ್ಧತೆಗಳಿಗಾಗಿ ಖರ್ಚಾಗಿದ್ದ ಸುಮಾರು 45 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಆರೋಪಿಸಿದೆ.

Sponsored

ಈ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ FWICE ಹಲವು ಬಾರಿ ರಣವೀರ್ ಸಿಂಗ್ ಅವರಿಗೆ ನೋಟಿಸ್ ನೀಡಿ ತಮ್ಮ ವಾದ ಮಂಡಿಸುವಂತೆ ಸೂಚಿಸಿತ್ತು. ಆದರೆ ನಟನ ಕಾನೂನು ತಂಡ ಇದು ಖಾಸಗಿ ವಾಣಿಜ್ಯ ಒಪ್ಪಂದಕ್ಕೆ ಸಂಬಂಧಿಸಿದ ವಿಷಯವಾಗಿದ್ದು, ಇದರಲ್ಲಿ ಹತ್ತಕ್ಷೇಪ ಮಾಡಲು ಒಕ್ಕೂಟಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಪ್ರಶ್ನಿಸಿತ್ತು.

ಇದರಿಂದ ಅಸಮಾಧಾನಗೊಂಡ FWICE, ರಣವೀರ್ ಸಿಂಗ್ ವಿರುದ್ಧ ಅಸಹಕಾರ ಚಳುವಳಿ ಘೋಷಿಸಿದ್ದು, ಚಿತ್ರರಂಗದ ಸಿಬ್ಬಂದಿ ಮತ್ತು ಸದಸ್ಯರು ಅವರಿಗೆ ಯಾವುದೇ ರೀತಿಯ ಸಹಕಾರ ನೀಡಬಾರದು ಎಂದು ಸೂಚನೆ ನೀಡಿದೆ.

ಈ ಬೆಳವಣಿಗೆ ಬಾಲಿವುಡ್ ನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ನಟ ರಣವೀರ ಸಿಂಗ್ ಹಾಗೂ FWICE ನಡುವಿನ ಸಂಘರ್ಷ ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರ ಗೊಳ್ಳುವ ಸಾಧ್ಯತೆ ಇದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂಡ ರಣವೀರ್ ಪರವಾಗಿ ನಿಂತು ಒಕ್ಕೂಟದ ಕ್ರಮವನ್ನು ಪ್ರಶ್ನಿಸಿದ್ದಾರೆ.

ಡಾನ್ 3 ಸುತ್ತಮುತ್ತ ನಡೆಯುತ್ತಿರುವ ವಿವಾದ ಮತ್ತಷ್ಟು ತೀವ್ರಗೊಂಡಿದೆ. ನಟ ರಣವೀರ್ ಸಿಂಗ್ ಮತ್ತು ಸಿನಿಮಾ ನೌಕರರ ಒಕ್ಕೂಟ FWICE ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.

Sponsored

ಒಕ್ಕೂಟದ ಕ್ರಮವನ್ನು ಟೀಕಿಸಿರುವ ರಾಮ್ ಗೋಪಾಲ್ ವರ್ಮಾ, ಇಡೀ ಚಿತ್ರರಂಗಕ್ಕೆ ಸಂಬಂಧಿಸಿದ ವಿಷಯವಲ್ಲ, ಬದಲಾಗಿ ಕೇವಲ ಇಬ್ಬರ ನಡುವಿನ ಖಾಸಗಿ ಒಪ್ಪಂದದ ವಿವಾದ ಎಂದು ಹೇಳಿದ್ದಾರೆ. ನಿರ್ಮಾಪಕರು ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ ಎಂದು ಹೇಳಿದರೂ, ಇಂತಹ ಪ್ರಕರಣಗಳು ಪ್ರತಿದಿನ ವಿವಿಧ ಉದ್ಯಮಗಳಲ್ಲಿ ನಡೆಯುತ್ತಿರುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

FWICE ಯಾವುದೇ ನ್ಯಾಯಾಲಯವಾಗಲಿ ಅಥವಾ ಸರ್ಕಾರದ ಅನುಮತಿ ಪಡೆದ ಸಂಸ್ಥೆಯಲ್ಲ ಎಂದು ಹೇಳಿರುವ ವರ್ಮಾ, ಇಂತಹ ವಿಷಯಗಳಲ್ಲಿ ಅನಗತ್ಯ ಹತ್ಯಕ್ಷೇಪ ಸರಿಯಲ್ಲ ಎಂದು ಹೇಳಿದ್ದಾರೆ."ಈ ಘಟನೆಗೆ ಸಂಬಂಧಿಸಿದ ಸೂಕ್ಷ್ಮ ವಿವರಗಳು ಕೇವಲ ವಿವಾದದಲ್ಲಿರುವ ಇಬ್ಬರಿಗೆ ಮಾತ್ರ ಗೊತ್ತಿರುತ್ತವೆ. ಆದ್ದರಿಂದ ಇದು ಅವರ ನಡುವೆಯೇ ಬಗೆಹರಿಯಬೇಕು" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ, ಈ ರೀತಿಯ ವಿವಾದಗಳು ಕಾನೂನು ಪ್ರಕ್ರಿಯೆಗೆ ಹೋದರೆ ನ್ಯಾಯಾಲಯವೇ ತೀರ್ಪು ನೀಡುತ್ತದೆ, ಅದನ್ನು ಬಿಟ್ಟು ಒಕ್ಕೂಟಗಳ ಮಧ್ಯ ಪ್ರವೇಶ ಮಾಡುವುದು ಸೂಕ್ತವಲ್ಲ ಎಂದು ರಾಮ ಗೋಪಾಲ್ ವರ್ಮಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರ ಈ ಹೇಳಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಬಾಲಿವುಡ್ ನಟ ರಣವೀರ್ ಸಿಂಗ್ ಅವರ ಸ್ಟಾರ್ ಡಮ್ ಕುರಿತು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

Sponsored

ಡಾನ್ 3 ವಿವಾದದ ನಡುವೆ ಪ್ರತಿಕ್ರಿಯೆ ನೀಡಿರುವ ಆರ್ ಜಿವಿ ರಣವೀರ್ ಸಿಂಗ್ ಅವರ ಮಾರುಕಟ್ಟೆ ಮೌಲ್ಯವನ್ನು ಉಲ್ಲೇಖಿಸಿ, ಅವರ ಸ್ಟಾರ್ ಪವರ್ ಬಗ್ಗೆ ಗಂಭೀರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಒಂದು ವೇಳೆ ರಣವೀರ್ ಸಿಂಗ್ ಇಂದು ಒಂದು ಸಿನಿಮಾ ಗೆ ಒಪ್ಪಿಗೆ ನೀಡಿದರೆ ಸಾಕು, ನಾಳೆ ಬೆಳಿಗ್ಗೆ ಅವರ ಮನೆ ಮುಂದೆ ಚೆಕ್ ಬುಕ್ ಹಿಡಿದು ನಿರ್ಮಾಪಕರ ಸಾಲು ಒಂದು ಕಿಲೋಮೀಟರ್ ಉದ್ದ ಇರುತ್ತದೆ"ಎಂದು ಅವರು ಹೇಳಿದ್ದಾರೆ.

ಈ ಹೇಳಿಕೆಯ ಮೂಲಕ ರಣವೀರ್ ಸಿಂಗ್ ಚಿತ್ರರಂಗದಲ್ಲಿ ಎಷ್ಟು ದೊಡ್ಡ ಬೇಡಿಕೆಯುಳ್ಳ ನಟರಾಗಿದ್ದಾರೆ ಎಂಬುದು ಆರ್ ಜಿವಿ ಒತ್ತಿ ಹೇಳಿದ್ದಾರೆ ಎಂದು ಅಭಿಮಾನಿಗಳು ವಿಶ್ಲೇಷಿಸುತ್ತಿದ್ದಾರೆ. ಈ ಕಮೆಂಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಪರವಿರೋಧ ಚರ್ಚೆಗೆ ಕಾರಣವಾಗಿದೆ.

FWICE ವಿವಾದದ ನಡುವೆಯೇ ಪ್ರಣವೀರ್ ಸಿಂಗ್ ಬೆಂಬಲಕ್ಕೆ ನಿಂತಿರುವ ಆರ್ ಜಿವಿಯ ಹೇಳಿಕೆಗಳು ಬಾಲಿವುಡ್ ನಲ್ಲಿ ಹೊಸ ಚರ್ಚೆಗಳನ್ನು ಹುಟ್ಟುಹಾಕಿವೆ.

Also Read:

Sponsored

ಬೆಂಗಳೂರು - ಮಂಗಳೂರು ವಂದೇ ಭಾರತ್ ಗೆ ಕೌಂಟ್ ಡೌನ್ : ಜೂನ್ 3ರಂದು ಟ್ರಯಲ್ ರನ್

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online