<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Sports

ದಾಖಲೆಗಳ ಸರದಾರರು ರೊನಾಲ್ಡೋ: ಪೋರ್ಚುಗಲ್ ಗೆ ಉಜ್ಬೇಕಿಸ್ತಾನ ವಿರುದ್ಧ ಭರ್ಜರಿ ಜಯ : ತಂಡವೇ ಮೊದಲ ಆದ್ಯತೆ ಎಂದ ಕ್ಯಾಪ್ಟನ್

ದಾಖಲೆಗಳ ಸರದಾರರು ರೊನಾಲ್ಡೋ: ಪೋರ್ಚುಗಲ್ ಗೆ ಉಜ್ಬೇಕಿಸ್ತಾನ ವಿರುದ್ಧ ಭರ್ಜರಿ ಜಯ : ತಂಡವೇ ಮೊದಲ ಆದ್ಯತೆ ಎಂದ ಕ್ಯಾಪ್ಟನ್
Summary: Reacting after Portugal's stunning win over Uzbekistan, Portugal captain Ronaldo said that his top priority is team success rather than individual records.

BELAGAVI NEWS :

ರೊನಾಲ್ಡೊ ದಾಖಲೆ, ಪೋರ್ಚುಗಲ್ ಭರ್ಜರಿ ಗೆಲುವು : ತಂಡದ ಯಶಸ್ಸೇ ಮೊದಲ ಗುರಿ ಎಂದ ಕ್ಯಾಪ್ಟನ್

ಟೆಕ್ಸಾಸ್ ನ ಹ್ಯೂಸ್ಟನ್ ಸ್ಟೇಡಿಯಂನಲ್ಲಿ ನಡೆದ ಫಿಫಾ ವಿಶ್ವಕಪ್ 2026ರ ಪಂದ್ಯದಲ್ಲಿ ಪೋರ್ಚುಗಲ್ ತಂಡವು ಉಜ್ಬೇಕಿಸ್ತಾನ್ ವಿರುದ್ಧ 5-0 ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಅದ್ಭುತ ಪ್ರದರ್ಶನದ ಬಳಿಕ ಪೋರ್ಚುಗಲ್ ನಾಯಕ ಕ್ರಿಶ್ಚಿಯಾನೊ ರೊನಾಲ್ಡೊ ತೃಪ್ತಿ ವ್ಯಕ್ತಪಡಿಸಿದ್ದಾರೆ.

ಈ ಪಂದ್ಯದಲ್ಲಿ ರೊನಾಲ್ಡೊ ಮತ್ತೊಂದು ಐತಿಹಾಸಿಕ ದಾಖಲೆ ನಿರ್ಮಿಸಿದ್ದು,ಆರು ವಿಭಿನ್ನ ವಿಶ್ವಕಪ್ ಟೂರ್ನಿಗಳಲ್ಲಿ ಗೋಲು ದಾಖಲಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೆ ಪೋರ್ಚುಗಲ್ ಪರ ವಿಶ್ವಕಪ್ ನಲ್ಲಿ ಅತಿ ಹೆಚ್ಚು ಗೋಳು ಗಳಿಸಿದ ಆಟಗಾರ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

Sponsored

ಗೆಲುವಿನ ಬಳಿಕ ಮಾತನಾಡಿದ ರೊನಾಲ್ಡೋ,ವೈಯಕ್ತಿಕ ದಾಖಲೆಗಳಿಗಿಂತ ತಂಡದ ಯಶಸ್ಸು ಮುಖ್ಯ ಎಂದು ಹೇಳಿದ್ದಾರೆ.ತಂಡದ ಗೆಲುವಿಗೆ ನೆರವಾಗುವುದು ಮತ್ತು ಸಹ ಆಟಗಾರರೊಂದಿಗೆ ಉತ್ತಮ ಪ್ರದರ್ಶನ ನೀಡುವುದೇ ತಮ್ಮ ಪ್ರಮುಖ ಗುರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ರೊನಾಲ್ಡೋ ಅವರ ಅನುಭವ,ನಾಯಕತ್ವ ಮತ್ತು ದಾಖಲೆಗಳೊಂದಿಗೆ ಪೋರ್ಚುಗಲ್ ತಂಡದ ವಿಶ್ವಕಪ್ ಅಭಿಯಾನ ಮತ್ತಷ್ಟು ಬಲ ಪಡೆದುಕೊಂಡಿದೆ.

ರೋನಾಲ್ಡೋ ಈ ಪಂದ್ಯದಲ್ಲಿ ಎರಡು ಗೋಲುಗಳನ್ನು ಬಾರಿಸುವ ಮೂಲಕ ದಾಖಲೆ ಬರೆದಿದ್ದಾರೆ. ನುನೋ ಮೆಂಡೆಸ್ ಮತ್ತು ರಾಫೆಲ್ ಲಿಯಾವ ಕೂಡ ಗೋಲು ಬಾರಿಸಿದರು.

ರೊನಾಲ್ಡೋ ದಾಖಲೆಗಳ ಸುರಿಮಳೆ : "ರಾಷ್ಟ್ರೀಯ ತಂಡಗಳ ಗೆಲುವೇ ನನ್ನ ಮೊದಲ ಗುರಿ" ಎಂದ ಕ್ಯಾಪ್ಟನ್

Sponsored

ಪಂದ್ಯದ ಬಳಿಕ ಮಾತನಾಡಿದ ಪೋರ್ಚುಗಲ್ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ, ವೈಯಕ್ತಿಕ ದಾಖಲೆಗಳಿಗಿಂತ ರಾಷ್ಟ್ರೀಯ ತಂಡದ ಯಶಸ್ಸೇ ತಮ್ಮ ಪ್ರಮುಖ ಗುರಿಯಾಗಿದೆ ಎಂದು ಹೇಳಿದ್ದಾರೆ.

ಮೊದಲ ಪಂದ್ಯಕ್ಕೆ ಹೋಲಿಸಿದರೆ ತಂಡವು ಈ ಪಂದ್ಯದಲ್ಲಿ ಉತ್ತಮ ಪ್ರಗತಿ ತೋರಿಸಿದೆ. ತಂಡದ ಪ್ರದರ್ಶನ ಮತ್ತು ಗೆಲುವು ಸಂತಸ ತಂದಿದೆ ಎಂದು ರೊನಾಲ್ಡೋ ಪ್ರತಿಕ್ರಿಸಿದರು. ದಾಖಲೆಗಳು

ವಿಶೇಷವಾದವು ಎಂದು ಒಪ್ಪಿಕೊಂಡ ಅವರು, ಯಾವಾಗಲೂ ತಂಡದ ಗುರಿಗಳನ್ನು ಸಾಧಿಸಲು ನೆರವಾಗುವುದೆ ನಮ್ಮ ಆದ್ಯತೆಯೆಂದು ಸ್ಪಷ್ಟಪಡಿಸಿದರು.

ಉಜ್ಬೇಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಎರಡು ಗೋಳುಗಳನ್ನು ಬಾರಿಸಿದ ರುನಾಲ್ಡೋ, ಐತಿಹಾಸಿಕ ಮೈಲಿಗಲ್ಲು ತಲುಪಿದರು. 10 ಗೋಳುಗಳೊಂದಿಗೆ ಪೋರ್ಚುಗಲ್ ನ ಸರ್ವಕಾಲಿಕ ಪ್ರಮುಖ ವಿಶ್ವ ಕಪ್ ಸ್ಕೋರರ್ ಆಗಿ ಹೊರಹೊಮ್ಮಿದ ಅವರು, ದಿಗ್ಗಜ ಆಟಗಾರ ಯುಸೆಬಿಯೋ ಅವರ ಒಂಬತ್ತು ಗೋಲುಗಳ ದಾಖಲೆಯನ್ನು ಹಿಂದಿಕ್ಕಿದರು.

Sponsored

ಅಲ್ಲದೆ ಆರು ವಿಭಿನ್ನ ಫಿಫಾ ವಿಶ್ವಕಪ್ ಟೂರ್ನಿಗಳಲ್ಲಿ ಗೋಲು ದಾಖಲಿಸಿದ ಮೊದಲ ಆಟಗಾರ ಎಂಬ ಅಪರೂಪದ ಸಾಧನೆಯನ್ನು ರುನಾಲ್ಡೋ ತಮ್ಮ ಹೆಸರಿಗೆ ಬರೆದಿದ್ದಾರೆ.

ಉಜ್ಬೇಕಿಸ್ತಾನ್ ವಿರುದ್ಧ ಪೋರ್ಚುಗಲ್ ಸುಧಾರಿತ ಪ್ರದರ್ಶನ:ಆಟಗಾರರ ಬಗ್ಗೆ ಕೋಚ್ ರಾಬರ್ಟೋ ಮಾರ್ಟಿನೆಜ್ ಹೇಳಿದ್ದಾರೆ.ತಂಡದ ಆಟದ ಶೈಲಿ, ಪದ್ಧತಿ ಮತ್ತು ಮೈದಾನದಲ್ಲಿನ ಪ್ರಬುದ್ಧತೆಯನ್ನು ಅವರು ಶ್ಲಾಘಿಸಿದರು.

ನಿರಾಶಾದಾಯಕ ಆರಂಭಿಕ ಪಂದ್ಯದ ಬಳಿಕ ಆಟಗಾರರು ತಮ್ಮ ತಪ್ಪುಗಳಿಂದ ಪಾಠ ಕಲಿಯುತ್ತಿದ್ದಾರೆ. ಈ ಪಂದ್ಯದಲ್ಲಿ ಹೆಚ್ಚಿನ ಶಾಂತತೆ, ಆತ್ಮವಿಶ್ವಾಸ ಮತ್ತು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ತಂಡ ಪ್ರದರ್ಶಿಸಿದೆ ಎಂದು ಮಾರ್ಟಿನೆಜ್ ತಿಳಿಸಿದರು.

ಆಟಗಾರರ ಏಕಾಗ್ರತೆ ಮತ್ತು ತಂಡದ ಒಗ್ಗಟ್ಟು ಗೆಲುವಿನ ಪ್ರಮುಖ ಕಾರಣವಾಗಿದ್ದು, ಮುಂದಿನ ಪಂದ್ಯಗಳಲ್ಲೂ ಇದೇ ಮಟ್ಟದ ಪ್ರದರ್ಶನ ಮುಂದುವರಿಸುವ ವಿಶ್ವಾಸವನ್ನು ಕೋಚ್ ವ್ಯಕ್ತಪಡಿಸಿದ್ದಾರೆ.

Sponsored

Also Read:

Yogi Adityanath in Bengaluru today: ಹೂಡಿಕೆ ಸೆಳೆಯಲು ಮೆಗಾ ರೋಡ್ ಶೋ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online