<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Sports

IPL 2026: ಕಿಂಗ್ ಕೊಹ್ಲಿ ದಾಖಲೆ ಸಮಬಲ ಮಾಡಿದ ಸಾಯಿ ಸುದರ್ಶನ್, ಐಪಿಎಲ್ ನಲ್ಲಿ ಹೊಸ ಇತಿಹಾಸ

IPL 2026: ಕಿಂಗ್ ಕೊಹ್ಲಿ ದಾಖಲೆ ಸಮಬಲ ಮಾಡಿದ ಸಾಯಿ ಸುದರ್ಶನ್, ಐಪಿಎಲ್ ನಲ್ಲಿ ಹೊಸ ಇತಿಹಾಸ
Summary: Sai Sudarshan once again proved his batting prowess in IPL 2026, equaling a special record in the name of King Kohli.

belagavi news :

ಐಪಿಎಲ್ 2019ರ ಆವೃತ್ತಿಯಲ್ಲಿ ಗುಜರಾತ್ ಟೈಟನ್ಸ್ ತಂಡದ ಯಶಸ್ಸಿನ ಹಿಂದೆ ಪ್ರಮುಖ ಪಾತ್ರ ವಹಿಸಿರುವ ಆಟಗಾರ ಎಂದರೆ ಸಾಯಿ ಸುದರ್ಶನ್. ಆರಂಭಿಕ ಬ್ಯಾಟ್ಸ್ಮನ್ ಆಗಿ ಕಣಕ್ಕೆ ಇಳಿಯುತ್ತಿರುವ ಅವರು ಈ ಸೀಸನ್ ನಲ್ಲಿ ನಿರಂತರವಾಗಿ ರನ್ ಗಳ ಸುರಿಮಳೆಗೈದು ತಂಡವನ್ನು ಫೈನಲ್ ವರೆಗೆ ಮುನ್ನಡೆಸಿದ್ದಾರೆ.

ರಾಜಸ್ಥಾನ್ ರಾಯಲ್ಸ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಸಾಯಿ ಸುದರ್ಶನ್ ಮತ್ತೊಂದು ಅರ್ಧಶತಕ ದಾಖಲಿಸುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ. ಈ ಪಂದ್ಯದಲ್ಲಿ ಅವರು ಸೀಸನ್-ತಮ್ಮ 8ನೇ ಆದ ಶತಕವನ್ನು ಬಾರಿಸಿದ್ದು, ಒಂದು ಐಪಿಎಲ್ ಆವೃತ್ತಿಯಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಬಾರಿಸಿದೆ ದಾಖಲೆ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಯನ್ನು ಸರಿಗಟ್ಟಿದ್ದಾರೆ.

ಇದರೊಂದಿಗೆ ಸುದರ್ಶನ್ ಈ ಸೀಸನ್ ನಲ್ಲಿ ಒಟ್ಟು ಒಂಬತ್ತು ಬಾರಿ 50 ಅಥವಾ ಅದಕ್ಕಿಂತ ಹೆಚ್ಚಿನ ರನ್ ಗಳ ಇನ್ನಿಂಗ್ಸ್ ಆಡಿದ್ದಾರೆ. ಈ ಸಾಧನೆ ಮಾಡಿರುವ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದು, ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಡೇವಿಡ್ ವಾರ್ನರ್ ಮಾತ್ರ ಅವರಿಗಿಂತ ಮುಂಚಿತವಾಗಿದ್ದರು.

Sponsored

ಸಾಯಿ ಸುದರ್ಶನ್ ಅವರ ಸ್ಥಿತಿ ಪ್ರದರ್ಶನವೇ ಗುಜರಾತ್ ಟೈಟಲ್ ತಂಡದ ಬಲವಾಗಿ ಪರಿಣಮಿಸಿದೆ. ಪ್ರತಿಯೊಂದು ಪಂದ್ಯದಲ್ಲೂ ಜವಾಬ್ದಾರಿಯುತ ಬ್ಯಾಟಿಂಗ್ ಮೂಲಕ ತಂಡಕ್ಕೆ ಭದ್ರಾ ಅಡಿಪಾಯ ಹಾಕಿರುವ ಅವರು, ಆರೆಂಜ್ ಕ್ಯಾಪ್ ಸ್ಪರ್ಧೆಯಲ್ಲೂ ಮುಂಚೂಣಿಯಲಿದ್ದಾರೆ.

ಬ್ಯಾಟ್ಸ್ಮನ್ ಆಗಿರುವ ಸುದರ್ಶನ್ ತಮ್ಮ ಅದ್ಭುತ ಫಾರ್ಮ್ ನ ಮೂಲಕ ಭಾರತೀಯ ಕ್ರಿಕೆಟ್ ನ ಭವಿಷ್ಯದ ಭರವಸೆಯ ಆಟಗಾರರೊಬ್ಬರಾಗಿ ಗುರುತಿಸಿಕೊಂಡಿದ್ದಾರೆ. ದಿಗ್ಗಜರ ದಾಖಲೆಯನ್ನು ಸರಿಗಟ್ಟಿರುವ ಅವರ ಪ್ರತಿಭೆ ಮತ್ತು ಸ್ಥಿರತೆಯ ಮತ್ತೊಂದು ಸಾಕ್ಷಿಯಾಗಿದೆ. ಗುಜರಾತ್ ಟೈಟನ್ಸ್ ಅಭಿಮಾನಿಗಳು ಇದೀಗ ಫೈನಲ್ ಪಂದ್ಯದಲ್ಲೂ ಸುದರ್ಶನ್ ಇದೇ ರೀತಿಯ ಪ್ರದರ್ಶನ ಮುಂದುವರಿಸುವ ನಿರೀಕ್ಷೆಯಲ್ಲಿದ್ದಾರೆ.

ವಾಸ್ತವವಾಗಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಅರ್ಧಶತಕ ಬಾರಿಸಿದ ಸಾಯಿ ಸುದರ್ಶನ್ ಗೆ ಐಪಿಎಲ್ ನಲ್ಲಿ ಇದು 8ನೇ ಅರ್ಧಶತಕವಾಗಿತ್ತು. ಈ ಮೂಲಕ ಸುದರ್ಶನ್ ಒಂದು ಆವೃತ್ತಿಯಲ್ಲಿ ಅತ್ಯಧಿಕ ಅರ್ಧಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಯನ್ನು ಸರಿಗಟ್ಟಿದ್ದಾರೆ. ವಿರಾಟ್ ಕೊಹ್ಲಿ ಕೂಡ ಐಪಿಎಲ್ ೨೦೨೫ರಲ್ಲಿ ರಾಯಲ್ ಎಂಟು ಅರ್ಧ ಶತಕ ಗಳನ್ನು ಬಾರಿಸಿದರು.

ಗುಜರಾತ್ ಟೈಟಲ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಸಾಯಿ ಸುದರ್ಶನ್ ಐಪಿಎಲ್ ೨೦೨೬ರಲ್ಲಿ ಅದ್ಬುತ ಬ್ಯಾಟಿಂಗ್ ಪ್ರದರ್ಶನ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಸೀಸನ್ ನಲ್ಲಿ ಇದುವರೆಗೆ 16 ಪಂದ್ಯಗಳನ್ನು ಆಡಿರುವ ಸುದರ್ಶನ್, ಎಂಟು ಅರ್ಧ ಶತಕಗಳು ಹಾಗೂ ಒಂದು ದಶಕಗಳೊಂದಿಗೆ ರನ್ ಗಳ ಮಳೆಯನ್ನೇ ಸುರಿಸಿದ್ದಾರೆ.

Sponsored

ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಎಂಟನೇ ಅರ್ಧಶತಕ ದಾಖಲಿಸಿದ ಸುದರ್ಶನ್, ಒಂದು ಐಪಿಎಲ್ ಆವೃತ್ತಿಯಲ್ಲಿ ಅತಿ ಹೆಚ್ಚು ಅರ್ಧ ಶತಕಗಳನ್ನು ಬಾರಿಸಿದ ಭಾರತೀಯ ಬ್ಯಾಟ್ಸ್ಮನ್ ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಯನ್ನು ಸರಿಗಟ್ಟಿದ್ದಾರೆ. ವಿಶೇಷವೆಂದರೆ, 19 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಕೊಯ್ಲಿ ಮತ್ತು ಸುದರ್ಶನ್ ಹೊರತುಪಡಿಸಿ ಯಾವುದೇ ಭಾರತೀಯ ಬ್ಯಾಟ್ಸ್ಮನ್ ಒಂದೇ ಸೀಸನ್ ನಲ್ಲಿ ಎಂಟು ಅರ್ಧ ಶತಕಗಳನ್ನು ಬಾರಿಸಿದ ಸಾಧನೆ ಮಾಡಿಲ್ಲ.

ಐಪಿಎಲ್ ನ ಒಂದು ಸೀಸನ್ ನಲ್ಲಿ ಅತಿ ಹೆಚ್ಚು ಅರ್ಧ ಶತಕಗಳನ್ನು ಬಾರಿಸಿದ ದಾಖಲೆ ಇನ್ನೂ ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಹೆಸರಿನಲ್ಲಿದೆ. ವಾರ್ನರ್ 2016ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡುತ್ತಿದ್ದಾಗ 9 ಅರ್ಧ ಶತಕಗಳನ್ನು ಗಳಿಸಿ,ಈ ದಾಖಲೆ ನಿರ್ಮಿಸಿದರು. ಅದಲ್ಲದೆ, 2019ರ ಆವೃತ್ತಿಯಲ್ಲಿಯು ಅವರು ಎಂಟು ಅರ್ಧ ಶತಕಗಳನ್ನು ಹಾಗೂ ಒಂದು ಶತಕ ದಾಖಲಿಸಿ ತಮ್ಮ ಸ್ಥಿರತೆಯನ್ನು ತೋರಿಸಿದರು.

ವಾರ್ನರ್, ವಿರಾಟ್ ಕೊಹ್ಲಿ ಮತ್ತು ಸಾಯಿ ಸುದರ್ಶನ್ ಹೊರತುಪಡಿಸಿ, ಒಂದೇ ಐಪಿಎಲ್ ಸೀಸನ್ ನಲ್ಲಿ ಎಂಟು ಅರ್ಧ ಶತಕಗಳನ್ನು ಬಾರಿಸಿದ ಸಾಧನೆ ಮಾಡಿರುವವರು ಕೇವಲ ಇಬ್ಬರು ಮಾತ್ರ. 2018ರಲ್ಲಿ ಕೇನ್ ವಿಲಿಯಮ್ಸ್ ನ ಹಾಗೂ 2023ರಲ್ಲಿ ಪಾಪ್ ಡೂ ಪ್ಲೇಸಿಸ್ ಈ ಸಾಧನೆ ಮಾಡಿದ್ದರು.

ಈಗಾಗಲೇ ಒಂದು ಶತಕ ಮತ್ತು ಎಂಟು ಅರ್ಧ ಶತಕಗಳೊಂದಿಗೆ ಮಿಂಚಿರುವ ಸಾಯಿ ಸುದರ್ಶನ್, ಡೇವಿಡ್ ವಾರ್ನರ್ ಅವರ ಒಂಬತ್ತು ಅರ್ಧಶತಕಗಳ ದಾಖಲೆಯನ್ನು ಮುರಿಯುವ ಸನಿಹದಲ್ಲಿದ್ದಾರೆ. ಫೈನಲ್ ಪಂದ್ಯದಲ್ಲಿ ಮತ್ತೊಂದು ಅರ್ಧ ಶತಕ ಸಿಡಿಸಿದರೆ, ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ಬ್ಯಾಟಿಂಗ್ ಸೀಸನ್ ಗಳ ಪಟ್ಟಿಯಲ್ಲಿ ತಮ್ಮ ಹೆಸರನ್ನು ಅಗ್ರಸ್ಥಾನದಲ್ಲಿ ದಾಖಲಿಸುವ ಅವಕಾಶ ಸುದರ್ಶನ್ ಮುಂದಿದೆ. ಗುಜರಾತ್ ಟೈಟಲ್ ಫೈನಲ್ ಪ್ರವೇಶಿಸುವಲ್ಲಿ ಅವರ ಕೊಡುಗೆ ನಿರ್ಣಾಯಕವಾಗಿದ್ದು, ಇದೀಗ ಎಲ್ಲರ ಗಮನಸ್ ಫೈನಲ್ ನಲ್ಲಿ ಅವರ ಪ್ರದರ್ಶನ ದತ್ತ ನೆಟ್ಟಿದೆ.

Sponsored

ಇದನ್ನು ಹೊರತುಪಡಿಸಿ ಒಂದು ಆವೃತ್ತಿಯಲ್ಲಿ 50 ಅಥವಾ ಅದಕ್ಕಿಂತ ಹೆಚ್ಚು ರನ್ ಗಳ ಇನ್ನಿಂಗ್ಸ್ ಅನ್ನು ಅಧಿಕ ಬಾರಿ ಆಡಿದ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. 16ರ ಐಪಿಎಲ್ ನಲ್ಲಿ ಕೊಹ್ಲಿ 11 ಬಾರಿ 50 ಪ್ಲಸ್ ರನ್ ಗಳ ಇನಿಂಗ್ಸ್ ಆಡಿದ್ದರು. ಆ ಸೀಸನ್ ನಲ್ಲಿ ಆಡಿದ 16 ಪಂದ್ಯಗಳಲ್ಲಿ ಕೊಹ್ಲಿ 4 ಶತಕಗಳು ಮತ್ತು 7 ಅರ್ಧ ಸತತಗಳನ್ನು ಬಾರಿಸಿದರು.

ಗುಜರಾತ್ ಟೈಟನ್ ತಂಡದ ಯುವ ಆರಂಭಿಕ ಬ್ಯಾಟ್ಸ್ಮನ್ ಸಾಯಿ ಸುದರ್ಶನ್ ಐಪಿಎಲ್ 2026ರಲ್ಲಿ ದಾಖಲೆಗಳ ಮೇಲೆ ದಾಖಲೆ ನಿರ್ಮಿಸುತ್ತಿದ್ದಾರೆ. ಈ ಸೀಸನ್ ನಲ್ಲಿ ಅವರು ತೋರಿರುವ ಅದ್ಭುತ ಸ್ಥಿರತೆ ಇದೀಗ ಅವರನ್ನು ವಿರಾಟ್ ಕೊಹ್ಲಿ ಮತ್ತು ಡೇವಿಡ್ ವಾರ್ನರ್ ಅವರಂತಹ ದಿಗ್ಗಜರ ಸಾಲಿಗೆ ಸೇರಿಸಿದೆ. ಇದುವರೆಗೆ ಐಪಿಎಲ್ ೨೦೨೬ರಲ್ಲಿ ಸಾಯಿ ಸುದರ್ಶನ್ 9 ಬಾರಿ 50 ಅಥವಾ ಅದಕ್ಕಿಂತ ಹೆಚ್ಚು ರನ್ ಗಳ ಇನ್ನಿಂಗ್ಸ್ ಆಡಿದ್ದಾರೆ. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಒಂದು ಆವೃತ್ತಿಯಲ್ಲಿ 9 ಬಾರಿ 50+ ದಾಖಲಿಸಿದ ಮೂರನೇ ಬ್ಯಾಟ್ಸ್ಮನ್ ಎಂಬ ಅಪರೂಪದ ಸಾಧನೆ ಮಾಡಿದ್ದಾರೆ.

ಈ ಸಾಧನೆಯನ್ನು ಮೊದಲು ವಿರಾಟ್ ಕೊಹ್ಲಿ 2016ರ ಐಪಿಎಲ್ ನಲ್ಲಿ ಮಾಡಿದ್ದರು. ಅದೇ ವರ್ಷ ಡೇವಿಡ್ ವಾರ್ನರ್ ಕೂಡ 9 ಬಾರಿ 50 + ಸ್ಕೋರ್ ದಾಖಲಿಸಿದ್ದರು. ನಂತರ 2019ರ ಆವೃತ್ತಿಯಲ್ಲೂ ವಾರ್ನರ್ ಇದೆ ಸಾಧನೆಯನ್ನು ಪುನರಾವರ್ತಿಸಿದ್ದರು. ಇದೀಗ ಸಾಯಿ ಸುದರ್ಶನ್ ಈ ವಿಶೇಷ ಪಟ್ಟಿಗೆ ಸೇರ್ಪಡೆಯಾಗಿ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಸುದರ್ಶನ್ ಅವರ ನಿರಂತರ ರನ್ಗಳ ಅರಿವು ಗುಜರಾತ್ ಟೈಟಲ್ ತಂಡದ ಫೈನಲ್ ಪ್ರವೇಶಕ್ಕೆ ಪ್ರಮುಖ ಕಾರಣವಾಗಿದೆ. ಆರಂಭಿಕ ಆಟಗಾರನಾಗಿ ಅವರು ನೀಡಿರುವ ಭದ್ರ ಆರಂಭ ಮತ್ತು ದೊಡ್ಡ ಇನಿಂಕ್ಸ್ ಗಳು ತಂಡದ ಯಶಸ್ವಿನಲ್ಲಿ ಮಹತ್ವದ ಪಾತ್ರ ವಹಿಸಿವೆ. ಯುವ ವಯಸ್ಸಿನಲ್ಲಿ ಐಪಿಎಲ್ ನ ಅತ್ಯಂತ ಪ್ರತಿಷ್ಠಿತ ದಾಖಲೆಗಳ ಪೈಕಿ ಒಂದನ್ನು ಸರಿಗಟ್ಟಿರುವ ಸಾಯಿ ಸುದರ್ಶನ್, ಭವಿಷ್ಯದ ಭಾರತೀಯ ಕ್ರಿಕೆಟ್ ನ ಸೂಪರ್ ಸ್ಟಾರ್ ಆಗಿ ಹೊರಹೊಮ್ಮುವ ಭರವಸೆಯನ್ನು ಮೂಡಿಸಿದಾರೆ. ಫೈನಲ್ ಪಂದ್ಯದಲ್ಲೂ ಅದೇ ಲೇಯ ಮುಂದುವರೆಸಿದರೆ, ಇನ್ನಷ್ಟು ದಾಖಲೆಗಳು ಅವರ ಹೆಸರಿಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ.

Sponsored

Also Read:

Dk shivakumar karnataka CM: ಸಿ.ಎಲ್.ಪಿ ಸಭೆಯಲ್ಲಿ ಮಹತ್ವದ ನಿರ್ಧಾರ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online