Belagavi news:
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಜಲಪಾತಗಳು ಮೈದುಂಬಿ ಹರಿಯುತ್ತಿದ್ದು, ಪ್ರಕೃತಿ ಪ್ರಿಯ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.
ಪ್ರಕೃತಿಯ ಸೊಬಗು, ಹಸಿರು ಬೆಟ್ಟಗಳು, ದಟ್ಟ ಕಾಡುಗಳು ಹಾಗೂ ಧುಮ್ಮಿಕ್ಕುವ ಜಲಪಾತಗಳಿಗೆ ಹೆಸರಾದ ಚಿಕ್ಕಮಗಳೂರು ಜಿಲ್ಲೆ, ಮಳೆಗಾಲದಲ್ಲಿ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿ ಮಾರ್ಪಡುತ್ತದೆ. ಮುಂಗಾರು ಆರಂಭದೊಂದಿಗೆ ಕಾಫಿ ನಾಡಿನ ಸೌಂದರ್ಯ ಮತ್ತಷ್ಟು ಇಮ್ಮಡಿಗೊಂಡಿದ್ದು, ಜಿಲ್ಲೆಯಾದ್ಯಂತ ಜಲಪಾತಗಳು ಮತ್ತು ಸಂಪೂರ್ಣ ವೈಭವದಲ್ಲಿ ಹರಿಯುತ್ತಿವೆ.
ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ವಿಶೇಷವಾಗಿ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿರುವ ಪ್ರಮುಖ ಹಾಗೂ ಅಪರೂಪದ ಜಲಪಾತಗಳು ಪ್ರವಾಸಿಗರ ಗಮನ ಸೆಳೆಯುತ್ತಿವೆ.
ಈ ಬಾರಿ ಮುಂಗಾರು ಪ್ರವಾಸವನ್ನು ಚಿಕ್ಕಮಗಳೂರಿನಲ್ಲಿ ಯೋಜಿಸುತ್ತಿರುವ ಪ್ರವಾಸಿಗರು, ಜಿಲ್ಲೆಯ ಪ್ರಸಿದ್ಧ ಜಲಪಾತಗಳ ಜೊತೆಗೆ ಕಡಿಮೆ ಪರೀಕ್ಷಿತ ಜಲಪಾತಗಳನ್ನು ತಮ್ಮ ಪ್ರವಾಸ ಪಟ್ಟಿಯಲ್ಲಿ ಸೇರಿಸಿಕೊಳ್ಳುವಂತೆ ಪ್ರವಾಸೋದ್ಯಮ ತಜ್ಞರು ಸಲಹೆ ನೀಡಿದ್ದಾರೆ. ಮಳೆಗಾಲದ ಈ ಸೀಸನ್ ನಲ್ಲಿ ಚಿಕ್ಕಮಗಳೂರು ಮತ್ತು ಮೇ ಪ್ರಕೃತಿ ಪ್ರಿಯರ ಸ್ವರ್ಗವಾಗಿ ತಲೆಯೆತ್ತಿದೆ.
ಚಿಕ್ಕಮಗಳೂರಿನ ಮುಂಗಾರು ಪ್ರವಾಸ: ಭೇಟಿ ನೀಡಲೇಬೇಕಾದ ಪ್ರಮುಖ ಜಲಪಾತಗಳು ಪ್ರವಾಸಿಗರ ಆಕರ್ಷಣೆ:
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಗಾರುಮಳೆಯ ಅಬ್ಬರ ಮುಂದುವರೆದಿದ್ದು ಜಿಲ್ಲೆಯ ವಿವಿಧ ಜಲಪಾತಗಳು ಮೈದುಂಬಿ ಹರಿದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಕಾಫಿ ನಾಡಿನ ಹಸಿರು ಬೆಟ್ಟಗಳು ಮತ್ತು ದಟ್ಟ ಕಾಡುಗಳ ನಡುವೆ ಇರುವ ಈ ಜಲಪಾತಗಳು ಪ್ರಕೃತಿ ಪ್ರಿಯರ ಪ್ರಮುಖ ಆಕರ್ಷಣೆಯಾಗಿ ಪರಿಣಮಿಸಿವೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ತಪ್ಪಲಿನಲ್ಲಿರುವ ಅಬ್ಬು ಗುಡಿಗೆ ಜಲಪಾತ ಮಳೆಗಾಲದಲ್ಲಿ ತನ್ನ ರೌದ್ರ ಹಾಗೂ ಮನಮೋಹಕ ರೂಪವನ್ನು ತೋರುತ್ತಿದ್ದು, ಕಾಡಿನ ಮಧ್ಯೆಯ ಈ ಜಲಧಾರೆ ಪ್ರವಾಸಿಗರ ಗಮನ ಸೆಳೆಯುತ್ತಿದೆ.
ಮುಡುಗೆರೆ ತಾಲೂಕಿನ ಹುಲ್ಲೇಮನೆ ಸಮೀಪದ ಸಂತೋಷ್ ಫಾಲ್ಸ್ ಚಾರಣಪ್ರಿಯರ ನೆಚ್ಚಿನ ತಾಣವಾಗಿದ್ದು, ಹಸಿರು ಬೆಟ್ಟಗಳ ನಡುವೆ ಹರಿಯುವ ಈ ಜಲಪಾತ ಮಳೆಗಾಲದಲ್ಲಿ ಇನ್ನಷ್ಟು ಕಂಗೊಳಿಸುತ್ತದೆ. ಇದೇ ತಾಲೂಕಿನ ಬಲ್ಲಾಳರಾಯನ ದುರ್ಗ ಸಮೀಪದ ಕೂಡಿಗೆ ಜಲಪಾತ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದಿದ್ದು, ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಆಲೂರು ಸಮೀಪದ ಶಂಕರ್ ಫಾಲ್ಸ್ ಪ್ರಕೃತಿ ಪ್ರಿಯರ ಮೆಚ್ಚಿನ ತಾಣವಾಗಿದ್ದರು ಮೂಲಸೌಕರ್ಯಗಳ ಕೊರತೆಯಿಂದ ಇನ್ನೂ ಅಭಿವೃದ್ಧಿಯ ನಿರೀಕ್ಷೆಯಲ್ಲಿದೆ ಎಂದು ಸ್ಥಳೀಯರು ಹೇಳುತ್ತಾರೆ. ಕುದುರೆಮುಖ ಅರಣ್ಯದ ಮಧ್ಯದಲ್ಲಿರುವ ಹನುಮನ ಗುಂಡಿ ಜಲಪಾತವು ಜಿಲ್ಲೆಯ ಅತ್ಯಂತ ಜನಪ್ರಿಯ ಜಲಪಾತಗಳಲ್ಲಿ ಒಂದಾಗಿದ್ದು, ಸುಮಾರು 22 ಮೀಟರ್ ಎತ್ತರದಿಂದ ಧುಮ್ಮಿಕ್ಕುವ ನೀರು ಪ್ರವಾಸಿಗರಿಗೆ ರೋಮಾಂಚಕ ಕಾರಿ ಅನುಭವ ನೀಡುತ್ತದೆ.
ಸುಖರಾಯಪಟ್ಟಣ ಸಮೀಪದ ಕಾಮನೆ ಹಳ್ಳಿ ತನ್ನ ವಿಶಿಷ್ಟ ಕಲ್ಲಿನ ರಚನೆಗಳಿಂದ ಗಮನ ಸೆಳೆಯುತ್ತಿದ್ದು, ಇಲ್ಲಿ ಆಳವಾದ ಗುಂಡಿಗಳಿರುವುದರಿಂದ ಪ್ರವಾಸಿಗರು ಎಚ್ಚರಿಕೆಯಿಂದ ಇರಬೇಕೆಂದು ಸೂಚಿಸಲಾಗಿದೆ.
ರಾಜ್ಯದ ಪ್ರಸಿದ್ಧ ಜಲಪಾತಗಳಲ್ಲಿ ಒಂದಾದ ಹಬ್ಬೆ ಜಲಪಾತವು ಸುಮಾರು 551 ಅಡಿ ಎತ್ತರದಿಂದ ಎರಡು ಹಂತಗಳಲ್ಲಿ ಧುಮ್ಮಿಕ್ಕು ತ್ತಿದ್ದು ಇದರ ನೀರಿಗೆ ಔಷಧೀಯ ಗುಣಗಳಿವೆ ಎಂಬ ನಂಬಿಕೆಯು ಇದೆ.
ಚರ್ಮಡಿ ಘಾಟ್ ಮಾರ್ಗದಲ್ಲಿರುವ ಆಲೆಖಾನ್ ಜಲಪಾತ ಕೂಡ ಮಳೆಗಾಲದಲ್ಲಿ ಮೈದುಂಬಿ ಹರಿದು ಕಣ್ಮನ ಸೆಳೆಯುತ್ತದೆ. ಚಿಕ್ಕಮಗಳೂರು ನಗರದ ಸಮೀಪದ ಮಜ್ಜಿಗೆ ಜಲಪಾತ ಫೋಟೋಶೂಟ್ ಹಾಗೂ ಪ್ರಕೃತಿ ವೀಕ್ಷಣೆಗೆ ಸೂಕ್ತ ತಾಣವಾಗಿದ್ದು, ಬಾಬಾಬುಡನ ಗಿರಿ ರಸ್ತೆಯಲ್ಲಿರುವ ಮಾಣಿಕ್ಯಧಾರ ಜಲಪಾತ ತನ್ನ ಶುದ್ಧ ನೀರು ಹಾಗೂ ಧಾರ್ಮಿಕ ಮಹತ್ವದಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಚಿಕ್ಕಮಗಳೂರು ರಾಜ್ಯದಲ್ಲೇ ಅತಿ ಹೆಚ್ಚು ಜಲಪಾತಗಳ ರಾಜ್ಯ - ಮುಂಗಾರು ಆರಂಭಕ್ಕೆ ಪ್ರವಾಸಿಗರ ದಂಡು:
ಚಿಕ್ಕಮಗಳೂರು ಜಿಲ್ಲೆಯ ರಾಜ್ಯದಲ್ಲೇ ಅತಿ ಹೆಚ್ಚು ಜಲಪಾತಗಳನ್ನು ಹೊಂದಿದ ಏಕೈಕ ಜಿಲ್ಲೆಯಾಗಿ ಪ್ರಸಿದ್ದಿ ಪಡೆದಿದ್ದು, ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ದೇಶ ಮತ್ತು ರಾಜ್ಯದ ವಿವಿಧ ಭಾಗಗಳಿಂದ ಪ್ರವಾಸಿಗರು ಆಗಮಿಸುತ್ತಾರೆ.
ಚಿಕ್ಕಮಗಳೂರು ಜಿಲ್ಲೆಯು ಕಾಫಿ ಉದ್ಯಮಕ್ಕೆ ಮಾತ್ರವಲ್ಲದೆ ಪ್ರಕೃತಿ ಪ್ರವಾಸೋದ್ಯಮಕ್ಕೂ ಹೆಸರುವಾಸಿಯಾಗಿದೆ ಎಂದು ತಿಳಿದುಬಂದಿದೆ. ಮುಂಗಾರು ಆರಂಭದೊಂದಿಗೆ ಜಿಲ್ಲೆಯ ಬಹುತೇಕ ಜಲಪಾತಗಳು ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತೇವೆ ಎಂದು ಹೇಳುತ್ತಾರೆ.
ಜೊತೆಗೆ ಕರ್ನಾಟಕದ ಅತಿ ಎತ್ತರದ ಶಿಖರವಾದ ಮುಳ್ಳಯ್ಯನಗಿರಿ ಕೂಡ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿದ್ದು, ದೇಶಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಶಂಕರ್ ಫಾಲ್ಸ್, ಮಾಣಿಕ್ಯಧಾರಾ ಜಲಪಾತ, ಹುಬ್ಬೆ ಫಾಲ್ಸ್, ಜರಿ ಫಾಲ್ಸ್, ಸುಖರಾಯಪಟ್ಟಣದ ಜಲಪಾತ, ಹನುಮಾನ್ ಫಾಲ್ಸ್ ಹಾಗೂ ಹೊನ್ನೇಕೂಡಿಗೆ ಫಾಲ್ಸ್ ಸೇರಿದಂತೆ ಅನೇಕ ರಮಣೀಯ ತಾಣಗಳು ಪ್ರವಾಸಿಗರ ಮೆಚ್ಚುಗೆಗೆ ಪಾತ್ರವಾಗಿವೆ.
ಸ್ಥಳೀಯ ನಿವಾಸಿಯಾಗಿ ಈ ಸುಂದರ ಜಲಪಾತಗಳನ್ನು ಕಣ್ಣಾರೆ ಕಂಡ ಅನುಭವವನ್ನು ಹಂಚಿಕೊಂಡ ಒಬ್ಬರು, ಇವುಗಳನ್ನು ನೋಡುವುದೇ ಮನಸ್ಸಿಗೆ ಮದ ನೀಡುವ ಅನುಭವವಾಗಿದೆ ಎಂದು ತಿಳಿಸಿದ್ದಾರೆ.
ಇನ್ನೊಂದೆಡೆ ಸ್ಥಳೀಯರಾದ ಮಂಜುನಾಥ್ ಅವರು ಚಿಕ್ಕಮಂಗಳೂರಿನ ಕಾಫಿ ಉತ್ಪಾದನೆಗೆ ಹೆಸರುವಾಸಿ ಆಗಿರುವ ಜಿಲ್ಲೆಯಾಗಿದ್ದು, ಮುಂಗಾರು ಮಳೆಯ ಆರಂಭದೊಂದಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ಅವರ ಪ್ರಕಾರ, ರಾಜ್ಯದಲ್ಲಿ ಅತಿ ಹೆಚ್ಚು ಜಲಪಾತಗಳನ್ನು ಹೊಂದಿರುವ ಜಿಲ್ಲೆ ಎಂಬ ಹೆಗ್ಗಳಿಕೆಯಿಂದ ಚಿಕ್ಕಮಗಳೂರು ಗುರುತಿಸಿಕೊಂಡಿದ್ದು, ಮಳೆಯ ಕಾರಣದಿಂದ ಬಹುತೇಕ ಜಲಪಾತಗಳು ಸಂಪೂರ್ಣವಾಗಿ ಮೈದುಂಬಿ ಹರಿಯುತ್ತಿವೆ.
ಪ್ರಮುಖ ಜಲಪಾತಗಳಾದ ಶಂಕರ್ ಫಾಲ್ಸ್, ಮಾಣಿಕ್ಯಧಾರಾ, ಹುಬ್ಬೆ ಫಾಲ್ಸ್, ಜರಿ ಫಾಲ್ಸ್, ಸಖರಾಯಪಟ್ಟಣದ ಜಲಪಾತ ಮತ್ತು ಹನುಮಾನ್ ಫಾಲ್ಸ್ ಸೇರಿದಂತೆ ಅನೇಕ ತಾಣಗಳು ಪ್ರವಾಸಿಗರಿಗೆ ವಿಶೇಷ ಅನುಭವ ನೀಡುತ್ತಿವೆ ಎಂದು ಅಲ್ಲಿರುವ ನಿವಾಸಿ ಒಬ್ಬರು ತಿಳಿಸಿದ್ದಾರೆ.
ಮುಂಗಾರು ಸೀಸನ್ ನಲ್ಲಿ ಚಿಕ್ಕಮಗಳೂರು ಮತ್ತೊಮ್ಮೆ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮಿದ್ದು, ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ನೀಡಿದೆ.
ನಮ್ಮ ವಾಹಿನಿಯಿಂದ ಹೇಳುವ ಸಂದೇಶವಾದರೆ, ನೀವು ಮತ್ತು ನಿಮ್ಮ ಕುಟುಂಬದವರು ಕನಿಷ್ಠ ಒಂದು ಬಾರಿಯಾದರೂ ಚಿಕ್ಕಮಂಗಳೂರಿಗೆ ತೆರಳಿ. ಅಲ್ಲಿರುವಂತಹ ಎಲ್ಲ ಜಲಪಾತಗಳನ್ನು ವೀಕ್ಷಿಸಿ ಎಂದು ಹೇಳುತ್ತಾ ಅದರಲ್ಲೂ ಹೆಚ್ಚು ಜಾಗೃತರಾಗಿರಿ ಎಂದು ಹೇಳಲು ಇಷ್ಟ ಪಡುತ್ತೇವೆ.
Also Read:
ಭಾರತ-ಇಸ್ರೇಲ್ ಸ್ನೇಹಕ್ಕೆ ಹೊಸ ಅಧ್ಯಾಯ; ಶಿವಾಜಿ ಮಹಾರಾಜರ ಪ್ರತಿಮೆ ಸ್ಥಾಪನೆಗೆ ಸಿದ್ಧತೆ