Belagavi news:
ಕನ್ನಡ ಚಿತ್ರರಂಗದ ದಿಗ್ಗಜ, ನಟಸಾರ್ವಭೌಮ ಡಾಕ್ಟರ್ ರಾಜಕುಮಾರ್ ಅವರ ಗಾಯನ ಮತ್ತು ಜೀವನ ಸಾಧನೆಗೆ ಸಮರ್ಪಿತವಾದ ನಾದಯೋಗಿ ಡಾಕ್ಟರ್ ರಾಜಕುಮಾರ್ ಅವರ ಪುಸ್ತಕ ನಾಳೆ ಬಿಡುಗಡೆಗೊಳ್ಳಲಿದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆಯಲಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ಪುತ್ರಿಯರಾದ ಲಕ್ಷ್ಮಿ ಗೋವಿಂದರಾಜು ಮತ್ತು ಪೂರ್ಣಿಮಾ ರಾಮ್ ಕುಮಾರ್ ಪುಸ್ತಕವನ್ನು ಅನಾವರಣಗೊಳಿಸಲಿದ್ದಾರೆ.
ಡಾಕ್ಟರ್ ರಾಜಕುಮಾರ್ ಬೌದ್ಧಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅವರ ಕಲೆ, ಚಿತ್ರಗಳು ಮತ್ತು ಗಾನ ಇಂದಿಗೂ ಪ್ರೇಕ್ಷಕರ ಹೃದಯದಲ್ಲಿ ಜೀವಂತವಾಗಿದೆ. ಕನ್ನಡ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆ ಅಪಾರವಾಗಿದ್ದು, ಭಾರತೀಯ ಸಿನಿಮಾ ಕ್ಷೇತ್ರದಲ್ಲಿಯೂ ಅಣ್ಣಾವ್ರ ಹೆಸರು ಚಿರಸ್ತಾಯಿಯಾಗಿ ಉಳಿದಿದೆ. ನಟನೆಯಲ್ಲಿ ಮಾತ್ರವಲ್ಲ, ಗಾಯನದಲ್ಲಿಯೂ ಅಸಾಧಾರಣ ಪ್ರತಿಭೆ ತೋರಿದ ಅವರು ರಾಷ್ಟ್ರ ಪ್ರಶಸ್ತಿಯನ್ನು ಪಡೆದು ಕನ್ನಡಿಗರ ಹೆಮ್ಮೆಯ ಪ್ರತೀಕವಾಗಿದ್ದಾರೆ.
"ನಾದಯೋಗಿ" ಪುಸ್ತಕವು ಅವರ ಸಂಗೀತ ಪಯಣ, ಅಪರೂಪದ ಅನುಭವಗಳು ಮತ್ತು ಕಲಾತ್ಮಕ ವ್ಯಕ್ತಿತ್ವವನ್ನು ಒಳಗೊಂಡಿದ್ದು, ಅಭಿಮಾನಿಗಳು ಹಾಗೂ ಸಿಹಿ ರಸಿಕರಿಗೆ ವಿಶೇಷ ಮಾಹಿತಿಯನ್ನು ನೀಡಲಿದೆ ಎನ್ನಲಾಗಿದೆ. ಈ ಪುಸ್ತಕ ಬಿಡುಗಡೆಯ ಮೂಲಕ ಡಾ. ರಾಜಕುಮಾರ್ ಅವರ ಸಾಂಸ್ಕೃತಿಕ ಮತ್ತು ಕಲಾತ್ಮಕ ಪರಂಪರೆಯನ್ನು ಮತ್ತಷ್ಟು ಜೀವಂತ ಗೊಳಿಸುವ ಪ್ರಯತ್ನವಾಗಿದೆ.
ಒಟ್ಟಿನಲ್ಲಿ, ನಾದಯೋಗಿ : ಡಾ. ರಾಜಕುಮಾರ್ ಪುಸ್ತಕ ಬಿಡುಗಡೆ ಕಾರ್ಯಕ್ರಮ ಕನ್ನಡಿಗರಿಗಾಗಿ ಒಂದು ಸ್ಮರಣೆಯ ಕ್ಷಣವಾಗಿದ್ದು, ಅಣ್ಣಾವ್ರ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿದೇ.
ಕನ್ನಡದ ನಟಸಾರ್ವಭೌಮ ಡಾ.ರಾಜಕುಮಾರ್ ಅವರ ಸಂಗೀತ ಪಾಂಡಿತ್ಯ ಮತ್ತು ಕಲಾ ವೈಶಿಷ್ಟ್ಯವನ್ನು ಅನಾವರಣಗೊಳಿಸುವ ನಾದಯೋಗಿ : ಡಾ. ರಾಜಕುಮಾರ್ ಕೃತಿ ಇದೀಗ ಬಾರಿ ಗಮನ ಸೆಳೆಯುತ್ತಿದೆ. ಗಾಯನದಲ್ಲಿ ಅಪಾರ ಪರಿಣಿತಿ ಹೊಂದಿದ್ದ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಪಾಂಡಿತ್ಯವನ್ನು ಸಾಧಿಸಿದ್ದಲ್ಲದೆ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಮೇಲಿನ ಅವರ ಆಸಕ್ತಿ ಮತ್ತು ಅಭ್ಯಾಸವು ಅವರ ಪ್ರತಿಭೆಗೆ ವಿಭಿನ್ನ ಆಯಾಮ ನೀಡಿದೆ. ಈ ಕಾರಣದಿಂದಲೇ ಅವರು ಭಾರತೀಯ ಸಂಸ್ಕೃತಿಯ ರಾಯಭಾರಿಯಾಗಿ ಗುರುತಿಸಿಕೊಂಡಿದ್ದಾರೆ.
ರಂಗಭೂಮಿಯಿಂದ ಬೆಳೆದ ಅವರ ವ್ಯಕ್ತಿತ್ವ, ಹಳೆಯ ಕಾಲದ ವೃತ್ತಿಪರ ನಾಟಕ ಕಂಪನಿಗಳ ಶ್ರೀಮಂತ ಸಂಗೀತ ಪರಂಪರೆಯನ್ನು ಒಳಗೊಂಡಿತ್ತು. ಈ ಹಿನ್ನಲೆ, ನಾದಯೋಗಿ ಕೃತಿ ಕೇವಲ ಜೀವನ ಚರಿತ್ರೆ ಎಷ್ಟೇ ಅಲ್ಲ, ಅವರ ಕಲಾ ಪಯಣದ ಆಳವಾದ ಅಧ್ಯಯನವಾಗಿದೆ.
ಈ ಪುಸ್ತಕವು ಡಾ. ರಾಜಕುಮಾರ್ ಅವರೊಂದಿಗೆ ನಡೆದಾ ಅಪರೂಪದ ಸಂಭಾಷಣೆಗಳ ಸಂಗ್ರಹವಾಗಿದ್ದು, ಅವರ ಚಿಂತನೆಗಳು, ಸಂಗೀತದ ಮೇಲೆ ದೃಷ್ಟಿಕೋನ ಮತ್ತು ಕಲಾತ್ಮಕ ಅನುಭವಗಳನ್ನು ಓದುಗರಿಗೆ ಪರಿಚಯಿಸುತ್ತದೆ. ಜೊತೆಗೆ ಅವರ ಪತ್ನಿ ಪಾರ್ವತಮ್ಮ ರಾಜಕುಮಾರ್ ಅವರ ಸಂದರ್ಶನಗಳನ್ನು ಒಳಗೊಂಡಿದ್ದು, ಅಣ್ಣಾವ್ರ ವೈಯಕ್ತಿಕ ಮತ್ತು ಕಲಾತ್ಮಕ ಬದುಕಿನ ಬಗ್ಗೆ ಮತ್ತಷ್ಟು ಒಳನೋಟ ನೀಡುತ್ತದೆ.
ಒಟ್ಟಿನಲ್ಲಿ ನಾದಯೋಗಿ ಡಾ.ರಾಜಕುಮಾರ್ ಕೃತಿ ಸಂಗೀತಾಸಕ್ತರು, ಸಿನಿ ರಸಿಕರು ಮತ್ತು ಸಂಶೋಧಕರಿಗೆ ಮಹತ್ವದ ಗ್ರಂಥವಾಗಿದ್ದು, ಅಣ್ಣಾವ್ರ ಕಲ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಸೇತುವೆಯಾಗಿ ಪರಿಣಮಿಸುವ ನಿರೀಕ್ಷೆ ಇದೆ.
ಕನ್ನಡ ಚಿತ್ರರಂಗದ ನಟಸಾರ್ವಭೌಮ ಡಾಕ್ಟರ್ ರಾಜಕುಮಾರ್ ಅವರ ಜೀವನ ಮತ್ತು ಸಂಗೀತ ಪಯಣವನ್ನು ಅನಾವರಣಗೊಳಿಸುವ ನಾದಯೋಗಿ ಡಾ. ರಾಜಕುಮಾರ್ ಪುಸ್ತಕ ಇದೀಗ ಭಾರಿ ಗಮನ ಸೆಳೆಯುತ್ತಿದೆ. ಈ ಕೃತಿಯಲ್ಲಿ ಅಣ್ಣಾವ್ರ ವ್ಯಕ್ತಿತ್ವ ರೂಪಗೊಂಡ ಹಿನ್ನೆಲೆ, ಅವರ ಕುಟುಂಬದ ಪಾತ್ರ ಮತ್ತು ಸಂಗೀತದ ಮೇಲಿನ ಅಪಾರ ಆಸಕ್ತಿಯನ್ನು ಆಳವಾಗಿ ವಿವರಿಸಲಾಗಿದೆ.
ಈ ಮಹಾನ್ ವ್ಯಕ್ತಿತ್ವದ ರೂಪುಗೊಳಿಸುವಿಕೆಯಲ್ಲಿ ಅವರ ತಮ್ಮ ಎಸ್ ಪಿ ವರದರಾಜು ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಮಾರ್ಗದರ್ಶಕ ಮತ್ತು ಸಂಸ್ಕಾರಕರಾಗಿ ಅವರು ಡಾಕ್ಟರ್ ರಾಜಕುಮಾರ್ ಅವರ ಜೀವನದಲ್ಲಿ ಪ್ರಮುಖ ಪ್ರಭಾವ ಬೀರಿದ್ದಾರೆ ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಮೇಲಿನ ಅವರ ಪ್ರೀತಿಯ ಅಪಾರವಾಗಿದ್ದು, ಭಾರತೀಯ ಶಾಸ್ತ್ರೀಯ ಸಂಗೀತದಿಂದ ಹಿಡಿದು ಪಶ್ಚಾತ್ಯ ವಾದ್ಯ ಸಂಗೀತದವರೆಗೆ ಅವರ ಆಸಕ್ತಿ ವಿಸ್ತರಿಸಿತ್ತು ಎಂಬುದನ್ನು ಕೃತಿ ವಿವರಿಸುತ್ತದೆ.
ನಾದಯೋಗಿ ಕೃತಿಯ ವಿಶೇಷತೆ ಎಂದರೆ, ಇದು ಕೇವಲ ಜೀವನ ಚರಿತ್ರೆಯಲ್ಲದೆ ಅಣ್ಣಾವ್ರೊಂದಿಗೆ ನಡೆದ ಅಪರೂಪದ ಸಂಭಾಷಣೆಗಳ ಸಂಗ್ರಹವೂ ಆಗಿದೆ. ಈ ಸಂಭಾಷಣೆಗಳಲ್ಲಿ ಸೂಪರ್ ಸ್ಟಾರ್ ವ್ಯಕ್ತಿತ್ವ ನಿಧಾನವಾಗಿ ಹಿಂದೆ ಸರಿದು, ಸರಳ ಮತ್ತು ಗಂಭೀರವಾದ ಮುತ್ತುರಾಜು ಎಂಬ ವ್ಯಕ್ತಿ ಹೊರಹೊಮ್ಮುವ ಅಂಶವನ್ನು ಓದುಗರು ಅನುಭವಿಸಬಹುದು. ಈ ಕೃತಿಯ ಮೂಲಕ ಅವರ ಸಂಗೀತ ಜ್ಞಾನ ಮತ್ತು ಒಳಜಗತ್ತಿನ ಸತ್ಯಸಂದ ಚಿತ್ರಣವನ್ನು ನೀಡಲಾಗಿದೆ.
ಈ ಪುಸ್ತಕವನ್ನು ಲೇಖಕರಾದ ಆರ್ ಮಂಜುನಾಥ್ ಚವಾಣ್ ಮತ್ತು ಡಾ.ಸೌಮ್ಯ ಮಂಜುನಾಥ್ ಚವಾಣ್ ಅವರು ರಚಿಸಿದ್ದು, ಹಲವು ದಶಕಗಳಿಂದ ರಾಜ್‌ಕುಮಾರ್ ಕುಟುಂಬದೊಂದಿಗೆ ಹೊಂದಿರುವ ನಿಕಟ ಸಂಬಂಧದ ಆಧಾರದಲ್ಲಿ ಈ ಕೃತಿಯನ್ನು ಸಿದ್ಧಪಡಿಸಿದ್ದಾರೆ. ಮೂಲತಃ ಇಂಗ್ಲಿಷ್ ನಲ್ಲಿ ರಚಿಸಲಾದ ಈ ಪುಸ್ತಕವನ್ನು ಸವಿತಾ ಜೋಶಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ನಾಳೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಡಾಕ್ಟರ್ ರಾಜಕುಮಾರ್ ಸಭಾಂಗಣದಲ್ಲಿ ಈ ಪುಸ್ತಕ ಅಧಿಕೃತವಾಗಿ ಅನಾವರಣಗೊಳ್ಳಲಿದೆ. ಅಣ್ಣಾವ್ರ ಪುತ್ರಿಯರಾದ ಲಕ್ಷ್ಮಿ ಗೋವಿಂದರಾಜು ಮತ್ತು ಪೂರ್ಣಿಮಾ ರಾಮ್ ಕುಮಾರ್ ಅವರು ಈ ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ. ಈ ವಿಶೇಷಕ್ಷಣಕ್ಕಾಗಿ ಅಭಿಮಾನಿಗಳು ಮತ್ತು ಸ್ಥಿನಿ ರಸಿಕರು ಕಾತುರದಿಂದ ನಿರೀಕ್ಷಿಸುತ್ತಿದ್ದಾರೆ.
Also Read:
TN Politics : ಸಚಿವರ ಕಚೇರಿಗಳು ಖಾಲಿ ; ಹೊಸ ಸರ್ಕಾರಕ್ಕೆ ವೇದಿಕೆ ಸಿದ್ಧ