ಮಹಾತ್ಮ ಗಾಂಧಿಯವರ ಪುಣ್ಯತಿಥಿ: ಪ್ರಧಾನಿ ನರೇಂದ್ರ ಮೋದಿ ಅವರು ಗಾಂಧೀಜಿಗೆ ಗೌರವ ಸಲ್ಲಿಸಿದರು :
ರಾಷ್ಟ್ರಪತಿ ಮಹಾತ್ಮ ಗಾಂಧಿಯವರ ಪುಣ್ಯತಿಥಿ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಗಾಂಧೀಜಿಗೆ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು "ಗಾಂಧಿಯವರ ಸ್ವದೇಶಿ ಕರೆಯು ಅಭಿವೃದ್ಧಿ ಹೊಂದಿದ ಭಾರತದ ಮೂಲಭೂತ ತತ್ವವಾಗಿದೆ" ಎಂದು ಹೇಳಿದರು. ಮಹಾತ್ಮ ಗಾಂಧಿಯವರು ಜೀವನಪೂರ್ತಿ ಸ್ವದೇಶಿ ಚಿಂತನೆಗೆ ಬಲವಾದ ಒತ್ತು ನೀಡಿದರು ಎಂದು ಪ್ರಧಾನಿ ಮೋದಿ ಸ್ಮರಿಸಿದರು."ಸ್ವದೇಶಿ ಕೇವಲ ಆರ್ಥಿಕ ತತ್ವವಲ್ಲ, ಅದು ರಾಷ್ಟ್ರದ ಆತ್ಮವಿಶ್ವಾಸ ಮತ್ತು ಸ್ವಾಭಿಮಾನವನ್ನು ಪ್ರತಿಬಿಂಬಿಸುತ್ತದೆ. ಇಂದು ಅಭಿವೃದ್ಧಿ ಹೊಂದಿದ ಹಾಗೂ ಸ್ವಾವಲಂಬಿ ಭಾರತ ನಿರ್ಮಾಣದತ್ತ ಸರ್ಕಾರ ತೆಗೆದುಕೊಂಡಿರುವ ಸಂಕಲ್ಪವೇ ಇದೇ ಮೂಲಭೂತ ಆಧಾರ ಸ್ತಂಭವಾಗಿದೆ ಎಂದು ಅವರು ತಿಳಿಸಿದರು. ಸಸತ್ಯ, ಅಹಿಂಸೆ,ಸ್ವದೇಶಿ ಹಾಗೂ ಸರಳ ಜೀವನ ಎಂಬ ಗಾಂಧೀಜಿಯ ತತ್ವಗಳು ಇಂದಿನ ಭಾರತಕ್ಕೂ ದಿಕ್ಕು ತೋರಿಸುತ್ತಿದೆ. ಸ್ಥಳೀಯ ಉತ್ಪನ್ನಗಳ ಬಳಕೆ, ದೇಶಿಯ ಕೈಗಾರಿಕೆಗಳ ಬೆಂಬಲ ಹಾಗೂ ಆತ್ಮನಿರ್ಭರ ಆರ್ಥಿಕತೆಯು ಗಾಂಧೀಜಿಯ ಕನಸಿನ ಭಾರತದ ಭಾಗವಾಗಿತ್ತು ಎಂದು ಪ್ರಧಾನಿ ಹೇಳಿದರು. ಗಾಂಧೀಜಿಯ ಆದರ್ಶಗಳು ಮುಂದಿನ ಪೀಳಿಗೆಗೆ ಪ್ರೇರಣೆಯಾಗಬೇಕು. ಅವರ ಚಿಂತನೆಗಳು ಅಳವಡಿಸಿಕೊಂಡರೆ ಮಾತ್ರ ಬಲಿಷ್ಠ ಅಭಿವೃದ್ಧಿ ಹೊಂದಿದ ಹಾಗೂ ಸ್ವಾವಲಂಬಿ ಭಾರತ ನಿರ್ಮಾಣ ಸಾಧ್ಯ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.
ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಪುಣ್ಯತಿಥಿಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಗಳ ಮೂಲಕ ಗಾಂಧೀಜಿಗೆ ಗೌರವ ಸಲ್ಲಿಸಿದರು. "ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪುಣ್ಯತಿಥಿಯಂದು ಅವರಿಗೆ ನನ್ನ ಗೌರವಗಳು. ಅವರ ವ್ಯಕ್ತಿತ್ವ ಮತ್ತು ಕಾರ್ಯಗಳು ದೇಶದ ಜನರನ್ನು ಸದಾ ಕರ್ತವ್ಯದ ಹಾದಿಯಲ್ಲಿ ನಡೆಯಲು ಪ್ರೇರೇಪಿಸುತ್ತದೆ ಎಂದು ಪ್ರಧಾನಿ ಮೋದಿ ತಮ್ಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ. ಮತ್ತೊಂದು ಪೋಸ್ಟ್ ನಲ್ಲಿ ಗಾಂಧಿಜಿಯ ತತ್ವವನ್ನು ಅಹಿಂಸೆಯ ತತ್ವವನ್ನು ಶ್ಲಾಘಿಸಿದ ಪ್ರಧಾನಿ,"ಬಾಪು ಯಾವಾಗಲೂ ಮಾನವೀಯತೆಯ ರಕ್ಷಣೆಗಾಗಿ ಅಹಿಂಸೆಯನ್ನು ಒತ್ತಿ ಹೇಳುತ್ತಿದ್ದರು.ಶಸ್ತ್ರಾಸ್ತ್ರವಿಲ್ಲದೆ ಜಗತ್ತನ್ನು ಬದಲಾಯಿಸಬಲ್ಲ ಶಕ್ತಿ ಅಹಿಂಸೆಯಲ್ಲಿದೆ ಎಂದು ಹೇಳಿದ್ದಾರೆ. ಈ ವೇಳೆ ಅವರು ಅಹಿಂಸೆಯ ಮಹತ್ವವನ್ನು ಸಾರುವ ಶ್ಲೋಕವನ್ನೂ ಉಲ್ಲೇಖಿಸಿದ್ದಾರೆ:
“ಅಹಿಂಸಾ ಪರಮ ಧರ್ಮಸ್ತಃ
ಅಹಿಂಸಾ ಪರಂತಪಃ
ಅಹಿಂಸಾ ಪರಮಂ ಸತ್ಯಂ
ಯತೋ ಧರ್ಮಃ ಪ್ರವರ್ತತೇ”
(ಅಹಿಂಸೆಯೇ ಅಂತಿಮ ಕರ್ತವ್ಯ, ಅಹಿಂಸೆಯೇ ಅಂತಿಮ ತಪಸ್ಸು.ಅಹಿಂಸೆಯೇ ಅಂತಿಮ ಸತ್ಯ, ಅದರಿಂದಲೇ ಧರ್ಮ ಪ್ರವರ್ತಿಸುತ್ತದೆ.) ಸತ್ಯ, ಅಹಿಂಸೆ, ಮಾನವೀಯ ಮೌಲ್ಯಗಳ ಮೂಲಕ ಮಹಾತ್ಮ ಗಾಂಧಿ ಜಗತ್ತಿಗೆ ಶಾಂತಿಯ ಮಾರ್ಗವನ್ನು ತೋರಿಸಿದರು. ಅವರ ಚಿಂತನೆಗಳು ಇಂದಿಗೂ ದೇಶದ ಆಡಳಿತ ಸಮಾಜ ಮತ್ತು ಯುವ ಪೀಳಿಗೆಗೆ ದಿಕ್ಕು ತೋರಿಸುತ್ತಿವೆ ಎಂದು ಪ್ರಧಾನಿ ಅಭಿಪ್ರಾಯ ಪಟ್ಟಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರು ಮಹಾತ್ಮ ಗಾಂಧಿಯವರ ಸ್ಮರಣೆ :
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಹಾತ್ಮ ಗಾಂಧಿಯವರ ಸ್ಮರಣೆ ಮಾಡಿ ಭಾವನಾತ್ಮಕ ಸಂದೇಶ ನೀಡಿದ್ದಾರೆ. ಹುತಾತ್ಮರ ದಿನದಂದು ರಾಷ್ಟ್ರಪಿತ ಮಹಾತ್ಮ ಗಾಂಧಿಗೆ ಗೌರವ ಸಲ್ಲಿಸುತ್ತಾರೆ ಎಂದು ಅವರು ತಿಳಿಸಿದ್ದಾರೆ.ಖರ್ಗೆ ಅವರು ಗಾಂಧಿಯವರ ಆದರ್ಶವನ್ನು ಹತ್ತಿರದಿಂದ ಅನುಸರಿಸಲು ಪ್ರೇರೇಪಿಸಿದ್ದಾರೆ. "ದೇಶವನ್ನು ಬೇರ್ಪಡಿಸಿದ ದ್ವೇಷವನ್ನು ಮಾತ್ರ ಗಾಂಧಿಯವರ ಮಾರ್ಗದಲ್ಲಿ ಎದುರಿಸಲು ಸಾಧ್ಯ. ಬಾಪು ಅವರ ಸ್ವಂತ ಮಾರ್ಗ, ಸತ್ಯದ ಬೆಳಕು, ಶಕ್ತಿ ಮತ್ತು ಪ್ರೀತಿಯ ಕರುಣೆ ಇದರಲ್ಲಿ ಅಡಗಿದೆ" ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದಾರೆ. ಮಹಾತ್ಮ ಗಾಂಧಿಯವರ ಬದುಕು ಹಾಗೂ ಕಾರ್ಯಗಳು ದೇಶದ ಜನರಿಗೆ ಸತ್ಯ ಮತ್ತು ಅಹಿಂಸೆ ಎನ್ನುವ ಮಾರ್ಗವನ್ನು ತೋರಿಸುತ್ತವೆ. ಆ ಅವರ ತತ್ವಗಳು ಇಂದು ಸಹ ರಾಜಕೀಯ ಸಮಾಜ ಮತ್ತು ಯುವ ಪೀಳಿಗೆ ಎಲ್ಲರಿಗೂ ದಿಕ್ಕು ನೀಡುತ್ತಿವೆ. ಹುತಾತ್ಮರ ದಿನದಂದು ಗಾಂಧಿ ಅವರ ಸ್ಮರಣೆ ಮತ್ತು ಗೌರವ ಸಲ್ಲಿಸುವುದು ರಾಷ್ಟ್ರಕ್ಕೆ ಶಾಂತಿ, ಏಕತೆ ಮತ್ತು ಸಾಮಾಜಿಕ ಸೌಹಾರ್ದತೆಯನ್ನು ಹೊರುವ ಸಂಪ್ರದಾಯವಾಗಿದೆ.ಖರ್ಗೆ ಅವರು ಗಾಂಧಿಯವರ ಆದರ್ಶಗಳನ್ನು ಸದಾ ನೆನಪಿಸಿಕೊಳ್ಳಬೇಕೆಂದು ಒತ್ತಿಹೇಳಿದ್ದಾರೆ.
ಅಮಿತ್ ಷಾ ಗಾಂಧಿಯವರ ಪುಣ್ಯತಿಥಿ ಅವರಿಗೆ ಗೌರವ ಸಲ್ಲಿಸಿದ್ದಾರೆ :
ಕೇಂದ್ರ ಗೃಹ ಸಚಿವ ಅಮಿತ್ ಷಾ ಮಹಾತ್ಮ ಗಾಂಧಿಯವರ ಪುಣ್ಯತಿಥಿ ಎಂದು ಅವರಿಗೆ ಗೌರವ ಸಲ್ಲಿಸಿದ್ದಾರೆ. ಅವರು ತಮ್ಮ ಸಂದೇಶದಲ್ಲಿರಾಷ್ಟ್ರಪಿತನ ವಿಚಾರಗಳು ಪೀಳಿಗೆಗೆ ಸದಾ ಪ್ರೇರಣೆ ನೀಡುತ್ತಲೇ ಇರುತ್ತವೆ ಎಂದು ತಿಳಿಸಿದ್ದಾರೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸಹ ಮಹಾತ್ಮ ಗಾಂಧಿಯವರ ಪುಣ್ಯತಿಥಿ ಎಂದು ಗೌರವಪೂರ್ವಕ ನಮನ ಸಲ್ಲಿಸಿದ್ದಾರೆ. ಅವರು ಗಾಂಧಿಯವರ ಜೀವನ ಪಾಠಗಳು ದೇಶದ ಪ್ರಗತಿ ಮತ್ತು ಶಾಂತಿಯ ಮಾರ್ಗದರ್ಶನವಾಗುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ರಾಷ್ಟ್ರಪತಿ ಮಹಾತ್ಮ ಗಾಂಧಿಯನ್ನು 1948ರ ಜನವರಿ 30ರಂದು ಮಾಡಲಾಯಿತು. ಅವರ ಪುಣ್ಯತಿಥಿಯನ್ನು ಪ್ರತಿವರ್ಷ ಹುತಾತ್ಮರ ದಿನವಾಗಿ ಆಚರಿಸಲಾಗುತ್ತದೆ. ಈ ದಿನದಂದು ದೇಶಾದ್ಯಂತ ನಾಯಕರು ರಾಜಕಾರಣಿಗಳು ಮತ್ತು ನಾಗರಿಕರು ಅವರ ಶಾಂತಿ ಏಕತೆ ಮತ್ತು ನೈತಿಕ ಧೈರ್ಯದ ಶಾಶ್ವತ ಪರಂಪರೆಗೆ ಗೌರವ ಸಲ್ಲಿಸುತ್ತಾರೆ. ಸತ್ಯ ಅಹಿಂಸೆ ಮತ್ತು ಪ್ರಜಾಪ್ರಭುತ್ವದ ತತ್ವಗಳು ಗಾಂಧಿಯವರ ಜೀವನ ಪಾಠಗಳ ಕೇಂದ್ರಬಿಂದು ಇವರ ಆದರ್ಶಗಳು ಇಂದಿಗೂ ದೇಶದ ಅಭಿವೃದ್ಧಿ ಶಾಂತಿ ಮತ್ತು ಸಾಮಾಜಿಕ ಏಕತೆಗೆ ಮಾರ್ಗದರ್ಶನ ನೀಡುತ್ತವೆ.
ಇನ್ನಷ್ಟು ಓದಿರಿ:
ಸೀನು ಪದೇ ಪದೇ ಬರುತ್ತಿದೆ? ನಿಮ್ಮ ರೋಗನಿರೋಧಕ ಶಕ್ತಿಯುತವಾಗಿ ಕಾರ್ಯನಿರ್ವಹಿಸುತಿದೆಯೇ ನೋಡಿ.