ರಾಜ್ಯ ರಾಜಕಾರಣದಲ್ಲಿ ಮತ್ತೆ ಹೈಕಮಾಂಡ್ ವಿರುದ್ಧದ ಅಸಮಾಧಾನ ಭುಗಿಲೆದಿದೆ. ಸಿಎಂ ರವರಿಗೆ ಸ್ವತಂತ್ರವಾಗಿ ಕೆಲಸ ಮಾಡಲು ಹೈಕಮಾಂಡ್ ಬಿಡುತ್ತಿಲ್ಲ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿಧಾನಸಭೆಯಲ್ಲಿ ತೀವ್ರವಾಗಿ ಟೀಕಿಸಿದರು. ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ವೇಳೆ ಮಾತನಾಡಿದ ಯತ್ನಾಳ್, "ಹೈಕಮಾಂಡ್ ಎಲ್ಲವನ್ನು ಕಂಟ್ರೋಲ್ ಮಾಡಿದರೆ ಅಭಿವೃದ್ಧಿ ಹೇಗೆ ಸಾಧ್ಯ? ನಾಯಕತ್ವ ಫೈಟ್ ಇದ್ದರೆ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ, ಈ ವಿಚಾರ ಸಿಎಲ್ ಪಿ ಸಭೆಯಲ್ಲಿಯೂ ಚರ್ಚೆಯಾಗಿದೆ" ಎಂದು ಹೇಳಿದರು. ಪೊಲೀಸ್ ಇಲಾಖೆ ಮತ್ತು ಆಡಳಿತ ವ್ಯವಸ್ಥೆ ಕುರಿತು ಮಾತನಾಡಿದವರು, ಪೊಲೀಸರು ತಪ್ಪು ಮಾಡಿದರೆ ಶಿಕ್ಷೆ ಕೊಡಬೇಕು ಆದರೆ ವರ್ಗಾವಣೆಗಳನ್ನು ಉದ್ಯೋಗದಂತೆ ಮಾಡಿಕೊಂಡರೆ ಆಡಳಿತ ಹೇಗೆ ನಡೆಯುತ್ತದೆ ? ಎಂದು ಪ್ರಶಿಸಿದರು. ರಾಜಕೀಯ ಉದಾಹರಣೆಗಳನ್ನು ನೀಡಿದ ಯತ್ನಾಳ್," ಅಜಿತ್ ಪವಾರ್, ಆರು ಬಾರಿ ಉಪಮುಖ್ಯಮಂತ್ರಿಯಾಗಿದ್ದರು, ಆದರೆ ಲಕ್ಷಾಂತರ ರೂಪಾಯಿ ಆಸ್ತಿ ಮಾಡಿದವರು ನಮ್ಮ ಜೊತೆ ಉಳಿಯುವುದಿಲ್ಲ. ಸಮಯ ಬಂದಾಗ ಯಾರು ಅವರನ್ನು ರಕ್ಷಿಸುವುದಿಲ್ಲ" ಎಂದು ಎಚ್ಚರಿಕೆ ನೀಡಿದರು. "ಸರ್ದಾರ್ ವಲ್ಲಭಾಯಿ ಪಟೇಲ್ ಅವರಂತೆ ಕೆಲಸ ಮಾಡಿ ನೀವು ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಸಿಎಂ ಎಂಬ ಹೆಗ್ಗಳಿಕೆಗೆ ಹೊಂದಿದ್ದೀರಿ. ಆದರೆ ಅತಿ ಹೆಚ್ಚು ಭ್ರಷ್ಟಾಚಾರ ಮಾಡಿದ ಸಿಎಂ ಎಂಬ ಅಪಕೀರ್ತಿ ಪಡೆದುಕೊಂಡು ಹೋಗಬೇಡಿ" ಎಂದು ಕಿಡಿಕಾರಿದರು. ಅದೇ ವೇಳೆ ರಾಜ್ಯಪಾಲರ ಭಾಷಣದಲ್ಲಿ "ಭ್ರಷ್ಟಾಚಾರ ನಿಯಂತ್ರಣ ಮಾಡುತ್ತೇವೆ ಎಂಬ ಸ್ಪಷ್ಟ ಬರವಸೆ ಸೇರಿಸಬೇಕು"ಎಂದು ಯತ್ನಾಳ್ ಒತ್ತಾಯಿಸಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ಸಂಘರ್ಷ ಸದ್ದಲಿನ ಹೊರಗೆ ಮಾತ್ರ ಇರಬೇಕು ಎಂದು ಪ್ರಮುಖ ರಾಜಕೀಯ ವಕ್ತಾರರು ಒತ್ತಾಯಿಸಿದ್ದಾರೆ. ಸಚಿವರು ಸೂಚಿಸಿ ಸಂಘರ್ಷದ ಸದನದಲ್ಲಿ ನಡೆಯಬೇಕು. ಜನರು ಮೇಲಿನ ಆಡಳಿತದ ಪ್ರಭಾವಕ್ಕೆ ಹಾನಿಯಾಗಬಾರದು. ಕಳೆದ ದಿನ ರಾಜ್ಯ ಸರ್ಕಾರವು ಕೇಂದ್ರದ ನಿರ್ವಹಣೆ ಕುರಿತು ಟೀಕೆ ಮಾಡಿದ ಭಾಷಣ ನಡೆಸಿತು. ಸಚಿವರು ಗುರಿ ಇಟ್ಟಿದ್ದು ಅಭಿವೃದ್ಧಿ ಯೋಜನೆಗಳು ಸರಿಯಾಗಿ ಬಳಕೆ ಆಗದಿದ್ದರೆ, ಮತ ಹಾಕಿದ ಜನರಿಗೆ ಅನ್ಯಾಯವಾಗಿದೆ ಎಂಬುದಾಗಿ ಸರ್ಕಾರವು ಪದೇ ಪದೇ "ಕೇಂದ್ರ ಸರ್ಕಾರ ನಮ್ಮ ಪಾಲಿನ ಹಣ ನೀಡುತ್ತಿಲ್ಲ" ಜಿಎಸ್ಟಿ ಹಣ ನೀಡುತ್ತಿಲ್ಲ ಎಂದು ಆರೋಪಿಸುತ್ತದೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ಅವರು ಮನಮೋಹನ್ ಸಿಂಗ್ 10 ವರ್ಷ ಅಧಿಕಾರದಲ್ಲಿದ್ದಾಗ ರಾಜ್ಯಕ್ಕೆ ಯಾವಷ್ಟು ಅನುದಾನ ಬಂದಿದೆ ಎಂಬುದನ್ನು ನೋಡಬೇಕು. ನಂತರ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಎರಡು ಸರ್ಕಾರಗಳ ಅವಧಿಯಲ್ಲಿ ರಾಜ್ಯಕ್ಕೆ ಬಂದ ಅನುದಾನ ೨೦೦% ಹೆಚ್ಚಾಗಿದೆ. ನರೇಂದ್ರ ಮೋದಿ ಸರ್ಕಾರವು ಕರ್ನಾಟಕಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ನೀಡಿದ್ದಾರೆ ಎಂದು ವಿವರಿಸಿದರು. ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಕೇಂದ್ರ ರಾಜ್ಯ ಸಂಬಂಧಗಳಲ್ಲಿ ಸಂಘರ್ಷದ ತೀವ್ರತೆಯನ್ನು ಕಡಿಮೆ ಮಾಡಬೇಕು ಮತ್ತು ಜನಸಾಮಾನ್ಯರಿಗೆ ಅನುದಾನ ಹಾಗೂ ಅಭಿವೃದ್ಧಿ ಯೋಜನೆಗಳ ಲಾಭ ಸರಿ ಕ್ರಮದಲ್ಲಿ ತಲುಪಬೇಕು ಎಂಬ ಸ್ಪಷ್ಟ ಸಂದೇಶ ನೀಡಲಾಯಿತು.
ರಾಜ್ಯ ರಾಜಕಾರಣದಲ್ಲಿ ಕೇಂದ್ರ-ರಾಜ್ಯ ಅನುದಾನ ಮತ್ತು ಚುನಾವಣಾ ಸರ್ವೆ ಫಲಿತಾಂಶ ಕುರಿತು ವಿಜಯೇಂದ್ರ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ವಿಜಯೇಂದ್ರ ಅವರು ತಿಳಿಸಿದಂತೆ, ಯುಪಿಎ ಸರ್ಕಾರ ೧.೪೨ಕೋಟಿ ಅನುದಾನ ನೀಡಿತು. ಆದರೆ ಮೋದಿ ಆಡಳಿತದಲ್ಲಿ 5.19 ಲಕ್ಷ ಕೋಟಿ ಅನುದಾನ ಬಂದಿದೆ. ಇವು ಕೇಂದ್ರ ಸರ್ಕಾರದಿಂದ ನೀಡಿದ ಅಭಿವೃದ್ಧಿ ಮಾಹಿತಿ, ನಾನು ಮನೆಯಲ್ಲಿ ಕುಳಿತು ತಯಾರಿಸಿದ್ದ ಮಾಹಿತಿಯಲ್ಲ ಎಂದು ಸ್ಪಷ್ಟಪಡಿಸಿದರು .ಚುನಾವಣಾ ಸರ್ವೆ ಕುರಿತು ಅವರು ಹೇಳಿದರು, ಇವತ್ತು ಒಂದು ಸರ್ವೆ ವರದಿ ಬಂದಿದ್ದು ಈಗ ಚುನಾವಣೆ ನಡೆದರೆ ಎನ್.ಡಿ.ಎ ಅಧಿಕಾರಕ್ಕೆ ಬರುತ್ತದೆ ಮತ್ತು ಕಾಂಗ್ರೆಸ್ ಕೇವಲ 80 ಸ್ಥಾನಕ್ಕೆ ಕುಸಿಯುತ್ತದೆ ಎಂದು ಸೂಚಿಸಲಾಗಿದೆ. ಬಿಜೆಪಿಯ ಮಿತ್ರರು ಮೋದಿಯವರಿಗೆ ಹೊಗಳುತ್ತಾರೆ ಆದರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರದಿರುವುದು ಯಾಕೆ ಎಂಬ ಪ್ರಶ್ನೆ ಮಾಡಬೇಕಾಗಿದೆ.ಮೋದಿ ಅವರನ್ನು ಕೇವಲ ಹೊಗಳುವ ಕೆಲಸ ಮಾಡುತ್ತಿದ್ದಾರೆ ಎಂದು ಪರೋಕ್ಷ ಟಾಂಗ್ ನೀಡಿದ್ದೇನೆ ಎಂದರು. ಈ ಹೇಳಿಕೆಗಳು ರಾಜ್ಯ-ಕೇಂದ್ರ ಸಂಬಂಧ ಚುನಾವಣಾ ಸರ್ವೆ ಫಲಿತಾಂಶ ಮತ್ತು ರಾಜ್ಯದ ಆಡಳಿತ ಪರಿಸ್ಥಿತಿ ಕುರಿತ ವಿಕ್ಷಕರಲ್ಲಿ ಕುತೂಹಲವನ್ನು ಹೆಚ್ಚಿಸುತ್ತಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಬೆದರಿಕೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಉದ್ಯಮಿಗಳು ಗುತ್ತಿಗೆದಾರರಿಗೆ ಧಮ್ಕಿ ಹಾಕುತ್ತಾರೆ. ಮೋನೋಹರ ದಾಸ್ ಪೈ,ಕಿರಣ್ ಮಜುಂದರ್ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಗುತ್ತಿಗೆದಾರರಿಗೆ ನನ್ನ ಮುಂದೆ ಆಟ ನಡೆಯಲ್ಲ ಅಂತಾರೆ. ಇದು ಎಲ್ಲಾ ಎಚ್ಚರ ಮಟ್ಟಿಗೆ ಸರಿ ? ಕಾನೂನು ಸುವ್ಯವಸ್ಥೆ ರಾಜ್ಯದಲ್ಲಿ ಹದಗೆಟ್ಟು ಹೋಗಿದೆ, ಸಿಎಂ ಸಿದ್ದರಾಮಯ್ಯ ಅವರೇ ಇನ್ನು ಎರಡು ವರ್ಷ ಅಧಿಕಾರದಲ್ಲಿ ಇರುತ್ತಾರೆ ಎಂದರು.
ಇನ್ನಷ್ಟು ಓದಿರಿ:
ರಾಜ್ ಶೆಟ್ರ ಸಿನಿಮಾ : 'ರಕ್ಕಸಪುರದೋಳ್'ಗೆ ಕಿಚ್ಚ ಸಾಥ್