<?= $pageTitle ?>
Logo
ಮುಖಪುಟ ಓದುವುದು ಕೇಳು
Business

ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಹೊರಬಂದ ಅಮೆರಿಕ

ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಹೊರಬಂದ ಅಮೆರಿಕ
Summary: 66 ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಅಮೆರಿಕ ಹೊರಗಡೆ; ಹಣಕಾಸು ನೆರವು ಬಂದ್ , ವಿಶ್ವದ ಮೇಲೆ ಪರಿಣಾಮದ ಭೀತಿ
belagavi news:

ವಾಷಿಂಗ್ಟನ್​: ಅಮೆರಿಕದ ಹಿತಾಸಕ್ತಿಗೆ ವಿರುದ್ಧ ಮತ್ತು ಅನಗತ್ಯವಾಗಿದೆ ಎಂಬ ಕಾರಣ ನೀಡಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಸರ್ಕಾರ​ 60ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಹೊರ ನಡೆದಿದೆ. ಇದರಲ್ಲಿ ವಿಶ್ವಸಂಸ್ಥೆಯ ಮಂಡಳಿ, ಭಾರತ-ಫ್ರಾನ್ಸ್​ ನೇತೃತ್ವದ ಅಂತಾರಾಷ್ಟ್ರೀಯ ಸೌರ ಒಕ್ಕೂಟವೂ ಸೇರಿದೆ.
ಅಮೆರಿಕ ಹೊರ ನಡೆದಿರುವ ಸಂಸ್ಥೆಗಳಲ್ಲಿ ಹವಾಮಾನ ಬದಲಾವಣೆಯ ಕುರಿತು ಭಾರತ ಮತ್ತು ಫ್ರಾನ್ಸ್ ನಡುವಿನ ಸಹಯೋಗದ ಉಪಕ್ರಮವಾದ ಅಂತಾರಾಷ್ಟ್ರೀಯ ಸೌರ ಒಕ್ಕೂಟವೂ ಸೇರಿದೆ. ಪ್ರಸ್ತುತ, 100 ಕ್ಕೂ ಹೆಚ್ಚು ದೇಶಗಳು ಐಎಸ್​​ಎಗೆ ಸಹಿ ಹಾಕಿದ್ದು, 90 ಕ್ಕೂ ಹೆಚ್ಚು ದೇಶಗಳು ಪೂರ್ಣ ಸದಸ್ಯರಾಗಲು ಅನುಮೋದನೆ ನೀಡಿವೆ.
ಇದರಲ್ಲಿ 31 ವಿಶ್ವ ಸಂಸ್ಥೆಯ ಸಂಘಟನೆಯಾಗಿದ್ದು, 35 ವಿಶ್ವಸಂಸ್ಥೆಯೇತರ ಸಂಘಟನೆಗಳಾಗಿದೆ. ಇದು ಅಮೆರಿಕದ ಹಿತಾಸಕ್ತಿ, ಭದ್ರತೆ, ಆರ್ಥಿಕ ಸಮೃದ್ಧಿ ಅಥವಾ ಸಾರ್ವಭೌಮತೆಗೆ ವಿರುದ್ಧವಾಗಿದೆ ಎಂದು ಶ್ವೇತ ಭವನದ ಫ್ಯಾಕ್ಟ್​ ಶೀಟ್​ನಲ್ಲಿ ತಿಳಿಸಲಾಗಿದೆ.
ಈ ಅಂತಾರಾಷ್ಟ್ರೀಯ ಸಂಸ್ಥೆಗಳು, ಒಪ್ಪಂದಗಳು ಅಮೆರಿಕದ ಹಿತಾಸಕ್ತಿಗೆ ವಿರುದ್ಧ ಮತ್ತು ಅನಗತ್ಯವಾಗಿದ್ದು, ಇದರಿಂದ ಯುನೈಟೆಡ್​ ಸ್ಟೇಟ್​ ಹೊರ ನಡೆಯುತ್ತಿದೆ ಎಂಬ ಜ್ಞಾಪಕಪತ್ರಕ್ಕೆ ಟ್ರಂಪ್​ ಬುಧವಾರ ಸಹಿ ಹಾಕಿದ್ದಾರೆ. ವಿಶ್ವಸಂಸ್ಥೆ ಮತ್ತು ವಿಶ್ವಸಂಸ್ಥೆಯೇತರ ಸಂಸ್ಥೆಗಳ ಸದಸ್ಯರಾಗಿ ಉಳಿಯುವುದು, ಭಾಗವಹಿಸುವುದು ಅಥವಾ ಬೆಂಬಲ ನೀಡುವುದು ಅಮೆರಿಕದ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ ಎಂಬ ಅಭಿಪ್ರಾಯವನ್ನು ಟ್ರಂಪ್​ ವ್ಯಕ್ತಪಡಿಸಿದ್ದಾರೆ.
ಈ ಸಂಘಟನೆ ಮತ್ತು ಒಪ್ಪಂದಗಳಿಂದ ಅಮೆರಿಕ ಹೊರ ನಡೆಯುವ ಕ್ರಮದಿಂದಾಗಿ ಆ ಸಂಸ್ಥೆಗಳಲ್ಲಿ ಭಾಗವಹಿಸುವುದನ್ನು ಅಥವಾ ಅವುಗಳಿಗೆ ಹಣಕಾಸು ಒದಗಿಸುವುದನ್ನು ನಿಲ್ಲಿಸುವುದಾಗಿದೆ.
ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಮಾತನಾಡಿ, ಟ್ರಂಪ್ ಆಡಳಿತವು 66 ಸಂಸ್ಥೆಗಳು ಅನಗತ್ಯ, ಹಿತಾಸಕ್ತಿಗೆ ವಿರುದ್ಧ ಅಥವಾ ನಮ್ಮ ರಾಷ್ಟ್ರದ ಸಾರ್ವಭೌಮತ್ವ, ಸ್ವಾತಂತ್ರ್ಯ ಮತ್ತು ಸಾಮಾನ್ಯ ಸಮೃದ್ಧಿಗೆ ಬೆದರಿಕೆಯನ್ನುಂಟು ಮಾಡುತ್ತಿವೆ ಎಂದು ಪರಿಗಣಿಸಿದೆ. ಈ ಸಂಸ್ಥೆಗಳಿಗೆ ಅಮೆರಿಕಾದ ನಿಧಿಯನ್ನು ಕಳುಹಿಸುವುದು. ನಮ್ಮ ಜನರ ಹಣದಲ್ಲಿ ವಿದೇಶಿ ಹಿತಾಸಕ್ತಿಗಳಿಗೆ ಬಿಲಿಯನ್​ಗಟ್ಟಲೆ ಡಾಲರ್‌ಗಳ ಹರಿವಿನ ದಿನ ಮುಗಿದಿದೆ ಎಂದಿದ್ದಾರೆ.
ಸಹಿ ಹಾಕಿದ ಬೆನ್ನಲ್ಲೇ ಉಲ್ಲೇಖಿಸಿದ ಸಂಘಟನೆಗಳಿಂದ ಯುನೈಟೆಡ್​ ಸ್ಟೇಟ್​ನ ಎಲ್ಲಾ ಕಾರ್ಯಾಕಾರಿ ಇಲಾಖೆ ಮತ್ತು ಏಜೆನ್ಸಿಗಳು ತಕ್ಷಣಕ್ಕೆ ತಮ್ಮ ಹೆಜ್ಜೆಯನ್ನು ಹಿಂದಿಡಬೇಕು ಎಂದು ಕೂಡ ಟ್ರಂಪ್​ ಸೂಚನೆ ನೀಡಿದ್ದಾರೆ.

ಇನ್ನಷ್ಟು ಓದಿರಿ:
ಭಾರತದ ಪ್ರಧಾನಿಯವರ ಬಗ್ಗೆ ಟ್ರಂಪ್ ಆಡಿದ ಮಾತುಗಳೇನು ?
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online