Belagavi News:
ಫ್ಲೋರಿಡಾ(ಅಮೇರಿಕ): ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದ್ದು, ಇರಾನ್ ನ ಸೇನಾ ನೆಲೆಗಳ ಮೇಲೆ ಅಮೆರಿಕ ತನ್ನ ದಾಳಿಯನ್ನು ಮುಂದುವರಿಸಿದೆ. ಹಲವು ಸೇನಾ ತಾಣಗಳಲ್ಲಿ ಗುರಿಯಾಗಿಸಿ ಯಶಸ್ವಿಯಾಗಿ ಧ್ವಂಸ ಗೊಳಿಸಲಾಗಿದೆ ಎಂದು ಅಮೆರಿಕದ ಯುಎಸ್ ಸೆಂಟ್ರಲ್ ಕಮಾಂಡ್ (CENTCOM) ತಿಳಿಸಿದೆ.
ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಮಾಹಿತಿ ಹಂಚಿಕೊಂಡಿರುವ ಸೆಂಟ್ರಲ್ ಕಮಾಂಡ್, ಬುಧವಾರ ಬೆಳಗ್ಗೆ 6 ಗಂಟೆಗೆ ಅಮೆರಿಕದ ಪಡೆಗಳು ಇರಾನ್ ವಿರುದ್ಧ ನಿಖರ ದಾಳಿ ನಡೆಸಿವೆ ಎಂದು ಹೇಳಿದೆ. ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮೇಲೆ ಇರಾನ್ ನಡೆಸುತ್ತಿರುವ ದಾಳಿಗಳಿಗೆ ಪ್ರತಿಯಾಗಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಅಮೆರಿಕದ ಪ್ರಕಾರ, ಇರಾನ್ ನ ಸಮುದ್ರ ಕಾರ್ಯಾಚರಣೆಯ ಸಾಮರ್ಥ್ಯವನ್ನು ಕುಗ್ಗಿಸುವ ಉದ್ದೇಶದಿಂದ ಸುಮಾರು 7ಗಂಟೆಗಳ ಕಾಲ ನಿರಂತರ ಕಾರ್ಯಚರಣೆ ನಡೆಸಲಾಗಿದೆ. ಹಾರ್ಮುಜ್ ಜಲಸಂಧಿ ಮತ್ತು ಕರಾವಳಿ ಪ್ರದೇಶಗಳಲ್ಲಿರುವ ಇರಾನ್ ನ ಹಲವು ಸೇನಾ ಕ್ಯಾಂಪ್ ಗಳು ಹಾಗೂ ತಂತ್ರಜ್ಞಾನದ ನೆಲಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ.
ಇದಕ್ಕ ಮೊದಲು ಜುಲೈ 14ರ ರಾತ್ರಿ, ಅಮೆರಿಕದ ಯುದ್ಧ ವಿಮಾನಗಳು, ಡ್ರೋನ್ ಗಳು ಹಾಗೂ ನೌಕಾಪಡೆಯ ಹಡಗುಗಳು ಇರಾನ್ ನ ಡಜನ್ಗಟ್ಟಲೆ ಸೇನಾ ನೆಲೆಗಳ ಮೇಲೆ ನಿಖರ ದಾಳಿ ನಡೆಸಿದ್ದವು ಎಂದು ಸೇನೆ ಮಾಹಿತಿ ನೀಡಿದೆ.
ಅಮೆರಿಕವು ಇರಾನ್ ನ ಬಂದರುಗಳಿಗೆ ತೆರೆಳುವ ಮತ್ತು ಅಲ್ಲಿಂದ ಹೊರಡುವ ಹಡಗುಗಳ ಮೇಲೆ ನೌಕಾದಿಗ್ಬಂಧನ (Naval Blockade) ಪುನರಾರಂಭಿಸಿದ ಬೆನ್ನಲ್ಲೇ ಈ ದಾಳಿಗಳು ನಡೆದಿರುವುದು ಗಮನಾರ್ಹ.ಈ ಬೆಳವಣಿಗೆ ಮಧ್ಯ ಪ್ರಾಚ್ಯದಲ್ಲಿ ಉದ್ವಿಗನತ್ತೆಯನ್ನು ಮತ್ತಷ್ಟು ಹೆಚ್ಚಿಸಿದ್ದು. ಜಾಗತಿಕ ವ್ಯಾಪಾರ ಮತ್ತು ತೈಲ ಸಾಗಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ.
ಬುಧುವಾರ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ, ಅಮೆರಿಕವು ಇರಾನ್ ನ ಸೇನಾ ನೆಲೆಗಳ ಮೇಲೆ ನಡೆಸಿದ ದಾಳಿಗೆ ಪ್ರತೀಕಾರವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಐಆರ್ ಜಿಸಿ ತಿಳಿಸಿದೆ. ಕುವೈತ, ಬಹ್ರೇನ್ ಮತ್ತು ಜೋರ್ಡಾನ್ ನಲ್ಲಿರುವ ಪ್ರಮುಖ ಅಮೆರಿಕದ ಮಿಲಿಟರಿ ಮೂಲ ಸೌಕರ್ಯಗಳನ್ನು ಗುರಿಯಾಗಿ ಕಂಪನಿ ಹಾಗೂ ಡ್ರೋನ್ ದಾಳಿ ನಡೆಸಲಾಗಿದೆ ಎಂದು ಹೇಳಿದೆ.
ಐಆರ್ ಜಿಸಿ ಪ್ರಕಾರ, ಕುವೈತ ನಲ್ಲಿ ಪೇಟ್ರಿಯಾಟ್ ವಾಯು ರಕ್ಷಣಾ ವ್ಯವಸ್ಥೆ , ಉಪಗ್ರಹ ಸಂವಹನ ಕೇಂದ್ರ ಹಾಗೂ ರಾಕೆಟ್ ಕೇಂದ್ರಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಅಲ್ಲದೆ, ಈ ದಾಳಿಯಲ್ಲಿ ಪ್ರಮುಖ ಸೇನಾ ಮೂಲಸೌಕರ್ಯಗಳಿಗೆ ಹಾನಿಯಾಗಿದೆ ಎಂದು ಇರಾನ್ ಹೇಳಿದೆ.
ಇದೇ ವೇಳೆ, ಜೋರ್ಡಾನ್ ಅಲ್ ಅಜ್ರಾಕ್ ಪ್ರದೇಶದಲ್ಲಿರುವ ಅಮೆರಿಕದ ಸೇನಾ ನೆಲೆಯಲ್ಲಿ ಎಫ್-15, ಎಫ್-16 ಎಫ್- 35 ಯುದ್ಧವಿಮಾನಗಳ ಹ್ಯಾಂಗರ್ ಗಳನ್ನು ಗುರಿಯಾಗಿಸಲಾಗಿದೆ ಎಂದು ಐಆರ್ ಜಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಜೊತೆಗೆ, ಹಲವಾರು MQ-9 ಡ್ರೋನ್ ಗಳನ್ನು ನಾಶಪಡಿಸಲಾಗಿದೆ ಎಂಬ ದಾವೆಯನ್ನು ಮಾಡಿದೆ.