ದಪ್ಪ, ರೇಷ್ಮೆ ಅಂತಹ ಪಳಪಳ ಹೊಳೆಯುವ ಕೂದಲಿಗಾಗಿ ಎಲ್ಲರೂ ಹಂಬಲಿಸುತ್ತಾರೆ. ಇದಕ್ಕಾಗಿ ವಿವಿಧ ಪ್ರಯತ್ನಗಳನ್ನು ಮಾಡುತ್ತಾರೆ ಅದರಲ್ಲೊಂದು ಶಾಂಪು ಬಳಕೆ.
ಪರಿಮಳ ಹಾಗೂ ಬಣ್ಣಕ್ಕಾಗಿ ಬಳಸುವ ಈ ಶಾಂಪೂಗಳು ಕ್ಯಾನ್ಸರ್ ಅಪಾಯ ಉಂಟು ಮಾಡುತ್ತವೆ. ಕೂದಲು ಹೊಳೆಯುವುದನ್ನು ನೋಡಿ ನಮಗೆ ಸಂತೋಷವಾಗುತ್ತದೆ ಕೆಲವು ಶಾಂಪುಗಳಲ್ಲಿನ ರಾಸಾಯನಿಕಗಳು ಕ್ಯಾನ್ಸರ್ ಗೆ ಕಾರಣವಾಗಬಹುದು ಎಂಬುದು ಹಲವರಿಗೆ ಗೊತ್ತಿಲ್ಲ. ಶಾಂಪು ಖರೀದಿಸುವಾಗ ಯಾವೆಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ತಿಳಿಯೋಣ.ಶ್ಯಾಂಪು ಎಣ್ಣೆ, ಕೊಳಕು ಹಾಗು ದುಲ್ಲು ತೆಗೆದು ಹಾಕಿ ಕೂದಲನ್ನು ಸ್ವಚ್ಛಗೊಳಿಸುತ್ತದೆ ಎಂದು ಭಾವಿಸುತ್ತೇವೆ. ಕೆಲವು ಶಾಂಪುಗಳಲ್ಲಿನ ರಾಸಾಯನಿಕಗಳು ಕ್ಯಾನ್ಸರ್ ಗೆ ಕಾರಣವಾಗಬಹುದು ಎಂಬುದು ಹಲವರಿಗೆ ಗೊತ್ತಿಲ್ಲ. ಫೋಮ್ ಉತ್ಪಾದಿಸಲು ಬಳಸುವ ರಾಸಾಯನಿಕಗಳ ಬಗ್ಗೆ ನಾವು ವಿಶೇಷವಾಗಿ ಜಾಗರೂಕ ಯಾಗಿರಬೇಕು ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.
ಥಾಲೇಟ್ ಗಳು: ಶಾಂಪುಗಳು ಹಾಗೂ ಕಂಡಿಷನರ್ ಗಳಲ್ಲಿ ಸುಗಂಧಕ್ಕಾಗಿ ಥಾಲೇಟ್ ಗಳನ್ನು ಬಳಸಲಾಗುತ್ತದೆ. ಥಾಲೇಟ್ ಗಳು ಪುರುಷ ಸಂತಾನೋತ್ಪತ್ತಿ ವ್ಯವಸ್ಥೆಯ ಬೆಳವಣಿಗೆ ಅಡ್ಡಿಪಡಿಸುತ್ತವೆ ಎಂದು ರಾಷ್ಟ್ರೀಯ ಔಷಧಿ ಗ್ರಂಥಾಲಯದ ಅಧ್ಯಯನವು ಹೇಳುತ್ತದೆ. ಇವು ದೇಹವನ್ನು ಪ್ರವೇಶಿಸಿದರೆ ಸಂತಾನೋತ್ಪತ್ತಿ ಸಮಸ್ಯೆಗಳ ಸಾಧ್ಯತೆ ಇದೆ.
ಪ್ಯಾರಾಬೆನ್ ಗಳು: ಇವುಗಳನ್ನು ಶಾಂಪೂಗಳು ಹಾಗೂ ಕಮಿಷನರ್ ಗಳಲ್ಲಿ ಬಳಸಲಾಗುತ್ತದೆ. ಅಲ್ಲದೆ, ಅವ್ ಕೂದಲು ಉದುರುವಿಕೆಗೆ ಕಾರಣವಾಗುತ್ತವೆ. ಅವು ಹಾರ್ಮೋನು ಗಳ ಸಮತೋಲಣಿಕೆ ಅಡ್ಡಿಪಡಿಸುತ್ತವೆ. ಈ ಹಾನಿಕಾರಕ ರಾಸಾಯನಿಕ ಸಂರಕ್ಷಕಗಳ ಚರ್ಮದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ. ಈ ಕ್ರಮದಲ್ಲಿ ಬ್ಯೂಟೈಲ್, ಈಥೈಲ್, ಮಿಥೈಲ್ ಹಾಗೂ ಪ್ರೊ ಫೈಲ್ ನಂತಹ ಪ್ಯಾರಾಬೆನ ಗಳನ್ನು ಹೊಂದಿರುವ ಉತ್ಪನ್ನಗಳನ್ನು ಬಳಸದೀರುವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಲೇಬಲ್ಗಳನ್ನು ಪರಿಶೀಲಿಸಿ: ಶಂಪೂ ಕರಿಗಿಸುವ ಮೊದಲು ನೋಡಬೇಕಾದ ಪ್ರಮುಖ ವಿಷಯವೆಂದರೆ ಲೇಬಲ್ ಗಳನ್ನು ನೋಡುವುದು ಮುಖ್ಯವಾಗುತ್ತದೆ. ನೀವು ಸೂಕ್ಷ್ಮ ನೆತ್ತಿಯನ್ನು ಹೊಂದಿದ್ದರೆ, ಬಣ್ಣಗಳು, ಸುಗಂಧ ದ್ರವ್ಯಗಳಿಂದ ಮುಕ್ತವಾದ ಶಾಂಪೂವನ್ನು ಆರಿಸಿ. ತೆಂಗಿನಕಾಯಿ ಆಧಾರಿತ, ಸೆಲ್ಪೇಟ್ - ಮುಕ್ತ ಮತ್ತು ಸಸ್ಯಗಳಿಂದ ಪಡೆದ ನೈಸರ್ಗಿಕ ಕ್ಲೆನ್ಸರ್ ಗಳನ್ನು ಹೊಂದಿರುವ ಉತ್ಪನ್ನಗಳನ್ನು ಆರಿಸಿ. ಸಲ್ಫೇಟ್ ಗಳು, ಥಾಲೇಟ್ ಗಳನ್ನು ಮತ್ತು ಪ್ಯಾರಾಬೆನ್ ಗಳನ್ನು ಬಿಡುಗಡೆ ಮಾಡುವ ಉತ್ಪನ್ನಗಳನ್ನು ತಪ್ಪಿಸಿ. ಅಲೋವೆರಾ, ಅರಸಿನ ಹಾಗೂ ಕಪ್ಪು ಜೀರಿಗೆ ಇಂತಹ ಪದಾರ್ಥಗಳನ್ನು ಒಳಗೊಂಡಿರುವ ಶಾಂಪುಗಳು ಕೂದಲನ್ನು ಘೋಷಿಸುತ್ತವೆ ಎಂದು ಸೌಂದರ್ಯ ತಿಳಿಸಿದ್ದಾರೆ.
ಸಲ್ಫೇಟ್ ಗಳು: ಸೋಡಿಯಂ ಲಾರಿಲ್ ಈಥರ್ ಸಲ್ಫೇಟ್ ಹಾಗೂ ಸೋಡಿಯಂ ಲಾರಿಲ್ ಸಲ್ಫೇಟ್ ಅನ್ನು ಶಾಂಪುಗಳಲ್ಲಿ ಸುದ್ದಿ ಕರನ್ನು ಏಜೆಂಟ್ ಗಳಾಗಿ ಬಳಸಲಾಗುತ್ತದೆ. ನೀವು ದೇಹವನ್ನು ಪ್ರವೇಶಿಸಿದರೆ ಕ್ಯಾನ್ಸರ್ ಕಾರಕವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಯು ಚರ್ಮ ಮತ್ತು ನೆತ್ತಿಯಿಂದ ನೈಸರ್ಗಿಕ ಎಣ್ಣೆಯನ್ನು ತೆಗೆದು ಹಾಕುತ್ತವೆ. ಇದರಲ್ಲದೆ ಚರ್ಮದ ಶುಷ್ಕತೆ ತುರಿಕೆ ಹಾಗೂ ಉರಿಯುತದ ಅಪಾಯವಿದೆ. ರಾಷ್ಟ್ರೀಯ ಔಷಧ ಗ್ರಂಥಾಲಯದ ಅಧ್ಯಯನವು ಸೋಡಿಯಂ ಲಾರಿಲ್ ಸಲ್ಫೇಟ್ ಹೆಚಿನ್ನ ಸಾಂದ್ರತೆಯು ಕೂದಲಿನ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತದೆ.
ಕೃತಕ ಸುಗಂಧ ದ್ರವ್ಯಗಳು,ಬಣ್ಣಗಳು, : ಒಳ್ಳೆಯ ವಾಸನೆ ಬಣ್ಣ ನೀಡುವ ಅನೇಕ ಶಾಂಪುಗಳು ನಿಮ್ಮ ಕೂದಲು ಹಾಗೂ ಚರ್ಮಕ್ಕೆ ಹಾನಿ ಮಾಡುತ್ತದೆ. ಹಾನಿಕಾರಕ ಪೆಟ್ರೋಕೆಮಿಕಲ್ ಗಳು, ಟಾರ್, ಪೆಟ್ರೋಲಿಯಂ ಬಣ್ಣಗಳನ್ನು ಸುಗಂಧಕ್ಕಾಗಿ ಕಲ್ಲಿದ್ದಲಿನಿಂದ ತಯಾರಿಸಲಾಗುತ್ತದೆ. ಹಾಗೆಯೇ ಈ ವಸ್ತುಗಳು ಕೂದಲು ಉದುರುವಿಕೆ, ಫಲವತ್ತತೆ ಸಮಸ್ಯೆಗಳು, ಅಸ್ತಮಾ ಹಾಗೂ ಕ್ಯಾನ್ಸರ್ ಗೆ ಕಾರಣವಾಗುತ್ತದೆ ಎಂದು ಆರೋಗ್ಯ ತಜ್ಞರು ವಿ ವರಿಸುತ್ತಾರೆ.
ಓದುಗರಿಗೆ ಪ್ರಮುಖ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲಾ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು ಮತ್ತು ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನ ಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸ್ಥಳೀಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಇನ್ನಷ್ಟು ಓದಿರಿ:
ರಷ್ಯಾ ಹೇಳಿಕೆ: ಭಾರತ ಯಾವ ದೇಶದಿಂದ ಬೇಕಾದರೂ ತೈಲ ಖರೀದಿಸಬಹುದು