<?= $pageTitle ?>
Logo
ಮುಖಪುಟ ಓದುವುದು ಕೇಳು
Entertainment

ಡಾಲಿ ನಿರ್ಮಾಣದ ಹೊಸ"JC" ಸಿನಿಮಾ : ಶಿವಣ್ಣ ಮತ್ತು ಪ್ರೇಮ್ ಸಾಥ್

ಡಾಲಿ ನಿರ್ಮಾಣದ ಹೊಸ"JC" ಸಿನಿಮಾ : ಶಿವಣ್ಣ ಮತ್ತು ಪ್ರೇಮ್ ಸಾಥ್
Summary: ಡಾಲಿ ನಿರ್ಮಾಣದ ಹೊಸ "ಜೆಸಿ ದಿ ಯೂನಿವರ್ಸಿಟಿ' ಸಿನಿಮಾ ಸೂರ್ಯ ಪ್ರಖ್ಯಾತ್ ನಟನೆಯ ಸಿನಿಮಾವನ್ನು ಶಿವಣ್ಣ ಹಾಗೂ ಪ್ರೇಮ್ ಇಬ್ಬರು ಟ್ರೇಲರ್ ಬಿಡುಗಡೆಯನ್ನು ಮಾಡಿದರು.
BELAGAVI NEWS :

ಡಾಲಿ ಧನಂಜಯ ಅವರ ಡಾಲಿ ಪಿಚ್ಚರ್ಸ್ ನಿರ್ಮಾಣದ ಬಹುನಿರೀಕ್ಷಿತ ಚಿತ್ರ ಜೆಸಿ ದಿ ಯೂನಿವರ್ಸಿಟಿ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರಕ್ಕೆ ಸಂಬಂಧಿಸಿದಂತೆ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಮಾಡಲಾಗಿತ್ತು. ಚಿತ್ರದ ಕಥಾನಕ ದೃಶ್ಯ ವಿನ್ಯಾಸ ಮತ್ತು ನಟರ ಪ್ರದರ್ಶನಗಳಿಗೆ ಜನರಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಕನ್ನಡ ಚಿತ್ರರಂಗದಲ್ಲಿ ಹೊಸ ಕ್ರೇಜ್ ಮೂಡಲಿದೆ ಎಂದು ತಿಳಿದುಬಂದಿದೆ. ಈ ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ನಿರ್ದೇಶಕ ಜೋಗಿ ಪ್ರೇಮ್ ಚಿತ್ರವನ್ನು ಅನಾವರಣಗೊಳಿಸಿದರು. ಅಂತರಾಷ್ಟ್ರೀಯ ಅಭಿಮಾನಿಗಳಿಗೆ ಮತ್ತು ಫ್ಯಾನ್ಸ್ ಗೆ ಸಂತೋಷದ ಸುದ್ದಿ ಚಿತ್ರದ ಬಿಡುಗಡೆ ದಿನವೂ ಬಹಿರಂಗಪಡಿಸಲಾಯಿತು. ಚೈತನ್ ಜೈರಾಮ್ ಅವರ ಚೊಚ್ಚಲ ನಿರ್ದೇಶನದ 'ಜೆಸಿ' ಸಿನಿಮಾ ಜೈಲಿನಲ್ಲಿ ನಡೆಯುವ ಕಥೆಯನ್ನು ಕೇಂದ್ರ ಬಿಂದು ಮಾಡಿದೆ' ಈ ಚಿತ್ರದಲ್ಲಿ ಜೈಲು ಒಳಗಿನ ಅವ್ಯವಹಾರಗಳು, ಕೈದಿ ಕೊಲೆ ಮತ್ತು ರಕ್ತದ ದೃಶ್ಯಗಳು ತೀವ್ರವಾಗಿ ತೋರಿಸಲಾಗಿದೆ, ಚಿತ್ರದ ಭಾವನಾತ್ಮಕ ಕೇಂದ್ರಬಿಂದು ಅಪ್ಪ ಮಗನ ಸಂಬಂಧವಾಗಿದೆ ಟ್ರೈಲರ್ ನಲ್ಲಿ ಹೈಲೈಟ್ ಆಗಿರುವ “ಮಗ ಕಿರೀಟ ಹೊತ್ಕೊದಿದ್ರೂ ಪರವಾಗಿಲ್ಲ, ಕಳಂಕ ಹೊತ್ಕೋಬಾರ್ದು ಎಂಬ ಡೈಲಾಗ್ ಪ್ರೇಕ್ಷಕರ ಮನ ಸೆಳೆದಿದೆ ಬಾರಿ ಪ್ರತಿಕ್ರಿಯೆ ನೀಡಿದ್ದು ಚಿತ್ರದ ಕಥೆ ಸಾಹಸಗಳು ನಟರ ಮತ್ತು ನಟರ ಪ್ರದರ್ಶನ ಬಗ್ಗೆ ಹೆಚ್ಚಿನ ನೀರಿಕ್ಷೆ ಮೂಡಿಸಿದೆ ಭಾವನಾತ್ಮಕ ಸಂಬಂಧಗಳ ಸಂಯೋಜನೆಯಲ್ಲಿ ಪ್ರಭಾವ ಮೂಡಿಸುವ ನಿರೀಕ್ಷೆ ಇದೆ.


ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಜೋಗಿ ಚಿತ್ರದ ಸೂಪರ್ ಹಿಟ್ ಜೋಡಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮತ್ತು ನಿರ್ದೇಶಕ ಪ್ರೇಮ್ ಇಬ್ಬರು ಭಾಗವಹಿಸಿದ್ದರು ಸಿನಿಮಾ ಹೆಲ್ಪ್ ಮತ್ತಷ್ಟು ಹೆಚ್ಚಾಯಿತು. ಚಿತ್ರದ ಸಾಹಸ ದೃಶ್ಯಗಳು ಭಾವನಾತ್ಮಕತೆ ಟ್ರೈಲರ್ ನಲ್ಲಿ ವೀಕ್ಷಕರ ಮನ ಸೆಳೆದಿದ್ದು ಬಿಡುಗಡೆಯ ದಿನದ ನಿರೀಕ್ಷೆ ಹೆಚ್ಚಿಸಿದೆ.


ಹೀರೋ ಸೂರ್ಯ ಪ್ರಖ್ಯಾತ ಅವರನ್ನು ಪ್ರೇಮ್ ಕಂಗೊಳಿಸಿ ಹಾಡಿ ಹೊಗಳಿದರು ತಮ್ಮ ಪಾತ್ರಕ್ಕೆ ಸಂಬಂಧಿಸಿದಂತೆ ಶಿವಣ್ಣ ಜೊತೆಗಿನ ಶೂಟಿಂಗ್ ಅನುಭವವನ್ನು ಪ್ರಖ್ಯಾತ ಕಾರ್ಯಕ್ರಮದಲ್ಲಿ ಹಂಚಿಕೊಂಡರು. ಪ್ರೇಮ್ ಅವರು ಯಾರಿಗೂ ಜೈಲಿನ ಅನುಭವ ಬೇಡ ಅಲ್ಲಿ ದುಡ್ಡು ಇರುವವರೆಗೆ ಮಾತ್ರ ಬೆಲೆ, ಎಷ್ಟೋ ಜನರಿಗೆ ಬೇಲ್ ಸಿಕ್ಕಿದರು ಬಿಡುಗಡೆಗೊಳ್ಳಲು ಆಗದಂತಹ ಸ್ಥಿತಿ ಎಂದು ಜೈಲು ಪರಿಸ್ಥಿತಿಯನ್ನು ವಿವರಿಸಿದರು. ಟ್ರೇಲರ್ ಬಿಡುಗಡೆಯಿಂದ ಚಿತ್ರದ ಕಥಾನಕ ಸಾಹಸ ದೃಶ್ಯಗಳು ಮತ್ತು ನಟರ ಶ್ರೇಷ್ಠ ಪ್ರದರ್ಶನಕ್ಕೆ ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಮೂಡಿದೆ ಇದಕ್ಕೂ ಮುಂದೆ ಹೀರೋ ಪ್ರಖ್ಯಾತ ಶಿವಣ್ಣರಂತೆ ಲಾಂಗ್ ಹಿಡಿಯಲು ಕಾಲಿಟಿಯುತ್ತಿದೀಯಾ ? ಎಂದು ಶಿವರಾಜಕುಮಾರ ಅವರು ಹಾಸ್ಯವನ್ನು ಮಾಡಿದರು.


"ಜೆಸಿ ದಿ ಯೂನಿವರ್ಸಿಟಿ' ಚಿತ್ರದ ಟ್ರೈಲರ್ ಬಿಡುಗಡೆ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಮತ್ತು ನಿರ್ದೇಶಕ ಜೋಗಿ ಪ್ರೇಮ್ ಅವರಿಗೆ ಡಾಲಿ ಧನಂಜಯ್ ಧನ್ಯವಾದಗಳು. ಚಿತ್ರರಂಗದಲ್ಲಿ ಒಬ್ಬ ಅಣ್ಣನಂತೆ ಸಹಾಯಕ್ಕೆ ನಿಂತವರು ಶಿವಣ್ಣ ನನ್ನ ಮೊದಲ ನಿರ್ಮಾಣದ ಸಿನಿಮಾದಿಂದ ಇಲ್ಲಿಯವರೆಗೂ ಅವರು ತುಂಬಾ ಸಹಾಯ ಮಾಡಿದ್ದಾರೆ. ಶಿವಣ್ಣ ಮತ್ತು ಫ್ರೇಮ್ ಅವರ ಸಹಕಾರ ಮತ್ತು ಮಾರ್ಗದರ್ಶನವು ಟ್ರೈಲರ್ ಯಶಸ್ವಿಗೆ ಮುಖ್ಯ ಕಾರಣ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ ಎಂದು ಡಾಲಿ ಧನಂಜಯ್ ಅವರು ಹೇಳಿದರು. ಈ ಸಿನಿಮಾದ ಬಗ್ಗೆ ಶಿವಣ್ಣ ಅವರು ಏನೆಂದು ಮಾತನಾಡಿದರು: ಜೈಲು ಒಂದು ಪರಿವರ್ತನೆಯ ಜಾಗ ಜೈಲಿಗೆ ಹೋಗಿ ಬಂದವರು ಅನೇಕರು ಬದಲಾಗುತ್ತಾರೆ, ಭವಿಷ್ಯದ ಸ್ಟಾರ್ ಆಗುವ ಎಲ್ಲಾ ಕ್ವಾಲಿಟಿಗಳು ಪ್ರಖ್ಯಾತ್ ಅವರಲ್ಲಿದೆ ತುಂಬಾ ಚೆನ್ನಾಗಿ ಆಕ್ಟ್ ಮಾಡಿದ್ದಾರೆ ಜೊತೆಗೆ ನೋಡಲು ಸಕ್ಕತ್ ಸ್ಮಾರ್ಟ್ ಆಗಿದ್ದಾರೆ ಎಂದು ಶಿವರಾಜ್ ಕುಮಾರ್ ಅವರು ಹಾಡಿ ಹೊಗಳಿದರು.

ದುಡ್ಡು ಇರೋರೆಲ್ಲ ಹೀರೋ ಆಗಲು ಸಾಧ್ಯವಿಲ್ಲ ಜನ ಒಪ್ಪಬೇಕು, ಸರಸ್ವತಿ ಆಶೀರ್ವಾದ ಇರಬೇಕು ಸೂಪರ್ ಸ್ಟಾರ್ ಮಕ್ಕಳು ಫೀಲ್ ಆಗಿರೋದು ಇದೆ. ಬಡವರ ಮಕ್ಕಳು ಸೂಪರ್ ಸ್ಟಾರ್ ಆಗಿರುವ ಉದಾರಣೆಗಳು ಆದರೆ ಸಿನಿಮಾ ಗೆಲ್ಲಲು ಕಷ್ಟ. ಚಿತ್ರದಲ್ಲಿ ಖ್ಯಾತ ಸಾಹಸ ನಿರ್ದೇಶಕ ತ್ರಿಲ್ಲರ್ ಮಂಜು ಮತ್ತು ವಿಜಯ್ ಸಿಂಹ ಪ್ರಮುಖ ಪಾತ್ರದಲ್ಲಿ ನಡೆಸಿದ್ದಾರೆ. ಖ್ಯಾತ ಡೈಲಾಗ್ ರೈಟರ್ ಮಾಸ್ತಿ ಸಂಭಾಷಣೆ ಕಾರ್ತಿಕ್ ಛಾಯಾಗ್ರಹಣ ಮತ್ತು ರೋಹಿತ್ ಸೋವರ್ ಸಂಗೀತ ನಿರ್ದೇಶಕರಾಗಿದ್ದಾರೆ.ಈ ಚಿತ್ರವು ಫೆಬ್ರವರಿ 6 ರಂದು ರಾಜ್ಯಾದ್ಯಂತ ಎಂದು ರಾಜ್ಯದ್ಯಂತ ತೆರೆಗೆ ಬರಲಿದೆ ಎಂದು ಸಿನಿಮಾ ತಂಡ ರೆವಿನ್ ಮಾಡಿದು ಮತ್ತು ಸಿನಿಮಾ ನಾಯಕಿ ಭವನ ರೆಡ್ಡಿ ಅವರು ಡಾಲಿಯವರಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಈ ಚಿತ್ರವು ಈಗಾಗಲೇ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸಿದೆ.



ಇನ್ನಷ್ಟು ಓದಿರಿ:


ಸಿಎಂ ಸಿದ್ದರಾಮಯ್ಯ : ಮಾನವ ಧರ್ಮವೇ ಎಲ್ಲ ಧರ್ಮಕ್ಕಿಂತಲೂ ಮೇಲು

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online