<?= $pageTitle ?>
Logo
ಮುಖಪುಟ ಓದುವುದು ಕೇಳು
Entertainment

ರಶ್ಮಿಕಾ ಮಂದಣ್ಣ ಹೊಸ ಸಿನಿಮಾ ಚಟುವಟಿಕೆಗಳು : ವಿವಾಹದ ಬಳಿಕ ಶೂಟಿಂಗ್ ನಲ್ಲಿ ಸಕ್ರಿಯ

ರಶ್ಮಿಕಾ ಮಂದಣ್ಣ ಹೊಸ ಸಿನಿಮಾ ಚಟುವಟಿಕೆಗಳು : ವಿವಾಹದ ಬಳಿಕ ಶೂಟಿಂಗ್ ನಲ್ಲಿ ಸಕ್ರಿಯ
Summary: Even after marriage, Rashmika Mandanna has been continuously involved in shooting. Now a big update has come out about her new project, which has continued without a break, which has increased the curiosity of the fans.

Belagavi news:

ಚಿತ್ರರಂಗದಲ್ಲಿ ನ್ಯಾಷನಲ್ ಕ್ರಷ್ ಎಂದು ಖ್ಯಾತಿ ಪಡೆದಿರುವ ರಶ್ಮಿಕಾ ಮಂದಣ್ಣ ಮದುವೆಯಾದ ಬಳಿಕವೂ ಯಾವುದೇ ವಿರಾಮವಿಲ್ಲದೆ ಸಖತ್ ಬ್ಯುಸಿಯಾಗಿದ್ದಾರೆ. ಕೊಡಗಿನ ಬೆಡಗಿ ರಶ್ಮಿಕ ತಮ್ಮ ಬಹುನಿರೀಕ್ಷಿತ ಫ್ಯಾನ್ ಇಂಡಿಯಾ ಚಿತ್ರ "ಮೈಸಾ" ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದು, ಇದೀಗ ಚಿತ್ರದ ಐದನೇ ಷೆಡ್ಯೂಲ್ ಯಶಸ್ವಿಯಾಗಿ ಪೂರ್ಣಗೊಂಡಿದೆ.

ಬುಡಕಟ್ಟು ಜನಾಂಗದ ಹಿನ್ನೆಲೆಯ ಹೈ ವೋಲ್ಟೇಜ್ ಡ್ರಾಮಾ ಆಗಿರುವ ಮೈಸಾ ಚಿತ್ರ ಈಗಾಗಲೇ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ. ಚಿತ್ರತಂಡ ಶೀಘ್ರದಲ್ಲಿ ಚಿತ್ರದ ಟೀಸರ್ ಬಿಡುಗಡೆಗೆ ಸಜ್ಜಾಗುತ್ತಿದೆ ಎಂಬ ಮಾಹಿತಿ ಹೊರ ಬಿದ್ದಿದ್ದು, ಸಿನಿಮಾ ಕುರಿತ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ರಶ್ಮಿಕಾ , ಮದುವೆ ಸಂಭ್ರಮ ಮುಗಿದ ತಕ್ಷಣವೇ ಮತ್ತೆ ಕ್ಯಾಮೆರಾ ಎದುರು ಹಾಜರಾಗಿದ್ದಾರೆ. ಯಾವುದೇ ಬ್ರೇಕ್ ತೆಗೆದುಕೊಳ್ಳದೆ ನಿರಂತರವಾಗಿ ಶೂಟಿಂಗ್ ನಲ್ಲಿ ಭಾಗವಹಿಸುತ್ತಿರುವ ಅವರು, ತಮ್ಮ ಬಹುನಿರೀಕ್ಷಿತ ಪ್ರಾಜೆಕ್ಟ್ ಗಳನ್ನು ವೇಗವಾಗಿ ಪೂರ್ಣಗೊಳಿಸುತ್ತಿದ್ದಾರೆ.

ಅಭಿಮಾನಿಗಳಿಗೆ ಬ್ಯಾಕ್ ಟು ಬ್ಯಾಕ್ ಸಿಹಿ ಸುದ್ದಿಗಳನ್ನು ನೀಡುತ್ತಿರುವ ರಶ್ಮಿಕಾ ಮಂದಣ್ಣ ಅವರ ಈ ನಿರಂತರ ಶ್ರಮ ಮತ್ತು ನಿಷ್ಠೆಗೆ ಚಿತ್ರರಂಗದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮೈಸಾ ಚಿತ್ರದ ಮುಂದಿನ ಅಪ್ಡೇಟ್ ಗಾಗಿ ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ.

ರಶ್ಮಿಕಾ ಮಂದಣ್ಣ 'ಮೈಸಾ ' ಶೂಟಿಂಗ್ ನಲ್ಲಿ ಬ್ಯುಸಿ: ಐದನೇ ಷೆಡ್ಯೂಲ್ ಮುಕ್ತಾಯ, ಬಯೋಪಿಕ್ ವದಂತಿಗಳ ಮಧ್ಯೆ ಹೊಸ ಚರ್ಚೆ:

ಚಿತ್ರರಂಗದಲ್ಲಿ ನ್ಯಾಷನಲ್ ಕ್ರಷ್ ಎಂದು ಪರಿಚಿತರಾದ ರಶ್ಮಿಕಾ ಮಂದಣ್ಣ ಅವರು ಸದ್ಯ ಎರಡು ಪ್ರಮುಖ ಕಾರಣಗಳಿಂದ ಗಮನ ಸೆಳೆಯುತ್ತಿದ್ದಾರೆ. ಖ್ಯಾತ ಗಾಯಕಿ ಎಂಎಸ್ ಸುಬ್ಬಲಕ್ಷ್ಮಿ ಅವರ ಬಯೋಪಿಕ್ ನಲ್ಲಿ ರಶ್ಮಿಕಾ ನಟಿಸಲ್ಲಿದ್ದಾರೆ. ಎಂಬ ಬಿಸಿ ಬಿಸಿ ಚರ್ಚೆಗಳ ನಡುವೆ, ಅವರ ಫ್ಯಾನ್ ಇಂಡಿಯಾ ಚಿತ್ರ ಮೈಸಾ ಕೆಲಸಗಳು ಸದ್ದಿಲ್ಲದೇ ವೇಗವಾಗಿ ಸಾಗುತ್ತಿವೆ.

ಬುಡಕಟ್ಟು ಜನಾಂಗದ ಹಿನ್ನೆಲೆ ಉಳ್ಳ ಹೈ ವೋಲ್ಟೇಜ್ ಆಕ್ಷನ್ ಡ್ರಾಮಾ ಆಗಿರುವ ಮೈಸಾ ಚಿತ್ರದ ಐದನೇ ಹಂತದ ಶೂಟಿಂಗ್ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಚಿತ್ರತಂಡ ಮುಂದಿನ ಶೆಡ್ಯೂಲ್ ಗಾಗಿ ಸಜ್ಜಾಗುತ್ತಿದೆ ಎಂಬ ಮಾಹಿತಿ ದೊರೆತಿದೆ.

ಸಾಮಾನ್ಯವಾಗಿ ಮದುವೆಯ ನಂತರ ನಟಿಯರು ಸಿನಿಮಾಗಳಿಂದ ವಿರಾಮ ಪಡೆಯುವ ಸಾಂಪ್ರದಾಯ ಇದ್ದರು, ರಶ್ಮಿಕಾ ಮಂದಣ್ಣ ಮಾತ್ರ ಅದಕ್ಕೆ ವಿಭಿನ್ನವಾಗಿ ಸ್ಪಂದಿಸಿದ್ದಾರೆ. ಮದುವೆಯ ಬೆನ್ನಲ್ಲೇ ಅವರು ದುಪ್ಪಟ್ಟು ಉತ್ಸಾಹದಿಂದ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದು, ನಿರಂತರವಾಗಿ ಹೊಸ ಷೆಡ್ಯೂಲ್ ಗಳನ್ನು ಪೂರ್ಣಗೊಳಿಸುತ್ತಿದ್ದಾರೆ.

ಮೈಸಾ ಚಿತ್ರದ ಮೇಲೆ ಈಗಾಗಲೇ ಭಾರಿ ನಿರೀಕ್ಷೆ ನಿರ್ಮಾಣವಾಗಿದ್ದು, ಮುಂದಿನ ಅಪ್ಡೇಟ್ಗಳು ಹಾಗೂ ಟೀಸರ್ ಬಿಡುಗಡೆ ಕುರಿತು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಮೈಸಾ ಟೀಸರ್ ಗೆ ಸಜ್ಜು - 5ನೇ ಶೆಡ್ಯೂಲ್ ಮುಕ್ತಾಯದ ಬೆನ್ನಲ್ಲೇ ರಶ್ಮಿಕಾ ಚಿತ್ರಕ್ಕೆ ಬಿಗ್ ಅಪ್ಡೇಟ್ :

ಐದನೇ ಷೆಡ್ಯೂಲ್ ಯಶಸ್ವಿಯಾಗಿ ಪೂರ್ಣಗೊಂಡ ಕೃಷಿಯ ಬೆನ್ನಲ್ಲೇ ಮೈಸಾ ಚಿತ್ರತಂಡ ಅಭಿಮಾನಿಗಳಿಗೆ ಮತ್ತೊಂದು ಬಿಗ್ ಅಪ್ಡೇಟ್ ನೀಡಿದೆ. ಚಿತ್ರದ ನಿರ್ಮಾಪಕ ಅಜಯ್ ಸಾಯಿಪುರೆಡ್ಡಿ ಅವರು ಶೀಘ್ರದಲ್ಲೇ ಚಿತ್ರದ ಅಧಿಕೃತ ಟೀಸರ್ ಬಿಡುಗಡೆ ಮಾಡಲು ಸಜ್ಜಾಗುತ್ತಿರುವುದಾಗಿ ತಿಳಿಸಿದ್ದಾರೆ.

ಮದುವೆಯ ಬಳಿಕ ರಶ್ಮಿಕಾ ಮಂದಣ್ಣ ಅವರ ಮೊದಲ ಫ್ಯಾನ್ ಇಂಡಿಯಾ ಅಪ್ಡೇಟ್ ಇದಾಗಿರುವುದರಿಂದ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿದೆ. ಟೀಸರ್ ಬಿಡುಗಡೆ ಕುರಿತು ಘೋಷಣೆ ಹೊರ ಬಿದ್ದ ಕೂಡಲೇ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ.

ಹೈ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ಮೈಸಾ ಚಿತ್ರವನ್ನು ಉದಯ ನವ ನಿರ್ದೇಶಕ ರವೀಂದ್ರ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರವನ್ನು ಅನ್ ಫಾರ್ಮುಲಾ ಫಿಲ್ಮ್ಸ್ ಸಂಸ್ಥೆ ಭಾರಿ ಬಜೆಟ್ ನಲ್ಲಿ ನಿರ್ಮಿಸುತ್ತಿದ್ದು, ಫ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿದೆ.

ಚಿತ್ರಕ್ಕೆ ಜೆಕ್ಸ್ ಬಿಜಾಯ್ ಸಂಗೀತ ನೀಡುತ್ತಿದ್ದಾರೆ ಎಂಬುದು ವಿಶೇಷ. ಜೊತೆಗೆ ಕನ್ನಡದ ಪ್ರತಿಭಾವಂತ ನಟ ತಾರಕ್ ಪೊನ್ನಪ್ಪ ಅವರು ಈ ಚಿತ್ರದಲ್ಲಿ ಅತ್ಯಂತ ಪ್ರಮುಖ ಹಾಗೂ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ . ಅವರ ಪಾತ್ರ ಚಿತ್ರದ ಕಥೆಗೆ ಪ್ರಮುಖ ತಿರುವು ನೀಡಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಮೈಸಾ ಚಿತ್ರದ ಟೀಸರ್ ಬಿಡುಗಡೆಯೊಂದಿಗೆ ಚಿತ್ರದ ಪ್ರಚಾರ ಕಾರ್ಯ ಮತ್ತಷ್ಟು ವೇಗ ಪಡೆಯಲಿದ್ದು, ಅಭಿಮಾನಿಗಳು ಮುಂದಿನ ಅಪ್ಡೇಟ್ ಗಾಗಿ ಕಾತುರದಿಂದ ಕಾಯುತ್ತಿದ್ದಾರೆ.

Also Read:

ಕನ್ನಡಿಗರೇ ಕೊಟ್ಟಿಯೂರಿಗೆ ಬನ್ನಿ" - ಕನ್ನಡದಲ್ಲಿ ಮನವಿ ಮಾಡಿ ಭದ್ರತೆ ಭರವಸೆ ನೀಡಿದ ಕೇರಳದ ಡಿಐಜಿ ಯತೀಂದ್ರ ಚಂದ್ರ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online