ಕಳೆದ ವರ್ಷ ರಾಜ್ ಶೆಟ್ರ 2 ಚಿತ್ರಗಳು ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿವೆ. ಮೊದಲು ಬಂದ ಸು ಫ್ರಮ್ ಸೋ ಚಿತ್ರದ ಪ್ರಮುಖ ಪಾತ್ರದವೊಂದರಲ್ಲಿ ಕಾಣಿಸಿಕೊಂಡಿದ್ದ ರಾಜ್ ಶೆಟ್ಟಿ ನಿರೀಕ್ಷೆಗೂ ಮೀರಿ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು.
ನಟನೆ ಜೊತೆ ರಾಜ್ ಶೆಟ್ಟಿ ನಟಿಸಿದ್ದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದಿತ್ತು. ಈ ಚಿತ್ರದ ಬಳಿಕ ಶಿವರಾಜ್ಕುಮಾರ್, ಉಪೇಂದ್ರ ಜೊತೆ '45' ಚಿತ್ರದ ಪ್ರಮುಖ ಪಾತ್ರದಲ್ಲಿ ರಾಜ್ ಕಾಣಿಸಿಕೊಂಡಿದ್ದರು. ಈ ಸಿನಿಮಾ ಕೂಡಾ ಯಶಸ್ವಿಯಾಗಿದ್ದು, ಚಿತ್ರಮಂದಿರಗಳಲ್ಲಿ ಪ್ರದರ್ಶನ ಮುಂದುವರೆಸಿದೆ.
2026ರಲ್ಲಿ ರಾಜ್ ಬಿ ಶೆಟ್ಟಿ ಅಭಿನಯದ 3 ಚಿತ್ರಗಳು ಬ್ಯಾಕ್ ಟು ಬ್ಯಾಕ್ ಬಿಡುಗಡೆಯಾಗಲಿವೆ. ಹೌದು, ಮೂರು ಚಿತ್ರಗಳು ಒಂದೇ ತಿಂಗಳ ಅಂತರದಲ್ಲಿ ಬಿಡುಗಡೆಯಾಗುತ್ತಿವೆ. ಈ ಪೈಕಿ ಮೊದಲು ಸಾರಥಿ ನಿರ್ಮಾಪಕ ಸತ್ಯ ಪ್ರಕಾಶ್ ನಿರ್ಮಾಣದ ಲ್ಯಾಂಡ್ ಲಾರ್ಡ್ ಪ್ರೇಕ್ಷಕರೆದುರು ಬರಲಿದೆ. ಜಡೇಶ್ ಹಂಪಿ ನಿರ್ದೇಶನದ ಚಿತ್ರದಲ್ಲಿ ದುನಿಯಾ ವಿಜಯ್ ಎದುರಾಳಿಯಾಗಿ ರಾಜ್ ಬಿ ಶೆಟ್ಟಿ ನಟಿಸಿದ್ದು, ಜನವರಿ 23ರಂದು ಸಿನಿಮಾ ಬಿಡುಗಡೆ ಆಗಲಿದೆ.
ಲ್ಯಾಂಡ್ ಲಾರ್ಡ್ ಚಿತ್ರದ ಮೂಲಕ ರಾಜ್ ಬಿ.ಶೆಟ್ಟಿ ಇದೇ ಮೊದಲ ಬಾರಿಗೆ ನೆಗೆಟಿವ್ ರೋಲ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕೂ ಮೊದಲು ಅವರು ಮಲಯಾಳಂ ಚಿತ್ರದಲ್ಲಿ ಮಮ್ಮುಟ್ಟಿ ಎದುರು ವಿಲನ್ ಆಗಿ ನಟಿಸಿದ್ದರು. ಈಗ ಕನ್ನಡದಲ್ಲೂ ವಿಲನ್ ಪಾತ್ರದಲ್ಲಿ ನಟಿಸಿರುವುದು ಗಮನಾರ್ಹ.
ಈ ಚಿತ್ರದ ಬಳಿಕ ಖ್ಯಾತ ಸಾಹಸ ನಿರ್ದೇಶಕ ರವಿವರ್ಮ ನಿರ್ಮಾಣದ ರಕ್ಕಸಪುರದೋಳ್ ಸಿನಿಮಾದೊಂದಿಗೆ ಪ್ರೇಕ್ಷಕರೆದುರು ಹಾಜರಾಗಲಿದ್ದಾರೆ. ಫೆಬ್ರವರಿ 6ರಂದು ಬಿಡುಗಡೆ ಆಗಲಿರುವ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ 'ಸು ಫ್ರಮ್ ಸೋ' ಗುರೂಜಿ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರದ ಕುರಿತು ಮಾತನಾಡಿರುವ ರಾಜ್ ಬಿ ಶೆಟ್ಟಿ, ''ಚಿತ್ರದಲ್ಲಿ ನಾನು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಅವನು ತನ್ನ ಒಳಗಿರುವ ರಾಕ್ಷಸನನ್ನು ಎದುರಿಸಿದಾಗ ಏನಾಗುತ್ತದೆ ಎನ್ನುವುದೇ ಚಿತ್ರದ ಕಥೆ. ಬಹಳ ನೈಜವಾದ ಪಾತ್ರ ಇದು'' ಎಂದು ಹೇಳಿಕೊಂಡಿದ್ದಾರೆ.
'ಕರಾವಳಿ' ಪ್ರಜ್ವಲ್ ದೇವರಾಜ್ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಚಿತ್ರ. ಸಂಪದಾ, ಮಿತ್ರ, ರಮೇಶ್ ಇಂದಿರಾ, ಶ್ರೀಧರ್ ತಾರಾ ಬಳಗದಲ್ಲಿದ್ದಾರೆ. ಗುರುದತ್ ಗಾಣಿಗ ಅವರು ನಿರ್ದೇಶನದ ಜೊತೆಗೆ ವಿ.ಕೆ.ಫಿಲ್ಮ್ ಅಸೋಸಿಯೇಷನ್ನಲ್ಲಿ ಗಾಣಿಗ ಫಿಲ್ಮ್ಸ್‌ನಡಿ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.
ಒಟ್ಟಾರೆ, ಒಂದೂವರೆ ಎರಡು ತಿಂಗಳ ಅಂತರದಲ್ಲಿ ರಾಜ್ ಬಿ.ಶೆಟ್ಟಿ ಅಭಿನಯದ ಮೂರು ಚಿತ್ರಗಳು ಬಿಡುಗಡೆಯಾಗುತ್ತಿವೆ. ಚಿತ್ರದಲ್ಲಿನ ಅವರ ಪಾತ್ರಗಳನ್ನು ಗಮನಿಸುತ್ತಿದ್ದರೆ, ಒಂದಕ್ಕಿಂತ ಒಂದು ವಿಭಿನ್ನ ಎನ್ನುವಂತಿದೆ. ಕಾಮಿಡಿ ಮತ್ತು ಗಂಭೀರ ಪಾತ್ರಗಳಿಗೆ ಸೈ ಎನಿಸಿಕೊಂಡಿರುವ ರಾಜ್‍ಗೆ ಈ ಮೂರು ಸಿನಿಮಾಗಳಲ್ಲಿ ಯಾವ ಚಿತ್ರ ದೊಡ್ಡ ಮಟ್ಟದ ಹೆಸರು ತಂದುಕೊಡಲಿದೆ ಎಂಬುದನ್ನು ಕಾದು ನೋಡಬೇಕು.
ಅಮೋಘ ಅಭಿನಯ ಮತ್ತು ಕಂಟೆಂಟ್ ಆಯ್ಕೆ ಸಲುವಾಗಿ ಕನ್ನಡ ಹಾಗೂ ಬಹುಭಾಷೆಗಳಲ್ಲಿ ಗಮನ ಸೆಳೆಯುತ್ತಿರುವ ಕನ್ನಡದ ಜನಪ್ರಿಯ ನಟ, ನಿರ್ದೇಶಕ ಮತ್ತು ನಿರ್ಮಾಪಕ ರಾಜ್ ಬಿ ಶೆಟ್ಟಿ. ಹೀರೋಯಿಸಂ ಇಲ್ಲದೇ ಕಂಟೆಂಟ್ ಚಿತ್ರಗಳಿಂದಲೇ ಒಂದರ ಹಿಂದೆ ಒಂದು ಸಿನಿಮಾಗಳನ್ನು ಮಾಡುತ್ತಿರುವ ರಾಜ್ ಬಿ ಶೆಟ್ಟಿ ಅಭಿನಯದ 3 ಸಿನಿಮಾಗಳು ಈ ವರ್ಷ ಬ್ಯಾಕ್ ಟು ಬ್ಯಾಕ್ ಬಿಡುಗಡೆಗೆ ಸಜ್ಜಾಗಿವೆ.
ಇನ್ನಷ್ಟು ಓದಿರಿ:
ರಾನಿ’, ‘ಅಖಂಡ 2’ ಮತ್ತು ಇನ್ನಿತರ ಹೊಸ ಸಿನಿಮಾ ಪ್ರಚಾರ