7 articles found
ಕೇಂದ್ರ ಬಜೆಟ್ 2026 ಮಂಡನೆಯ ದಿನ ಷೇರುಪೇಟೆಯಲ್ಲಿ ಆರಂಭಿಕ ವಹಿವಾಟು ಸ್ಥಿರವಾಗಿ ಕಂಡುಬಂದಿದೆ. ನಿಫ್ಟಿ ಹಾಗೂ ಸೆನ್ಸೆಕ್ಸ್ ಸೂಚ್ಯಂಕಗಳು ಸೀಮಿತ ಏರಿಳಿತದೊಂದಿಗೆ ವಹಿವಾಟು ನಡೆಸಿದ್ದು, ಹೂಡಿಕೆದಾರರು ಬಜೆಟ್ ನ ಪ್ರಮುಖ ಅಂಶಗಳು ತೆರಿಗೆ ನೀತಿ ಹಾಗೂ ವಲಯವಾರು ಘೋಷಣೆಗಳಂತ ಕಣ್ಣಿಟ್ಟಿದ್ದಾರೆ. ಬಜೆಟ್ ನಂತರ ಮಾರುಕಟ್ಟೆಯಲ್ಲಿ ತೀವ್ರ ಚಲನೆಯ ನಿರೀಕ್ಷೆ ಇದೆ.
ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ಇತಿಹಾಸದಲ್ಲಿ ಮೊದಲ ಬಾರಿ 10 ಗ್ರಾಂ. ಬಂಗಾರ 1.61 ಲಕ್ಷ ತಲುಪಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯ ಅಸ್ಥಿರತೆ ಡಾಲರ್ ಗಳ ಮತ್ತು ಜಿಯೋಪಾಲಿಟಿಕಲ್ ಉದ್ವಿಗ್ನತೆಗಳ ಪರಿಣಾಮವಾಗಿ ಚಿನ್ನದ ಬೆಲೆಯಲ್ಲಿ ನಿಲ್ಲದ ನಾಗಲೋಟ ಕಂಡುಬರುತ್ತವೆ.
ಶೇರುಪೇಟೆಯಲ್ಲಿ ಭಾರಿ ಕುಸಿತ : senseks 2 ದಿನವೂ ಕುಸಿತ ಕಂಡಿದ್ದು, ಕಳೆದ ಎರಡು ದಿನಗಳಲ್ಲಿ ಒಟ್ಟು₹ 12 ಲಕ್ಷ ಕೋಟಿ ನಷ್ಟ ದಾಖಲಾಗಿದೆ. ಇಂದು ಸೆನ್ಸೆಕ್ಸ್ 1,066 ಅಂಶ ಇಳಿಕೆ ಕಂಡು ಮಾರುಕಟ್ಟೆಯಲ್ಲಿ ಚಿಂತಾಜನಕ ಸ್ಥಿತಿ ಉಂಟಾಗಿದೆ. NSE ಮತ್ತು BSE ಯ ಇತ್ತೀಚಿನ ವರದಿ ಪ್ರಕಾರ. ಪ್ರಮುಖ ಷೇರುಗಳ ಬೆಳೆಯದೆ ಕುಸಿತ ತೋರಿದೆ. ಈ ಭಾರತೀಯ ಷೇರುಪೇಟೆ ಹಾಗೂ ಹೂಡಿಕೆದಾರರ ಮೇಲೆ ಮಹತ್ವದ ಪರಿಣಾಮ ಬೀರುತ್ತಿದೆ.
ಐಪಿಒದಲ್ಲಿ 343 ರಿಂದ 361 ರೂ. ಬೆಲೆ ನಿಗದಿ, 37 ರೂ. ಅಥವಾ ಶೇ. 10ರಷ್ಟು ಪ್ರೀಮಿಯಂ ದರದಲ್ಲಿ ವಹಿವಾಟು ನಡೆಸುತ್ತಿವೆ. ಪ್ರಾಥಮಿಕ ಮಾರುಕಟ್ಟೆಯಲ್ಲಿ ಮುಂದಿನ ವಾರ ಭಾರಿ ಚಟುವಟಿಕೆ ಕಂಡುಬರಲಿದೆ. ಜನವರಿ 12 ರಿಂದ ಜನವರಿ 16ರ ನಡುವೆ ಒಟ್ಟು ಆರು ಕಂಪನಿಗಳು ತಮ್ಮ ಆರಂಭಿಕ ಸಾರ್ವಜನಿಕ ಕೊಡುಗೆಯನ್ನು (ಐಪಿಒ) ಆರಂಭಿಸಲಿವೆ.
ಅಧ್ಯಕ್ಷರ ನಿರ್ಗಮನದ ಸುದ್ದಿಗೆ ಮಾರುಕಟ್ಟೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿರುವಂತೆ ಕಾಣುತ್ತಿದೆ. ಜನವರಿ 5ರಂದು ಕ್ಯಾರಕಾಸ್ ಸ್ಟಾಕ್ ಎಕ್ಸ್ಚೇಂಜ್ನ (Carcas stock exchange) ಸೂಚ್ಯಂಕವು 2,597.7 ಅಂಕಗಳೊಂದಿಗೆ ಟ್ರೇಡಿಂಗ್ ಮುಗಿಸಿತು. ದಿನದಲ್ಲಿ ಶೇ. 16.45ರಷ್ಟು ಏರಿಕೆ ಆಗಿದೆ.
ರೈಲ್ವೆ ಸ್ಟಾಕ್ಗಳು ಕಳೆದ ಎರಡು ವಾರಗಳಲ್ಲಿ ಸರಾಸರಿಯಾಗಿ ಶೇ. 13ರಷ್ಟು ಏರಿವೆ. ಈ ಬಾರಿಯ ಬಜೆಟ್ನಲ್ಲಿ ರೈಲ್ವೆ ಕ್ಷೇತ್ರಕ್ಕೆ ಸರ್ಕಾರದಿಂದ 1.3 ಲಕ್ಷ ಕೋಟಿ ರೂ ಬಂಡವಾಳ ವೆಚ್ಚ ಪ್ರಕಟಗೊಳ್ಳುವ ನಿರೀಕ್ಷೆ ಇದೆ ಬಜೆಟ್ನಲ್ಲಿ 1.3 ಲಕ್ಷ ಕೋಟಿ ರೂ ಬಂಡವಾಳ ವೆಚ್ಚ ಬರುವ ನಿರೀಕ್ಷೆ ಇದೆ. ಹೀಗಾಗಿ, ರೈಲ್ವೆ ಸ್ಟಾಕ್ಗಳಿಗೆ ಬೇಡಿಕೆ ಹೆಚ್ಚಿದೆ.
ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ 'ಸೆಬಿ' ಇತ್ತೀಚೆಗೆ ಮಧುರೈ ಮೂಲದ ಪುರೂಸ್ಖಾನ್ ಎಂಬುವವರ 'ರಿಸರ್ಚ್ ಅನಲಿಸ್ಟ್' (ಸಂಶೋಧನಾ ವಿಶ್ಲೇಷಕ) ನೋಂದಣಿಯನ್ನು ರದ್ದುಗೊಳಿಸಿದೆ. ತನಿಖೆಯ ವೇಳೆ ಈತ ಷೇರುಪೇಟೆ ತಜ್ಞನಲ್ಲ, ಬದಲಾಗಿ ಮಧುರೈನಲ್ಲಿ ಒಂದು ಸಣ್ಣ ದಿನಸಿ ಅಂಗಡಿ ನಡೆಸುತ್ತಿರುವವನು ಎಂಬುದು ಬಹಿರಂಗವಾಗಿದೆ. ಈತನ ನೋಂದಣಿ ಸಂಖ್ಯೆಯನ್ನು ಬಳಸಿಕೊಂಡು ಆನ್ಲೈನ್ ಜಾಲವೊಂದು ಹೂಡಿಕೆದಾರರಿಗೆ ವಂಚಿಸುತ್ತಿತ್ತು ಎಂಬ ದೂರಿನನ್ವಯ ಸೆಬಿ ಈ ಕ್ರಮ ಕೈಗೊಂಡಿದೆ.
© H16news.online . All Rights Reserved. Designed by H16news.online