ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸಾಲು ಮರದ ತಿಮ್ಮಕ್ಕ (114) ವಿಧಿವಶರಾಗಿದ್ದಾರೆ. ವೃಕ್ಷಮಾತೆಯನ್ನು ಕಳೆದುಕೊಂಡು ಪರಿಸರ ಲೋಕ ಇಂದು ಅನಾಥವಾಗಿದೆ.
2025-11-14
ಮಂಗಳೂರಿನ ಕಾರಾಗೃಹದಲ್ಲಿ ಅಳವಡಿಸಿರುವ ಜಾಮರ್ನಿಂದಾಗಿ ಜಿಲ್ಲಾ ನ್ಯಾಯಾಲಯದಲ್ಲಿಯೂ ನೆಟ್ವರ್ಕ್ ಸಿಗದಂತಾಗಿದೆ.
2025-11-14
ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಅವರು ಶುಕ್ರವಾರ ವಿಧಿವಶರಾಗಿದ್ದಾರೆ. ಮರಗಳನ್ನು ನೆಡುವ ಮತ್ತು ಪೋಷಿಸುವ ಕಾರ್ಯಕ್ಕೆ ಹೆಸರುವಾಸಿಯಾಗಿದ್ದ ಅವರು ಇನ್ನು ನೆನಪು ಮಾತ್ರ. ಆದರೆ ಅವರು ನಾಡಿನ ಜನತೆಗೆ ಭಾವನಾತ್ಮಕ ಸಂದೇಶವೊಂದನ್ನು ನೀಡಿದ್ದಾರೆ. ಸಾಲುಮರದ ತಿಮ್ಮಕ್ಕ ಅವರು ನೀಡಿದ ಕೊನೆಯ ಸಂದೇಶ ಏನು ಎಂಬ ಮಾಹಿತಿ ಇಲ್ಲಿದೆ.
2025-11-14
ಜನರು ನೀಡುವ ತೀರ್ಪನ್ನು ನಾವು ಒಪ್ಪಿಕೊಳ್ಳಲೇಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
2025-11-14
India vs South Africa Test: ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆಯುತ್ತಿರುವ ಭಾರತ-ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್ನಲ್ಲಿ ಭಾರತೀಯ ಬೌಲರ್ಗಳು ಪ್ರಾಬಲ್ಯ ಮೆರೆದಿದ್ದಾರೆ. ಮೊದಲ ದಿನದ ಚಹಾ ವಿರಾಮದ ವೇಳೆಗೆ ದಕ್ಷಿಣ ಆಫ್ರಿಕಾ 8 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿದೆ. ಜಸ್ಪ್ರೀತ್ ಬುಮ್ರಾ 3 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ ಹಾಗೂ ಕುಲ್ದೀಪ್ ಯಾದವ್ ತಲಾ 2 ವಿಕೆಟ್ ಗಳಿಸಿ ಮಿಂಚಿದರು.
2025-11-14
ರಾಜ್ಯದ ನಾಲ್ಕು ರೈಲ್ವೆ ನಿಲ್ದಾಣಗಳಿಗೆ ಕರ್ನಾಟಕದ ಆಧ್ಯಾತ್ಮಿಕ ಮತ್ತು ಸಾಮಾಜಿಕ ಪರಂಪರೆಗೆ ಕೊಡುಗೆ ನೀಡಿದ ಸಂತರ ಹೆಸರನ್ನಿಡಲು ಸರ್ಕಾರ ಗೃಹ ಸಚಿವಾಲಯಕ್ಕೆ ಮನವಿ ಮಾಡಿದೆ. ವಿಜಯಪುರ, ಬೀದರ್, ಬೆಳಗಾವಿ ಮತ್ತು ಸುರಗೊಂಡನಕೊಪ್ಪ ನಿಲ್ದಾಣಗಳಿಗೆ ಮರುನಾಮಕರಣ ಮಾಡಲು ಪ್ರಸ್ತಾಪಿಸಲಾಗಿದೆ. ಸ್ಥಳೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.
2025-11-14
ನೈಋತ್ಯ ರೈಲ್ವೆಯ ಈ ಬಾರಿಯ ಆದಾಯದಲ್ಲಿ ಶೇ. 23ರಷ್ಟು ಹೆಚ್ಚಳವಾಗಿದೆ. ಈ ಕುರಿತ ವಿಶೇಷ ವರದಿ ಇಲ್ಲಿದೆ.
2025-11-14
ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶಗಳು ಮಹಾಘಟಬಂಧನ್ಗೆ ಹೀನಾಯ ಸೋಲನ್ನು ಸೂಚಿಸುತ್ತವೆ. ಮಹಾ ಘಟಬಂಧನ್ 31 ಸ್ಥಾನಗಳನ್ನು ಪಡೆದುಕೊಂಡಿದೆ ಟ್ರೆಂಡ್ಗಳು ತೋರಿಸುತ್ತಿದ್ದರೆ. ಏತನ್ಮಧ್ಯೆ, ಈ ಮಹಾಘಟಬಂಧನ್ ಭಾಗವಾಗಿದ್ದ ಕಾಂಗ್ರೆಸ್ ಕೇವಲ 3-4 ಸ್ಥಾನಗಳೊಂದಿಗೆ ಹೆಣಗಾಡುತ್ತಿದೆ. ಏತನ್ಮಧ್ಯೆ, ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಶುಕ್ರವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ತೀವ್ರವಾಗಿ ಟೀಕಿಸಿದ್ದಾರೆ.
2025-11-14
ಪ್ರಲ್ಹಾದ್ ಜೋಶಿ ಹಾಗೂ ಬಿ.ಎಸ್.ಯಡಿಯೂರಪ್ಪ ಅವರು ಬಿಹಾರ ಚುನಾವಣಾ ಫಲಿತಾಂಶದ ಕುರಿತು ಮಾತನಾಡಿದ್ದಾರೆ.
2025-11-14
ಮೊದಲ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಅಫ್ರಿಕಾ ತಂಡಕ್ಕೆ ಭಾರೀ ಆಘಾತವಾಗಿದೆ.
2025-11-14
ಬಿಹಾರದಲ್ಲಿ 2 ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆದಿತ್ತು. ಇಂದು (ನವೆಂಬರ್ 14) ಮತ ಎಣಿಕೆ ನಡೆಯುತ್ತಿದೆ. ಇಂದು ಸಂಜೆಯೇ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಈಗಾಗಲೇ ಬಿಜೆಪಿ-ಜೆಡಿಯು ಮೈತ್ರಿಯ ಎನ್ಡಿಎ 200ಕ್ಕೂ ಹೆಚ್ಚು ಸ್ಥಾನಗಳ ಗಡಿ ದಾಟಿದೆ. ಕಾಂಗ್ರೆಸ್-ಆರ್ಜೆಡಿ ಮೈತ್ರಿಯ ಮಹಾಘಟಬಂಧನಕ್ಕೆ ಭಾರೀ ಮುಖಭಂಗವಾಗಿದೆ. ಈ ಚುನಾವಣೆಯಲ್ಲಿ ಸಿಎಂ ನಿತೀಶ್ ಕುಮಾರ್- ಪಿಎಂ ನರೇಂದ್ರ ಮೋದಿ ಜೋಡಿ ಯಾವ ರೀತಿ ಕರಾಮತ್ತು ಮಾಡಿತು ಎಂಬುದರ ಹಿನ್ನೋಟ ಇಲ್ಲಿದೆ.
2025-11-14
ಬೆಂಗಳೂರಿನಲ್ಲಿ ನಡೆಯುತ್ತಿರುವ ಇಂಡಿಯನ್ ಪಿಕಲ್ಬಾಲ್ ನ್ಯಾಷನಲ್ಸ್ನಲ್ಲಿ ಆತಿಥೇಯ ಕರ್ನಾಟಕ ತಂಡ ದೆಹಲಿ ತಂಡವನ್ನು ಮಣಿಸಿತು.
2025-11-14
2025ರ ಚುನಾವಣಾ ಫಲಿತಾಂಶ ಏನಾಗುತ್ತೋ ಎಂದು ಜನರು ಕಾತುರದಿಂದ ಕಾಯುತ್ತಿರುವಾಗ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಮೀಮ್ಸ್ಗಳು ಮುಖದಲ್ಲಿರುವ ಆತಂಕದ ನೆರಿಗೆಗಳನ್ನು ಸರಿ ಪಡಿಸಲು ಬಂದಂತಿವೆ. ಆತಂಕದಲ್ಲಿರುವ ಬೆಂಬಲಿಗರು ಪ್ರತಿ ಕೆಲವು ಸೆಕೆಂಡುಗಳಿಗೊಮ್ಮೆ ಫಲಿತಾಂಶಗಳ ಹಾಗೂ ಅಭ್ಯರ್ಥಿಗಳಿಗೆ ಸಂಬಂಧಿಸಿದ ಮಿಮ್ಸ್ಗಳನ್ನು ಸಿದ್ಧಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲಿ ಕೆಲವು ಇಲ್ಲಿವೆ.
2025-11-14
ಭಾರತದ ಸ್ಟಾರ್ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಅವರು ಮುಂಬರುವ ಐಪಿಎಲ್ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯಲಿದ್ದಾರೆ.
2025-11-14
ತಮಿಳುನಾಡಿನ ಚೆನ್ನೈ ಬಳಿ IAF PC-7 ಪಿಲಾಟಸ್ ತರಬೇತಿ ವಿಮಾನ ಪತನವಾಗಿದೆ. ಅದೃಷ್ಟವಶಾತ್ ವಿಮಾನದೊಳಗಿದ್ದ ಪೈಲಟ್ ಸುರಕ್ಷಿತವಾಗಿ ಹೊರಗೆ ಹಾರಿದ್ದಾರೆ. ಹೀಗಾಗಿ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಚೆನ್ನೈನ ತಾಂಬರಂ ಬಳಿ ವಾಯುಪಡೆಯ ಈ ವಿಮಾನ ಪತನವಾಗಿದೆ. ದಿನನಿತ್ಯದ ತರಬೇತಿ ಕಾರ್ಯಾಚರಣೆಯ ಸಮಯದಲ್ಲಿ ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ವಿಮಾನ ಪತನಗೊಂಡಿತು.
2025-11-14
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಇಂದಿನಿಂದ ಆರಂಭವಾಗಿದೆ. ಟಾಸ್ ಸೋತ ಟೀಮ್ ಇಂಡಿಯಾ ಮೊದಲು ಬೌಲಿಂಗ್ ಮಾಡುತ್ತಿದೆ.
2025-11-14
ಧಾರವಾಡದ 7ನೇ ತರಗತಿ ವಿದ್ಯಾರ್ಥಿನಿ ನೀತಿ ಕುಲಕರ್ಣಿ 3D ಪ್ರಿಂಟಿಂಗ್ ಕಲೆಯಲ್ಲಿ ಅಸಾಧಾರಣ ಸಾಧನೆ ಮಾಡಿದ್ದಾರೆ. ಶಾಲಾ ಅಧ್ಯಯನದ ಜೊತೆಗೆ ಆಧುನಿಕ ತಂತ್ರಜ್ಞಾನವನ್ನು ಬಳಸಿ ಲ್ಯಾಂಪ್ಗಳು, ಆಟಿಕೆಗಳು ಸೇರಿದಂತೆ ಆಕರ್ಷಕ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಆ ಮೂಲಕ ಸ್ವಂತ ಆದಾಯ ಗಳಿಸುತ್ತಿರುವ ನೀತಿ, ಇತರೆ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ.
2025-11-14
ಐಪಿಎಲ್ನಲ್ಲಿ ಆಟಗಾರರನ್ನು ಟ್ರೇಡ್ ಮಾಡುವ ನಿಯಮಗಳು ಯಾವುವು ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಮಾಹಿತಿ ಈ ಕೆಳಗಿದೆ.
2025-11-14
ಎಲ್ಲರ ಬದುಕು ಒಂದೇ ರೀತಿ ಇರಲ್ಲ. ಕೆಲವರಿಗೆ ಸಣ್ಣ ವಯಸ್ಸಿನಲ್ಲಿಯೇ ಜವಾಬ್ದಾರಿ ಅನ್ನೋದು ಹೆಗಲ ಮೇಲೇರುತ್ತದೆ. ಇದಕ್ಕೆ ಉದಾಹರಣೆಯಂತಿದೆ ಈ ಪುಟ್ಟ ಹುಡುಗನ ಮಾತು. ಶಾಲೆಗೆ ಹೋಗುವ ಈ ಹುಡುಗನು ಸಂಜೆ ವೇಳೆ ಬಸ್ ನಿಲ್ದಾಣವೊಂದರಲ್ಲಿ ಹಣ್ಣು ಮಾರಿ ತಂದೆ ತಾಯಿಗೆ ತನ್ನ ಕೈಲಾದ ಮಟ್ಟಿಗೆ ಮಾಡುತ್ತಿರುವ ಬಾಲಕನೊಬ್ಬನ ವಿಡಿಯೋ ಸದ್ಯ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಈ ಪುಟ್ಟ ಹುಡುಗನಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
2025-11-14
ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷ ಸದ್ಯ 82 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇದಕ್ಕೆ ಅವರ ಯೋಜನೆಗಳೇ ಕಾರಣವಾ? ಅಥವಾ ಮಹಿಳೆಯರ ಸ್ವಯಂ ಉದ್ಯೋಗಕ್ಕೆ ಹಾಕಿದ ತಲಾ 10 ಸಾವಿರ ಈ ಕಮಾಲ್ಗೆ ಕಾರಣವಾಯ್ತೇ?
2025-11-14
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕುಂಪಲ ಎಂಬಲ್ಲಿ ಬೀದಿನಾಯಿ ದಾಳಿಗೆ ವ್ಯಕ್ತಿ ಬಲಿಯಾಗಿರುವಂತಹ ಘಟನೆ ನಡೆದಿದೆ. ಜನವಸತಿ ಪ್ರದೇಶದಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಈ ಆಘಾತಕಾರಿ ಘಟನೆ ಜನರಲ್ಲಿ ತೀವ್ರ ಆತಂಕ ಮೂಡಿಸಿದೆ. ಸ್ಥಳೀಯರು ಬೀದಿ ನಾಯಿಗಳ ನಿಯಂತ್ರಣಕ್ಕೆ ತಕ್ಷಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
2025-11-14
US struggling to fill skilled jobs like mechanics, plumbers despite offering upto Rs 1 crore salary: ಅಮೆರಿಕದಲ್ಲಿ ಮೆಕ್ಯಾನಿಕ್, ಪ್ಲಂಬರ್, ಎಲೆಕ್ಟ್ರಿಶಿಯನ್ ಕೆಲಸಗಳಿಗೆ ಕೋಟಿ ರೂವರೆಗೆ ಸಂಬಳ ಆಫರ್ ಮಾಡಲಾಗುತ್ತಿದೆ. ಇಷ್ಟು ದೊಡ್ಡ ಸಂಬಳ ಕೊಟ್ಟರೂ ಕೆಲಸಗಾರರು ಸಿಗುತ್ತಿಲ್ಲ. ನುರಿತ ಕೆಲಸಗಾರರ ಕೊರತೆ ಅಮೆರಿಕದಲ್ಲಿ ಕಾಡುತ್ತಿದೆ. ಅಮೆರಿಕನ್ನರು ಐಟಿ, ಎಐ ಇತ್ಯಾದಿ ಹೈ ಎಂಡ್ ವಿದ್ಯೆ ಕಲಿಯಲು ಒತ್ತು ಕೊಟ್ಟ ಪರಿಣಾಮ, ಕೈಕೆಲಸ ಗೊತ್ತಿರುವವರು ಇಲ್ಲವಾಗಿದೆ.
2025-11-14
ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ನಾಯಕ ಚಿರಾಗ್ ಪಾಸ್ವಾನ್ ಅವರು 19ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದಾರೆ.
2025-11-14
Bigg Boss Telugu: ಬಿಗ್ಬಾಸ್ ಕನ್ನಡ ಸೀಸನ್ 12 ಚಾಲ್ತಿಯಲ್ಲಿದೆ. ಈ ವಾರ ಸ್ಪರ್ಧಿಗಳು ಕೆಲ ಟಾಸ್ಕ್ಗಳಲ್ಲಿ ಬ್ಯುಸಿ ಆಗಿದ್ದಾರೆ. ಅತ್ತ ತೆಲುಗಿನಲ್ಲಿಯೂ ಸಹ ಬಿಗ್ಬಾಸ್ ಒಂಬತ್ತು ವಾರಗಳನ್ನು ಪೂರೈಸಿದೆ. ಈ ಬಾರಿಯ ತೆಲುಗು ಬಿಗ್ಬಾಸ್ ಕಳೆದ ಕೆಲ ಸೀಸನ್ಗಳಿಗಿಂತಲೂ ತುಸು ಹೆಚ್ಚೇ ಗಮನ ಸೆಳೆಯುತ್ತಿದೆ. ಸ್ಪರ್ಧಿಗಳು ಅಲ್ಲಿ ಪ್ರೇಕ್ಷಕರ ಮನರಂಜಿಸುವತ್ತ ಹೆಚ್ಚು ಗಮನ ವಹಿಸಿದ್ದಾರೆ. ಆದರೆ ಕನ್ನಡ ಬಿಗ್ಬಾಸ್ನಲ್ಲಿ ಏನಾಗುತ್ತಿದೆ?
2025-11-14
ಜೈಲಿನಲ್ಲಿ ತಾಯಂದಿರೊಂದಿಗೆ ಇರುವ 8 ಮಕ್ಕಳು ಆರೋಗ್ಯಯುತ ವಾತಾವರಣದಲ್ಲಿ ಬೆಳೆಯುವ ಅವಕಾಶವನ್ನು ನಿರ್ಮಾಣ ಮಾಡುವ ಮೂಲಕ ಗಾಜಿಯಬಾದ್ ಕಾರಾಗೃಹ ಅಧಿಕಾರಿಗಳು ಶ್ಲಾಘನೀಯ ಕಾರ್ಯ ಮಾಡಿದ್ದಾರೆ.
2025-11-14
Lakhs_rupees_stolen_Bengaluru_man_cryptocurrency
Nitish_Kumar_take_oath_Bihar_CM
You_too_can_become_an_AI_expert
When_time_donate_kidney_father_son
Dr_Ahmed_imprisoned_Sabarmati_plotting_ricin_attack
© gokakica.in. All Rights Reserved. Designed by Image Computer Academy