H16 News
Logo
ಅಣ್ಣ ಪದಕ್ಕೆ  ; ಈ ಸಂಬಂಧವನ್ನು ಬೇಕಾಬಿಟ್ಟಿ ಬಳಸಿದ ಬಿಗ್ ಬಾಸ್ ಸ್ಪರ್ಧಿಗಳು
Entertainment
ಅಣ್ಣ ಪದಕ್ಕೆ ; ಈ ಸಂಬಂಧವನ್ನು ಬೇಕಾಬಿಟ್ಟಿ ಬಳಸಿದ ಬಿಗ್ ಬಾಸ್ ಸ್ಪರ್ಧಿಗಳು

ಬಿಗ್ ಬಾಸ್ ಮನೆಯಲ್ಲಿ 'ಅಣ್ಣ' ಪದದ ದುರುಪಯೋಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ರಾಶಿಕಾ ಸೂರಜ್ ಅವರನ್ನು 'ಅಣ್ಣ' ಎನ್ನುವುದು ಮತ್ತು ಕಾವ್ಯಾ ಗಿಲ್ಲಿಯನ್ನು ಅಣಕಿಸಲು ಈ ಪದ ಬಳಸುತ್ತಿರುವುದು ಈ ಪವಿತ್ರ ಸಂಬಂಧದ ಮಹತ್ವವನ್ನು ಕಡಿಮೆ ಮಾಡುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ವೀಕ್ಷಕರು ಸ್ಪರ್ಧಿಗಳ ಇಂತಹ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದು, ಪದದ ಬಳಕೆಯಲ್ಲಿ ಎಚ್ಚರಿಕೆ ಅಗತ್ಯ ಎಂದು ಒತ್ತಾಯಿಸಿದ್ದಾರೆ.

2025-11-18

ಕಾನೂನಿಗಿಂತ ಯಾರೂ ದೊಡ್ಡವರಲ್ಲ: ಮುಹಮ್ಮದ್ ಯೂನಿಸ್
Breaking News
ಕಾನೂನಿಗಿಂತ ಯಾರೂ ದೊಡ್ಡವರಲ್ಲ: ಮುಹಮ್ಮದ್ ಯೂನಿಸ್

ಮಾಜಿ ಪ್ರಧಾನಿ ಶೇಖ್ ಹಸೀನಾ ಮತ್ತು ದೇಶದ ಮಾಜಿ ಗೃಹ ಸಚಿವ ಅಸದುಜ್ಜಮಾನ್ ಖಾನ್ ಕಮಲ್ ಅವರನ್ನು ತಕ್ಷಣವೇ ಗಡೀಪಾರು ಮಾಡುವಂತೆ, ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯ ಸೋಮವಾರ ಭಾರತಕ್ಕೆ ಮನವಿ ಮಾಡಿದೆ.

2025-11-18

ಆರ್ಯವೀರ್ ಸೆಹ್ವಾಗ್ ಸಿಡಿಲಬ್ಬರ ದೆಹಲಿ ತಂಡಕ್ಕೆ ಭರ್ಜರಿ ಜಯ
Sports
ಆರ್ಯವೀರ್ ಸೆಹ್ವಾಗ್ ಸಿಡಿಲಬ್ಬರ ದೆಹಲಿ ತಂಡಕ್ಕೆ ಭರ್ಜರಿ ಜಯ

Aaryavir Sehwag: ಭಾರತ ತಂಡದ ಮಾಜಿ ಆರಂಭಿಕ ದಾಂಡಿಗ ವೀರೇಂದ್ರ ಸೆಹ್ವಾಗ್ ಅವರ ಸುಪುತ್ರ ಆರ್ಯವೀರ್ ಸೆಹ್ವಾಗ್ ಈಗಾಗಲೇ ಡೆಲ್ಲಿ ಪ್ರೀಮಿಯರ್ ಲೀಗ್ನಲ್ಲಿ ಪಾದಾರ್ಪಣೆ ಮಾಡಿದ್ದಾರೆ. ಇದೀಗ ಅಂಡರ್-19 ಆಟಗಾರರ ಕೂಚ್ ಬೆಹಾರ್ ಟೂರ್ನಿಯಲ್ಲೂ ಕಣಕ್ಕಿಳಿಯುವ ಮೂಲಕ ಭರ್ಜರಿ ಪ್ರದರ್ಶನ ನೀಡಿದ್ದಾರೆ.

2025-11-18

ಸುಳ್ವಾಡಿ ವಿಷ ಪ್ರಸಾದ ದುರಂತ: ಜಾಮೀನು ಹಿನ್ನೆಲೆ ಕೋರ್ಟ್ಗೆ ಹಾಜರಾದ ಇಮ್ಮಡಿ ಮಹಾದೇವಸ್ವಾಮಿ
Trending
ಸುಳ್ವಾಡಿ ವಿಷ ಪ್ರಸಾದ ದುರಂತ: ಜಾಮೀನು ಹಿನ್ನೆಲೆ ಕೋರ್ಟ್ಗೆ ಹಾಜರಾದ ಇಮ್ಮಡಿ ಮಹಾದೇವಸ್ವಾಮಿ

ಸುಳ್ವಾಡಿ ವಿಷ ಪ್ರಸಾದ ದುರಂತ ಪ್ರಕರಣದ ಆರೋಪಿ ಇಮ್ಮಡಿ ಮಹಾದೇವಸ್ವಾಮಿ ಜಾಮೀನಿನ ಮೇಲೆ ಸೋಮವಾರ ಮೈಸೂರು ಜೈಲಿನಿಂದ ಬಿಡುಗಡೆಯಾಗಿದ್ದಾರೆ.

2025-11-18

ಅಡ್ಡಾದಿಡ್ಡಿ ಸ್ಕೂಟಿ ಚಾಲನೆ; ಪ್ರಶ್ನಿಸಿದ ಬೈಕ್ ಸವಾರನಿಗೆ ಚಾಕು ಇರಿದ ಲೇಡಿ ಟೆಕ್ಕಿ
Breaking News
ಅಡ್ಡಾದಿಡ್ಡಿ ಸ್ಕೂಟಿ ಚಾಲನೆ; ಪ್ರಶ್ನಿಸಿದ ಬೈಕ್ ಸವಾರನಿಗೆ ಚಾಕು ಇರಿದ ಲೇಡಿ ಟೆಕ್ಕಿ

ಓರ್ವ ಮಹಿಳಾ ಟೆಕ್ಕಿ ಹೈವೇಯಲ್ಲಿ ಅಡ್ಡಾದಿಡ್ಡಿಯಾಗಿ ಸ್ಕೂಟಿ ಚಲಾಯಿಸಿದ್ದು, ಇದನ್ನ ಕಂಡ ಯುವಕರು ಯಾಕಮ್ಮ ಹಂಗೆ ಓಡಿಸ್ತೀಯಾ, ಸರಿಯಾಗಿ ಓಡಿಸೋಕೆ ಆಗಲ್ವಾ ಅಂತ ಪ್ರಶ್ನಿಸಿದ್ದಾರೆ. ಬುದ್ದಿವಾದ ಹೇಳಿದ ಬೈಕ್ ಸವಾರರಿಗೆ ಆ ಮಹಿಳಾ ಟೆಕ್ಕಿ ಮಾಡಿದ್ದೇನು ಗೊತ್ತಾ? ಈ ಸ್ಟೋರಿ ಓದಿ.

2025-11-18

ಬೆಂಗಳೂರಿನಂತೆ ಮೈಸೂರು ಬದಲಾಗುತ್ತಿದೆ  ಹೊಸ ಚರ್ಚೆಗೆ ನಾಂದಿ ಹಾಡಿದ “ಮೈಸೂರು ಹೊರವಲಯ
Breaking News
ಬೆಂಗಳೂರಿನಂತೆ ಮೈಸೂರು ಬದಲಾಗುತ್ತಿದೆ ಹೊಸ ಚರ್ಚೆಗೆ ನಾಂದಿ ಹಾಡಿದ “ಮೈಸೂರು ಹೊರವಲಯ

ಮೈಸೂರು ಬೆಂಗಳೂರಿನಂತೆ ಬದಲಾಗುತ್ತಿದೆಯೇ ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ. ನೆಟ್ಟಿಗರು ಮೈಸೂರಿನ ಮೂಲ ಸಂಸ್ಕೃತಿ, ಭಾಷೆ ನಶಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಹೊರ ರಾಜ್ಯದ ವಲಸಿಗರ ಹೆಚ್ಚಳ ಮತ್ತು ರಿಯಲ್ ಎಸ್ಟೇಟ್ ಹೂಡಿಕೆ ಇದಕ್ಕೆ ಕಾರಣ ಎಂದು ಕೆಲವರು ಹೇಳುತ್ತಿದ್ದಾರೆ. ಮೈಸೂರು ಹೊರವಲಯವಾಗುವ ಕುರಿತು ತೀವ್ರ ಚರ್ಚೆ ಸೃಷ್ಟಿಸಿದೆ.

2025-11-18

ಭಾರತದ ಅತ್ಯಂತ ವಿಶ್ವಾಸಾರ್ಹ ಹೂಡಿಕೆಯ ತಾಣ ಕರ್ನಾಟಕ: ಮುಖ್ಯಮಂತ್ರಿ ಸಿದ್ದರಾಮಯ್ಯ
Breaking News
ಭಾರತದ ಅತ್ಯಂತ ವಿಶ್ವಾಸಾರ್ಹ ಹೂಡಿಕೆಯ ತಾಣ ಕರ್ನಾಟಕ: ಮುಖ್ಯಮಂತ್ರಿ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ ಅವರು ರಾಜ್ಯವು ದೇಶದ ಅತ್ಯಂತ ವಿಶ್ವಾಸಾರ್ಹ ಹೂಡಿಕೆಯ ತಾಣವಾಗಿದೆ ಎಂದು ಹೇಳಿದರು.

2025-11-18

ಭಯೋತ್ಪಾದನೆ ಬಗ್ಗೆ   SCO ಶೃಂಗಸಭೆಯಲ್ಲಿ ಸಚಿವ ಜೈಶಂಕರ್ ಸಂದೇಶ
Breaking News
ಭಯೋತ್ಪಾದನೆ ಬಗ್ಗೆ SCO ಶೃಂಗಸಭೆಯಲ್ಲಿ ಸಚಿವ ಜೈಶಂಕರ್ ಸಂದೇಶ

ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಇಂದು ರಷ್ಯಾದಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (ಎಸ್ಸಿಒ) ಶೃಂಗಸಭೆಯಲ್ಲಿ ಭಯೋತ್ಪಾದನೆಯ ಬಗ್ಗೆ ದೃಢವಾದ ಸಂದೇಶವನ್ನು ನೀಡಿದ್ದಾರೆ. ಅಂತಾರಾಷ್ಟ್ರೀಯ ಸಮುದಾಯವು ಅದರ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳಲ್ಲಿನ ಬೆದರಿಕೆಗೆ ಶೂನ್ಯ ಸಹಿಷ್ಣುತೆಯನ್ನು ಅಳವಡಿಸಿಕೊಳ್ಳಬೇಕು ಎಂದು ಒತ್ತಿ ಹೇಳಿದ್ದಾರೆ. ದೆಹಲಿಯಲ್ಲಿ ನಡೆದ ಭಯೋತ್ಪಾದಕ ದಾಳಿಯ ಬೆನ್ನಲ್ಲೇ ಜೈಶಂಕರ್ ಈ ಹೇಳಿಕೆ ನೀಡಿದ್ದಾರೆ.

2025-11-18

ಮೈಸೂರು: ರೈತನ ಬಲಿ ಪಡೆದ ಹುಲಿ ಸೇರಿ 32 ದಿನಗಳಲ್ಲಿ 15 ಹುಲಿಗಳ ಸೆರೆ
Breaking News
ಮೈಸೂರು: ರೈತನ ಬಲಿ ಪಡೆದ ಹುಲಿ ಸೇರಿ 32 ದಿನಗಳಲ್ಲಿ 15 ಹುಲಿಗಳ ಸೆರೆ

ಕಳೆದ 32 ದಿನಗಳಲ್ಲಿ 7 ದೊಡ್ಡ ಹುಲಿಗಳು ಹಾಗೂ 8 ಮರಿಗಳನ್ನು ಸೆರೆಹಿಡಿಯಲಾಗಿದೆ ಎಂದು ಡಿಸಿಎಫ್ ಪರಮೇಶ್ವರ್ ಮಾಹಿತಿ ನೀಡಿದರು.

2025-11-18

ಕೊಪ್ಪಳ: ಮಹಿಳೆಯ ಮೇಲೆ ಗ್ಯಾಂಗ್ ರೇಪ್ ಆರೋಪ
Breaking News
ಕೊಪ್ಪಳ: ಮಹಿಳೆಯ ಮೇಲೆ ಗ್ಯಾಂಗ್ ರೇಪ್ ಆರೋಪ

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮದ್ಲೂರ ಗ್ರಾಮದ ಬಳಿ ಮಹಿಳೆಯೊಬ್ಬರ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರವೆಸಗಿರುವ ಆರೋಪ ಕೇಳಿಬಂದಿದೆ.

2025-11-18

ತಿರುಪತಿಯ ವೈಕುಂಠ ದ್ವಾರ ದರ್ಶನಕ್ಕೆ ಆನ್ಲೈನ್ನಲ್ಲಿ ಮಾತ್ರ ಟಿಕೆಟ್
Breaking News
ತಿರುಪತಿಯ ವೈಕುಂಠ ದ್ವಾರ ದರ್ಶನಕ್ಕೆ ಆನ್ಲೈನ್ನಲ್ಲಿ ಮಾತ್ರ ಟಿಕೆಟ್

ತಿರುಮಲ ತಿರುಪತಿ ದೇವಸ್ಥಾನಗಳು ವೈಕುಂಠ ಏಕಾದಶಿ 2026ರ ದರ್ಶನದ ವೇಳಾಪಟ್ಟಿಯನ್ನು ದೃಢಪಡಿಸಿದ್ದು, ವರ್ಷಾಂತ್ಯದ ಭಾರೀ ಜನದಟ್ಟಣೆಯನ್ನು ನಿರ್ವಹಿಸಲು ಸ್ಪಷ್ಟ ವ್ಯವಸ್ಥೆಗಳನ್ನು ಮಾಡಿದೆ. ಮೊದಲ 3 ದಿನಗಳಲ್ಲಿ ಆನ್ಲೈನ್ ಇ-ಡಿಪ್ ಟೋಕನ್ ಹೊಂದಿರುವವರಿಗೆ ಮಾತ್ರ ವೈಕುಂಠ ದ್ವಾರ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ದೇವಾಲಯ ಮಂಡಳಿ ಘೋಷಿಸಿದೆ. ಸಾಮಾನ್ಯ ಭಕ್ತರಿಗೆ ಆದ್ಯತೆ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ.

2025-11-18

ಮಂಡ್ಯ: ನಾಲೆಯಲ್ಲಿ ಸಿಲುಕಿದ್ದ ಕಾಡಾನೆ ರಕ್ಷಣೆ
Breaking News
ಮಂಡ್ಯ: ನಾಲೆಯಲ್ಲಿ ಸಿಲುಕಿದ್ದ ಕಾಡಾನೆ ರಕ್ಷಣೆ

ಕೆನಾಲ್ಗೆ ಇಳಿದು ಸಂಕಷ್ಟಕ್ಕೆ ಸಿಲುಕಿದ್ದ ಕಾಡಾನೆಯನ್ನು ಸತತ ಕಾರ್ಯಾಚರಣೆ ಬಳಿಕ ಅರಣ್ಯಾಧಿಕಾರಿಗಳು ಮೇಲೆತ್ತಿದ್ದಾರೆ.

2025-11-18

IPL 2026: ತಂಡದ ನಾಯಕನನ್ನು ಘೋಷಿಸಿದ SRH
Sports
IPL 2026: ತಂಡದ ನಾಯಕನನ್ನು ಘೋಷಿಸಿದ SRH

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 19ನೇ ಆವೃತ್ತಿಯ ಮಿನಿ ಹರಾಜಿಗೂ ಮುನ್ನ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಒಟ್ಟು 15 ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಅಲ್ಲದೆ 7 ಆಟಗಾರರನ್ನು ರಿಲೀಸ್ ಮಾಡಿರುವ ಎಸ್ಆರ್ಹೆಚ್ ಮೊಹಮ್ಮದ್ ಶಮಿ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಮಾರಾಟ ಮಾಡಿದ್ದಾರೆ.

2025-11-18

ಸೌದಿಯಲ್ಲಿ 42 ಭಾರತೀಯ ಯಾತ್ರಿಕರ ಸಾವಿಗೆ ಪ್ರಧಾನಿ ಮೋದಿ ಸಂತಾಪ
Breaking News
ಸೌದಿಯಲ್ಲಿ 42 ಭಾರತೀಯ ಯಾತ್ರಿಕರ ಸಾವಿಗೆ ಪ್ರಧಾನಿ ಮೋದಿ ಸಂತಾಪ

ಇಂದು ಮುಂಜಾನೆ ಮೆಕ್ಕಾದಿಂದ ಮದೀನಾಗೆ ಪ್ರಯಾಣಿಸುತ್ತಿದ್ದ ಬಸ್ ಸೌದಿ ಅರೇಬಿಯಾದ ಮುಫ್ರಿಹತ್ ಬಳಿ ಡೀಸೆಲ್ ಟ್ಯಾಂಕರ್ಗೆ ಡಿಕ್ಕಿ ಹೊಡೆದ ಪರಿಣಾಮ ಹೈದರಾಬಾದ್ನ ಕನಿಷ್ಠ 42 ಭಾರತೀಯ ಉಮ್ರಾ ಯಾತ್ರಿಕರು ಸಾವನ್ನಪ್ಪಿದ್ದರು. ಈ ಅಪಘಾತದ ಪರಿಣಾಮ ತೀವ್ರವಾಗಿದ್ದು, ಹಲವಾರು ಪ್ರಯಾಣಿಕರು ಸಾವನ್ನಪ್ಪಿದ್ದರು ಮತ್ತು ಹಲವಾರು ಜನರು ಗಾಯಗೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿ ಈ ಘಟನೆಗೆ ಸಂತಾಪ ಸೂಚಿಸಿದ್ದಾರೆ.

2025-11-17

ಇಂದು ನಿತೀಶ್ ಕುಮಾರ್ ರಾಜೀನಾಮೆ ಸಾಧ್ಯತೆ, ಬಿಹಾರದಲ್ಲಿ ನ. 20ರಂದು ಹೊಸ ಸರ್ಕಾರ ರಚನೆ
Breaking News
ಇಂದು ನಿತೀಶ್ ಕುಮಾರ್ ರಾಜೀನಾಮೆ ಸಾಧ್ಯತೆ, ಬಿಹಾರದಲ್ಲಿ ನ. 20ರಂದು ಹೊಸ ಸರ್ಕಾರ ರಚನೆ

ಇಂದು ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ನೀಡಲಿದ್ದಾರೆ. ಇದೇ 20ನೇ ತಾರೀಕು ಬಿಹಾರದಲ್ಲಿ ಹೊಸ ಸರ್ಕಾರ ರಚನೆಯಾಗುವ ಸಾಧ್ಯತೆ ಇದೆ. ಬಿಹಾರದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆ( Assembly Election)ಯಲ್ಲಿ ಎನ್ಡಿಎ ಬಹುಮತ ಪಡೆದಿದೆ. ಇಂದು ನಿತೀಶ್ ಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದು, ನವೆಂಬರ್ 20ರಂದು ಹೊಸ ಸರ್ಕಾರ ರಚನೆಯಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬಿಹಾರದಲ್ಲಿ ಹೊಸ ಸರ್ಕಾರ ರಚಿಸುವ ಪ್ರಕ್ರಿಯೆ ಇಂದು ಆರಂಭವಾಗಲಿದೆ. ನಿರ್ಗಮಿತ ಸಚಿವ ಸಂಪುಟ ಇಂದು ತನ್ನ ಅಂತಿಮ ಸಭೆಯನ್ನು ನಡೆಸಲಿದ್ದು, ಈ ದಿಕ್ಕಿನಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಖಂಡಿತವಾಗಿಯೂ ಅಧಿಕಾರ ನೀಡಲಾಗುವುದು.

2025-11-17

ಅಕ್ರಮ ಸಂಬಂಧದ ಕಥೆ ಹಾಟ್ಸ್ಟಾರ್ನಲ್ಲಿರೋ ಈ ಮಲಯಾಳಂ ಸಿನಿಮಾನ ಮಿಸ್ ಮಾಡಬೇಡಿ
Entertainment
ಅಕ್ರಮ ಸಂಬಂಧದ ಕಥೆ ಹಾಟ್ಸ್ಟಾರ್ನಲ್ಲಿರೋ ಈ ಮಲಯಾಳಂ ಸಿನಿಮಾನ ಮಿಸ್ ಮಾಡಬೇಡಿ

ಮಲಯಾಳಂ ಸಿನಿಮಾ 'ಅವಿಹಿತಮ್' ಈಗ OTTಗೆ ಲಗ್ಗೆ ಇಟ್ಟಿದೆ. ಸೆನ್ನಾ ಹೆಗ್ಡೆ ನಿರ್ದೇಶನದ ಈ ಚಿತ್ರ ಹಳ್ಳಿಯೊಂದರಲ್ಲಿ ನಡೆಯುವ ಅಕ್ರಮ ಸಂಬಂಧದ ಕಥೆ ಹೇಳುತ್ತದೆ. ಅಕ್ಟೋಬರ್ 9ರಂದು ಥಿಯೇಟರ್ನಲ್ಲಿ ರಿಲೀಸ್ ಆಗಿದ್ದ ಸಿನಿಮಾ ಈಗ Jio Hotstar ನಲ್ಲಿ ಲಭ್ಯವಿದೆ. ಕಥೆಯೊಂದು ಶುರುವಾಗಿದೆ ಖ್ಯಾತಿಯ ಸೆನ್ನಾ ಹೆಗ್ಡೆ ನಿರ್ದೇಶನದಲ್ಲಿ ಮೂಡಿಬಂದಿರುವ ಸಿನಿಮಾದಲ್ಲಿ, ಹಾಸ್ಯ ಮತ್ತು ಸಂದೇಶ ಇದೆ.

2025-11-17

ನೀವು ನನ್ನ ಅಣ್ಣನಾಗಲೂ ಅರ್ಹನೇ ಅಲ್ಲ ಸುದೀಪ್ ಎದುರೇ ಧ್ರುವಂತ್ಗೆ ರಕ್ಷಿತಾ ಆವಾಜ್
Entertainment
ನೀವು ನನ್ನ ಅಣ್ಣನಾಗಲೂ ಅರ್ಹನೇ ಅಲ್ಲ ಸುದೀಪ್ ಎದುರೇ ಧ್ರುವಂತ್ಗೆ ರಕ್ಷಿತಾ ಆವಾಜ್

ಬಿಗ್ ಬಾಸ್ ಕನ್ನಡ ಮನೆಯಲ್ಲಿ ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್ ನಡುವೆ ತೀವ್ರ ವೈಮನಸ್ಸು ಏರ್ಪಟ್ಟಿದೆ. ಧ್ರುವಂತ್ ತಮ್ಮನ್ನು ಅನುಕರಿಸಿ ಟೀಕಿಸಿದ್ದಕ್ಕೆ ರಕ್ಷಿತಾ ಬೇಸರ ವ್ಯಕ್ತಪಡಿಸಿದ್ದಾರೆ. 'ನಂಬಿಸಿ ಮೋಸ ಮಾಡಿದವರು' ಟಾಸ್ಕ್ನಲ್ಲಿ, ರಕ್ಷಿತಾ ಧ್ರುವಂತ್ ಹೆಸರನ್ನು ತೆಗೆದುಕೊಂಡರು. ಮಲ್ಲಮ್ಮ ಎಲಿಮಿನೇಷನ್ಗೆ ಧ್ರುವಂತ್ 80% ಕಾರಣ ಎಂದು ಆರೋಪಿಸಿದರು.

2025-11-17

ರಾಮನಗರ: ಸರ್ಕಾರಿ ಜಾಗದಲ್ಲಿ ಏಕಾಏಕಿ ಕೆಂಪೇಗೌಡ ಪ್ರತಿಮೆ ನಿರ್ಮಾಣ
Breaking News
ರಾಮನಗರ: ಸರ್ಕಾರಿ ಜಾಗದಲ್ಲಿ ಏಕಾಏಕಿ ಕೆಂಪೇಗೌಡ ಪ್ರತಿಮೆ ನಿರ್ಮಾಣ

ರಾಮನಗರದ ಬೈರಮಂಗಲದಲ್ಲಿ ಸರ್ಕಾರಿ ಜಾಗದಲ್ಲಿ ಅನುಮತಿಯಿಲ್ಲದೆ ಕೆಂಪೇಗೌಡರ ಪ್ರತಿಮೆ ನಿರ್ಮಿಸಲಾಗಿದೆ. ಈ ಹಿನ್ನೆಲೆ ರೈತ ಸಂಘಟನೆಗಳು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಈ ಹಿಂದೆ ಅದೇ ಸ್ಥಳದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ದಲಿತ ಸಂಘಟನೆಗಳು ಮನವಿ ಮಾಡಿದ್ದವು. ಈಗ ದಲಿತ ಸಂಘಟನೆಗಳು ಕೆಂಪೇಗೌಡರ ಪ್ರತಿಮೆ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

2025-11-17

ಇದು ಕರ್ನಾಟಕದಲ್ಲೇ ಅತಿದೊಡ್ಡ ಡಿಜಿಟಲ್ ಅರೆಸ್ಟ್ ಪ್ರಕರಣ
Breaking News
ಇದು ಕರ್ನಾಟಕದಲ್ಲೇ ಅತಿದೊಡ್ಡ ಡಿಜಿಟಲ್ ಅರೆಸ್ಟ್ ಪ್ರಕರಣ

ಬೆಂಗಳೂರಿನ ಮಹಿಳಾ ಟೆಕ್ಕಿಯೊಬ್ಬರು ಡಿಜಿಟಲ್ ಅರೆಸ್ಟ್ ಸೈಬರ್ ವಂಚನೆಗೆ ಬರೋಬ್ಬರಿ 31.83 ಕೋಟಿ ರೂ. ಕಳೆದುಕೊಂಡಿದ್ದಾರೆ. ಕರ್ನಾಟಕದಲ್ಲಿ ಈವರೆಗೆ ದಾಖಲಾದ ಪ್ರಕರಣಗಳಲ್ಲೇ ಇದು ಗರಿಷ್ಠ ಮೊತ್ತದ ಹಣ ಕಳೆದುಕೊಂಡ ಪ್ರಕರಣವಾಗಿದೆ. ಕೊರಿಯರ್ ಕಂಪನಿ ಹಾಗೂ ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ವಂಚಕರು ಮಹಿಳೆಯನ್ನು ಮೋಸಗೊಳಿಸಿ, ಭಯ ಹುಟ್ಟಿಸಿ ಆರು ತಿಂಗಳ ಕಾಲ ಹಣ ವರ್ಗಾಯಿಸುವಂತೆ ಮಾಡಿದ್ದಾರೆ. ಘಟನೆಯ ವಿವರ ಇಲ್ಲಿದೆ.

2025-11-17

ಇಂದಿನಿಂದ ಶುರು ಐತಿಹಾಸಿಕ ಕಡಲೆಕಾಯಿ ಪರಿಷೆ
Breaking News
ಇಂದಿನಿಂದ ಶುರು ಐತಿಹಾಸಿಕ ಕಡಲೆಕಾಯಿ ಪರಿಷೆ

ಬಸವನಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ಇಂದಿನ ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ಆರಂಭವಾಗಲಿದ್ದು, ದೊಡ್ಡ ಬಸವಣ್ಣನ ದೇಗುಲದಲ್ಲಿ ಅಭಿಷೇಕದೊಂದಿಗೆ ಚಾಲನೆ ಪಡೆಯಲಿದೆ. ಈ ವರ್ಷ ಐದು ದಿನಗಳ ಕಾಲ ನಡೆಯಲಿರುವ ಈ ಜಾತ್ರೆಯು ಪ್ಲಾಸ್ಟಿಕ್ ಮುಕ್ತವಾಗಿದ್ದು, ಲಕ್ಷಾಂತರ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದೆ. ನೆರೆ ರಾಜ್ಯಗಳಿಂದಲೂ ವ್ಯಾಪಾರಿಗಳು ಆಗಮಿಸಿದ್ದು, ಬಸವನಗುಡಿ ಹಬ್ಬದ ವಾತಾವರಣದಿಂದ ಕಂಗೊಳಿಸುತ್ತಿದೆ.

2025-11-17

ದೆಹಲಿಯಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪವರ್ ಪ್ಲೇ  ಇಂದು ಸಿಎಂ ಮತ್ತೆ ದೆಹಲಿಗೆ
Trending
ದೆಹಲಿಯಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪವರ್ ಪ್ಲೇ ಇಂದು ಸಿಎಂ ಮತ್ತೆ ದೆಹಲಿಗೆ

ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ನವೆಂಬರ್ ಕ್ರಾಂತಿ ಆಗಲಿದೆ ಎಂದು ಕೆಲವು ನಾಯಕರು ಭವಿಷ್ಯ ಹೇಳುತ್ತಿದ್ದರು. ನವೆಂಬರ್ ಅರ್ಧ ತಿಂಗಳು ಮುಗಿದಿದೆ. ಬಿಹಾರ ಫಲಿತಾಂಶವೂ ಬಂದಿದೆ. ಇದೀಗ ದೆಹಲಿಯಲ್ಲಿ ಕ್ರಾಂತಿಗೆ ತಾಲೀಮು ಶುರುವಾದಂತೆ ಕಾಣಿಸುತ್ತಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ದೆಹಲಿ ಪವರ್ ಪ್ಲೇ ಶುರುವಾಗಿದೆ.

2025-11-17

ರಾಜ್ಯದ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆ
Trending
ರಾಜ್ಯದ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆ

Karnataka Weather: ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಇಂದು ಲಘು ಮಳೆಯಾಗುವ ಮುನ್ಸೂಚನೆಯಿದ್ದು, ಕರಾವಳಿಯ ಜಿಲ್ಲೆಗಳಲ್ಲಿ ಮತ್ತುಉತ್ತರ ಒಳನಾಡು ಪ್ರದೇಶಗಳಲ್ಲಿ ಒಣ ಹವೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜಧಾನಿ ಬೆಂಗಳೂರಲ್ಲಿ ಮೋಡಕವಿದ ವಾತಾವರಣದ ಸಾಧ್ಯತೆ ಇದ್ದರೆ, ರಾಜ್ಯದಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

2025-11-17

ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಮೆಟ್ರೋ ಯೋಜನೆ ಡಿಪಿಆರ್ಗೆ ಬಿಡ್ ಕರೆದ ಬಿಎಂಆರ್ ಸಿಎಲ್
Breaking News
ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಮೆಟ್ರೋ ಯೋಜನೆ ಡಿಪಿಆರ್ಗೆ ಬಿಡ್ ಕರೆದ ಬಿಎಂಆರ್ ಸಿಎಲ್

Namma Metro: ನಮ್ಮ ಮೆಟ್ರೋ ಬೆಂಗಳೂರಿನಿಂದ ತುಮಕೂರುವರೆಗೆ ಅಂತರಜಿಲ್ಲೆ ಸಂಪರ್ಕ ವಿಸ್ತರಣೆಗೆ ಹೆಜ್ಜೆ ಇಟ್ಟಿದೆ. ಬಿಎಂಆರ್ಸಿಎಲ್ 59.6 ಕಿಮೀ ಹಸಿರು ಮಾರ್ಗ ವಿಸ್ತರಣೆಯ ವಿಸ್ತ್ರತ ಯೋಜನಾ ವರದಿ (DPR) ತಯಾರಿಸಲು ಬಿಡ್ ಆಹ್ವಾನಿಸಿದೆ. ಪಿಪಿಪಿ ಮಾದರಿಯಲ್ಲಿ 20,649 ಕೋಟಿ ರೂ. ವೆಚ್ಚದಲ್ಲಿ ಹಮ್ಮಿಯೊಕೊಳ್ಳಲಾದ ಈ ಯೋಜನೆಗೆ ನವೆಂಬರ್ 20ರವರೆಗೆ ಬಿಡ್ ಸಲ್ಲಿಸಲು ಗಡುವು ನೀಡಲಾಗಿದೆ.

2025-11-17

ಬೆಂಗಳೂರು: ಶಾಂತಿ ನಗರದಲ್ಲಿ ವ್ಯಕ್ತಿಯ ಅಡ್ಡಗಟ್ಟಿ ದರೋಡೆ
Breaking News
ಬೆಂಗಳೂರು: ಶಾಂತಿ ನಗರದಲ್ಲಿ ವ್ಯಕ್ತಿಯ ಅಡ್ಡಗಟ್ಟಿ ದರೋಡೆ

ಸ್ಕೂಟಿಯಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರನ್ನು ದ್ವಿಚಕ್ರ ವಾಹನದಲ್ಲಿ ಬಂದ ಮೂವರು ಆಗಂತುಕರು ಅಡ್ಡಗಟ್ಟಿ ದರೋಡೆ ಮಾಡಿದ ಘಟನೆ ಬೆಂಗಳೂರಿನ ಶಾಂತಿನಗರದಲ್ಲಿ ನಡೆದಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಯನ್ನು ಸಂಸದ ಪಿಸಿ ಮೋಹನ್ ಎಕ್ಸ್ನಲ್ಲಿ ಹಂಚಿಕೊಂಡಿದ್ದು ಈಗ ವೈರಲ್ ಆಗುತ್ತಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ ವ್ಯಕ್ತವಾಗಿದೆ.

2025-11-17

ನಮಗೆ ಮನೆಯ ಮುಂದೆ ಆಟವಾಡಲು ಸಾಧ್ಯವಾಗುತ್ತಿಲ್ಲ ಪ್ರಧಾನಿಗೆ ಪತ್ರ ಬರೆದ 8 ನೇ ತರಗತಿ ಬಾಲಕ
Breaking News
ನಮಗೆ ಮನೆಯ ಮುಂದೆ ಆಟವಾಡಲು ಸಾಧ್ಯವಾಗುತ್ತಿಲ್ಲ ಪ್ರಧಾನಿಗೆ ಪತ್ರ ಬರೆದ 8 ನೇ ತರಗತಿ ಬಾಲಕ

ಗದಗ ಜಿಲ್ಲೆಯ ಬೆಟಗೇರಿಯಲ್ಲಿ ಹಲವು ವರ್ಷಗಳಿಂದ ಮೂಲಸೌಕರ್ಯಗಳ ಕೊರತೆ ತೀವ್ರವಾಗಿದೆ. ಹದಗೆಟ್ಟ ರಸ್ತೆ, ಚರಂಡಿ ಹಾಗೂ ಕುಡಿಯುವ ನೀರಿನ ಸಮಸ್ಯೆಯಿಂದ ಗ್ರಾಮಸ್ಥರು ನರಳುತ್ತಿದ್ದಾರೆ. ನಗರಸಭೆಯ ನಿರ್ಲಕ್ಷ್ಯದ ಬಗ್ಗೆ 8ನೇ ತರಗತಿಯ ವಿದ್ಯಾರ್ಥಿ ಸಾಯಿರಾಮ್ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾನೆ. ಸಮಸ್ಯೆ ಪರಿಹಾರಕ್ಕೆ ಪ್ರಧಾನಿ ಸ್ಪಂದಿಸುತ್ತಾರೆಂಬ ಭರವಸೆಯಲ್ಲಿ ಗ್ರಾಮಸ್ಥರಿದ್ದಾರೆ.

2025-11-17

Advertisement

logo

HSRNEWS

ತ್ವರಿತ ಸುದ್ದಿ. ಅನಂತ ಒಳನೋಟಗಳು
ADS

© gokakica.in. All Rights Reserved. Designed by Image Computer Academy