ಬೆಂಗಳೂರು-ಕೊಚ್ಚಿ ವಂದೇ ಭಾರತ್ ಎಕ್ಸ್ಪ್ರೆಸ್ನ ಅಧಿಕೃತ ವೇಳಾಪಟ್ಟಿಯನ್ನು ಭಾರತೀಯ ರೈಲ್ವೆ ಸಚಿವಾಲಯ ಬಿಡುಗಡೆ ಮಾಡಿದೆ. ಈ ಹೊಸ ಅತಿವೇಗದ ರೈಲು ಕರ್ನಾಟಕ ಮತ್ತು ಕೇರಳ ನಡುವಿನ ಸಂಪರ್ಕವನ್ನು ಬಲಪಡಿಸುತ್ತದೆ. ಇದು ನವೆಂಬರ್ ಮಧ್ಯಭಾಗದಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ, ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಬೆಂಗಳೂರಿನಿಂದ ಬೆಳಿಗ್ಗೆ 5:10 ಕ್ಕೆ ಹೊರಟು ಮಧ್ಯಾಹ್ನ 1:50 ಕ್ಕೆ ಎರ್ನಾಕುಲಂ ತಲುಪಲಿದೆ. ಇದು ದಕ್ಷಿಣ ಭಾರತದ ಪ್ರಯಾಣಿಕರಿಗೆ ಅನುಕೂಲಕರವಾಗಿದೆ.
2025-11-02
ಮಳೆಯಿಂದಾಗಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮಹಿಳಾ ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ಟಾಸ್ ವಿಳಂಬವಾಗಿದೆ.
2025-11-02
ಮದುವೆ ಆಗುವಂತೆ ಒತ್ತಾಯಿಸಿದ್ದಕ್ಕೆ ಮಹಿಳೆಗೆ 8 ಬಾರಿ ಚಾಕು ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅ. 31ರ ರಾತ್ರಿ 9.30 ಕ್ಕೆ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಇತ್ತ ಬೆಳಗಾವಿಯಲ್ಲಿ ರಾಜ್ಯೋತ್ಸವ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಯುವಕನಿಗೆ ದುಷ್ಕರ್ಮಿಗಳು ಚಾಕು ಇರಿದಿದ್ದಾರೆ.
2025-11-02
ಐಸಿಸಿ ಮಹಿಳಾ ವಿಶ್ವಕಪ್ 2025ರ ಫೈನಲ್ನಲ್ಲಿಂದು ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಚಾಂಪಿಯನ್ ಆಗಲು ಉತ್ಸುಕವಾಗಿದೆ. ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಅವರ ಹಿನ್ನೆಲೆ, ಕ್ರಿಕೆಟ್ ಬದುಕಿನ ಕುರಿತಾದ ವರದಿ ಇಲ್ಲಿದೆ.
2025-11-02
ಕಲಬುರಗಿಯಲ್ಲಿ ಉದ್ಯಮಿಯೊಬ್ಬರಿಗೆ ಕೇಂದ್ರ ಸರ್ಕಾರದ ಸಬ್ಸಿಡಿ ಹಣದ ಆಸೆ ತೋರಿಸಿ ವಂಚಿಸಲಾಗಿದೆ. ಖತರ್ನಾಕ್ ಗ್ಯಾಂಗ್ ಮಾತು ನಂಬಿ ಕೋಟಿ ಕೋಟಿ ಬೆಲೆ ಬಾಳುವ ಆಸ್ತಿಯನ್ನ ಬ್ಯಾಂಕ್ನಲ್ಲಿ ಅಡವಿಟ್ಟಿದ್ದ ಕುಟುಂಬ ಬೀದಿಗೆ ಬಂದಿದ್ದು, ವಂಚನೆಯಲ್ಲಿ ಬ್ಯಾಂಕ್ ಅಧಿಕಾರಿಗಳ ಶಾಮೀಲಾತಿಯ ಬಗ್ಗೆಯೂ ಕುಟುಂಬಸ್ಥರು ಆರೋಪಿಸಿದ್ದಾರೆ.
2025-11-02
ಶಾರುಖ್ ಖಾನ್ ಅವರ ಬರ್ತ್ಡೇ ಪ್ರಯುಕ್ತ ಅಭಿಮಾನಿಗಳಿಗೆ ‘ಕಿಂಗ್’ ಸಿನಿಮಾ ತಂಡದಿಂದ ಗಿಫ್ಟ್ ಸಿಕ್ಕಿದೆ. ಈ ಬಹುನಿರೀಕ್ಷಿತ ಸಿನಿಮಾದ ಟೈಟಲ್ ಟೀಸರ್ ಬಿಡುಗಡೆ ಮಾಡಲಾಗಿದೆ. ಇದು ಸಖತ್ ಮಾಸ್ ಆಗಿದೆ. ರಗಡ್ ಅವತಾರದಲ್ಲಿ ಅಭಿಮಾನಿಗಳನ್ನು ರಂಜಿಸಲು ಶಾರುಖ್ ಸಜ್ಜಾಗಿದ್ದಾರೆ. 2026ರಲ್ಲಿ ಚಿತ್ರ ಬಿಡುಗಡೆ ಆಗಲಿದೆ.
2025-11-02
ಟನಲ್ ರಸ್ತೆ ಯೋಜನೆ ನನ್ನ ಆಸ್ತಿಯಲ್ಲ. ಇದು ಸಾರ್ವಜನಿಕರಿಗಾಗಿ ಮಾಡುವ ಯೋಜನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
2025-11-02
ಬಿಹಾರದಲ್ಲಿ ಮತದಾನದ ದಿನ ಹತ್ತಿರವಾಗುತ್ತಿದ್ದಂತೆ, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಮತ್ತು ಮಹಾಘಟಬಂಧನ್ ಒಕ್ಕೂಟಗಳ ಹಿರಿಯ ನಾಯಕರು ತಮ್ಮ ಪ್ರಚಾರವನ್ನು ಚುರುಕುಗೊಳಿಸಿದ್ದಾರೆ.
2025-11-02
ICC Women's World Cup 2025 Final: ಮುಂಬೈನಲ್ಲಿ ನಡೆಯಬೇಕಿದ್ದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025 ರ ಭಾರತ-ದಕ್ಷಿಣ ಆಫ್ರಿಕಾ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ, ಮಳೆಯಿಂದ ಪಂದ್ಯ ಇದುವರೆಗೂ ಆರಂಭವಾಗಿಲ್ಲ. ಒಂದು ವೇಳೆ ಇಂದು ಪಂದ್ಯ ನಡೆಯದಿದ್ದರೆ, ನವೆಂಬರ್ 2 ರಂದು ಮೀಸಲು ದಿನದಂದು ಪಂದ್ಯ ಪೂರ್ಣಗೊಳಿಸಲಾಗುತ್ತದೆ. ಮಳೆ ನಿಂತರೆ 20 ಓವರ್ಗಳ ಪಂದ್ಯ ನಡೆಸಲು ಪ್ರಯತ್ನಿಸಲಾಗುತ್ತದೆ
2025-11-02
ತೆಲಂಗಾಣ ಸರ್ಕಾರವು ಪಿಜಿ ವೈದ್ಯಕೀಯ ನಿರ್ವಹಣಾ ಕೋಟಾದಲ್ಲಿ 85% ರಷ್ಟನ್ನು ಸ್ಥಳೀಯರಿಗೆ ಮೀಸಲಿರಿಸಿದೆ.
2025-11-02
Karun Nair Double Century: ರಣಜಿ ಟ್ರೋಫಿ 2025-26 ರಲ್ಲಿ ಕನ್ನಡಿಗ ಕರುಣ್ ನಾಯರ್ ಕೇರಳ ವಿರುದ್ಧ ಅಮೋಘ ದ್ವಿಶತಕ ಬಾರಿಸಿದ್ದಾರೆ. ಈ ಮೂಲಕ ಅದ್ಭುತ ಫಾರ್ಮ್ ಪ್ರದರ್ಶಿಸಿರುವ ಕರುಣ್, ಗೋವಾ ವಿರುದ್ಧವೂ 174 ರನ್ ಗಳಿಸಿದ್ದರು. ಭಾರತ ಟೆಸ್ಟ್ ತಂಡಕ್ಕೆ ಮರಳಲು ಹವಣಿಸುತ್ತಿರುವ ಕರುಣ್, ಸತತ ಉತ್ತಮ ಪ್ರದರ್ಶನ ನೀಡುವ ಮೂಲಕ ಆಯ್ಕೆದಾರರ ಗಮನ ಸೆಳೆಯುವ ಇರಾದೆಯಲ್ಲಿದ್ದಾರೆ. ಕರುಣ್ ಅವರ ಈ ಶತಕ ಮತ್ತೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಭರವಸೆ ಮೂಡಿಸಿದೆ.
2025-11-02
ಲಂಡನ್ಗೆ ತೆರಳುತ್ತಿದ್ದ ರೈಲಿನಲ್ಲಿ ದುಷ್ಕರ್ಮಿಗಳು ಹಲವರಿಗೆ ಚಾಕುವಿನಿಂದ ಇರಿದಿದ್ದು, ಯುಕೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
2025-11-02
ಲಂಡನ್ಗೆ ಹೊರಟಿದ್ದ ರೈಲಿನಲ್ಲಿ ದುಷ್ಕರ್ಮಿಯೊಬ್ಬ ಹತ್ತಕ್ಕೂ ಹೆಚ್ಚು ಜನರಿಗೆ ಚಾಕುವಿನಿಂದ ಇರಿದಿರುವ ಘಟನೆ ವರದಿಯಾಗಿದೆ. ಶನಿವಾರ ತಡರಾತ್ರಿ ಜನನಿಬಿಡ ಬ್ರಿಟಿಷ್ ರೈಲ್ವೆ ಮಾರ್ಗದಲ್ಲಿ ಲಂಡನ್ಗೆ ಹೋಗುವ ರೈಲಿನಲ್ಲಿ ನಡೆದ ಇರಿತ ಘಟನೆ ಇಡೀ ರಾಷ್ಟ್ರವನ್ನೇ ಬೆಚ್ಚಿಬೀಳಿಸಿದೆ. ಪೂರ್ವ ಇಂಗ್ಲೆಂಡ್ನ ಕೇಂಬ್ರಿಡ್ಜ್ಶೈರ್ನ ಹೊರವಲಯದಲ್ಲಿರುವ ಹಂಟಿಂಗ್ಡನ್ ನಿಲ್ದಾಣದಲ್ಲಿ ರೈಲನ್ನು ಇದ್ದಕ್ಕಿದ್ದಂತೆ ನಿಲ್ಲಿಸಲಾಯಿತು. ಅಲ್ಲಿ ಸಶಸ್ತ್ರ ಪೊಲೀಸರು ಮತ್ತು ತುರ್ತು ಸೇವೆಗಳು ಬೃಹತ್ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ.
2025-11-02
ವೀರಪ್ಪನ್ ಇದ್ದಾಗಲೇ ಕಾಡು ಚೆನ್ನಾಗಿತ್ತು. ಅಕ್ರಮ ಗಣಿಗಾರಿಕೆ, ರೆಸಾರ್ಟ್ಗಳು ನಡೆಯುತ್ತಿರಲಿಲ್ಲ ಎಂದು ರೈತರು ಸಿಡಿಮಿಡಿಗೊಂಡರು.
2025-11-02
ಪ್ರವಾಸಕ್ಕೆ ಬಂದಿದ್ದ ವೇಳೆ ನಾಲೆಯಲ್ಲಿ ಐವರು ಮಕ್ಕಳು ಕೊಚ್ಚಿಕೊಂಡು ಹೋಗಿದ್ದ ದುರಂತ ಘಟನೆಯೊಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ರಾಮಸ್ವಾಮಿ ನಾಲೆಯಲ್ಲಿ ಶನಿವಾರ ನಡೆದಿದೆ. ಐವರ ಪೈಕಿ ನಾಲ್ವರ ಮೃತದೇಹಗಳು ಸದ್ಯ ಪತ್ತೆ ಆಗಿವೆ. ಓರ್ವ ಬಾಲಕನಿಗೆ ಚಿಕಿತ್ಸೆ ಮುಂದುವರೆದಿದೆ. ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
2025-11-02
ಶೃಂಗೇರಿ ತಾಲೂಕಿನ ಕೆರೆಕಟ್ಟೆ ಗ್ರಾಮದಲ್ಲಿ ಇಬ್ಬರನ್ನು ಬಲಿ ಪಡೆದ ಕಾಡಾನೆಯ ಸೆರೆ ಕಾರ್ಯಾಚರಣೆಗಾಗಿ 6 ಸಾಕಾನೆಗಳನ್ನು ಕರೆತರಲಾಗಿದೆ.
2025-11-02
2025 Women's World Cup Final: 2025 ಮಹಿಳಾ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಪ್ರಶಸ್ತಿಗಾಗಿ ಸೆಣಸುತ್ತಿವೆ. ಮಳೆಯಿಂದ ವಿಳಂಬವಾದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ. ಉಭಯ ತಂಡಗಳು ತಮ್ಮ ಮೊದಲ ವಿಶ್ವಕಪ್ ಟ್ರೋಫಿ ಗೆಲ್ಲುವ ತವಕದಲ್ಲಿವೆ. ಭಾರತ ಹಿಂದಿನ ಸೋಲಿಗೆ ಸೇಡು ತೀರಿಸಿಕೊಳ್ಳುವ ಗುರಿಯಲ್ಲಿದೆ.
2025-11-02
ಸಸ್ಯಾಹಾರ ಅತ್ಯುತ್ತಮ ಆಹಾರ ಕ್ರಮ. ಇದು ಆರೋಗ್ಯದ ಜೊತೆಗೆ ಆಯಸ್ಸಿಗೂ ಉಪಕಾರಿ. ಇಲ್ಲೊಂದು ಇಡೀ ಗ್ರಾಮವೇ ಸಸ್ಯಾಹಾರ ಪದ್ಧತಿಯನ್ನು ಅನುಸರಿಸಿ ಮಾದರಿಯಾಗಿದೆ.
2025-11-02
India vs Australia T20: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ ಟಿ20 ಸರಣಿಯ 3ನೇ ಪಂದ್ಯದಲ್ಲಿ ಟೀಂ ಇಂಡಿಯಾ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಹೋಬಾರ್ಟ್ನಲ್ಲಿ ನಡೆದ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ 186 ರನ್ಗಳ ಗುರಿಯನ್ನು ಸೂರ್ಯಕುಮಾರ್ ಪಡೆ ಯಶಸ್ವಿಯಾಗಿ ಬೆನ್ನಟ್ಟಿ ಸರಣಿಯನ್ನು 1-1ರಿಂದ ಸಮಬಲಗೊಳಿಸಿದೆ. ಮೊದಲ ಪಂದ್ಯ ಮಳೆಯಿಂದ ರದ್ದಾಗಿದ್ದು, 2ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದಿತ್ತು. ಭಾರತದ ಈ ಗೆಲುವು ಸರಣಿಯಲ್ಲಿ ಮಹತ್ವದ್ದಾಗಿದೆ.
2025-11-02
Women’s ODI World Cup final 2025: ಮಹಿಳಾ ಕ್ವಿರಿಕಶ್ವಕಪ್ನಲ್ಲಿ ಭಾರತ ತಂಡವು 2 ಬಾರಿ ಫೈನಲ್ಗೆ ಪ್ರವೇಶಿಸಿತ್ತು. 2005 ಮತ್ತು 2017 ರಲ್ಲಿ ಫೈನಲ್ ಆಡಿದ್ದ ಟೀಮ್ ಇಂಡಿಯಾ ಪ್ರಶಸ್ತಿ ಸುತ್ತಿನಲ್ಲಿ ಮುಗ್ಗರಿಸಿ ನಿರಾಸೆ ಮೂಡಿಸಿತ್ತು. ಇದೀಗ ಮೂರನೇ ಬಾರಿ ಫೈನಲ್ಗೆ ಪ್ರವೇಶಿಸಿರುವ ಭಾರತ ತಂಡವು ಸೌತ್ ಆಫ್ರಿಕಾ ತಂಡವನ್ನು ಎದುರಿಸಲು ಸಜ್ಜಾಗಿದೆ.
2025-11-02
ಚೆನ್ನೈನ ರೈಲ್ವೆ ನಿಲ್ದಾಣಗಳಲ್ಲಿ ಆಟೋಮ್ಯಾಟಿಕ್ ಪುಸ್ತಕ ಮಾರಾಟ ಯಂತ್ರವನ್ನು ಸ್ಥಾಪಿಸಲಾಗಿದೆ. ಜನರು ತಮ್ಮ ನೆಚ್ಚಿನ ಪುಸ್ತಕವನ್ನು ಡಿಜಿಟಲ್ ಮೂಲಕ ಪಡೆದುಕೊಳ್ಳಬಹುದು.
2025-11-02
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಹಜರತ್ ಮೆಹಬೂಬ್ ಸುಬಾನಿ ಹೆಸರಿನ ದರ್ಗಾದಲ್ಲಿ ನಿತ್ಯ ಕನ್ನಡವೇ ರಾರಾಜಿಸುತ್ತಿದೆ.
2025-11-01
Bangladesh vs West Indies, 3rd T20I: ಈ ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡ ನೀಡಿದ 152 ರನ್ಗಳ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವು 16,5 ಓವರ್ಗಳಲ್ಲಿ ಗುರಿ ತಲುಪುವ ಮೂಲಕ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯನ್ನು ವಿಂಡೀಸ್ ವಿರುದ್ಧ 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.
2025-11-01
ಕುಂದಾನಗರಿ ಬೆಳಗಾವಿಯಲ್ಲಿ ಮಧ್ಯರಾತ್ರಿಯಿಂದಲೇ ರಾಜ್ಯೋತ್ಸವ ಸಂಭ್ರಮ ಮನೆ ಮಾಡಿದೆ. ಕಣ್ಮನ ಸೆಳೆದ ಸಿಡಿಮದ್ದು ಪ್ರದರ್ಶನದೊಂದಿಗೆ ಕನ್ನಡಿಗರು ನಾಡಹಬ್ಬದ ಖುಷಿಯಲ್ಲಿ ಕುಣಿದು ಕುಪ್ಪಳಿಸಿದರು.
2025-11-01
Babar Azam World Record: ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಕೇವಲ ಮೂವರು ಬ್ಯಾಟರ್ಗಳು ಮಾತ್ರ 4 ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ್ದಾರೆ. ಈ ಮೂವರಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ. ಇದಾದ ಬಳಿಕ ರೋಹಿತ್ ಶರ್ಮಾ ಈ ದಾಖಲೆ ಬರೆದಿದ್ದರು. ಇದೀಗ ಇವರಿಬ್ಬರನ್ನು ಹಿಂದಿಕ್ಕಿ ಪಾಕಿಸ್ತಾನದ ಬಾಬರ್ ಆಝಂ ಅಗ್ರಸ್ಥಾನಕ್ಕೇರಿದ್ದಾರೆ.
2025-11-01
Lakhs_rupees_stolen_Bengaluru_man_cryptocurrency
Nitish_Kumar_take_oath_Bihar_CM
You_too_can_become_an_AI_expert
When_time_donate_kidney_father_son
Dr_Ahmed_imprisoned_Sabarmati_plotting_ricin_attack
© gokakica.in. All Rights Reserved. Designed by Image Computer Academy